ಗುಜರಾತಲ್ಲಿ ಮೋದಿ ಮೋಡಿಯೋ.. ರಾಹುಲ್‌ ಕಮಾಲೋ…ಯಾರಿಗೆ ಜಯಮಾಲೆ ?


Team Udayavani, Dec 18, 2017, 6:00 AM IST

election.jpg

ಹೊಸದಿಲ್ಲಿ: ಮುಂದಿನ ಲೋಕಸಭೆ ಚುನಾವಣೆಯ ಮುನ್ನೋಟ ಎಂದೇ ಪರಿಗಣಿಸಲಾಗಿರುವ ಗುಜರಾತ್‌ ವಿಧಾನಸಭೆ ಚುನಾವಣೆಯ ಫ‌ಲಿತಾಂಶ ಡಿ. 18 ರಂದು ಪ್ರಕಟವಾಗಲಿದೆ. ಪ್ರಧಾನಿ ಮೋದಿ ಮೋಡಿಯಿಂದ ಗೆಲುವಿನ ಜಯಭೇರಿಯ ನಿರೀಕ್ಷೆಯಲ್ಲಿ ಆಡಳಿತಾರೂಢ ಬಿಜೆಪಿ ಇದ್ದರೆ, ಈಗಷ್ಟೇ ಪಕ್ಷ ಮುನ್ನಡೆಸುವ ಜವಾಬ್ದಾರಿ ಹೊತ್ತ ರಾಹುಲ್‌ ಸಾರಥ್ಯದ ಕಾಂಗ್ರೆಸ್‌ ಕೂಡ ಗೆಲುವಿನ ಕನಸು ಕಾಣುತ್ತಿದೆ.

ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭ ವಾಗಲಿದ್ದು, 3 ಗಂಟೆ ಸುಮಾರಿಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ತವರು ನೆಲವಾದ್ದರಿಂದ ಈ ಚುನಾವಣೆಗೆ ಇನ್ನಿಲ್ಲದ ಮಹತ್ವ ಸಿಕ್ಕಿದ್ದು, ಮೋದಿ ಸರಕಾರ ಕೈಗೊಂಡ ಎಲ್ಲ ಸುಧಾರಣ ಕ್ರಮಗಳನ್ನು ಜನರು ಮೆಚ್ಚಿಕೊಂಡಿದ್ದಾರೆಯೇ ಅಥವಾ ಇಲ್ಲವೇ ಎಂಬುದು ತಿಳಿಯಲಿದೆ. ಈಗಾಗಲೇ ಪ್ರಕಟವಾಗಿರುವ ಚುನಾವಣ ಪೂರ್ವ ಸಮೀಕ್ಷೆಗಳ ಫ‌ಲಿತಾಂಶಗಳ ಪ್ರಕಾರ ಬಿಜೆಪಿ ಉತ್ತಮ ಬಹುಮತದಿಂದ ಗೆದ್ದು ಬರಲಿದೆ. ಶನಿವಾರವಷ್ಟೇ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಪದವಿಗೇರಿದ ರಾಹುಲ್‌ ಗಾಂಧಿಗೆ ಹಾಗೂ ಇಡೀ ಪಕ್ಷದ ಪುನಶ್ಚೇತನಕ್ಕೆ ಈ ಫ‌ಲಿತಾಂಶ ಅತ್ಯಂತ ಮಹತ್ವದ್ದಾಗಿರಲಿದೆ.

ಎರಡು ಹಂತಗಳಲ್ಲಿ (ಡಿ. 9 ಮತ್ತು ಡಿ.14) ನಡೆದ ಚುನಾವಣೆ ಯಲ್ಲಿ ಸರಾಸರಿ ಶೇ. 68.41ರಷ್ಟು ಮತದಾನವಾಗಿದ್ದು, 2012ಕ್ಕಿಂತ ಶೇ. 2.91ರಷ್ಟು ಕಡಿಮೆ ಮತದಾನವಾಗಿದೆ.

ವೈಫೈಗೆ ನಿಷೇಧ: ನಾಲ್ಕು ವಿಧಾನಸಭೆ ಕ್ಷೇತ್ರಗಳ ಒಟ್ಟು ಆರು ಬೂತ್‌ಗಳಲ್ಲಿ ರವಿವಾರ ಮರುಮತದಾನ ನಡೆದಿದೆ. ಅಲ್ಲದೆ ಇವಿಎಂಗಳನ್ನು ಇಟ್ಟ ಕಾಲೇಜಿನಲ್ಲಿ ವೈಫೈ ಮೂಲಕ ಹ್ಯಾಕ್‌ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಆರೋಪಿಸಿದ ಹಿನ್ನೆಲೆಯಲ್ಲಿ ಸೂರತ್‌ನ ಅಮ್ರೇಜ್‌ನಲ್ಲಿ ವೈಫೈಗಳನ್ನು ನಿಷೇಧಿಸಲಾಗಿದೆ.

ಹಿಮಾಚಲದ ಭವಿಷ್ಯವೂ ನಿರ್ಧಾರ: ಗುಜರಾತ್‌ ಚುನಾವಣೆ ಗಿಂತಲೂ ಮೊದಲೇ ನಡೆದ ಹಿಮಾಚಲ ಪ್ರದೇಶ ಮತದಾನದ ಫ‌ಲಿತಾಂಶವೂ ಸೋಮವಾರವೇ ಪ್ರಕಟವಾಗಲಿದೆ. ಇಲ್ಲಿ ಶೇ. 75.28ರಷ್ಟು ಮತದಾನವಾಗಿದ್ದು, 42 ಕೇಂದ್ರಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಕಾಂಗ್ರೆಸ್‌ ಸಿಎಂ ವೀರಭದ್ರ ಸಿಂಗ್‌ ಹಾಗೂ ಬಿಜೆಪಿಗೆ ಇದು ಮಹತ್ವದ ಚುನಾವಣೆಯಾಗಿರಲಿದೆ. ಹಿಮಾಚಲ ಚುನಾವಣಪೂರ್ವ ಸಮೀಕ್ಷೆಯಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದೇ ಹೇಳಲಾಗಿದೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

CT Ravi: ಹುಚ್ಚು ನಾಯಿ ಕಡಿದವರಿಂದ ವಿಷ ಹೇಳಿಕೆ

CT Ravi: ಹುಚ್ಚು ನಾಯಿ ಕಡಿದವರಿಂದ ವಿಷ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Divorce: A.R. Rahman ends 29 years of marriage

Divorce: 29 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಎ.ಆರ್.ರೆಹಮಾನ್

Protect Manipur: Mallikarjun Kharge’s letter to the President

ಮಣಿಪುರವನ್ನು ರಕ್ಷಿಸಿ: ರಾಷ್ಟ್ರಪತಿಗೆ ಖರ್ಗೆ ಪತ್ರ

Madras High Court stays awarding of M.S. Subbulakshmi Award to Krishna

Chennai: ಕೃಷ್ಣಗೆ ಎಂ.ಎಸ್‌.ಸುಬ್ಬುಲಕ್ಷ್ಮಿಪ್ರಶಸ್ತಿ ನೀಡಿಕೆಗೆ ಮದ್ರಾಸ್‌ ಹೈಕೋರ್ಟ್‌ ತಡೆ

Savarkar defamation case:: Rahul ordered to appear in person on December 2

Savarkar defamation case:: ಡಿ.2ರಂದು ಖುದ್ದು ಹಾಜರಾಗಲು ರಾಹುಲ್‌ಗೆ ಆದೇಶ

ಭಾರತ, ಚೀನಾ ನಡುವೆ ನೇರ ವಿಮಾನಯಾನ ಸೌಲಭ್ಯ ಪುನಾರಂಭ?

Flight: ಭಾರತ, ಚೀನಾ ನಡುವೆ ನೇರ ವಿಮಾನಯಾನ ಸೌಲಭ್ಯ ಪುನಾರಂಭ?

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

Yakahagana-Academy

Mangaluru: ಅಕಾಡೆಮಿ ಯಕ್ಷಗಾನ ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ಮಾಡಲಿ: ಡಾ.ಶಿವರಾಮ ಶೆಟ್ಟಿ

Suside-Boy

Kaup: ಉದ್ಯಾವರ: ಮಹಿಳೆ ಮಲಗಿದ ಸ್ಥಿತಿಯಲ್ಲೇ ಸಾವು

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

police

Puttur: ಕಾಸರಗೋಡು ಮೂಲದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಪೋಕ್ಸೊ ಕೇಸು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.