![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Dec 16, 2017, 3:53 PM IST
ನಗರ : ಜೀವನದಲ್ಲಿ ಯಶಸ್ಸು ಕಾಣಲು ಶಿಸ್ತು, ಸಂಯಮ, ಶ್ರದ್ಧೆ, ಏಕಾಗ್ರತೆ, ಸಮಯಪ್ರಜ್ಞೆಯನ್ನು ರೂಢಿಸಿಕೊಳ್ಳಬೇಕು. ಮನೋ ನಿಯಂತ್ರಣವಿದ್ದಾಗ ಮಾತ್ರ ಒಂದು ವಿಚಾರದ ಕುರಿತು ಕೇಂದ್ರೀಕರಿಸಲು ಸಾಧ್ಯ ಎಂದು ಆರ್ಟ್ ಆಫ್ ಲಿವಿಂಗ್‌ನ ಕಾರ್ಯಕರ್ತ ಪ್ರಶಾಂತ ಪೈ ಹೇಳಿದರು. ಅವರು ಇಲ್ಲಿನ ಪ್ರಗತಿ ಸ್ಟಡಿ ಸೆಂಟರ್ ನಲ್ಲಿ ಏಕಾಗ್ರತೆ ಮತ್ತು ಮನೋನಿಗ್ರಹ ಕುರಿತು ಉಪನ್ಯಾಸ ನೀಡಿದರು.
ವಿದ್ಯಾರ್ಥಿಗಳಲ್ಲಿ ಚಂಚಲತೆ ಸಹಜವಾಗಿರುವುದರಿಂದ ಯಾವುದೇ ವಿಚಾರದ ಕುರಿತು ಏಕಾಗ್ರತೆ ಸಾಧಿಸುವುದು ಕೆಲವೊಮ್ಮೆ ಕಷ್ಟ ಸಾಧ್ಯ. ಹೀಗಾಗಿ ದಿನನಿತ್ಯ ಯೋಗಾಭ್ಯಾಸದಿಂದ ಏಕಾಗ್ರತೆ ಸಾಧಿಸಲು ಸಾಧ್ಯ. ಮನಸ್ಸನ್ನು ನಮ್ಮ ನಿಯಂತ್ರಣದಲ್ಲಿರಿಸಬೇಕು. ಮನಸ್ಸಿನ ನಿಯಂತ್ರಣದಲ್ಲಿ ನಾವು ಇರುವ ಹಾಗಿರಬಾರದು. ಮನೋನಿಯಂತ್ರಣ ಸಾಧಿಸಲು ಮನಸ್ಸಿನ ಸ್ನೇಹಿತನಾಗಿರುವ ಉಸಿರಾಟ ಪ್ರಕ್ರಿಯೆಯಲ್ಲಿ ನಿಯಂತ್ರಣ
ಸಾಧಿಸಬೇಕು ಎಂದು ಹೇಳಿದರು.
ಪ್ರಗತಿ ಸ್ಟಡಿ ಸೆಂಟರ್ ಸಂಚಾಲಕ ಪಿ. ವಿ. ಗೋಕುಲ್‌ನಾಥ್ ಮಾತನಾಡಿ, ವಿದ್ಯಾರ್ಥಿಗಳು ಏಕಾಗ್ರತೆ ಸಾಧಿಸಿದಾಗ ಮಾತ್ರ ಪ್ರಗತಿ ಸಾಧ್ಯ ಎಂದರು. ಆರ್ಟ್ ಆಫ್ ಲಿವಿಂಗ್‌ನ ಕಾರ್ಯಕರ್ತೆ ಶರಾವತಿ ಉಪಸ್ಥಿತರಿದ್ದರು. ಉಪನ್ಯಾಸಕಿ ಗೀತಾ ಕೊಂಕೋಡಿ ಅವರು ನಿರ್ವಹಿಸಿದರು.
ಜ. 1ರಿಂದ ಶಿಬಿರ
ಜ. 1ರಿಂದ 4ರ ತನಕ ಪ್ರತಿನಿತ್ಯ ಸಂಜೆ 3 ಗಂಟೆಯಿಂದ 6 ಗಂಟೆಯವರೆಗೆ ಸಂಸ್ಥೆಯಲ್ಲಿ ಶಿಬಿರ ನಡೆಯಲಿದೆ ಎಂದು ಪ್ರಾಂಶುಪಾಲೆ ಕೆ. ಹೇಮಲತಾ ಗೋಕುಲ್ ನಾಥ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.