ಕರ್ನಾಟಕ, ಆಂಧ್ರ ಅಂತಾರಾಜ್ಯ ಗುರುತಿಸಲು ಸುಪ್ರೀಂ ತಾಕೀತು


Team Udayavani, Dec 18, 2017, 11:47 AM IST

mines.jpg

ಬಳ್ಳಾರಿ: ಅಕ್ರಮ ಗಣಿಗಾರಿಕೆಯ ಪ್ರಕರಣದ ವಿಚಾರಣೆಯನ್ನು ತೀವ್ರಗೊಳಿಸಿರುವ ಸುಪ್ರೀಂ ಕೋರ್ಟ್‌ ಈ ಪ್ರಕರಣದ ಮಹತ್ವದ ಅಂಶ ಎನಿಸಿದ ಬಳ್ಳಾರಿ ಜಿಲ್ಲೆಯಲ್ಲಿ ಹಾದು ಹೋಗುವ ಕರ್ನಾಟಕ ಮತ್ತು ಆಂಧ್ರಪ್ರದೇಶಗಳ ಗಡಿ ಗುರುತಿಸುವಿಕೆಯನ್ನು ಆರು ವಾರಗಳಲ್ಲಿ  ಪೂರ್ಣಗೊಳಿಸಬೇಕು. ಈ ಕಾರ್ಯಕ್ಕೆ ಕರ್ನಾಟಕ ಮತ್ತು ಆಂಧ್ರಪ್ರದೇಶ ಸರ್ಕಾರಗಳ ಮುಖ್ಯ ಕಾರ್ಯದರ್ಶಿ, ವಿವಿಧ ಇಲಾಖೆಗಳ ಅಧಿಕಾರಿಗಳ ಸಹಕಾರ ಪಡೆದು ಸಮೀಕ್ಷೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು ಎಂದು ಸರ್ವೆ ಆಫ್‌ ಇಂಡಿಯಾಗೆ ಆದೇಶಿಸಿದೆ.

ಆದರೆ, ಕರ್ನಾಟಕ ಸರ್ಕಾರ ಈ ಹಿನ್ನೆಲೆಯಲ್ಲಿ ಯಾವ ಸಿದ್ಧತೆ ನಡೆಸಿದೆ ಎನ್ನುವುದು ಸ್ಪಷ್ಟವಾಗಿಲ್ಲ. ತನ್ನ ಗಡಿ ಭಾಗದ ಗ್ರಾಮಗಳು ಇವು. ಇದು ಇವುಗಳ ನಕ್ಷೆ ಎನ್ನುವ ಹಕ್ಕನ್ನು ಕರ್ನಾಟಕ ಸರ್ಕಾರ ಸ್ಥಾಪಿಸದೆ ಇರುವುದು ಈ ಕುರಿತು ಸಮೀಕ್ಷೆ ಕಾರ್ಯ ತಾರ್ಕಿಕ ಅಂತ್ಯ ಕಾಣುವುದೇ ಎನ್ನುವ ಪ್ರಶ್ನೆ ಎದುರಾಗಿದೆ. ಚುನಾವಣೆಗಳು ಹತ್ತಿರ ಬರುತ್ತಿದ್ದು, ಜನವರಿ ತಿಂಗಳೊಳಗೆ ರಾಜ್ಯ ಸರ್ಕಾರ ಬಳ್ಳಾರಿ ಜಿಲ್ಲೆಯಲ್ಲಿ ಹಾದು ಹೋಗುವ ಕರ್ನಾಟಕ ಮತ್ತು ಆಂಧ್ರಪ್ರದೇಶಗಳ ಗಡಿ ಗುರುತಿಸುವ ಕುರಿತು ಪೂರ್ವ ಸಿದ್ಧತೆ ನಡೆಸಬೇಕಿದೆ. ಇಲ್ಲದೇ ಹೋದರೆ ಅಕ್ರಮ ಗಣಿಗಾರಿಕೆಯ ತನಿಖೆ ವಿಳಂಬವಾಗುವ ಸಾಧ್ಯತೆಗಳು ಹೆಚ್ಚಾಗಿದ್ದು , ರಾಜ್ಯ ಸರ್ಕಾರ ಗಡಿ ಗುರುತಿಸುವಿಕೆ ಕಾರ್ಯದಲ್ಲಿ ತನ್ನ ಹಕ್ಕನ್ನು ಸಾಧಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. 

ಕಳೆದ ದಶಕದಲ್ಲಿ ಜಿಲ್ಲೆಯಲ್ಲಿ ನಡೆದ ಅವ್ಯಾಹತ ಅಕ್ರಮ ಗಣಿಗಾರಿಕೆಯಿಂದ ಧ್ವಂಸಗೊಂಡಿದ್ದರೂ ಇದುವರೆಗೆ ಇತ್ಯರ್ಥವಾಗದ ಕರ್ನಾಟಕ- ಆಂಧ್ರಪ್ರದೇಶ ಗಡಿ ವಿವಾದವನ್ನು ಬಗೆಹರಿಸಲು ಇರುವ ಅಡ್ಡಿ ಆತಂಕಗಳೇನು? ಏಕೆ ತಡವಾಗುತ್ತಿದೆ ಎನ್ನುವುದನ್ನು ತಿಳಿಸಲು ಸೂಚಿಸಿ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠ ಸರ್ವೇ ಆಫ್‌ ಇಂಡಿಯಾಗೆ ಆದೇಶ ನೀಡಿದೆ. ನ್ಯಾ.ಮದನ್‌ ಬಿ.ಲೋಕೂರ್‌ ಹಾಗೂ ನ್ಯಾ.ದೀಪಕ್‌ ಗುಪ್ತಾ ಅವರಿದ್ದ ವಿಭಾಗೀಯ ಪೀಠ ನ.14ರಂದು ಈ ಕುರಿತು ವಿಚಾರಣೆ ನಡೆಸಿ ಈ ಮಹತ್ವದ ಆದೇಶ ಹೊರಡಿಸಿದೆ. ಗಡಿ ಸಮಸ್ಯೆ ಕುರಿತಂತೆ ಆಂಧ್ರಪ್ರದೇಶ ಸರ್ಕಾರ ಓಬಳಾಪುರಂ ಗಣಿ ಕಂಪನಿಗಳ ನಡುವೆ ಇರುವ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ವಿಭಾ àಯ ಪೀಠ ಈ ಕುರಿತಂತೆ ಇದ್ದ ಎಸ್‌ ಎಲ್‌ಪಿ (ಸಿ) ಸಂ:32690-32691/2010 ಹಾಗೂ ಇತರೆ ಸ್ಪೆಶಲ್‌ ಲೀವ್‌ ಪಿಟೀಶನ್‌, ರಿಟ್‌ ಅರ್ಜಿದಾರರ ಮನವಿಗಳನ್ನೂ ಈ ಸಂದರ್ಭ ವಿಚಾರಣೆಗೆ ತೆಗೆದುಕೊಂಡಿತ್ತು. 

ಆದೇಶದಲ್ಲೇನಿದೆ?: ಅಕ್ರಮ ಗಣಿಗಾರಿಕೆ ಕುರಿತ ಪ್ರಕರಣದಲ್ಲಿ ಕರ್ನಾಟಕ- ಆಂಧ್ರಪ್ರದೇಶ ರಾಜ್ಯಗಳ ನಡುವಿನ ಗಡಿ ಗುರುತಿಸುವಿಕೆ ಸುಮಾರು ವರ್ಷಗಳಿಂದ ಇತ್ಯರ್ಥವಾಗದೆ ಉಳಿದಿದೆ. ಈ ಕುರಿತಂತೆ ಸರ್ವೇ ಆಫ್‌ ಇಂಡಿಯಾದ ಉನ್ನತ ಅಧಿಕಾರಿಗಳು ವಿಚಾರಣೆಗೆ ಹಾಜರಾಗಬೇಕಿದೆ. ಜೊತೆಗೆ, ಗಡಿ ಗುರುತಿಸುವಿಕೆ ಕುರಿತಂತೆ ಯಾವಾಗ ಈ ಪ್ರಕರಣವನ್ನು ಇತ್ಯರ್ಥಗೊಳಿಸಲಾಗುವುದು ಎನ್ನುವುದನ್ನು ತಿಳಿಸಬೇಕು. ಈ ಕುರಿತಂತೆ ಇರಬಹುದಾದ ಅಡ್ಡಿಗಳೇನಾದರೂ ಇದ್ದಲ್ಲಿ ನ್ಯಾಯಾಲಯಕ್ಕೆ ತಿಳಿಸಬೇಕು. ಈ ಕುರಿತಂತೆ ಸಮಗ್ರ ಮಾಹಿತಿಯನ್ನು ಡಿಸೆಂಬರ್‌ 8ರೊಳಗೆ ಸರ್ವೇ ಆಫ್‌ ಇಂಡಿಯಾ ಸಲ್ಲಿಸಬೆಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ 

ಕರ್ನಾಟಕ ಮತ್ತು ಆಂಧ್ರಪ್ರದೇಶಗಳ ಗಡಿ ಸಮಸ್ಯೆ ಇಂದು ನಿನ್ನೆಯದಲ್ಲ. ಭಾಷಾವಾರು ಪ್ರಾಂತ್ಯಗಳು ರಚನೆಯಾಗಿ
ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳು ರೂಪುಗೊಂಡು ಎರಡೂ ರಾಜ್ಯಗಳಿಗೆ ಗ್ರಾಮಗಳ ಹಂಚಿಕೆ ಆದರೂ ಗಡಿ
ಗುರುತಿಸುವಿಕೆಯ ಸಮಸ್ಯೆ ಇದೆ. ಎರಡೂ ರಾಜ್ಯಗಳ ನಡುವೆ ಸ್ಪಷ್ಟ ಗಡಿ ರೇಖೆಯನ್ನು ರೂಪಿಸಿಲ್ಲ. ಆದರೆ, 1971-72
ಹಾಗೂ 1990-91ರಲ್ಲಿ ಸ್ಪಷ್ಟ ಗಡಿ ರೇಖೆಯನ್ನು ಗುರುತಿಸಲು ಯತ್ನಗಳು ನಡೆದವಾದರೂ ಸಮಸ್ಯೆ ತಾರ್ಕಿಕ ಅಂತ್ಯ
ಕಾಣಲಿಲ್ಲ. 1990-91ರಲ್ಲಿ ಸರ್ವೆ ಆಫ್‌ ಇಂಡಿಯಾ ಸಮೀಕ್ಷಾ ಕಾರ್ಯ ನಡೆಸಿದ ಆನಂತರ ರೂಪಿಸಿದ ಉಭಯ ರಾಜ್ಯಗಳ
ಜಂಟಿ ನಕ್ಷೆಯನ್ನು ಕಲಬುರಗಿ ವಿಭಾಗದ ಭೂದಾಖಲೆಗಳ ಇಲಾಖೆಯ ಜಂಟಿ ನಿರ್ದೇಶಕ ಜೆ.ಕೆ.ಘಾಟೆ ವಿವಾದಿತ ಎಂದು
ಘೋಷಿಸಿದರು.

1992ರಲ್ಲಿ ಅವರು ಸಲ್ಲಿಸಿದ ತಮ್ಮ ವರದಿಯಲ್ಲಿ ಬಳ್ಳಾರಿ ಜಿಲ್ಲೆಯ ಮೀಸಲು ಅರಣ್ಯ ಪ್ರದೇಶದ ನಕ್ಷೆಯ ಆಧಾರದಲ್ಲಿ ಈ ಗಡಿ ಗುರುತಿಸುವಿಕೆಯ ನಕ್ಷೆಯನ್ನು ರೂಪಿಸಲಾಗಿದೆ. ಇದು ಶುದ್ಧ ತಪ್ಪು ಎಂದು ತಮ್ಮ ವರದಿಯಲ್ಲಿ ತಿಳಿಸಿದರು. ಏಕೆಂದರೆ 1896ರಲ್ಲಿ ಗುರುತಿಸಿದ್ದ ಮೀಸಲು ಅರಣ್ಯ ನಕ್ಷೆಯೇ ತಪ್ಪಾಗಿದೆ. ಅಂತಹ ನಕ್ಷೆಯ ಆಧಾರದಲ್ಲಿ ಗಡಿ ಗುರುತಿಸುವಿಕೆ ಮಾಡಿದರೆ ಅದು ಉಪಯೋಗಕ್ಕೆ ಬರುವುದಿಲ್ಲ. ಇದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದಿದ್ದರು. ಈ ಕಾರಣದಿಂದ ಅಕ್ರಮ ಗಣಿಗಾರಿಕೆ ನಡೆದ ಆನಂತರ ಕರ್ನಾಟಕ ಆಂಧ್ರಪ್ರದೇಶಗಳ ಗಡಿ ಗುರುತಿಸುವಿಕೆ ತಲೆನೋವಿನ ಕೆಲಸವಾಗಿ ರೂಪುಗೊಂಡಿತ್ತು. ಹಾಗಾಗಿ 2010ರ ಸುಪ್ರೀಂ ಕೋರ್ಟ್‌ನ ತೀರ್ಪಿನ ಅನ್ವಯ ಸರ್ವೆ ಆಫ್‌ ಇಂಡಿಯಾದ ಅಧಿಕಾರಿಗಳಿಗೆ ಗಡಿ ಸಮೀಕ್ಷಾ ಕಾರ್ಯ ನಡೆಸುವುದು
ಸವಾಲಿನದ್ದಾಗಿದ್ದಿತ್ತು. ಅಂದಿನ ಲೋಕಾಯುಕ್ತ ನ್ಯಾ. ಸಂತೋಷ್‌ ಹೆಗಡೆ 2008ರಲ್ಲಿ ಸಲ್ಲಿಸಿದ್ದ ಲೋಕಾಯುಕ್ತ ವರದಿಯಲ್ಲಿ ಈ ಸಮಸ್ಯೆಯನ್ನು, ಕರ್ನಾಟಕ ರಾಜ್ಯದ ಮೀಸಲು ಅರಣ್ಯ ಪ್ರದೇಶದ ಸರ್ವೇ ನಂಬರ್‌ಗಳು ಆಂಧ್ರಪ್ರದೇಶದ ಮೀಸಲು ಅರಣ್ಯ ಪ್ರದೇಶದ ಸರ್ವೆ ಸಂಖ್ಯೆಯೊಳಗೆ ಸೇರಿಕೊಂಡಿರುವುದರಿಂದ ಇಲ್ಲಿನ ಗಡಿ ಗ್ರಾಮಗಳ ಬಳಿಯ ಗುಡ್ಡಗಳೇ ಗಡಿಗಳಾಗಿ ರೂಪುಗೊಂಡವು ಎಂದು ತಿಳಿಸಿದ್ದರು.

ಅಲ್ಲದೇ, ಲೋಕಾಯುಕ್ತರು ತಮ್ಮ ವರದಿಯಲ್ಲಿ, ಇಲ್ಲಿ ಹಿಂದೆ ಸರ್ವೇ ಆಫ್‌ ಇಂಡಿಯಾದ ಭೂ ನಕ್ಷೆಯ ಪ್ರಕಾರ ಇದ್ದ ಗ್ರಾಮಗಳ ಗಡಿ ಗುರುತುಗಳು, ಅರಣ್ಯ ಗಡಿ ಗುರುತುಗಳು ಗಣಿಗಾರಿಕೆಯಿಂದ ನಾಶಗೊಂಡಿದ್ದು ಇದರಿಂದ ಗಡಿ ಗುರುತಿಸುವಿಕೆ ಸಂಕಷ್ಟದ ವಿಷಯವಾಗಿದೆ ಎಂದಿದ್ದರು. ಜೊತೆಗೆ ಕರ್ನಾಟಕ ರಾಜ್ಯದ ತಿಮ್ಮಪ್ಪನ ಗುಡ್ಡ ಹಾಗೂ ಆಂಧ್ರಪ್ರದೇಶದ ಸುಗ್ಗಲಮ್ಮನ ಗುಡ್ಡದ ಮೇಲೆ ಕ್ಲಿಷ್ಟಕರವಾದ ಜಿಟಿಎಸ್‌ (ಗ್ರೇಟ್‌ ಟ್ರಿಗೊನೊಮೆಟ್ರಿಕಲ್‌ ಸರ್ವೇ) ಪ್ರಕಾರ ಗುರುತಿಸಿದ್ದ ಗಡಿ ಸೂಚಕಗಳನ್ನು ಗಣಿಗಾರಿಕೆಯ ಸಂದರ್ಭದಲ್ಲಿ ಧ್ವಂಸಗೊಳಿಸಿದ ಕಾರಣ ಗಡಿ ಗುರುತಿಸುವಿಕೆ ಕಾರ್ಯ ಇನ್ನಷ್ಟು ಸಂಕೀರ್ಣಗೊಂಡಿದೆ. ಸೂಕ್ತ ಅಳತೆಗೋಲುಗಳು ನಾಶವಾಗಿರುವುದರಿಂದ ಇದೇ ನಮ್ಮ ಗಡಿ ಎಂದು ಗುರುತಿಸುವ ಕಾರ್ಯ ಸಾಕಷ್ಟು ಸವಾಲಿನದು ಎಂದೂ ಲೋಕಾಯುಕ್ತರ ವರದಿಯಲ್ಲಿ ತಿಳಿಸಲಾಗಿತ್ತು.

ಆದ್ದರಿಂದ 2010ರಲ್ಲಿ ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಗಡಿಗಳನ್ನು ಗುರುತಿಸಲು ಆದೇಶ ಪಡೆದಿದ್ದ ಸರ್ವೆ ಆಫ್‌ ಇಂಡಿಯಾ ಮೊದಲು ಪರಾಮರ್ಶನ ಸೂಚಕಗಳನ್ನು ಗಡಿ ಗುರುತಿಸುವಿಕೆಯ ಕಾರ್ಯಕ್ಕೆ ಸ್ಥಾಪಿಸಬೇಕಿತ್ತು. ಅಕ್ರಮ ಗಣಿಗಾರಿಕೆಯ ಆನಂತರ ಜರುಗಬೇಕಿದ್ದ ಮೊದಲ ಗಡಿ ಗುರುತಿಸುವಿಕೆಯ ಸಮೀಕ್ಷಾ ಈ ಕಾರಣಗಳಿಂದ ಸವಾಲಿನದ್ದಾಗಿತ್ತು

ಹಿನ್ನೆಲೆ ಏನು?
ಬಳ್ಳಾರಿ ಜಿಲ್ಲೆಯಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದ 32 ಕಿಮೀ ಉದ್ದದ ಗಡಿ ಭಾಗವಿದ್ದು , ಇದರಲ್ಲಿ ಸಮೃದ್ಧ ಕಬ್ಬಿಣದ
ಅದಿರಿನ ನಿಕ್ಷೇಪಗಳಿವೆ. ಆದರೆ, 2004ರಲ್ಲಿ ಆಂಧ್ರಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಪರವಾನಗಿ ಪಡೆದ ಓಬಳಾಪುರಂ ಮೈನಿಂಗ್‌ ಕಂಪನಿ ಈ ಗಡಿ ಭಾಗದಲ್ಲಿ ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ಮಲಪನಗುಡಿ, ಸಿದ್ದಾಪುರ ಹಾಗೂ ಕರ್ನಾಟಕದ ಬಳ್ಳಾರಿ ಜಿಲ್ಲೆಯ ತುಮಟಿ, ವಿಠ್ಠಲಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 1000 ಮೀ. ಉದ್ದ 500 ಮೀ. ಅಗಲ ಗಡಿ ಪ್ರದೇಶವನ್ನು ಧ್ವಂಸಗೊಳಿಸಲಾಗಿತ್ತು.

ಇನ್ನೊಂದು ಕಡೆ ಕರ್ನಾಟಕದ ಬೆಳಗಲ್ಲು, ಹಲಕುಂದಿ, ಹೊನ್ನಳ್ಳಿ, ಆಂಧ್ರಪ್ರದೇಶದ ಓಬಳಾಪುರಂ, ಸಿದ್ದಾಪುರ ಗಡಿ ಪ್ರದೇಶದಲ್ಲಿಯೂ 1000 ಮೀ. ಉದ್ದ 500 ಮೀ. ಅಗಲದ ಗಡಿ ಭಾಗವನ್ನು ಧ್ವಂಸಗೊಳಿಸಿತ್ತು ಎನ್ನುವ ಆರೋಪವಿದೆ. ಈ ಕುರಿತಂತೆ ಅಕ್ರಮ ಗಣಿಗಾರಿಕೆ ಪ್ರಕರಣ ದಾಖಲಿಸಿರುವ ಸಮಾಜ ಪರಿವರ್ತನಾ ಸಮುದಾಯಗಳ ಜೊತೆಗೆ ಆಂಧ್ರಪ್ರದೇಶ ಸರ್ಕಾರ, ದಿ.ಎಸ್‌.ಕೆ.ಮೋದಿ ಒಡೆತನದ ವಿಜಿಎಂ ಮೈನಿಂಗ್‌ ಕಂಪನಿ ಮುಂತಾದವು ಸುಪ್ರೀಂ ಕೋರ್ಟ್‌ ನಲ್ಲಿ ಪ್ರಕರಣಗಳನ್ನು ದಾಖಲಿಸಿದ್ದರು. ಈ ಕುರಿತಂತೆ ಸುಪ್ರೀಂ ಕೋರ್ಟ್‌ 2013ರಲ್ಲಿ ಸರ್ವೆ ಆಫ್‌ ಇಂಡಿಯಾಗೆ ಆದೇಶ ನೀಡಿ ಉಭಯ ರಾಜ್ಯಗಳ ಗಡಿ ಗುರುತಿಸಿ ಸಮಸ್ಯೆ ತ್ಯರ್ಥಗೊಳಿಸುವಂತೆ ಸೂಚಿಸಿತ್ತು.

ಅದೇ ವರ್ಷದಲ್ಲಿ ಸರ್ವೆ ಆಫ್‌ ಇಂಡಿಯಾದ ಉನ್ನತಾಧಿಕಾರಿ ಸ್ವರ್ಣ ಸುಬ್ಟಾರಾವ್‌ ನೇತೃತ್ವದ ಸಮಿತಿ ರಚಿಸಲಾಗಿತ್ತು. ಆದರೆ, ಅವರಿಗೆ ಬೆದರಿಕೆ ಪತ್ರಗಳು ಹೋದ ಹಿನ್ನೆಲೆ ಅವರು ಸಮೀಕ್ಷೆಗೆ ಆಗಮಿಸಲಿಲ್ಲ. ಆನಂತರ ಮತ್ತೂಬ್ಬ ಅಧಿಕಾರಿ ಎ.ಕೆ.ಪಾದ ನೇತೃತ್ವದ ಸಮಿತಿ ಸಮೀಕ್ಷೆಗೆ ಆಗಮಿಸಿತ್ತು. ಆನಂತರ ಆ ಕರ್ನಾಟಕ- ಆಂಧ್ರಪ್ರದೇಶಗಳ ಜಂಟಿ ಸಮಿತಿಯನ್ನು ಈ ಸಮಸ್ಯೆ ಬಗೆಹರಿಸಲು ರಚಿಸಲಾಗಿತ್ತು. ಆದಾಗ್ಯೂ ಈ ಕುರಿತು ಹೊಸ ಬೆಳವಣಿಗೆಗಳು ಅಗದ ಹಿನ್ನೆಲೆಯಲ್ಲಿ ಸ್ವರ್ಣ ಸುಬ್ಟಾರಾವ್‌ ನೇತೃತ್ವದ ಮತ್ತೂಂದು ತಂಡ ಆಗಮಿಸಿ ಸಮೀಕ್ಷೆ ನಡೆಸಿ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿತ್ತು  

ಸುಪ್ರೀಂ ಮಹತ್ವದ ಆದೇಶ
ಅಕ್ರಮ ಗಣಿಗಾರಿಕೆಯಿಂದ ಧ್ವಂಸವಾದ ಬಳ್ಳಾರಿ ಜಿಲ್ಲೆಯಲ್ಲಿ ಹಾದು ಹೋಗುವ ಕರ್ನಾಟಕ ಮತ್ತು ಆಂಧ್ರಪ್ರದೇಶಗಳ ಗಡಿ ಪ್ರದೇಶಗಳ ಸಮೀಕ್ಷೆ ಕೈಗೊಂಡು 12 ವಾರಗಳ ಒಳಗೆ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟಿನ ವಿಭಾಗೀಯ ಪೀಠ ಶುಕ್ರವಾರ (ಡಿ.8ರಂದು) ಆದೇಶಿಸಿತು. ಕರ್ನಾಟಕ- ಆಂಧ್ರಪ್ರದೇಶ ರಾಜ್ಯಗಳ ಗಡಿ ಗುರುತಿಸುವಿಕೆ ಕುರಿತಂತೆ ಆಂಧ್ರಪ್ರದೇಶ ಸರ್ಕಾರ, ಬಳ್ಳಾರಿ ಮೂಲದ ದಿ.ಎಸ್‌. ಕೆ.ಮೋದಿ ಒಡೆತನದ ವಿಜಿಎಂ ಮೈನ್ಸ್‌ ಸೇರಿದಂತೆ ವಿವಿಧ ಸ್ಪೆಷಲ್‌ ಲೀವ್‌ ಪಿಟಿಷನ್‌ಗಳ ವಿಚಾರಣೆಯನ್ನು ಶುಕ್ರವಾರ (ಡಿ.8ರಂದು) ಕೈಗೆತ್ತಿಕೊಂಡ ವಿಭಾಗೀಯ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ. ಪ್ರಕರಣದಲ್ಲಿ ಪ್ರತಿವಾದಿ ಸ್ಥಾನದಲ್ಲಿರುವ ಸರ್ವೆ ಆಫ್‌ ಇಂಡಿಯಾದ ಉನ್ನತಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದು, ಕರ್ನಾಟಕ ಮತ್ತು ಆಂಧ್ರಪ್ರದೇಶ ಸರ್ಕಾರಗಳ ಮುಖ್ಯ ಕಾರ್ಯದರ್ಶಿ ಮೊದಲಾದ ಅಧಿಕಾರಿಗಳ ಸಹಕಾರದೊಂದಿಗೆ ನಿಗದಿತ ಅವಧಿಯೊಳಗೆ ಗಡಿ ಸಮೀಕ್ಷೆಯ ವರದಿ ಸಲ್ಲಿಸುವಂತೆ ಖಡಕ್ಕಾಗಿ ಸೂಚಿಸಿದೆ. ಸುಪ್ರೀಂ ಕೋರ್ಟ್‌ 2013ರಲ್ಲಿ ಇಂತಹ ಸಮೀಕ್ಷೆ ನಡೆಸುವಂತೆ ಮೊದಲ ಆದೇಶ ನೀಡಿತ್ತು. ಆದರೆ, ಆ ಆದೇಶ ಸಮರ್ಪಕವಾಗಿ ನಡೆಯದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರ್ಕಾರ ಮತ್ತು ಇತರರು ಮತ್ತೆ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದ್ದರು.

ಗಡಿ ಗುರುತಿಸುವಿಕೆ ಮಹತ್ವ ಏಕೆ?
ಎರಡೂ ರಾಜ್ಯಗಳ ವ್ಯಾಪ್ತಿಯಲ್ಲಿ ಇದ್ದ ಗಣಿ ಪ್ರದೇಶಗಳನ್ನು 1962ರಿಂದ ಕೆಲವು ಗಣಿ ಉದ್ಯಮಿಗಳಿಗೆ ಗುತ್ತಿಗೆ ಆಧಾರದಲ್ಲಿ ನೀಡಲಾಗಿತ್ತು. ಇವರ ಗಡಿಗಳನ್ನು ಅಕ್ರಮ ಗಣಿಗಾರಿಕೆಯ ಸಂದರ್ಭ ನಾಶ ಮಾಡಲಾಗಿತ್ತು. ಇದರಿಂದ ಯಾವ ಕಂಪನಿಗೆ ಎಷ್ಟು ಗಣಿ ಪ್ರದೇಶವನ್ನು ಗುತ್ತಿಗೆ ನೀಡಲಾಗಿತ್ತು ಎನ್ನುವುದನ್ನು ಅಳೆಯುವ ಕಾರ್ಯ ಗೊಂದಲಮಯವಾಯಿತು. ಇದರಿಂದ ಅಕ್ರಮ ಗಣಿಗಾರಿಕೆಯ ತನಿಖೆ ವಿಳಂಬವಾಗತೊಡಗಿತು. ಗಡಿ ಗುರುತಿಸುವಿಕೆ ನಿಜಕ್ಕೂ ಮಹತ್ವದ ವಿಷಯವಾಗಿದೆ. 

2010ರಿಂದ ಇನ್ನೂ ವಿಚಾರಣೆ ಹಂತದಲ್ಲಿರುವ ಅಕ್ರಮ ಗಣಿಗಾರಿಕೆ ಪ್ರಕರಣ ವಿಚಾರಣೆಯ ಹಂತದಲ್ಲಿಯೇ ಇದೆ. ಕರ್ನಾಟಕ ಮತ್ತು ಆಂಧ್ರಪ್ರದೇಶಗಳ ಗಡಿ ಭಾಗದಲ್ಲಿ ಸಮೃದ್ಧ ಕಬ್ಬಿಣದ ಅದಿರಿನ ನಿಕ್ಷೇಪ ಇದ್ದಿದ್ದರಿಂದ, ಸೂಕ್ತ ಗಡಿ ಗುರುತಿಸುವಿಕೆ ಇಲ್ಲದೆ ಹೋದ ಕಾರಣ ಅಕ್ರಮ ಗಣಿಗಾರಿಕೆ ನಡೆಯಿತು ಎಂಬ ಮಾತಿದೆ. ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ಗಡಿ ಭಾಗದಲ್ಲಿ ಓಬಳಾಪುರಂ ಮೈನಿಂಗ್‌ ಕಂಪನಿ ಸ್ಥಾಪಿಸಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಕರ್ನಾಟಕ ಮತ್ತು ಆಂಧ್ರಪ್ರದೇಶಗಳ ನಡುವೆ ಸ್ಪಷ್ಟ ಗಡಿ ಗುರುತು ಇರದೆ ಹೋದ ಕಾರಣ ತಮ್ಮ ಅಧಿಕಾರ, ಪ್ರಭಾವ ಬಳಸಿ ಅಕ್ರಮ ಗಣಿಗಾರಿಕೆ ನಡೆಸಿದರು ಎನ್ನುವ ಆರೋಪವಿದೆ.

ಪರಿಣಾಮ ಏನು?
ಗಡಿ ಧ್ವಂಸ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ 2013ರಲ್ಲಿ ಧ್ವಂಸಗೊಂಡ ಗಡಿ ಪ್ರದೇಶದ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಆದರೆ, ಸಮೀಕ್ಷೆ ನಡೆಸಬೇಕಿದ್ದ ಸರ್ವೆ ಆಫ್‌ ಇಂಡಿಯಾದ ಅಧಿಕಾರಿಗಳು ಸಮೀಕ್ಷಾ ಕಾರ್ಯ ನೆರವೇರಿಸಿದ್ದಾರೋ ಇಲ್ಲವೋ ವಿಷಯ ನಿಗೂಢವಾಗಿ ಉಳಿದಿತ್ತು. ಆದರೆ, ಎರಡನೇ ಬಾರಿಗೆ ಸಮೀಕ್ಷೆ ನಡೆಸಲು ಆದೇಶ ನೀಡಿರುವ ಸುಪ್ರೀಂ ಕೋರ್ಟ್‌ ಈ ಬಾರಿ ಖಡಕ್ಕಾಗಿ ವರದಿಯನ್ನು ಸಲ್ಲಿಸುವ ಸೂಚನೆ ನೀಡಿದೆ. ಒಂದು ವೇಳೆ ಸರ್ವೆ ಆಫ್‌ ಇಂಡಿಯಾ ಈ ಸಮೀಕ್ಷೆ ಕೈಗೊಳ್ಳದೆ ವರದಿ ಸಲ್ಲಿಸದಿದ್ದರೆ ಗುರುತರವಾದ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸ ಬೇಕಾಗಬಹುದ

ಕರ್ನಾಟಕ ಮತ್ತು ಆಂಧ್ರ ಗಡಿ ಭಾಗ ಧ್ವಂಸ ಪ್ರಕರಣ ಇತ್ಯರ್ಥಗೊಳಿಸಲು ಕರ್ನಾಟಕ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ. ಈ ಕುರಿತು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದೇನೆ. ಸುಪ್ರೀಂ ಕೋರ್ಟ್‌ನ ಈ ಮಹತ್ವದ ಆದೇಶ ಗಮನಿಸಿದರೆ ಸರ್ವೇ ಆಫ್‌ ಇಂಡಿಯಾದ ಅಧಿಕಾರಿಗಳು ಗಡಿ ಸಮಸ್ಯೆ ಪರಿಶೀಲಿಸಿದರೂ ಸುಪ್ರೀಂ ಕೋರ್ಟ್‌ಗೆ ಈ ಕುರಿತು ವರದಿ ಸಲ್ಲಿಸಿಲ್ಲ ಎನಿಸುತ್ತಿದೆ.
ಈ ಆದೇಶದಿಂದ ನಿಷ್ಕ್ರಿಯವಾಗಿದ್ದ ಕ್ರಮ ಗಣಿಗಾರಿಕೆ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಚುರುಕು ಮೂಡಿಸಿದೆ ಎಂಬ ಭಾವನೆ ಮೂಡಿದೆ. 
ಟಪಾಲ್‌ ಗಣೇಶ್‌, ಗಣಿ ಉದ್ಯಮಿ

ಸುಪ್ರಿಂ ಕೋರ್ಟ್‌ ಆದೇಶವನ್ನು ಸ್ವಾಗತ ಮಾಡುತ್ತೇನೆ. ಸರ್ಕಾರ ಮಾಡಬೇಕಾದ ಕೆಲಸವನ್ನು ನ್ಯಾಯಾಲಯ ಮಾಡಿದೆ. ಈಗಲಾದರೂ ಗಡಿ ಒತ್ತುವರಿ ಮಾಡಿದ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಸುಪ್ರೀಂ ಕೋರ್ಟ್‌ ನಿರ್ದೇಶನವನ್ನು ಎರಡು ರಾಜ್ಯಗಳ ಸರಕಾರಗಳು ಗಂಭೀರವಾಗಿ ಪರಿಗಣಿಸಿ ಜಂಟಿ ಸಮೀಕ್ಷೆ ನಡೆಸಿ ಯಾವುದೇ ವಿಳಂಬಕ್ಕೂ ಅವಕಾಶ ಕೊಡದೆ ವರದಿ ನೀಡಬೇಕು.
 ಬಸವರಾಜ ಹೊರಟ್ಟಿ, ವಿಧಾನಪರಿಷತ್‌ ಸದಸ್ಯ

ಸರ್ವೋತ್ಛ ನ್ಯಾಯಾಲಯ ನಿರ್ದೇಶನ ನೀಡಿದಾಗ ಅದನ್ನು ಸರಕಾರಗಳು ಪಾಲನೆ ಮಾಡಬೇಕು. ಸಮಯ ವ್ಯರ್ಥ ಮಾಡದೆ ತಕ್ಷಣ ಕೋರ್ಟ್‌ ಸೂಚನೆಯಂತೆ ಎರಡು ಸರ್ಕಾರಗಳು ಜಂಟಿ ಸಮೀಕ್ಷೆ ಕಾರ್ಯಕ್ಕೆ ಮುಂದಾಗಬೇಕು ಎಂದು ಒತ್ತಾಯಿಸುತ್ತೇನೆ.
  ಜಗದೀಶ ಶೆಟ್ಟರ, ವಿಧಾನಸಭೆ ಪ್ರತಿಪಕ್ಷದ ನಾಯಕ

ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು ಎನ್ನುವ ಆರೋಪ ಗಂಭೀರ ಸ್ವರೂಪದ್ದು. ಹೀಗಾಗಿ ಅತ್ಯಂತ ಕಟ್ಟುನಿಟ್ಟಿನಿಂದ ಜಂಟಿ ಸಮೀಕ್ಷೆ ಮಾಡಬೇಕು. ಎಲ್ಲಾ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟಬೇಕು. ಜಂಟಿ ಸಮೀಕ್ಷೆ ನಿರ್ದೇಶನ ನೀಡಿದ ಸುಪ್ರೀಂ ಕೋರ್ಟ್‌ ನಿರ್ಧಾರವನ್ನು ಸ್ವಾಗತ ಮಾಡುತ್ತೇನೆ. ಸಂಪೂರ್ಣ ಸಮೀಕ್ಷೆ ಆಗಲಿ. ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಆಗಬೇಕು.
 ಪ್ರಹ್ಲಾದ ಜೋಶಿ, ಸಂಸದ

„ ಎಂ.ಮುರಳಿಕೃಷ್ಣ

ಟಾಪ್ ನ್ಯೂಸ್

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

1-eqwqwewe

Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ

13-

Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ

Sanduru-BJP-Cong-Candidates

Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

9-bng

Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.