ಪುರಸಭೆ ವಸತಿ ಮಂಜೂರಾತಿ ಪತ್ರ ವಿತರಣೆ
Team Udayavani, Dec 16, 2017, 2:22 PM IST
ಬಂಟ್ವಾಳ : ರಾಜ್ಯದಲ್ಲಿ ಕಳೆದ 60 ವರ್ಷಗಳ ಹಿಂದೆ ನಿವೇಶನರಹಿತ ಕುಟುಂಬಗಳ ಸಂಖ್ಯೆ ಗರಿಷ್ಠ ಪ್ರಮಾಣದಲ್ಲಿದ್ದವು. ಇದು ಕ್ರಮೇಣ ಹಂತ ಹಂತವಾಗಿ ಸಾಮಾಜಿಕ ಬದಲಾವಣೆ ಮೂಲಕ ಸರ್ವರಿಗೂ ಸೂರು ಒದಗಿಸುವ ನಿಟ್ಟಿನಲ್ಲಿ ಬಸವ ವಸತಿ ಯೋಜನೆ ಸಹಿತ ರಾಜೀವ್ ಗಾಂಧಿ ವಸತಿ ನಿಗಮ ಮತ್ತಿತರ ಯೋಜನೆಯಡಿ ಜನತೆಗೆ ಮನೆ ನಿವೇಶನದ ಜತೆಗೆ ಸರಕಾರವು ವಸತಿ ನಿರ್ಮಿಸಲು ಕೂಡ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಅವರು ಡಿ. 14ರಂದು ಸಂಜೆ ಬಂಟ್ವಾಳ ಪುರಸಭೆಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ವಸತಿ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು.
ಪುರಸಭಾ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿ, ಇಲ್ಲಿನ ಪುರಸಭೆಗೆ ಉಸ್ತುವಾರಿ ಸಚಿವರು 10 ಕೋ. ರೂ. ಮಿಕ್ಕಿ ಅನುದಾನ ಒದಗಿಸಿದ್ದಾರೆ ಎಂದರು. ಸ್ಥಾಯೀ ಸಮಿತಿ ಅಧ್ಯಕ್ಷ ವಾಸು ಪೂಜಾರಿ, ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಸಮುದಾಯ ಅಭಿವೃದ್ಧಿ ಅಧಿಕಾರಿ ಮತ್ತಡಿ, ಮೇಲ್ವಿಚಾರಕಿ ಉಮಾವತಿ, ಪುರಸಭಾ ಸದಸ್ಯರಾದ ಗಂಗಾಧರ ಪೂಜಾರಿ, ಜಗದೀಶ ಕುಂದರ್, ಪ್ರವೀಣ್ ಬಿ., ಮಹಮ್ಮದ್ ಶರೀಫ್, ವಸಂತಿ ಚಂದಪ್ಪ, ಜೆಸಿಂತಾ ಡಿ’ಸೋಜಾ, ನಾರ್ಬರ್ಟ್ ಡಿ’ಸೋಜಾ, ಮತ್ತು ಆಶ್ರಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಸಹಾಯಧನ
ರಾಜೀವ್ ಗಾಂಧಿ ವಸತಿ ನಿಗಮ ಯೋಜನೆಯಡಿ ವಸತಿ ಮಂಜೂರಾದ ಅರ್ಹ ಫಲಾನುಭವಿಗಳಿಗೆ ರಾಜ್ಯ ಸರಕಾರದಿಂದ 1.20 ಲ.ರೂ. ಮತ್ತು ಕೇಂದ್ರ ಸರಕಾರದಿಂದ 1.50 ಲ.ರೂ. ಹೀಗೆ ಒಟ್ಟು 2.70 ಲ.ರೂ. ವೆಚ್ಚದಲ್ಲಿ 700 ಚದರಡಿ ವಿಸ್ತೀರ್ಣದ ಮನೆ ನಿರ್ಮಿಸಲು ನಾಲ್ಕು ಹಂತದಲ್ಲಿ ಸಹಾಯಧನ ಬಿಡುಗಡೆಯಾಗುತ್ತದೆ.
– ರೇಖಾ ಜೆ. ಶೆಟ್ಟಿ , ಮುಖ್ಯಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ತನಿಖೆಗೆ ನನ್ನ ಸಹಕಾರವಿದೆ… ಈ ವಿಚಾರದಲ್ಲಿ ಪತ್ನಿ ಹೆಸರು ತರಬೇಡಿ: ರಾಜ್ ಕುಂದ್ರಾ
Yadagiri: ಸಂಸದ, ಸಚಿವ, ಶಾಸಕರಿದ್ದರೂ ಅಧಿಕಾರಿಗಳು ಗೈರು; ಸಿಟ್ಟಾದ ಸಚಿವ ದರ್ಶನಾಪುರ
Bengaluru: ಕಬ್ಬನ್ ಪಾರ್ಕ್ನಲ್ಲಿ ಪುಷ್ಪ ಪ್ರದರ್ಶನ
S.Africa: ಫಿಕ್ಸಿಂಗ್ ಕೇಸ್ನಲ್ಲಿ ಜೈಲು ಪಾಲಾದ ದ. ಆಫ್ರಿಕಾದ ಮಾಜಿ ನಂಬರ್ 1 ಬೌಲರ್
Wedding Story: ಕಂಕಣ ಕಾಲ-3: ವಿವಾಹ ಭೋಜನವಿದು.. ನಾರ್ತ್ ಭಕ್ಷ್ಯಗಳಿವು…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.