ಅನುಮತಿ ಕೇಳಿಲ್ಲ, ಕೇಳಿದರೆ ಕೊಡಲ
Team Udayavani, Dec 17, 2017, 2:52 PM IST
ಬೆಂಗಳೂರು: “ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ರ “ಸನ್ನಿ ನೈಟ್ಸ್’ ಕಾರ್ಯಕ್ರಮಕ್ಕೆ ಅನುಮತಿ ಕೇಳಿಲ್ಲ,’ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಹೊಸ ವರ್ಷಾಚರಣೆ ಅಂಗವಾಗಿ ಡಿ.31ರಂದು ನಗರದ ಮಾನ್ಯತಾ ಟೆಕ್ ಪಾರ್ಕ್ನ ವೈಟ್ ಆರ್ಕಿಡ್ ಆವರಣದಲ್ಲಿ “ಸನ್ನಿ ನೈಟ್ಸ್’ ಕಾರ್ಯಕ್ರಮ ನಡೆಸಲು ಅನುಮತಿ ಪಡೆದಿಲ್ಲ. ನಾವು ಅನುಮತಿ ಕೊಡುವುದೂ ಇಲ್ಲ ಎಂದು ಸುನಿಲ್ ಕುಮಾರ್ ತಿಳಿಸಿದ್ದಾರೆ.
ನನಗೆ ಕಾರ್ಯಕ್ರಮದ ಆಯೋಜಕರು ಯಾರು ಎಂಬುದೇ ಗೊತ್ತಿಲ್ಲ. ಅವರೇ ಕಾರ್ಯಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದಾರೆ. ಡಿ.31ರಂದು ಬೆಂಗಳೂರಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಈಗಾಗಲೇ ಹೈಕೋರ್ಟ್ಗೆ ಅಪಿಡವಿಟ್ ಸಲ್ಲಿಸಲಾಗಿದೆ. ಸನ್ನಿ ಲಿಯೋನ್ ಬಂದಿದ್ದಕ್ಕೆ ಕೇರಳದಲ್ಲೂ ಈ ಹಿಂದೆ ಅನಾಹುತ ಸಂಭವಿಸಿದೆ. ಇಲ್ಲಿಯೂ ಅದೇ ರೀತಿ ಗಲಾಟೆಯಾದರೆ ಕಾರ್ಯಕ್ರಮದ ಆಯೋಜಕರೆ ಹೊಣೆಯಾಗುತ್ತಾರೆ. ಕಾರ್ಯಕ್ರಮಕ್ಕೆ ಅನುಮತಿ ನೀಡಿ ಎಂದು ಇದುವರೆಗೂ ಯಾರೂ ನಮ್ಮ ಬಳಿ ಬಂದಿಲ್ಲ. ಒಂದು ವೇಳೆ ಪೊಲೀಸ್ ಅನುಮತಿಯಿಲ್ಲದೇ ಕಾರ್ಯಕ್ರಮ ನಡೆಸಿದರೆ ಆಯೋಜಕರನ್ನೇ ಹೊಣೆ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.