ಜಾತಕ ಫಲ
Team Udayavani, Dec 16, 2017, 12:42 PM IST
* ಹರಿಣಿ ಜಯಪ್ಪ, ಗಿರಿಪುರ
ಗುರೂಜಿ, ನನ್ನ ಮತ್ತು ಪತಿಯ ಜಾತಕ ಕಳುಹಿಸಿದ್ದೇನೆ. ಮಗನದೂ ಇದೆ. ನಾವು ಮದುವೆಯಾಗಿ 12 ವರ್ಷಗಳು ಆಗಿದೆ. ಪತಿ ಈಗ ಬೇರೆ ಒಬ್ಬಳ ಜೊತೆ ಸಂಬಂಧ ಹೊಂದಿರುವ ಹಾಗಿದೆ. ನಾವಿಬ್ಬರೂ ಕೆಲಸದಲ್ಲಿದ್ದೇವೆ. ಮಗನು ನಾನಿಲ್ಲದಿರುವಾಗ ಯಾರೋ ಒಬ್ಬಳ ಫೋನ್ ಬರುತ್ತೆ ಎಂದು ಸುದ್ದಿ ತಿಳಿಸಿದ. ಈ ಚಾಟಿಂಗ್, ಫೇಸ್‌ಬುಕ್ ಇತ್ಯಾದಿ ಅವರನ್ನು ನನ್ನಿಂದ ದೂರ ಸರಿಸಿದೆ. ಪರಿಹಾರ ಇದೆಯೇ?
ಸೂಕ್ಷ್ಮವಾದ ವಿಚಾರ ಎತ್ತಿದ್ದೀರಿ. ಜಾತಕಗಳ ಪರಿಶೀಲನೆಯನ್ನು ನಡೆಸಿದಾಗ ಹೊರಬಂದ ವಿಚಾರಗಳು ನಿಮ್ಮ ಸಂದೇಹವನ್ನು ಎತ್ತಿ ಹಿಡಿಯುತ್ತವೆ. ಬದುಕು ಈಗ ಈ ಘಟ್ಟದಲ್ಲಿ ಅಸಹನೀಯವಾಗಿದೆ ಎಂದು ಯೋಚಿಸಿದರೆ ಹೌದು, ಅಸಹನೀಯವೇ. ಮಗನ ಬದುಕನ್ನು ಗಮನಿಸಿ. ನಿಮ್ಮಿಬ್ಬರ ನಡುವಣ ಬಿಗಿಯ ಎಳೆಗಳು ಅವನನ್ನು ಬಾಧಿಸಬಾರದು. ಕೆಲವು ಸಲ ತಪ್ಪು ಮಾಡುವವರಿಗೆ ವಿವೇಕ ಹೇಳಲಾಗದು. ನಿಮಗೇ ವಿವೇಕ ಹೇಳಿದಾಗ ಕಿರಿಕಿರಿಯಾಗಬಹುದು. ಅಮೃತ ಅಲೌಕಿಕವಾದದ್ದು. ಆದರೆ, ಪಾಲಿಗೆ ಬಂದದ್ದೇ ಪಂಚಾಮೃತ ಎಂದು ಸುಮ್ಮನಾಗಿ. ಬದಲಾವಣೆಗಾಗಿನ ದಾರಿ ತೆರೆದರೆ ಸೂಕ್ತವೇ. ಹನಿ (ಒಂದೆರಡು) ಜೇನು ತುಪ್ಪವನ್ನು ಅರಳೀ ಮರಕ್ಕೆ ಪ್ರತಿ ಮಂಗಳವಾರ ಸವರಿ, ವಿಷ್ಣು ಸಹಸ್ರನಾಮಾವಳಿ ಓದಿ.
* ವಿಶ್ವನಾಥ್ ಸಾಲಿಯಾನ್, ಕುಂದಾಪುರ
ನನಗೆ ಈಗ ನಾಲ್ಕು ತಿಂಗಳಿಂದ ಹೊಟ್ಟೆ ನೋವಿನ ಸಮಸ್ಯೆ ತಲೆದೋರಿದೆ. ಆಹಾರ ಸೇರುತ್ತಿಲ್ಲ. ವೈದ್ಯಕೀಯ ಪರೀಕ್ಷೆಗಳು ನಡೆದವು. ಏನೇನೋ ಮಾತ್ರೆ, ದ್ರಾವಣಗಳನ್ನು ಸೇವಿಸಿದ್ದಾಯಿತು. ಆದರೆ ನೋವಿನಿಂದ ಮುಕ್ತಿ ಸಿಕ್ಕಿಲ್ಲ. ನಿಮ್ಮಿಂದ ಪರಿಹಾರ ಸಾಧ್ಯವೇ?
ನಿಮ್ಮ ಜಾತಕ ಪರಿಶೀಲಿಸಲಾಗಿ ಅದರಲ್ಲಿ ಕಂಡ ದೋಷಗಳು ಚಂದ್ರ ಹಾಗೂ ಶನಿಯತ್ತ ಬೆರಳು ತೋರಿಸುತ್ತವೆ. ಪ್ರತಿದಿನದ ಮಲವಿಸರ್ಜನೆಯ ತೊಂದರೆಗಳು ಹೇಗಿವೆ? ಮತ್ತೂ ಒಮ್ಮೆ ಲಿವರ್ ಮತ್ತು ಇತರೆ ಅವಯವಗಳ ಆರೋಗ್ಯದ ಬಗ್ಗೆ ಚೆಕ್ ಮಾಡಿಸಿ ನೋಡಿ. ಪ್ರತಿದಿನ ಕಾಲಭೈರವ ಅಷ್ಟೋತ್ತರ ಪಠಿಸಿ. ಪ್ರತಿ ಮಂಗಳವಾರ ವಿಘ್ನನಿವಾರಕ ಗಣೇಶ ಸಹಸ್ರ ನಾಮಾವಳಿ ಪಠಿಸಿ ಒಳ್ಳೆಯದಾಗುತ್ತದೆ.
* ವೇಮಗಲ್ ರವಿ, ಬೆಂಗಳೂರು
ನನ್ನ ಮನೆಯಲ್ಲಿ ಹುಣ್ಣಿಮೆ, ಅಮಾವಾಸ್ಯೆಗಳ ದಿನ ವಿಚಿತ್ರ ಆಕೃತಿಗಳು ಕಾಣಿಸಿಕೊಳ್ಳುತ್ತವೆ. ನಮ್ಮ ತಾಯಿ ಸಶಕ್ತವಾದ ಜಗನ್ಮಾತೆಯ ಜೊತೆ ಮಾತನಾಡುತ್ತಿರುವ ದೃಶ್ಯ ಕಣ್ಣಿಗೆ ಕಾಣುತ್ತದೆ. ಆದರೆ ಅದನ್ನು ಅಮ್ಮ ನಿರಾಕರಿಸುತ್ತಾಳೆ. ಯಾವ ದೇವಿಯೂ ಬಂದಿಲ್ಲ ನನ್ನ ಬಳಿ. ನಿನ್ನ ಭ್ರಮೆ ಅನ್ನುತ್ತಾಳೆ. ಹುಚ್ಚು ಅವಳಿಗೋ, ನನಗೋ ತಿಳಿಯುತ್ತಿಲ್ಲ. ತೊಂದರೆಗಳೇನೂ ಎದುರಾಗಿಲ್ಲ. ಆದರೆ ದಣಿವು ಕಾಣಿಸುತ್ತದೆ. ಇದಕ್ಕೆ ಏನು ಕಾರಣ?
ಪ್ರಪಂಚದಲ್ಲಿ ಹಲವು ನಿಗೂಢಗಳಿವೆ. ನಿಮ್ಮ ಜಾತಕಗಳನ್ನೂ ಕಳುಹಿಸಿದ್ದೀರಿ. ಒಳಿತೇ ಆಯ್ತು. ಕೆಲವರು ಪ್ರಶ್ನೆ ಕೇಳುತ್ತಾರೆ. ಜಾತಕಗಳನ್ನು ಕಳಿಸಿರುವುದಿಲ್ಲ. ಆಧುನಿಕ ವಿಜ್ಞಾನ ನಿಮ್ಮ ಪ್ರಶ್ನೆಗೆ ಬೇರೆ ಬೇರೆ ರೀತಿಯ ವಿಶ್ಲೇಷಣೆ ಮಾಡುತ್ತದೆ. ನೀವು ಸ್ವತಃ ಯಾರಿಗೆ ಹುಚ್ಚು ಎಂದು ಕೇಳಿದ್ದೀರಿ. ಭಾರತೀಯ ಜ್ಯೋತಿಷ್ಯದಲ್ಲಿ ರಾಹು, ಕೇತುಗಳ ಕಲ್ಪನೆ, ಭೂಮಿಯನ್ನು ವಿಶ್ವದ ಮಧ್ಯ ಬಿಂದು ಎಂದು ಪರಿಗಣಿಸಲಾದ ಕಲ್ಪನೆಗಳ ನೆಲೆಯಲ್ಲಿ, ನಮ್ಮ ವ್ಯಕ್ತಿತ್ವವನ್ನು ಆಕಾರ ಬದ್ಧವಾಗಿಸಿಕೊಳ್ಳುವಲ್ಲಿ ಹಲವು ಸುಲಭದ, ಬಳಸುವ ದಾರಿ ಎನ್ನಲಾಗದು. ಸರಳ ದಾರಿಗಳನ್ನು ತೋರಿಸುತ್ತದೆ. ನರಸಿಂಹ ಕವಚ, ಶಿವ ಸೂಕ್ತ ಓದಿ. ಅಮಾವಾಸ್ಯೆ, ಹುಣ್ಣಿಮೆಗಳಂದು ಶ್ರೀ ಲಲಿತಾ ಸಹಸ್ರನಾಮಾವಳಿ ಕೂಡ ಓದಿ. ಸ್ವಭಾವಗಳ ವೈಪರಿತ್ಯ, ಅನೂಹ್ಯ, ನಿಗೂಢಗಳ ಕ್ಲಿಷ್ಟತೆಗಳಿಗಿದು ಪರಿಹಾರ. ನಿಮ್ಮ ಮೇಲೆ ನಿಮಗೆ ನಂಬಿಗೆ ಇರಲಿ. ನಿಮಗೆ ಕಂಡ ಸತ್ಯವನ್ನು ಅನ್ಯ ಮೇಲೆ ಹೇರಬೇಡಿ. ಕಷ್ಟಕ್ಕೆ ಸಿಲುಕುತ್ತೀರಿ.
* ಗಿರಿಜಾ ಪ್ರಕಾಶಗೌಡ, ಮಂಡ್ಯ
ನಮಗೆ ಮದುವೆಯಾಗಿ ಮೂರು ವರ್ಷಗಳಾದವು. ಮಕ್ಕಳಾಗಿಲ್ಲ. ಎಲ್ಲವೂ ಸರಿ ಇದೆ ಎಂಬುದು ವೈದ್ಯರ ಅಭಿಪ್ರಾಯ. ಅನ್ಯರಿಗೆ ಸುಲಭವಾದದ್ದು ನಮಗೆ ಕಷ್ಟವಾಗಿದೆ. ಪರಿಹಾರವಿದೆಯೇ?
ಸುಲಭ. ಕಷ್ಟಗಳ ಮಾತಲ್ಲ ಇದು. ಲಭ್ಯ ಎಂಬುದು ಇದೆಯೆ ಎಂಬುದು ಮುಖ್ಯ. ನಿಮ್ಮಿಬ್ಬರ ಜಾತಕದಲ್ಲಿ ಸಂತಾನ ವಿಳಂಬ ಎಂಬುದಾಗಿ ವಿಚಾರ ವೇದ್ಯ. ಎಷ್ಟು ವಿಳಂಬ ಎಂಬ ಪ್ರಶ್ನೆ ಉಳಿಯುತ್ತದೆ. ಪ್ರತಿ ದಿನ ಅರಳೀ ಮರಕ್ಕೆ 21 ಸುತ್ತು ( ಬೆಳಗ್ಗೆ) ಹಾಕಬೇಕು ನೀವು. ನಿಮ್ಮ ಸತಿ ಶ್ರೀ ಸಂತಾನ ಗೋಪಾಲಕೃಷ್ಣ ಜಪ ಪ್ರತಿ ದಿನ ಕಡಿಮೆ ಎಂದರೆ 27 ಬಾರಿ ಓದಲಿ. ನೀವಿಬ್ಬರೂ ಹನುಮಾನ್ ಚಾಲೀಸ್ ಪ್ರತಿ ದಿನ ಓದಿ. ಮೂರು ವರುಷ ಮುಂದುವರಿಸಿ. ಪತಿಯ ಮನೋ ಚೈತನ್ಯಕ್ಕೆ ಶಕ್ತಿ ಒದಗಿ ಒಳಿತಿಗೆ ದಾರಿಯಾಗುತ್ತದೆ.
ಮೊ: 8147824707
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ
ICC World Rankings: ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್ ಬುಮ್ರಾ ಮರಳಿ ನಂ.1
Daily Horoscope: ವೆಚ್ಚಗಳು ಎಣಿಸದೆ ಬಂದರೂ ಅಪವ್ಯಯ ಇಲ್ಲ, ಎಲ್ಲದರಲ್ಲೂ ಎಚ್ಚರವಿರಲಿ
Udupi: ಪೊಲೀಸ್ ಅಧಿಕಾರಿಯೆಂದು ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.