ರಿಕಿ ಪಾಂಟಿಂಗ್ ಭಾರತದ ಸ್ಲಿಪ್ ಫೀಲ್ಡಿಂಗ್ ಕೋಚ್!
Team Udayavani, Dec 16, 2017, 7:45 AM IST
ಹೊಸದಿಲ್ಲಿ: ಭಾರತಕ್ಕೆ ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ಉತ್ತಮ ಸ್ಲಿಪ್ ಫೀಲ್ಡಿಂಗ್ ಕೋಚ್ ಆಗಬಲ್ಲರು ಎಂದು ಅದೇ ನಾಡಿನ ಮಾಜಿ ಆರಂಭಕಾರ ಮ್ಯಾಥ್ಯೂ ಹೇಡನ್ ಅಭಿಪ್ರಾಯಪಟ್ಟಿದ್ದಾರೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಭಾರತದ ಸ್ಲಿಪ್ ಫೀಲ್ಡಿಂಗ್ ಸಂಕಟವನ್ನು ಗಮನಿಸಿದ ಹೇಡನ್ ಇಂಥದೊಂದು ಸಲಹೆ ನೀಡಿದ್ದಾರೆ.
“ಈವರೆಗೆ ಸ್ಲಿಪ್ ಫೀಲ್ಡಿಂಗ್ ಕೋಚ್ ಬಗ್ಗೆ ಕ್ರಿಕೆಟ್ ಜಗತ್ತು ಯೋಚಿಸಿಲ್ಲ. ಇದಕ್ಕೊಬ್ಬ ತರಬೇತುದಾರ ಅಗತ್ಯವೆಂದಾದಲ್ಲಿ ರಿಕಿ ಪಾಂಟಿಂಗ್‌ಗಿಂತ ಮಿಗಿಲಾದ ಹೆಸರು ಕಾಣಿಸದು. ಅವರ ಸ್ಲಿಪ್ ಕ್ಷೇತ್ರರಕ್ಷಣೆ ಅಸಾಮಾನ್ಯ ಮಟ್ಟದ್ದು. ಭಾರತ ಈ ನಿಟ್ಟಿನಲ್ಲಿ ಯೋಚಿಸಬಹುದು…’ ಎಂದು ಹೇಡನ್ ಹೇಳಿದರು.
“ಟೆಸ್ಟ್ ಕ್ರಿಕೆಟ್‌ನಲ್ಲಿ ಆಟಗಾರನೊಬ್ಬನ ಫೀಲ್ಡಿಂಗ್ ಜಾಗವನ್ನು ಪದೇಪದೆ ಬದಲಾಯಿಸುವುದು ತಪ್ಪು. ಒಬ್ಬ ಕ್ಷೇತ್ರರಕ್ಷಕ ಮೊದಲ ಸ್ಲಿಪ್‌ನಲ್ಲಿ ನಿಂತರೆ ಆತನನ್ನು ಅದೇ ಜಾಗದಲ್ಲಿ ಮುಂದುವರಿಸಬೇಕು. ಇದರಿಂದ ಆತನಿಗೆ ಹಾಗೂ ತಂಡಕ್ಕೆ ಹೆಚ್ಚಿನ ಅನುಕೂಲವಾಗಲಿದೆ’ ಎಂಬುದು ಹೇಡನ್ ನೀಡಿದ ಸಲಹೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Rakesh Adiga: ನಾನು ಮಿಡಲ್ ಕ್ಲಾಸ್ ಹುಡುಗ ಮರ್ಯಾದೆ ಉಳಿಸಿ!
Thekkatte: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಗೋ ಕಳವು ಪ್ರಕರಣ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.