ಇಂದೋರ್‌ನಲ್ಲಿ ಸತತ 2ನೇ ರಣಜಿ ಟ್ರೋಫಿ ಫೈನಲ್
Team Udayavani, Dec 16, 2017, 7:50 AM IST
ಇಂದೋರ್: ಈ ಬಾರಿಯ ರಣಜಿ ಟ್ರೋಫಿ ಕ್ರಿಕೆಟ್ ಫೈನಲ್ ಪಂದ್ಯ ಇಂದೋರ್‌ನ “ಹೋಳ್ಕರ್ ಸ್ಟೇಡಿಯಂ’ನಲ್ಲಿ ನಡೆಯುವುದು ಅಧಿಕೃತಗೊಂಡಿದೆ. ಇದರೊಂದಿಗೆ ಸತತ 2ನೇ ವರ್ಷ ರಣಜಿ ಫೈನಲ್ ಆತಿಥ್ಯ ವಹಿಸುವ ಹೆಗ್ಗಳಿಕೆ ಇಂದೋರ್‌ನದ್ದಾಗಿದೆ.
2016-17ನೇ ಋತುವಿನ ರಣಜಿ ಫೈನಲ್ ಕೂಡ ಇಲ್ಲೇ ನಡೆದಿತ್ತು. ಮುಂಬಯಿಯನ್ನು ಮಣಿಸಿ ಟ್ರೋಫಿ ಎತ್ತಿದ ಗುಜರಾತ್ ಚಾಂಪಿಯನ್ ಆಗಿ ಮೂಡಿಬಂದಿತ್ತು. ಈ ಬಾರಿ ಈ ಎರಡೂ ತಂಡಗಳು ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿವೆ. ಕರ್ನಾಟಕ-ವಿದರ್ಭ, ದಿಲ್ಲಿ-ಬಂಗಾಲ ತಂಡಗಳು ರವಿವಾರದಿಂದ ಸೆಮಿಫೈನಲ್ ಆಡಲಿದ್ದು, ವಿಜೇತ ತಂಡಗಳು ಪ್ರಶಸ್ತಿ ಸುತ್ತಿಗೆ ಲಗ್ಗೆ ಇಡಲಿವೆ. ಫೈನಲ್ ಪಂದ್ಯ ಡಿ. 29ರಿಂದ ಜ. 2ರ ತನಕ ಸಾಗಲಿದೆ.
ಇಂದೋರ್‌ಗೆ 2016ರ ಸೆಪ್ಟಂಬರ್‌ನಲ್ಲಿ ಮೊದಲ ಬಾರಿಗೆ ಟೆಸ್ಟ್ ಆತಿಥ್ಯ ಲಭಿಸಿತ್ತು. ಭಾರತ-ಆಸ್ಟ್ರೇಲಿಯ ನಡುವಿನ ಏಕದಿನ ಪಂದ್ಯವನ್ನೂ ಇಲ್ಲಿ ಆಡಲಾಗಿತ್ತು. ಭಾರತ-ಶ್ರೀಲಂಕಾ ನಡುವಿನ ಟಿ20 ಪಂದ್ಯವೊಂದರ ಆತಿಥ್ಯವೂ ಇಂದೋರ್ ಪಾಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್‌ರೌಂಡರ್
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್ ಡೆಲ್ಲಿ
Ranji Trophy: ಕರ್ನಾಟಕಕ್ಕೆ ಹಿನ್ನಡೆ ಭೀತಿ
MUST WATCH
ಹೊಸ ಸೇರ್ಪಡೆ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.