ಸರ್ಕಾರಿ ನೌಕರರ ವೇತನ ಭಾರಿ ಪ್ರಮಾಣದ ಹೆಚ್ಚಳಕ್ಕೆ ಶಿಫಾರಸು?
Team Udayavani, Dec 18, 2017, 6:55 AM IST
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ರಚಿಸಿರುವ ಆರನೇ ವೇತನ ಆಯೋಗವು ತನ್ನ ವರದಿ ಅಂತಿಮಗೊಳಿಸುತ್ತಿದ್ದು, ನೌಕರರ ವೇತನ ಭಾರೀ ಪ್ರಮಾಣದಲ್ಲಿ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ. ಶೀಘ್ರದಲ್ಲೇ ಆಯೋಗ ಸರ್ಕಾರಕ್ಕೆ ತನ್ನ ವರದಿ ನೀಡುವ ಸಾಧ್ಯತೆ ಇದೆ.
ಸರ್ಕಾರಿ ನೌಕರರ ಆರಂಭಿಕ ವೇತನ ಶ್ರೇಣಿಯ ಕನಿಷ್ಠ ಮೂಲವೇತನವನ್ನು 9,600 ರೂ.ನಿಂದ 16,350ಕ್ಕೆ ಹೆಚ್ಚಿಸಲು ಶಿಫಾರಸು ಮಾಡಲಿದೆ ಎಂದು ಹೇಳಲಾಗಿದೆ. ಇದರ ಜತೆಗೆ ವಿವಿಧ ವೇತನ ಶ್ರೇಣಿಗಳ (ಪ್ರತಿವರ್ಷ ನೀಡುವ ವೇತನ ಬಡ್ತಿಯ ಅನುಸಾರ) ಈಗಿರುವ ಮೂಲ ವೇತನದಲ್ಲಿ ಭಾರೀ ಪ್ರಮಾಣದಲ್ಲಿ ಏರಿಸಲು ಶಿಫಾರಸು ಮಾಡಲಿದೆ ಎಂದು ಹೇಳಲಾಗಿದೆ.
ತುಟ್ಟಿಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನ ಮಾಡಲು ಮತ್ತು ಅಕ್ಕಪಕ್ಕದ ರಾಜ್ಯಗಳಲ್ಲಿರುವ ವೇತನಕ್ಕೆ ಸರಿಸಮನಾಗಿ ರಾಜ್ಯದ ಸರ್ಕಾರಿ ನೌಕರರಿಗೂ ವೇತನ ಹೆಚ್ಚಿಸಲು ವೈಟೇಜ್ ನೀಡುವ ಕುರಿತಾಗಿ ಹಾಗೂ ಐಎಎಸ್, ಐಪಿಎಸ್, ಐಎಫ್ಎಸ್ ಹೊರತುಪಡಿಸಿ ರಾಜ್ಯ ಸರ್ಕಾರದಲ್ಲಿ ಗರಿಷ್ಠ ಸಂಬಳ ಪಡೆಯುವ ಸೂಪರ್ ಟೈಮ… ಸ್ಕೇಲ್‌ನ ಅಧಿಕಾರಿಗಳ ಮೂಲ ವೇತನವನ್ನು 56,550 ರೂ.ನಿಂದ 95,325 ರೂ.ಗೆ ಹೆಚ್ಚಿಸಲು ಶಿಫಾರಸು ಮಾಡಲಿದೆ.
ನೌಕರರಿಗೆ ಪ್ರತಿ ವರ್ಷ ನೀಡುವ ವೇತನ ಬಡ್ತಿ ಮೊತ್ತವನ್ನು ಹೆಚ್ಚಿಸಲು ಆಯೋಗ ಶಿಫಾರಸು ಮಾಡಲಿದ್ದು, ಆ ನಿಟ್ಟಿನಲ್ಲಿ 17 ವಿವಿಧ ವೇತನ ಶ್ರೇಣಿಗಳನ್ನು ಪಟ್ಟಿ ಮಾಡಿದೆ. ವೇತನ ಆಯೋಗಕ್ಕೆ ವರದಿ ನೀಡಲು 2018ರ ಜನವರಿ ಅಂತ್ಯದವರೆಗೆ ಕಾಲಾವಕಾಶ ಇದ್ದರೂ ಈ ತಿಂಗಳ ಅಂತ್ಯದೊಳಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.