ಪೊಲೀಸರಿಗೆ ದೂರು ನೀಡಿದರೂ ಪರಿಣಾಮ ಇಲ್ಲ
Team Udayavani, Dec 17, 2017, 12:20 PM IST
ಮೂಲ್ಕಿ: ಕೆಲವು ದಿನಗಳಿಂದ ಹೆದ್ದಾರಿ ಬದಿಯಲ್ಲಿ ತ್ಯಾಜ್ಯ ಸುರಿಯುವ ಪರಿಪಾಠ ಆರಂಭಗೊಂಡಿದೆ. ಒಂದು ಸಲ ಯಾರಾದರೂ ಒಂದು ಜಾಗದಲ್ಲಿ ಕಸ ಸುರಿಯಲು ಆರಂಭಿಸಿದರೆ ಮತ್ತೆ ನಿತ್ಯವೂ ಹಲವರು ಅದೇ ಜಾಗದಲ್ಲಿ ಕಸ ಸುರಿಯುತ್ತಾರೆ. ವಾಹನಗಳಲ್ಲಿ ಸಾಗುವ ಕಸವನ್ನು ಎಸೆದು ಹೋಗುತ್ತಾರೆ. ಇಂತಹ ಒಂದು ಕಸದ ರಾಶಿ ಹಳೆಯಂಗಡಿ ಹೆದ್ದಾರಿಯ ಪಕ್ಕದಲ್ಲಿತ್ತು.
ಅದು ಬೆಳೆಯುತ್ತಲೇ ಹೋಗಿದ್ದರಿಂದ ಪರಿಸರದಲ್ಲಿ ದುರ್ವಾಸನೆ ಹರಡಿ, ಸುತ್ತಲಿನ ನಿವಾಸಿಗಳಿಗೆ ತೊಂದರೆಯಾಗಲಾರಂಭವಾಯಿತು. ಇದಕ್ಕೆ ಪರಿಹಾರ ರೂಪದಲ್ಲಿ ಗ್ರಾ.ಪಂ. ಕಸ ತೆರವು ಮಾಡಿದರೂ ಮತ್ತೆ ಕಸ ಎಸೆಯುವ
ಪರಿಪಾಠ ಮುಂದುವರಿದಿದೆ.
ಈ ಸ್ಥಳದಲ್ಲಿ ಸಿಸಿ ಕೆಮರಾ ಅಳವಡಿಸಿದ ಹಳೆಯಂಗಡಿ ಗ್ರಾ.ಪಂ., ಅದರಲ್ಲಿ ಕಸ ಸುರಿಯುತ್ತಿರುವ ವಾಹನದ ದೃಶ್ಯಾವಳಿಯ ದಾಖಲೆಯೊಂದಿಗೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪರಿಣಾಮ ಆಗಲಿಲ್ಲ ಎಂದು ಅಧಿಕಾರಿಗಳು ಆರೋಪಿಸುತ್ತಿದ್ದಾರೆ.
ಮತ್ತೊಂದೆಡೆ ರಾಶಿ
ಈಗ ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕಾರ್ನಾಡು ಬೈಪಾಸ್ ಬಳಿಯಿಂದ ಮಂಗಳೂರಿನತ್ತ ತೆರಳುವ ಕೊರಂಟಬೆಟ್ಟು ಸಂಪರ್ಕ ರಸ್ತೆಯ ಬಳಿ ತ್ಯಾಜ್ಯ ರಾಶಿ ಬೀಳುತ್ತಿದೆ. ಇಲ್ಲಿಯೂ ದುರ್ವಾಸನೆ ಬೀರುವ ಕಸದ ರಾಶಿ ಬೆಳೆಯುತ್ತಲೇ ಇದೆ.
ಸಿಸಿ ಕೆಮರಾ ಅಳವಡಿಕೆ
ಸಾರ್ವಜನಿಕ ಸ್ಥಳಗಳನ್ನು ಮಲಿನಗೊಳಿಸುವುದು ಹಾಗೂ ಬೇಕಾಬಿಟ್ಟಿ ತ್ಯಾಜ್ಯ ಎಸೆಯುವುದು ಅಪರಾಧ. ಹೆದ್ದಾರಿ ಬದಿಯಲ್ಲಿ ತ್ಯಾಜ್ಯ ರಾಶಿ ಹಾಕುತ್ತಿದ್ದರೂ ಈ ಬಗ್ಗೆ ನಗರ ಪಂಚಾಯತ್ ನಿಗಾವಹಿಸಿದೆ. ತ್ಯಾಜ್ಯ ಎಸೆಯುವವರನ್ನು ಪತ್ತೆ ಮಾಡಲು ಸಿಸಿ ಕೆಮರಾ ಅಳವಡಿಸಲಾಗಿದೆ. ತಪ್ಪಿತಸ್ಥರನ್ನು ಹಿಡಿದು ಕ್ರಮಕೈಗೊಳ್ಳಲಾಗುವುದು.
–ಇಂದು ಎಂ.
ಮುಖ್ಯಾಧಿಕಾರಿ, ಮೂಲ್ಕಿ ನ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು
ಆರ್ಯಭಟ ಗಣಿತ ಪರೀಕ್ಷೆ; ಸಾಧನೆಗೈದ ಡಿ.ಪಿ.ಎಸ್. ಶಾಲೆಯ ವಿದ್ಯಾರ್ಥಿಗಳು
Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
MUST WATCH
ಹೊಸ ಸೇರ್ಪಡೆ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.