ಅಧಿಕಾರಿಗಳ ಮನೆಯಲ್ಲಿ ಕೋಟಿ ಕೋಟಿ ಆಸ್ತಿ
Team Udayavani, Dec 16, 2017, 11:21 AM IST
ಬೆಂಗಳೂರು: ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಮಾಡಿದ 11 ಮಂದಿ ಸರ್ಕಾರಿ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಬುಧವಾರ ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಲಕ್ಷಾಂತರ ರೂ. ಮೌಲ್ಯದ ಅಕ್ರಮ ಆಸ್ತಿ ಸಂಪಾದಿಸಿದ್ದಾರೆಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಬೆಂಗಳೂರು, ತುಮಕೂರು, ಬಳ್ಳಾರಿ, ಉತ್ತರ ಕನ್ನಡ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆ, ಚಿಕ್ಕಬಳ್ಳಾಪುರ, ಬೆಳಗಾವಿ, ಮಂಡ್ಯದಲ್ಲಿರುವ 11 ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಡಿ.13ರಂದು ಎಸಿಬಿ ದಾಳಿ ನಡೆಸಿತ್ತು. ಈ ವೇಳೆ ಕೋಟ್ಯಂತರ ರೂ. ಮೌಲ್ಯದ ಆಸ್ತಿ, ಚಿನ್ನಾಭರಣ ಪತ್ತೆಯಾಗಿದ್ದು, ತನಿಖೆ
ಮುಂದುವರಿದಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಮಿಕ ಇಲಾಖೆಯ ಫ್ಯಾಕ್ಟರಿ ಮತ್ತು ಬಾಯ್ಲರ್ಸ್ ವಿಭಾಗದ ಜಂಟಿ ನಿರ್ದೇಶಕ ಎಸ್. ಎಂ.ವಾಸಣ್ಣಗೆ ಸೇರಿದ ಮೈಸೂರು, ದಾವಣಗೆರೆ ಹಾಗೂ ಬೆಂಗಳೂರಿನಲ್ಲಿರುವ 3 ವಾಸದ ಮನೆಗಳು, ಕಡೂರು ಮತ್ತು ಆನೇಕಲ್ ತಾಲೂಕಿನಲ್ಲಿರುವ 3 ನಿವೇಶನ ಹಾಗೂ ತರೀಕೆರೆಯಲ್ಲಿರುವ 2 ಎಕರೆ 23 ಗುಂಟೆ ಜಮೀನು, 1 ಕಾರು ಮತ್ತು 2 ಬೈಕ್, 15 ಲಕ್ಷ ಮೌಲ್ಯದ ಬ್ಯಾಂಕ್ ಠೇವಣಿ ಹಾಗೂ ಎಲ್‌ಐಸಿ ಬಾಂಡ್‌ಗಳು, 400 ಗ್ರಾಂ ಚಿನ್ನ, 3.5 ಕೆ.ಜಿ.ಬೆಳ್ಳಿ, 13 ಲಕ್ಷ ಮೌಲ್ಯದ ಗೃಹ ಬಳಕೆ ವಸ್ತುಗಳು ಹಾಗೂ 7 ಲಕ್ಷ ನಗದು. ಎಂ.ಎಸ್.ಬಿಲ್ಡಿಂಗ್‌ನಲ್ಲಿರುವ ಡೈರೆಕ್ಟರೇಟ್ ಆಫ್ ಟೌನ್ ಆ್ಯಂಡ್ ಕಂಟ್ರಿ ಪ್ಲಾನಿಂಗ್ ಜಂಟಿ ನಿರ್ದೇಶಕ ಎಂ.ಸಿ.ಶಶಿಕುಮಾರ್‌ಗೆ ಸೇರಿದ
ಮೈಸೂರಿನಲ್ಲಿರುವ ವಾಸದ ಮನೆ ಮತ್ತು ಕೃಷಿ ಜಮೀನು, 1 ನಿಸಾನ್ ಕಾರು, 1 ಬೈಕ್, ವಿವಿಧ ಬ್ಯಾಂಕ್‌ಗಳಲ್ಲಿದ್ದ 60 ಲಕ್ಷ ಠೇವಣಿ, 1.5 ಕೆ.ಜಿ.ಚಿನ್ನ, 6 ಕೆ.ಜಿ. ಬೆಳ್ಳಿ ಹಾಗೂ 50 ಲಕ್ಷ ಬ್ಯಾಂಕ್ ಬ್ಯಾಲೆನ್ಸ್ 2.96 ಲಕ್ಷ ನಗದು ಪತ್ತೆಯಾಗಿದೆ. ಬಸವನಗುಡಿ ಉಪವಿಭಾಗದ ಬಿಬಿಎಂಪಿ ಸಹಾಯಕ ಎಂಜಿನಿಯರ್ ಜೆ.ವಿ.ತ್ಯಾಗರಾಜ್‌ಗೆ ಸೇರಿದ ಶಿವಮೊಗ್ಗದ ವಿವಿಧ ಸ್ಥಳಗಳಲ್ಲಿರುವ 4 ಮನೆ
ಗಳು, ಚಿಕ್ಕಮಗಳೂರಿನ 1 ಮನೆ, ಹೊನ್ನಾಳಿಯಲ್ಲಿರುವ 8 ಎಕರೆ ಜಮೀನು, 2 ಕಾರು, 3 ಬೈಕ್, 400 ಗ್ರಾಂ ಚಿನ್ನ, 800 ಗ್ರಾಂ ಬೆಳ್ಳಿ ಹಾಗೂ 1.66 ಲಕ್ಷ ನಗದು. ಮಂಡ್ಯ ಜಿಪಂನ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ
ಎಂಜಿನಿಯರ್ ಚಂದ್ರಹಾಸ್‌ಗೆ ಸೇರಿದ ಮಂಡ್ಯದ ವಿವಿಧೆಡೆ ಇರುವ 2 ಮನೆಗಳು, ಕುದುರೆಗುಂಡಿ ಗ್ರಾಮದ 1 ಮನೆ, ಮಂಡ್ಯ ತಾಲೂಕಿನ ಹೀತಗಾನಹಳ್ಳಿಯಲ್ಲಿ 2 ಗುಂಟೆ ನಿವೇಶನ, ಹುಣಸೂರು ತಾಲೂಕಿನ 1 ನಿವೇಶನ, ಬಳ್ಳಾರಿ ಟೌನ್‌ನಲ್ಲಿ 2.75 ಲಕ್ಷ ಸೆಂಟ್ ನಿವೇಶನ ಹಾಗೂ ಕುದುರೆಗುಂಡಿ ಗ್ರಾಮದಲ್ಲಿ ತೆಂಗಿನ ತೋಟ, ಗೆಜ್ಜಲಗೆರೆ ಗ್ರಾಮದಲ್ಲಿ 18 ಗುಂಟೆ ಜಮೀನು ಹಾಗೂ
ಒಂದು ಕಾರು, 2 ಬೈಕ್, 500 ಗ್ರಾಂ ಚಿನ್ನ, 1.7 ಕೆ.ಜಿ. ಬೆಳ್ಳಿ ಮತ್ತು ವಿವಿಧ ಬ್ಯಾಂಕ್ ಖಾತೆಗಳಲ್ಲಿರುವ 8.5 ಲಕ್ಷ ಹಾಗೂ 83,500 ನಗದು.
ಉತ್ತರ ಕನ್ನಡದ ಅಂಕೋಲಾ ಅರಣ್ಯ ಸಂರಕ್ಷಿತ ವಲಯ ಅರಣ್ಯಾಧಿಕಾರಿ ಪಾಂಡುರಂಗ ಕೇಶವ ಪೈಗೆ ಸೇರಿದ ಧಾರವಾಡದ ಮನೆ, ಬಿಜೂರು ಮತ್ತು ಧಾರವಾಡದಲ್ಲಿ 6.5 ಎಕರೆ ಕೃಷಿ ಭೂಮಿ, 2 ಕಾರು, 2 ಬೈಕ್, 826 ಗ್ರಾಂ ಚಿನ್ನ, 2.4 ಲಕ್ಷ ಮೌಲ್ಯದ ಒಂದು
ಡೈಮಂಡ್ ನಕ್ಲೇಸ್, 5.58 ಕೆ.ಜಿ. ಬೆಳ್ಳಿ ಹಾಗೂ 14,22 ಲಕ್ಷ ಬ್ಯಾಂಕ್ ಠೇವಣಿ ರಶೀದಿ ಮತ್ತು 84,750 ರೂ. ನಗದು ಪತ್ತೆಯಾಗಿದೆ.
ಬೆಳಗಾವಿ ಕಿತ್ತೂರು ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುರೇಶ್ ಭೀಮಾ ನಾಯ್ಕಗೆ ಸೇರಿದ ಬೆಳಗಾವಿಯ ವಿವಿಧ ಜಿಲ್ಲೆಗಳಲ್ಲಿರುವ 3 ಮನೆಗಳು, ಖಾನಾಪುರದ ಮುದ್ದೆಕೊಪ್ಪದಲ್ಲಿ 10 ಎಕರೆ ಪೌಲಿó ಫಾರಂ, ಚಿಕ್ಕೋಡಿಯ ಉಮ್ರಾಣಿ ಗ್ರಾಮದಲ್ಲಿರುವ 15 ಎಕರೆ ಕೃಷಿ ಭೂಮಿ, 2 ಕಾರು ಮತ್ತು 2 ಬೈಕ್ ಮತ್ತು 1 ಟ್ಯಾ†ಕ್ಟರ್, 300 ಗ್ರಾಂ ಚಿನ್ನ ಹಾಗೂ 48 ಸಾವಿರ ನಗದು.
ಬಳ್ಳಾರಿ ವಿಜಯನಗರದ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಎಸ್.ಷಾಷಾವಲಿಗೆ ಸೇರಿದ ಬಳ್ಳಾರಿಯ ವಿವಿಧ ಸ್ಥಳದಲ್ಲಿರುವ 3 ಮನೆ, 5 ನಿವೇಶನ, ಒಂದು ಕೈಗಾರಿಕಾ ಶೆಡ್, ನಿರ್ಮಾಣ ಹಂತದ ಮನೆ, 3.13 ಎಕರೆ ಜಮೀನು ಹಾಗೂ 1 ಕಾರು ಹಾಗೂ 3 ಬೈಕ್, 370 ಗ್ರಾಂ ಚಿನ್ನ, 1 ಕೆ.ಜಿ.ಬೆಳ್ಳಿ ವಸ್ತುಗಳು ಹಾಗೂ 10 ಲಕ್ಷ ಗೃಹ ಬಳಕೆ ವಸ್ತುಗಳು ಮತ್ತು 58 ಸಾವಿರ ನಗದು ಪತ್ತೆಯಾಗಿದೆ. ಕಲಬರಗಿಯ ಸಣ್ಣ ನೀರಾವರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಬಿ.ಮಲ್ಲಪ್ಪಗೆ ಸಂಬಂಧಿಸಿದ 4 ವಾಸದ ಮನೆಗಳು, ಖಾಲಿ ನಿವೇಶನ, ಫಾರಂ ಹೌಸ್ ಹಾಗೂ 31 ಎಕರೆ ಜಮೀನು ಹಾಗೂ 3 ಕಾರು, ಒಂದು ಟ್ಯಾ†ಕ್ಟರ್ ಮತ್ತು 4 ಬೈಕ್, 1.ಕೆ.ಜಿ. 300 ಗ್ರಾಂ ಚಿನ್ನ, 6 ಕೆ.ಜಿ.ಬೆಳ್ಳಿ, 5 ಲಕ್ಷ ಮೌಲ್ಯದ ಗೃಹ ವಸ್ತುಗಳು ಹಾಗೂ 23 ಲಕ್ಷ ನಗದು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೃಷಿ ಸಹಾಯಕ ನಿರ್ದೇಶಕ ಫ್ರಾನಿಸ್ ಫೌಲ್ ಮಿರಾಂಡಾಗೆ ಸೇರಿದ ವಿವಿಧ ಸ್ಥಳಗಳಲ್ಲಿರುವ 7 ನಿವೇಶನಗಳು
ಹಾಗೂ 12 ಎಕರೆ ಜಮೀನು, ಅಪಾರ್ಟ್‌ಮೆಂಟ್ ಹಾಗೂ 2 ಕಾರು ಮತ್ತು ಒಂದು ಬೈಕ್, ಬ್ಯಾಂಕ್ ಠೇವಣಿ ಹಾಗೂ 15 ಲಕ್ಷ ಮೌಲ್ಯದ ಎಲ್‌ಐಸಿ ಮತ್ತು ಬ್ಯಾಂಕ್ ಠೇವಣಿ, 250 ಗ್ರಾಂ ಚಿನ್ನ, 1 ಕೆ.ಜಿ.ಬೆಳ್ಳಿ ಹಾಗೂ 5 ಲಕ್ಷ ಮೌಲ್ಯದ ಗೃಹ ಬಳಕೆ ವಸ್ತುಗಳು, 5
ಲಕ್ಷ ನಗದು ಮತ್ತು 56 ಲಕ್ಷ ಬ್ಯಾಂಕ್‌ಗಳಲ್ಲಿದ್ದ ಹಣ ಪತ್ತೆಯಾಗಿದ್ದು, ಫಾರ್ಮ್ಹೌಸ್ ನವೀಕರಣಕ್ಕೆ 20 ಲಕ್ಷ ವೆಚ್ಚ ಮಾಡಿರುವ ದಾಖಲೆ ಸಿಕ್ಕಿದೆ.
ತುಮಕೂರಿನ ಕೊರಟಗೆರೆ ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜೆ.ಸಿ.ಜಗದೀಶ್‌ಗೆ ಸೇರಿದ ವಿವಿಧ ಸ್ಥಳಗಳಲ್ಲಿರುವ 12 ನಿವೇಶನ, 50 ಲಕ್ಷ ಮೌಲ್ಯದ ಮನೆ ಹಾಗೂ 2 ಎಕರೆ ಜಮೀನು, 450 ಗ್ರಾಂ ಚಿನ್ನ, 115 ಗ್ರಾಂ ಬೆಳ್ಳಿ ಹಾಗೂ
6.5 ಲಕ್ಷ ಗೃಹ ಬಳಕೆ ವಸ್ತುಗಳು, 1 ಕಾರು, 3 ದ್ವಿಚಕ್ರ ವಾಹನಗಳು ಮತ್ತು 1.38 ಲಕ್ಷ ನಗದು. ಚಿಕ್ಕಬಳ್ಳಾಪುರ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ಹೇಮಂತ್‌ಗೆ ಸೇರಿದ ವಾಸದ ಮನೆ, ಬಿಬಿಎಂಪಿ ವ್ಯಾಪ್ತಿಯಲ್ಲಿ 4 ನಿವೇಶನ, ನೆಲಮಂಗಲದಲ್ಲಿ 7 ನಿವೇಶನ, 2 ಎಕರೆ ಜಮೀನು ಮತ್ತು ಶಿಡ್ಲಘಟ್ಟ ತಾಲೂಕಿನಲ್ಲಿ 7.5 ಎಕರೆ ಜಮೀನು ಹಾಗೂ 2 ಕಾರು, ಒಂದು ಬೈಕ್ ಮತ್ತು 680 ಗ್ರಾಂ ಚಿನ್ನ, 3 ಕೆ.ಜಿ. ಬೆಳ್ಳಿ ಹಾಗೂ 2.49 ಲಕ್ಷ ನಗದು ಪತ್ತೆಯಾಗಿದೆ. ವಶಕ್ಕೆ ಪಡೆದಿರುವ ಎಲ್ಲ ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು, 11 ಮಂದಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಸೂಕ್ತ ದಾಖಲೆಗಳನ್ನು
ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Vivek Ramaswamy: ವಿವೇಕ್‌ಗೆ ಟ್ರಂಪ್ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.