ಬಿಜೆಪಿಗರ ಕಿರುಕುಳ ತಾಳಲಾರದೆ ಮಲ್ಲಮ್ಮ ಕಾಂಗ್ರೆಸ್ ಸೇರಿದ್ದಾರೆ
Team Udayavani, Dec 17, 2017, 11:45 AM IST
ಬೆಂಗಳೂರು: ಹತ್ಯೆಗೀಡಗಿರುವ ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಅವರ ಪತ್ನಿ ಮಲ್ಲಮ್ಮ ಬಿಜೆಪಿಯವರ ಕಿರುಕುಳ ತಾಳಲಾರದೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಹೊರತು ನಾವು ಅವರನ್ನುಹೈಜಾಕ್ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ‘ನಾವು ಯಾರನ್ನೂ ಹೈಜಾಕ್ ಮಾಡಿಲ್ಲ. ಮಲ್ಲಮ್ಮ ಅವರೆ ಬಿಜೆಪಿಯವರ ನಿರಂತರ ಕಿರುಕುಳದಿಂದ ಬೇಸತ್ತು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಸುಳ್ಳು ಹೇಳಬೇಕೆಂದು ನಿರಂತರ ಕಿರುಕುಳ ನೀಡುತ್ತಿತ್ತು’ ಎಂದರು.
ಮಲ್ಲಮ್ಮ ಅವರು ಬಿಜೆಪಿ ವಿರುದ್ಧವೇ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ದು, ಈ ಮೂಲಕ ತಮ್ಮ ಪತಿ ಪ್ರತಿನಿಧಿಸುತ್ತಿದ್ದ ಪಕ್ಷದ ವಿರುದ್ಧವೇ ತಿರುಗಿ ಬಿದ್ದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಕುಮಾರಿ ನಾಗಲಕ್ಷ್ಮಿ ಬಾಯಿ ಅವರಿಗೆ ಶನಿವಾರ ಲಿಖೀತ ದೂರು ಸಲ್ಲಿಸಿ ‘ಬಿಜೆಪಿ ಸದಸ್ಯರಿಂದ ಹಾಗೂ ತಮ್ಮ ಭಾವ ಮತ್ತು ಕುಟುಂಬದರಿಂದಲೂ ತಮಗೆ ಮಾನಸಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಜೀವ ಭಯವಿದ್ದು, ನನಗೂ, ನನ್ನಮಕ್ಕಳಿಗೆ ಜೀವರಕ್ಷಣೆ ಕೊಡಬೇಕು’ ಎಂದು ಕೋರಿದ್ದರು.
ಯೋಗೀಶಗೌಡ ಕೊಲೆ ಪ್ರಕರಣವನ್ನುಮುಂದಿಟ್ಟುಕೊಂಡು ಸಚಿವ ವಿನಯ್ ಕುಲಕರ್ಣಿ ಅವರನ್ನು ಹಣಿಯಲು ಯತ್ನಿಸಿದ್ದ ಬಿಜೆಪಿಗೆ ಇದೀಗಸ್ವತಃ ಯೋಗೀಶಗೌಡ ಪತ್ನಿ ಮಲ್ಲಮ್ಮನೇ ಟಾಂಗ್ ಕೊಟ್ಟಿದ್ದು ಈ ಪ್ರಕರಣದಲ್ಲಿ ಕಮಲ ಪಾಳೆಯಕ್ಕೆ ತೀವ್ರ ಇರುಸು ಮುರುಸು ಉಂಟಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
TTD Resolution: ಇನ್ನು ಹಿಂದೂಯೇತರರಿಂದ ತಿರುಮಲ ತಿರುಪತಿ ದೇವಸ್ಥಾನ ಮುಕ್ತ!
Order: ಬಾಕಿ ಹಣ ಕೊಡದ್ದಕ್ಕೆ ದಿಲ್ಲಿಯ ಹಿಮಾಚಲ ಭವನ ಹರಾಜು: ʼಕೈʼ ಸರಕಾರಕ್ಕೆ ಹಿನ್ನಡೆ
TTD: ತಿರುಪತಿ ದರ್ಶನ ಕಾಯುವಿಕೆ ಅವಧಿ ಇಳಿಕೆಗೆ ಕೃತಕ ಬುದ್ಧಿಮತ್ತೆ ಬಳಕೆ?
Pilot: ಕೆಲಸದ ಟೈಂ ಮುಗೀತು ಎಂದು ವಿಮಾನ ಹಾರಿಸದ ಏರ್ ಇಂಡಿಯಾ ಪೈಲಟ್!
Nanded: ಸಂಗಾತಿಯ ಅರಸುತ್ತಾ 300 ಕಿ.ಮೀ. ಸಂಚರಿಸಿದ “ಜಾನಿ’ ಎಂಬ ಹುಲಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.