ಮೂಲಮೃತ್ತಿಕೆಗಾಗಿ ಬಲ್ಲೇರಿ ಮಲೆ ಯಾತ್ರೆ

Team Udayavani, Dec 18, 2017, 4:06 PM IST

18-Dec-16.jpg

ಪುತ್ತೂರು: ಸಂಪ್ಯ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಕಿರುಷಷ್ಠಿ ಉತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿದ್ದು, ರವಿವಾರ ಮೂಲಮೃತ್ತಿಕೆಗಾಗಿ ಬಲ್ಲೇರಿ ಮಲೆ ಯಾತ್ರೆ ನಡೆಯಿತು.

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರು ಆರ್ಯಾಪಿನ ಗ್ರಾಮ ದೇವರು. ಉಳ್ಳಾಲ್ತಿ- ಉಳ್ಳಾಕುಲು ಪಂಚ ದೈವಗಳು, ವ್ಯಾಘ್ರ ಚಾಮುಂಡಿ, ನಾಗ ದೇವರ ಜತೆಗೆ ನೆಲೆನಿಂತ ಸುಬ್ರಹ್ಮಣ್ಯ ದೇವರಿಗೆ ಕಿರುಷಷ್ಠಿಯಂದು ವಾರ್ಷಿಕ ಜಾತ್ರೆ ನಡೆಯುತ್ತದೆ. ಚಂಪಾ ಷಷ್ಠಿಯ ಅನಂತರದ ತಿಂಗಳಿನಲ್ಲಿ ಬರುವ ಕಿರುಷಷ್ಠಿಗೆ ದಿನ ಬದಲಾಗದಂತೆ ಜಾತ್ರೆ ನಡೆಯುತ್ತದೆ.

ಈ ವರ್ಷ ಡಿಸೆಂಬರ್‌ 24, 25ರಂದು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ. 23ರಿಂದಲೇ ಗಣಪತಿ ಪ್ರಾರ್ಥನೆ, ಉಗ್ರಾಣ ಪೂಜೆ, ದೀಪಾರಾಧನೆ, ದೊಡ್ಡ ರಂಗಪೂಜೆ ನಡೆಯುತ್ತದೆ. ಇದಕ್ಕೆ ಪೂರ್ವಭಾವಿಯಾಗಿ ಮೂಲ ಕ್ಷೇತ್ರವಾದ ಬಲ್ಲೇರಿ ಮಲೆಯಿಂದ ಮೂಲ ಮೃತ್ತಿಕೆ (ಮಣ್ಣು) ತರುವುದು ವಾಡಿಕೆ. ಈ ಮೃತ್ತಿಕೆಯನ್ನು ದೇವರ ಬಳಿಯಿಟ್ಟು, ಬಳಿಕವೇ ಜಾತ್ರೆ ಆರಂಭ.

ಗೊನೆ ಮುಹೂರ್ತ
ರವಿವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಸ್ಥಳೀಯ ವೆಂಕಪ್ಪ ಗೌಡರ ತೋಟದಿಂದ ಗೊನೆ ಕಡಿದು, ಜಾತ್ರೆಗೆ ಗೊನೆ ಮುಹೂರ್ತ ನೆರವೇರಿಸಲಾಯಿತು. ಬಳಿಕ ವೈದಿಕರು, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಪ್ರಮುಖರು, ಗ್ರಾಮಸ್ಥರು ಬಲ್ಲೇರಿ ಮಲೆ ಯಾತ್ರೆ ಕೈಗೊಂಡರು. ದೇವಸ್ಥಾನದ ಹಿಂಭಾಗವೇ ಇದೆ ಬಲ್ಲೇರಿ ಮಲೆ. ಒಂದಷ್ಟು ದೂರ ರಸ್ತೆ, ಕಾಲುದಾರಿ ಇದೆಯಾದರೂ ಬಳಿಕ ನಿರ್ಜನ ಪ್ರದೇಶ. ವರ್ಷಕ್ಕೊಮ್ಮೆಯಷ್ಟೇ ಮೂಲಮೃತ್ತಿಕೆಗಾಗಿ ಯಾತ್ರೆ ನಡೆಯುತ್ತದೆ. ಇದನ್ನು ಹೊರತು ಪಡಿಸಿದರೆ, ಉಳಿದ ದಿನಗಳಲ್ಲಿ ಇಲ್ಲಿ ಜನಸಂಚಾರವೇ ಇರುವುದಿಲ್ಲ. ಆದ್ದರಿಂದ ಕಾಲುದಾರಿ ಕೂಡ ಇರುವುದಿಲ್ಲ. ಯಾತ್ರೆಗೆ ತೆರಳುವವರಲ್ಲಿ ಮುಂಭಾಗದ ವ್ಯಕ್ತಿ ಬಲ್ಲೆ, ಪೊದೆಗಳನ್ನು ಸರಿಸಿ ದಾರಿ ಮಾಡಿಕೊಂಡು ತೆರಳುತ್ತಾರೆ. ಉಳಿದವರು ಅವರನ್ನು ಹಿಂಬಾಲಿಸಬೇಕು.

ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ, ಸದಸ್ಯರಾದ ರವಿಚಂದ್ರ ಆಚಾರ್ಯ, ಯಾದವ ಗೌಡ, ಮೀನಾಕ್ಷಿ ಸೇಸಪ್ಪ ಗೌಡ, ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮಹಾಬಲ ರೈ ವಳತ್ತಡ್ಕ, ಗ್ರಾಮಸ್ಥರಾದ ಶ್ರೀನಿವಾಸ್‌ ಕುಂಜತ್ತಾಯ, ಸುಧಾಕರ್‌ ರಾವ್‌ ಆರ್ಯಾಪು, ಸಂಪ್ಯ ಶ್ರೀ ವಿಷ್ಣುಮೂರ್ತಿ ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯ ಸೀತಾರಾಮ ಶೆಟ್ಟಿ ಕಂಬಳತ್ತಡ್ಡ, ಸುದರ್ಶನ್‌ ಭಟ್‌ ಕಲ್ಲರ್ಪೆ, ಭಗವಾನ್‌ದಾಸ್‌ ರೈ ಚಿಲ್ಮೆತ್ತಾರು ಮೊದಲಾದವರಿದ್ದರು.

ದೇವಸ್ಥಾನ ಇತ್ತಂತೆ
ಬಲ್ಲೇರಿ ಮಲೆಯ ತುದಿಯಲ್ಲಿ ಪುರಾತನ ಕಾಲದಲ್ಲಿ ದೇವಸ್ಥಾನ ಇತ್ತೆಂಬ ನಂಬಿಕೆಯಿದೆ. ಶಿವ-ಪಾರ್ವತಿಯ ಸೇರಿದಂತೆ ವಿಹಾರ ತಾಣವೂ ಹೌದು ಎಂದು ಪ್ರಶ್ನಾಚಿಂತನೆಯಲ್ಲಿ ಕಂಡುಬಂದಿದೆ. ದಿನಂಪ್ರತಿ ಅರಣ್ಯದ ತಪ್ಪಲಿನಿಂದ ತುದಿಯಲ್ಲಿದ್ದ ದೇವಸ್ಥಾನಕ್ಕೆ ತೆರಳಿ ಪೂಜೆ ನಡೆಸಬೇಕಿತ್ತು. ಆ ಸಂದರ್ಭ ಹುಲಿಗಳ ಸಂಚಾರವೂ ಇಲ್ಲಿತ್ತು. ಇದಕ್ಕೆ ನಿದರ್ಶನ ಎಂಬಂತೆ ಹುಲಿಗೂಡು ಬಲ್ಲೇರಿ ಮಲೆಯಲ್ಲಿ ಕಾಣಸಿಗುತ್ತದೆ. ಹುಲಿಯ ಭಯದಿಂದ ಬಲ್ಲೇರಿ ಮಲೆಗೆ ಬರುವುದು ಕಷ್ಟ ಎಂದು ಅರ್ಚಕರು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡರಂತೆ. ಒಂದು ದಿನ ದೇವರ ಮೂರ್ತಿ ಈಗಿನ ದೇವಸ್ಥಾನದ ಆಸುಪಾಸಿನಲ್ಲಿ ಕಾಣಸಿಕ್ಕಿತು. ಬಳಿಕ ದೇವರ ಮೂರ್ತಿಯನ್ನು ಗುಡಿ ಕಟ್ಟಿ, ಪೂಜೆ ನಡೆಸಲಾಯಿತು ಎಂದು ಹೇಳಲಾಗುತ್ತಿದೆ. ಕಾರ್ಪಾಡಿಯಲ್ಲಿ ದೇವಸ್ಥಾನ ನಿರ್ಮಾಣ ಆಗುತ್ತಿದ್ದಂತೆ, ಬಲ್ಲೇರಿ ಮಲೆಯಲ್ಲಿದ್ದ ದೇವಸ್ಥಾನ ಪಾಳುಬಿದ್ದಿತು. ಇದೀಗ ಒಂದು ಮಂಟಪ ಹಾಗೂ ಕಲ್ಲಿನ ಕಟ್ಟೆ ಮಾದರಿಯ ರಚನೆ ಇದೆ. ಇದಕ್ಕೆ ಪೂಜೆ ನಡೆಸಲಾಗುತ್ತಿದೆ.

ಬಲ್ಲೇರಿ ಮಲೆಯಲ್ಲಿ…
ಬಲ್ಲೇರಿ ಮಲೆಯ ತುತ್ತ ತುದಿಗೆ ತಲುಪಿದಂತೆ ಪೂಜೆ, ಪುನಸ್ಕಾರ, ಭಜನೆ ಆರಂಭವಾಗುತ್ತದೆ. ದಿನಚರಿಯ ಜಂಜಡ ಮರೆತು, ತಣ್ಣನೆಯ ಪರಿಸರಕ್ಕೆ ಮೈಯೊಡ್ಡಿ ವಿಶ್ರಮಿಸುವವರು ಕೆಲವರು. ಕಾಡಿನ ಸೊಗಸನ್ನು ಕಣ್ತುಂಬಿಕೊಳ್ಳುವವರು ಇನ್ನೂ ಕೆಲವರು. ಹಿಂದಿನ ವರ್ಷದಿಂದ ಇಲ್ಲಿವರೆಗೆ ಪಾಳುಬಿದ್ದ ಪರಿಸರವನ್ನು ಕುಳಿತುಕೊಳ್ಳಲಷ್ಟೇ ಶುಚಿಗೊಳಿಸುವ ಕಾಯಕದಲ್ಲಿ ಕೆಲವರು ತೊಡಗಿಸಿಕೊಳ್ಳುತ್ತಾರೆ. ಹಲವು ಕಿಲೋ ಮೀಟರ್‌ ದೂರ ನಡೆದು ಬಂದೆವೆಂಬ ಬಳಲಿಕೆಯನ್ನು ಮರೆಯಿಸಿ, ಕಾಡಿನ ನಡುವೆ ಒಂದಷ್ಟು ಹೊತ್ತನ್ನು ಸುಮಧುರವಾಗಿ ಕಳೆಯುತ್ತಾರೆ. ಇದರ ನಡುವೆ ಏಕಾದಶ ರುದ್ರ, ಗಣಪತಿ ಹೋಮ, ಮೂಲನಾಗನಿಗೆ ತಂಬಿಲ ನಡೆಯಿತು. ಪೂಜೆ ನಡೆದ ಬಳಿಕ ವೈದಿಕರು, ಮೂಲಮೃತ್ತಿಕೆಯನ್ನು ಸಂಗ್ರಹಿಸುತ್ತಾರೆ. ಬಳಿಕ ಕಾರ್ಪಾಡಿ ದೇವಸ್ಥಾನಕ್ಕೆ ಹಿಂದಿರುಗಲಾಗುತ್ತದೆ.

ಟಾಪ್ ನ್ಯೂಸ್

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

1-dharma

Dharmasthala;ಇಂದಿನಿಂದ ಲಕ್ಷದೀಪೋತ್ಸವ ಕಾರ್ಯಕ್ರಮಗಳು

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.