ಲೈಂಗಿಕ ದೌರ್ಜನ್ಯ ಹೆಚ್ಚಲು ಧಾರ್ಮಿಕ ಕಟ್ಟಳೆ ಕಾರಣವೇ; ಹೈಕೋರ್ಟ್
Team Udayavani, Dec 18, 2017, 6:00 AM IST
ಚೆನ್ನೈ: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳೇಕೆ ಹೆಚ್ಚುತ್ತಿವೆ? ಲಿಂಗಾನುಪಾತದ ಅಂತರ ಕಡಿಮೆಯಾಗುತ್ತಿರುವುದು ಕಾರಣವೇ? ಸಾಂಸ್ಕೃತಿಕ, ಧಾರ್ಮಿಕ ಕಾರಣ ಗಳಿಂದಾಗಿ ಹೇರಿಕೆಯಾಗಿರುವ ನಿಯಮಗಳಿಂದ ಪುರುಷರಲ್ಲಿನ ಲೈಂಗಿಕ ಹಸಿವು ಕಾರಣವೇ?’
– ಹೀಗೆಂದು ಕೇಂದ್ರ ಮತ್ತು ತಮಿಳುನಾಡು ಸರ ಕಾರವನ್ನು ಪ್ರಶ್ನೆ ಮಾಡಿದ್ದು ಮದ್ರಾಸ್ ಹೈಕೋರ್ಟ್. 2018ರ ಜ.10ರ ಒಳಗಾಗಿ ಈ ಬಗ್ಗೆ ಉತ್ತರಿಸುವಂತೆ ಅದು ಆದೇಶಿಸಿದೆ. 60 ವರ್ಷದ ಮಾನಸಿಕ ಅಸ್ವಸ್ಥೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ಸಿಕ್ಕಿ ಬಿದ್ದಿರುವ ಇಬ್ಬರು ವ್ಯಕ್ತಿಗಳು ಜಾಮೀನು ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ನ್ಯಾ| ಎನ್. ಕಿರುಬಕಾರನ್ ನೇತೃತ್ವದ ನ್ಯಾಯಪೀಠ ಈ ಪ್ರಶ್ನೆಗಳನ್ನು ಮುಂದಿಟ್ಟಿತು.
“ಲೈಂಗಿಕ ದೌರ್ಜನ್ಯ ಎನ್ನುವುದು ಮಹಿಳೆಯರ ಖಾಸಗಿತನ, ಘನತೆಯ ಮೇಲೆ ಶಾಶ್ವತವಾಗಿ ಬೀಳುವ ಪೆಟ್ಟು. ಇದರಿಂದಾಗಿ ಅವರ ಮನಸ್ಸಿನ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಪ್ರತಿ ಪುರುಷ ಅಥವಾ ಮಹಿಳೆಗೆ ಅವರ ದೇಹದ ಮೇಲೆ ಹಕ್ಕಿದೆ. ಅದನ್ನು ಉಲ್ಲಂ ಸುವ ಅಧಿಕಾರ ಯಾರಿಗೂ ಇಲ್ಲ. ಲೈಂಗಿಕ ಕಿರುಕುಳದ ಸಂದರ್ಭ ವ್ಯಕ್ತಿಗಳು ಪುರುಷ ಅಥವಾ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ವರ್ತಿಸುತ್ತಾರೆ’ ಎಂದು ನ್ಯಾ| ಕಿರುಬಕಾರನ್ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತ ಪಡಿಸಿದ ಅವರು, ಪುರುಷರಲ್ಲಿ ಲೈಂಗಿಕ ಹಸಿವು ಹೆಚ್ಚಾಗಲು ಸಾಮಾಜಿಕ, ಧಾರ್ಮಿಕ, ಮಾನಸಿಕ ಕಾರಣ ಗಳು ಇರಬಹುದೇ ಎಂದು ಕೇಂದ್ರ, ತಮಿಳು ನಾಡು ಸರಕಾರ ಮತ್ತು ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲೂé)ಗಳನ್ನು ಪ್ರಶ್ನಿಸಿದೆ.
ನಿರ್ಭಯಾ ಪ್ರಕರಣದ ಬಳಿಕ ಕಠಿನ ಕಾನೂನುಗಳು ಜಾರಿಯಾಗಿದ್ದರೂ ಅದರಿಂದ ಪ್ರಯೋಜನವಾದಂತಿಲ್ಲ. ಬದಲಾಗಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ಗಳು ಹೆಚ್ಚಾಗಿವೆ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.