ಮೆಸ್‌ ವರ್ಲ್ಡ್!


Team Udayavani, Dec 16, 2017, 12:40 PM IST

mess-world.jpg

ಮೆಸ್‌ ಎಂದರೆ ಮನೆಯೂಟದ ಕೈತುತ್ತು. ಅಲ್ಲೊಂದು ಶಿಸ್ತು, ಮನೆಯ ಅಮ್ಮನೋ, ಅಕ್ಕನೋ ಮಾಡಿದ ಅಡುಗೆಯನ್ನು ನೆನಪಿಸುವಂಥ ಸ್ವಾದ ಆ ಊಟದ ವಿಶೇಷ ಗತ್ತು. ಹುಟ್ಟಿ ಬೆಳೆದ ಮನೆಯ ವಾತಾವರಣವನ್ನು ಹೃದಯದಲ್ಲಿ ಕೂರಿಸುತ್ತಾ, ಸಾಂಪ್ರದಾಯಿಕ ಊಟದಿಂದ ಹೊಟ್ಟೆ ತುಂಬಿಸುವ ವಿಶೇಷ ಗುಣ ಈ ಮೆಸ್‌ಗಳಿಗಿರುತ್ತವೆ. ಬೆಂಗಳೂರಿನಲ್ಲೂ ಹುಡುಕಿಕೊಂಡು ಹೋಗಿ ತಿನ್ನಲೇಬೇಕಾದ ಮೆಸ್‌ಗಳು, ಕಾಡುವ ರುಚಿಯನ್ನು ದಯಪಾಲಿಸುವಂಥ ಮೆಸ್‌ಗಳು ಹತ್ತಾರು ಕಾಣಿಸುತ್ತವೆ. ಆ ಕುರಿತ ಪುಟ್ಟ ಟಿಪ್ಪಣಿ ಇಲ್ಲಿದೆ…

1. ಅಯ್ಯರ್‌ ಮೆಸ್‌: ಕಳೆದ 40 ವರ್ಷಗಳಿಂದ ತಮಿಳು ಬ್ರಾಹ್ಮಣ ಶೈಲಿಯ ಬಾಳೆ ಎಲೆ ಊಟವನ್ನು ಬಡಿಸುವಲ್ಲಿ ನಿರತವಾಗಿರುವ ಮೆಸ್‌ಗೆ ಇದು. ಮನೆಯಲ್ಲಿ ಕುಳಿತು ಊಟ ಮಾಡಿದಂತೆಯೇ ಇರುತ್ತೆ ಇಲ್ಲಿನ ವಾತಾವರಣ.
 
ಎಲ್ಲಿದೆ?: ದೇವಿ ಪ್ರಸಾದ್‌ ಹೋಂ ಅಪ್ಲಯನ್ಸ್‌, 7ನೇ ಕ್ರಾಸ್‌, ವೆಸ್ಟ್‌ ಪಾರ್ಕ್‌, ಮಲ್ಲೇಶ್ವರಂ
ಸಮಯ: ಬೆಳಗ್ಗೆ 11.30- ಮಧ್ಯಾಹ್ನ 3, ಸಂಜೆ 7- ರಾತ್ರಿ 9
ಸಂಪರ್ಕ: ಮೊ. 9886078290

2. ಮುದ್ದೆ ಮಾದಪ್ಪ ಮೆಸ್‌: ಈ ಮೆಸ್‌ “ಮುದ್ದೆ ಮೆಸ್‌’ ಎಂದೇ ಪ್ರಖ್ಯಾತಿ ಪಡೆದಿದೆ. ಗಾಂಧಿನಗರದಲ್ಲೇ ಇರುವುದರಿಂದ ಸಿನಿಮಾ ಮಂದಿಯ ಅಚ್ಚುಮೆಚ್ಚಿನ ಮೆಸ್‌ ಕೂಡಾ ಹೌದು. ಮುದ್ದೆ, ಸಾರು, ಮಜ್ಜಿಗೆ ಇಲ್ಲಿನ ವೈಶಿಷ್ಟತೆ.

ಎಲ್ಲಿ?: ಸಾಗರ್‌ ಕಾಂಪ್ಲೆಕ್ಸ್‌, ಟಾಟಾ ಕನ್ಸಲ್ಟೆನ್ಸಿ ಬಳಿ, 5ನೇ ಮುಖ್ಯರಸ್ತೆ, ಗಾಂಧಿನಗರ
ಸಮಯ: ಬೆಳಗ್ಗೆ 8- 10, ಮಧ್ಯಾಹ್ನ 12.30- 3.30, ಸಂಜೆ 7.30- ರಾತ್ರಿ 9.30
ಸಂಪರ್ಕ: ಮೊ. 9845252113

3. ಮಂಗಳೂರು ಲಂಚ್‌ ಹೋಂ: ಮೀನೂಟವನ್ನು ಇಷ್ಟಪಡುವವರಿಗೆ ಈ ಮೆಸ್‌ ಇಷ್ಟವಾಗುತ್ತೆ. ಕರಾವಳಿ ಶೈಲಿಯ ಅಡುಗೆ ಅಲ್ಲಿನ ವಿಶೇಷ. ಬಂಗುಡೆ, ಪಾಂಫ್ರೆಟ್‌, ಅಂಜಲ್‌ ಮೀನುಗಳ ಬಗೆ ಬಗೆಯ ಖಾದ್ಯಗಳನ್ನು ನೀವೊಮ್ಮೆ ಇಲ್ಲಿ ಸವಿಯಬೇಕು.

ಎಲ್ಲಿ?: ಮರಿಯಪ್ಪ ಬಿಲ್ಡಿಂಗ್‌, ಐಇಟಿಇ ಎದುರು, ಬಳ್ಳಾರಿ ಮುಖ್ಯರಸ್ತೆ, ಆರ್‌.ಟಿ. ನಗರ
ಸಮಯ: ಮ. 12- ರಾ. 11
ಫೋ: 080- 23633436

4. ನೆಲ್ಲೂರ್‌ ಮೆಸ್‌: ಆಂಧ್ರ ಶೈಲಿಯ ವೆಜ್‌ ಮತ್ತು ನಾನ್‌ವೆಜ್‌ ಆಹಾರ ಇಲ್ಲಿ ಸಿಗುತ್ತೆ. ಚಿಕನ್‌ ಬಿರಿಯಾನಿ ಮತ್ತು ಎಗ್‌ ಬುರ್ಜಿ ಈ ಮೆಸ್‌ನ ವಿಶೇಷತೆ. ತುಸು ಸ್ಪೈಸಿಯೇ ಆದರೂ ಚಪ್ಪರಿಸುವಂಥ ಖಾದ್ಯಕ್ಕೆ ಈ ಮೆಸ್‌ ಹೆಸರುವಾಸಿ.

ಎಲ್ಲಿ?: ಹೊಂಡಾ ಶೋರೂಂ ಪಕ್ಕ, ಹೊರಮಾವು ಸಿಗ್ನಲ್‌, ಬಾಣಸವಾಡಿ
ಸಮಯ: ಮಧ್ಯಾಹ್ನ 1- ಸಂಜೆ 4. ಸಂಜೆ 7- ರಾತ್ರಿ 10
ಫೋ: 9243119927

5. ಸಂಗಂ ಮೆಸ್‌: ಕೇರಳ ಶೈಲಿಯ ಆಹಾರಕ್ಕಾಗಿ ಈ ಮೆಸ್‌ಗೆ ಭೇಟಿ ನೀಡಬಹುದು. ಅಪ್ಪಂ, ಕಲ್ಲುಮಕ್ಕ, ಕಪ್ಪ ಬಿರಿಯಾನಿ ಈ ಮೆಸ್‌ನ ಸ್ಪೆಷಾಲಿಟಿ. ತೆಂಗಿನಕಾಯಿಯಿಂದಲೇ ಮಾಡಿದಂಥ ಖಾದ್ಯಗಳನ್ನು ಇಲ್ಲಿ ಸವಿಯಬಹುದು.

ಎಲ್ಲಿದೆ?: 3ನೇ ಕ್ರಾಸ್‌, ಚಿನ್ನಪ್ಪ ಲೇಔಟ್‌, ಕಮ್ಮನಹಳ್ಳಿ ಮುಖ್ಯರಸ್ತೆ
ಸಮಯ: ಬೆಳಗ್ಗೆ 8- ರಾತ್ರಿ 10.30
ಫೋ: 080- 65651651

6. ಅನ್ನಪೂರ್ಣ ಮೆಸ್‌: ಉತ್ತರ ಭಾರತೀಯರು ಹೆಚ್ಚು ಇಷ್ಟಪಡುವ ಜಾಗವಿದು. ಪುಲಾವ್‌, ಪಾವ್‌ ಭಾಜಿ, ಪರಾಠಾ ಎಲ್ಲದರಲ್ಲೂ ಉತ್ತರ ಭಾರತೀಯ ಅಡುಗೆ ಮನೆಯ ರುಚಿಯಿದೆ. ಜೊತೆಗೆ ಚೈನೀಸ್‌ ಖಾದ್ಯಗಳೂ ಇಲ್ಲಿ ಸಿಗುತ್ತವೆ.

ಎಲ್ಲಿದೆ?: 1ನೇ ಕ್ರಾಸ್‌, 5ನೇ ಬ್ಲಾಕ್‌, ಕೆ.ಎಚ್‌.ಬಿ. ಕಾಲೊನಿ, ಕೋರಮಂಗಲ
ಸಮಯ: ಬೆಳಗ್ಗೆ 10.30- ಸಂ. 4, ರಾ. 7- ರಾತ್ರಿ 11

7. ಬೆಂಗಾಲಿ ಮೆಸ್‌: ಹೆಸರೇ ಹೇಳುವಂತೆ ಈ ಮೆಸ್‌ ಬಂಗಾಳಿ ಸ್ವಾದದ ಖಾದ್ಯಗಳಿಗೆ ಹೆಸರುವಾಸಿ. ಗ್ರಾಹಕರ ಜೇಬಿಗೂ ಹೊರೆಯಾಗದಂತೆ ಬೆಲೆ ನಿಗದಿ ಪಡಿಸಲಾಗಿದೆ. ರಸಮುಲಾಯಿಯಂಥ ಬಂಗಾಳಿ ಸಿಹಿಯನ್ನೂ ಇಲ್ಲಿ ಸವಿಯಬಹುದು.

ಎಲ್ಲಿ?: 5ನೇ ಕ್ರಾಸ್‌, 5ನೇ ಬ್ಲಾಕ್‌, ಕೆ.ಎಚ್‌.ಬಿ ಕಾಲನಿ, ಕೋರಮಂಗಲ
ಸಮಯ: ಬೆಳಿಗ್ಗೆ 11.30- ಮಧ್ಯಾಹ್ನ 3.30, ಸಂಜೆ 6.30- ರಾತ್ರಿ 10.30
ಮೊ.: 8971812966

8. ಶ್ರೀವೆಂಕಟೇಶ್ವರ ಮೆಸ್‌: ಉಡುಪಿ ಮೆಸ್‌ ಎಂದೂ ಕರೆಯಲ್ಪಡುವ ಶ್ರೀ ವೆಂಕಟೇಶ್ವರ ಮೆಸ್‌ ಶ್ರೀನಗರದ ಸುತ್ತಮುತ್ತಲೆಲ್ಲಾ ಹೆಸರುವಾಸಿ. ಚಪಾತಿ ಊಟಕ್ಕೆ 50 ರೂ. ಅನ್ನ ಸಾಂಬಾರ್‌ಗೆ 25ರೂ. ಇಲ್ಲಿನ ಮೆನು ತುಂಬಾ ಸಿಂಪಲ್‌, ಆದರೆ ಸ್ವಾದಿಷ್ಟಕರ ಮತ್ತು ಆರೋಗ್ಯಕರ. ಆ ದಾರಿಯಲ್ಲಿ ಕಾರ್ಯಾಚರಿಸುವ ಬಿ.ಎಂ.ಟಿ.ಸಿ ಬಸ್‌ ಸಿಬ್ಬಂದಿಗಳು ಬಸ್‌ ನಿಲ್ಲಿಸಿಕೊಂಡು ಇಲ್ಲಿಂದ ಊಟವನ್ನು ಪಾರ್ಸೆಲ್‌ ಮಾಡಿಸಿ ಕೊಂಡೊಯ್ಯುತ್ತಾರೆ ಎನ್ನುವುದು ಈ ಮೆಸ್‌ನ ಹೆಗ್ಗಳಿಕೆ.

ಎಲ್ಲಿ?: ಪಿ..ಇ.ಎಸ್‌ ಕಾಲೇಜು ಬಳಿ, ಆವಲಹಳ್ಳಿ 50 ಅಡಿ ರಸ್ತೆ, ಶ್ರೀನಗರ
ಸಮಯ: ಸಂಜೆ 7- ರಾತ್ರಿ 11.30

ಟಾಪ್ ನ್ಯೂಸ್

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ರಾಜ್ಯಸಭೆ ಬಹುಮತದತ್ತ ಬಿಜೆಪಿ ಚಿತ್ತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

Police

Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ

Suside-Boy

Putturu: ಬಡಗನ್ನೂರು: ನೇಣು ಬಿಗಿದು ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.