ಜಿವಿ ಮೊಬೈಲ್ಸ್‌ನಿಂದ ರೆವಲ್ಯೂಷನ್ ಟಿಎನ್‌ಟಿ3 ಬಿಡುಗಡೆ
Team Udayavani, Dec 16, 2017, 4:17 PM IST
ನವದೆಹಲಿ: ಜಿವಿ-ಮ್ಯಾಜಿಕ್ ಕಾನ್‌ಪ್ಲೆಕ್ಸ್ ಇಂಟರ್‌ನ್ಯಾಷನಲ್ ಸಂಸ್ಥೆ ನೂತನ ಟಚ್ ಆ್ಯಂಡ್ ಟೈಪ್ 4ಜಿ ಸ್ಮಾರ್ಟ್‌ಫೋನ್ “ರೆವಲ್ಯೂಷನ್ ಟಿಎನ್‌ಟಿ3′ ಅನ್ನು ಬಿಡುಗಡೆ ಮಾಡಿದೆ. ಇತೀಚೆಗೆ ದೆಹಲಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಿ.ಪಿ.ಬತೇಜ ಅವರು ಫೋನ್ ಅನಾವರಣ ಮಾಡಿ ಮಾತನಾಡಿದರು.
ಸಂಸ್ಥೆಯ ಹೊಸ ಉತ್ಪನ್ನ ರೆವಲ್ಯೂಷನ್ ಟಿಎನ್‌ಟಿ3 ಎಲ್ಲ ವರ್ಗದ ಗ್ರಾಹಕರಿಗೂ ಮೆಚ್ಚಿಗೆಯಾಗುವಂತ ಹಾಗೂ ಸರಳವಾಗಿ ಬಳಸುವಂತ ಸ್ಮಾರ್ಟ್‌ಫೋನ್ ಆಗಿದೆ. ಪ್ರಮುಖವಾಗಿ ಫೀಚರ್ ಫೋನ್‌ಗೆ ಹೊಂದಿಕೊಂಡಿದ್ದ ಹಿರಿಯ ನಾಗರಿಕರಿಗೆ ಹಾಗೂ ಇಳಿವಯಸ್ಸಿನವರಿಗೆ ಅನುಕೂಲವಾಗಲೆಂದು ಕೀಪ್ಯಾಡ್ ಹಾಗೂ ಟಚ್‌ಸ್ಕ್ರೀನ್ ಎರಡನ್ನೂ ಅಳವಡಿಸಲಾಗಿದೆ. ಅಲ್ಲದೆ, ಫೀಚರ್ ಫೋನ್ ಬಳಸುತ್ತಿದ್ದವರು ಸ್ಮಾರ್ಟ್‌ಫೋನ್ ಬಳಸುವುದನ್ನು ಕಲಿಯಲು ಇದೊಂದು ಉತ್ತಮ ಸಾಧನ ಎಂದರು.
ಟಿಎನ್‌ಟಿ3 ವಿಶಿಷ್ಟ ಫೋನ್ ಆಗಿದ್ದು 22 ಸ್ಥಳೀಯ ಭಾಷೆಗಳಲ್ಲಿ ಬಳಸಲು ಸಹಾಯವಾಗುವಂತೆ ರೂಪಿಸಲಾಗಿದೆ. 4 ಇಂಚಿನ ಟಚ್ ಸ್ಕ್ರೀನ್, ಡಬ್ಲ್ಯುವಿಜಿಎ ಡಿಸ್‌ಪ್ಲೇ, ಫಿಂಗರ್‌ಪ್ರಿಂಟ್ ಸೆನ್ಸಾರ್, 2300 ಎಂಎಎಚ್ ಡ್ನೂರಬಲ್ ಬ್ಯಾಟರಿ, ಕ್ವಾಡ್‌ಕೋರ್ 1.3 ಜಿಎಚ್‌ಜೆಡ್ ಪ್ರೊಸೆಸ್ಸರ್ ಇದರಲ್ಲಿದ್ದು, ಕೇವಲ 3,999 ರೂ.ಗೆ 4ಜಿ ಸ್ಮಾರ್ಟ್‌ಫೋನ್ ದೊರೆಯುತ್ತಿದೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಜಿವಿ ಮೊಬೈಲ್ಸ್ ಸಿಇಒ ಪಂಕಜ್ ಆನಂದ್ ಮಾತನಾಡಿ, ಅತಿ ಕಡಿಮೆ ಬೆಲೆಗೆ ಅತ್ಯುತ್ತಮ ತಂತ್ರಜ್ಞಾನದ ಫೋನನ್ನು ನಮ್ಮ ಗ್ರಾಹಕರಿಗೆ ನೀಡುತ್ತಿದ್ದೇವೆ. ಮಾರುಕಟ್ಟೆಯಲ್ಲಿ “ರೆವಲ್ಯೂಷನ್ ಟಿಎನ್‌ಟಿ3′ ಹೊರತುಪಡಿಸಿದರೆ ಕೀಪ್ಯಾಡ್ ಮತ್ತು ಟಚ್‌ಸ್ಕ್ರೀನ್ ಎರಡನ್ನೂ ಒಳಗೊಂಡಿರುವ ಮತ್ತೂಂದು ಸ್ಮಾರ್ಟ್‌ಫೋನ್ ಇಲ್ಲ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
Aircel-Maxis Case: ಏರ್‌ಸೆಲ್-ಮ್ಯಾಕ್ಸಿಸ್ ಕೇಸಿನಲ್ಲಿ ಚಿದಂಬರಂ ವಿರುದ್ಧ ವಿಚಾರಣೆ ತಡೆ
Bhagyanagar: ಹೈದರಾಬಾದ್ ಅಲ್ಲ, ಭಾಗ್ಯನಗರ: ಆರೆಸ್ಸೆಸ್ ಮತ್ತೆ ಹಕ್ಕೊತ್ತಾಯ
Exit Poll: ಮಹಾರಾಷ್ಟ್ರ: ಬಿಜೆಪಿ ನೇತೃತ್ವಕ್ಕೆ ಮತ್ತೆ ಅಧಿಕಾರ, ಜಾರ್ಖಂಡ್‌ನಲ್ಲಿ ಪೈಪೋಟಿ?
Panaji: ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
MUST WATCH
ಹೊಸ ಸೇರ್ಪಡೆ
By Election: ರಾಜ್ಯದ ಮೂರು ಕ್ಷೇತ್ರಗಳ ಪೈಕಿ ಎನ್‌ಡಿಎಗೆ ಯಾವುದು? ಕಾಂಗ್ರೆಸ್‌ಗೆ ಎಷ್ಟು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
Aircel-Maxis Case: ಏರ್‌ಸೆಲ್-ಮ್ಯಾಕ್ಸಿಸ್ ಕೇಸಿನಲ್ಲಿ ಚಿದಂಬರಂ ವಿರುದ್ಧ ವಿಚಾರಣೆ ತಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.