ಗೃಹಿಣಿ ನೆನಪಿಡಬೇಕಾದ 10 ಸಂಗತಿಗಳು
Team Udayavani, Dec 15, 2017, 1:39 PM IST
1ಜಾಮ್ ಬಾಟ್ಲಿಯ ಮುಚ್ಚಳ ತೆಗೆಯುವುದು ಸಾಹಸದ ಕೆಲಸ. ಎರಡೂ ಕೈಗಳನ್ನು ಚೆನ್ನಾಗಿ ಸೋಪು ನೀರಿನಲ್ಲಿ ತೊಳೆದು ಒಣ ಬಟ್ಟೆಯಲ್ಲಿ ಒರೆಸಿ. ಈಗ ಒಣಗಿದ ಕೈಗಳಿಂದ ಬಾಟ್ಲಿಯ ಮುಚ್ಚಳವನ್ನು ತಿರುಗಿಸಿದರೆ ಸುಲಭವಾಗಿ ತರೆಯುವುದು.
2ಚಹಾ ಶೋಧಿಸಿದ ನಂತರ ಜಾಲರಿಯ ಪುಟ್ಟ ಮೆಶ್‌ನಲ್ಲಿ ಚಹಾಪುಡಿ ಸಿಕ್ಕಿಕೊಂಡಿರುತ್ತದೆ. ಆಗ ಅದನ್ನು ಗ್ಯಾಸ್ ಉರಿಯಲ್ಲಿ ಒಂದು ನಿಮಿಷ ಇಟ್ಟರೆ ಜಾಲರಿ ಅದರಿಂದ ಮುಕ್ತವಾಗುವುದು.
3ಮನೆಯಲ್ಲಿ ಬೋರೊಸಿಲ್ ಪಾತ್ರೆಗಳನ್ನು ತೊಳೆಯುವಾಗ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಕೈಯಿಂದ ಜಾರಿದರೆ ಪಾತ್ರೆ ಒಡೆಯುವುದು ಖಚಿತ. ಅದಕ್ಕಾಗಿ ಸಿಂಕಿನ ಮೇಲೆ ಅಡ್ಡಲಾಗಿ ದಪ್ಪ ಟವೆಲ್ಲನ್ನು ಹರಡಿ. ಅಕಸ್ಮಾತ್ ಕೈಯಿಂದ ಜಾರಿದರೂ ಟವೆಲ್ ಮೇಲೆ ಬಿದ್ದು ಪಾತ್ರೆ ಸೇಫ್ ಆಗಿರುತ್ತದೆ.
4ಗಾಜಿನ ಲೋಟ ಹಾಗೂ ತಟ್ಟೆಗಳನ್ನು ವಿನೆಗರ್‌ನಲ್ಲಿ ತೊಳೆದರೆ ಹೊಳಪು ಜಾಸ್ತಿ.
5ಕಪ್ಪು ಬಟ್ಟೆಗಳನ್ನು ಶಿಕಾಕಾಯಿ ಪುಡಿಯಿಂದ ಒಗೆದರೆ ಬಣ್ಣ ಮಾಸುವುದಿಲ್ಲ.
6ಒಗ್ಗರಣೆ ಹಾಕಿದ ಬಾಣಲೆಯನ್ನು ವಾಶಿಂಗ್ ಸೋಡಾ ವಿನೆಗರ್ ಹಾಗೂ ಲಿಕ್ವಿಡ್ ಸೋಪ್ ಹಾಕಿ ಉಜ್ಜಿದರೆ ಬಾಣಲೆ ಫಳಫಳನೆ ಹೊಳೆಯುವುದು.
7ಸೌತೆಕಾಯಿ ಸಿಪ್ಪೆಯನ್ನು ಇಟ್ಟರೆ ಮನೆಯಲ್ಲಿ ಜಿರಳೆಗಳನ್ನು ನಾಶಮಾಡಬಹುದು.
8ಮೆಣಸಿನಕಾಯಿಯನ್ನು ರುಬ್ಬಬೇಕಾದರೆ ಒಂದು ಚಮಚ ಸಾಸಿವೆ ಹಾಕಿದರೆ ಬಣ್ಣವು ಹಾಗೆಯೇ ಉಳಿಯುವುದು.
9ಕೈಬೆರಳಿಗೆ ಅಥವಾ ಕಾಲಿನ ಹಿಮ್ಮಡಿಗೆ ಗಾಜು ಚುಚ್ಚುವುದು ಸಾಮಾನ್ಯ. ಅದನ್ನು ತೆಗೆಯಲು ಆ ಚುಚ್ಚಿದ ಜಾಗಕ್ಕೆ ಫೆವಿಕಾಲ್ ಹಾಕಿದರೆ ಗಾಜು ನಿಧಾನವಾಗಿ ಫೆವಿಕಾಲ್ ಜೊತೆ ಪದರ ಪದರವಾಗಿ ಬರುವುದು.
10ಚಿನ್ನದ ಸರವು ಒಮ್ಮೊಮ್ಮೆ ಗಂಟು ಗಂಟು ಬೀಳುವುದನ್ನು ತಡೆಯಲು ಸ್ವಲ್ಪ ಟಾಲ್ಕಮ್ ಫೇಸ್ ಪೌಡರ್ ಬಳಸಿ.
ಹೀರಾ ರಮಾನಂದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.