ರೈಲ್ವೇ ನೇಮಕ ಪ್ರಕ್ರಿಯೆ 6 ತಿಂಗಳಲ್ಲಿ ಪೂರ್ಣ
Team Udayavani, Dec 18, 2017, 7:10 AM IST
ಹೊಸದಿಲ್ಲಿ: ಭಾರತೀಯ ರೈಲ್ವೇ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂದು ಕನಸು ಕಾಣುವವರಿಗೆ ಇದೊಂದು ಒಳ್ಳೆಯ ಸುದ್ದಿ. ಇದುವರೆಗೆ ಬರೋಬ್ಬರಿ 2 ವರ್ಷಗಳ ವರೆಗೆ ನಡೆಯುತ್ತಿದ್ದ ನೇಮಕ ಪ್ರಕ್ರಿಯೆ ಇನ್ನು ಆರೇ ತಿಂಗಳಲ್ಲಿ ಮುಕ್ತಾಯವಾಗುವ ಸಾಧ್ಯತೆ ಇದೆ. ಅದಕ್ಕಾಗಿ ಆನ್‌ಲೈನ್ ಮೂಲಕ ಪರೀಕ್ಷೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ ಭಾರತೀಯ ರೈಲ್ವೆ.
ಸಿಬ್ಬಂದಿ ಕೊರತೆಯಿಂದ ಕಂಗೆಟ್ಟಿರುವ ಇಲಾಖೆ ಇತ್ತೀಚೆಗೆ ನಡೆದ ವಲಯ ಮುಖ್ಯಸ್ಥರ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದೆ. ನಿಗದಿತ ಹುದ್ದೆಗೆ ಅರ್ಜಿ ಹಾಕಿದ ಬಳಿಕ ಉದ್ಯೋಗಾಕಾಂಕ್ಷಿ ಪ್ರಕ್ರಿ ಯೆ ಮುಕ್ತಾಯಕ್ಕೆ 2 ವರ್ಷ ಕಾಯಬೇಕು. ಈ ಸಂದರ್ಭದಲ್ಲಿ ಆತ ಬೇರೆ ಉದ್ಯೋಗಕ್ಕೆ ಸೇರುವ ಸಾಧ್ಯತೆಯೂ ಇರುತ್ತದೆ. ಡಿ.20ರ ಒಳಗಾಗಿ ರೈಲ್ವೇ ವಲಯ ಮುಖ್ಯ ಸ್ಥರು ಅಭಿಪ್ರಾಯ ಸಲ್ಲಿಸುವಂತೆಯೂ ಸಭೆಯಲ್ಲಿ ಸೂಚಿಸಲಾಗಿದೆ.
ಎಷ್ಟೆಷ್ಟಿವೆ?: 2016ರ ಡಿಸೆಂಬರ್‌ಗೆ ಮುಕ್ತಾಯವಾದಂತೆ 13 ಲಕ್ಷ ನೌಕರರು ರೈಲ್ವೆಯಲ್ಲಿದ್ದಾರೆ. 2,25,823 ಮಂದಿ ಸಿ ಮತ್ತು ಡಿ ದರ್ಜೆ ಉದ್ಯೋಗಿಗಳಿದ್ದಾರೆ. 1,22,911 ಹುದ್ದೆಗಳು ರೈಲ್ವೆಯಲ್ಲಿ ಭರ್ತಿಗೆ ಬಾಕಿ ಉಳಿದಿವೆ. ಈ ಪೈಕಿ ಭದ್ರತಾ ವಿಭಾಗದ ಲ್ಲಿಯೇ ಹೆಚ್ಚು. 17,464 ಹುದ್ದೆಗಳು ಲೋಕೋ ಪೈಲಟ್‌ಗಳ ಹುದ್ದೆಗಳು ಖಾಲಿ ಇವೆ.
ಅಪಘಾತ ತಡೆ ವ್ಯವಸ್ಥೆ ಮೇಲ್ದರ್ಜೆಗೆ 12 ಸಾವಿರ ಕೋಟಿ ರೂ.: ರೈಲ್ವೇಯಲ್ಲಿ ಹೆಚ್ಚುತ್ತಿ ರುವ ಅಪಘಾತ ತಡೆಗೆ 12 ಸಾವಿರ ಕೋಟಿ ರೂ.ವೆಚ್ಚದ ಐರೋಪ್ಯ ರಾಷ್ಟ್ರಗಳ ಮಾದರಿಯ ಅಪಘಾತ ತಡೆ ಮಾದರಿ ವ್ಯವಸ್ಥೆಗೆ ಒಪ್ಪಿಗೆ ನೀಡಲಾಗಿದೆ. 6 ಸಾವಿರ ಎಲೆಕ್ಟ್ರಿಕ್ ಲೋಕೋಗಳ ಅಳವಡಿಕೆಗೆ ಒಪ್ಪಿಗೆ ಸೂಚಿಸಲಾಗಿದೆ. ಐರೋಪ್ಯ ರಾಷ್ಟ್ರಗಳ ರೈಲು ನಿಯಂತ್ರಣ ವ್ಯವಸ್ಥೆ-ಹಂತ 2 (ಇಟಿಸಿಎಸ್) ಮಾದರಿಯ ವ್ಯವಸ್ಥೆಗೆ ಇದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Divorce: 29 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಎ.ಆರ್.ರೆಹಮಾನ್
ಮಣಿಪುರವನ್ನು ರಕ್ಷಿಸಿ: ರಾಷ್ಟ್ರಪತಿಗೆ ಖರ್ಗೆ ಪತ್ರ
Chennai: ಕೃಷ್ಣಗೆ ಎಂ.ಎಸ್.ಸುಬ್ಬುಲಕ್ಷ್ಮಿಪ್ರಶಸ್ತಿ ನೀಡಿಕೆಗೆ ಮದ್ರಾಸ್ ಹೈಕೋರ್ಟ್ ತಡೆ
Savarkar defamation case:: ಡಿ.2ರಂದು ಖುದ್ದು ಹಾಜರಾಗಲು ರಾಹುಲ್‌ಗೆ ಆದೇಶ
Flight: ಭಾರತ, ಚೀನಾ ನಡುವೆ ನೇರ ವಿಮಾನಯಾನ ಸೌಲಭ್ಯ ಪುನಾರಂಭ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.