ಮತ್ತೆ ಹೊತ್ತಿ ಉರಿದ ಬೆಳಗಾವಿ
Team Udayavani, Dec 19, 2017, 7:40 AM IST
ಬೆಳಗಾವಿ: ಶಾಂತವಿದ್ದ ಬೆಳಗಾವಿ ನಗರ ಈಗ ಮತ್ತೆ ಹೊತ್ತಿ ಉರಿಯುತ್ತಿದ್ದು, ಎರಡು ಕೋಮುಗಳ ಮಧ್ಯೆ ಕಲ್ಲು ತೂರಾಟ ನಡೆದಿದೆ. ಕೆಲವು ವಾಹನಗಳಿಗೆ ಬೆಂಕಿ ಹಚ್ಚಿ ಹಾಗೂ ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆದಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ನಗರದ ಖಡಕಗಲ್ಲಿ ಹಾಗೂ ಖಂಜರಗಲ್ಲಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಕಲ್ಲು ತೂರಾಟ ನಡೆದಿದ್ದು, ಇದೇ ವಿಕೋಪಕ್ಕೆ ತಿರುಗಿ ನೂರಾರು ಯುವಕರ ಗುಂಪು ಪರಸ್ಪರ ಕಲ್ಲು ತೂರಾಟ ನಡೆಸಿದೆ. ಖಡಕಗಲ್ಲಿಯಲ್ಲಿ ಆರಂಭವಾದ ಗಲಭೆ ಬಡಕ ಗಲ್ಲಿ, ಖಂಜರಗಲ್ಲಿ, ಜಾಲಗಾರ ಗಲ್ಲಿ, ಚವಟಗಲ್ಲಿ, ದರ್ಬಾರ್ ಗಲ್ಲಿ, ಬಾಗವಾನ ಗಲ್ಲಿವರೆಗೂ ವ್ಯಾಪಿಸಿತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಮಾರ್ಕೆಟ್ ಎಸಿಪಿ ಶಂಕರ ಮಾರಿಹಾಳ, ಇನ್ಸ್‌ಪೆಕ್ಟರ್ ಪ್ರಶಾಂತ್ ಕುಮಾರ್, ಪಿಎಸ್‌ಐ ಸೌದಾಗರ ಹಾಗೂ ಇನ್ನಿಬ್ಬರು ಪೇದೆಗಳ ತಲೆಗಳಿಗೆ ಕಲ್ಲೇಟು ಬಿದ್ದಿದೆ. ಜತೆಗೆ ಸುದ್ದಿ ಮಾಡಲು ತೆರಳಿದ್ದ ಛಾಯಾಚಿತ್ರಗ್ರಾಹಕರ ಮೇಲೂ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ.
ಎಸಿಪಿ ಶಂಕರ ಮಾರಿಹಾಳ ಹೆಲ್ಮೆಟ್ ಧರಿಸಿದ್ದರೂ ಕಣ್ಣಿನ ಮೇಲ್ಭಾಗಕ್ಕೆ ಕಲ್ಲು ಬಿದ್ದಿದ್ದರಿಂದ ತೀವ್ರ ರಕ್ತ ಹರಿದಿದೆ. ಅನಂತರ ಗಾಯಳು ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಗಲಭೆ ಇಷ್ಟಕ್ಕೆ ನಿಲ್ಲದೇ ಖಡೇ ಬಜಾರ್‌ನಲ್ಲೂ ರಾತ್ರಿ 11.30ರ ಸುಮಾರಿಗೆ ವ್ಯಾಪಿಸಿಕೊಂಡಿದೆ. ಖಡೇಬಜಾರ್‌ನಲ್ಲಿರುವ ಮನೆ ಹಾಗೂ ಅಂಗಡಿಗಳ ಮುಂದೆ ನಿಲ್ಲಿಸಿದ್ದ ಕೆಲವು ವಾಹನಗಳಿಗೆ
ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದು ಬೆಂಕಿ ನಂದಿಸಿದ್ದಾರೆ. ಖಡಕಗಲ್ಲಿಯಲ್ಲಿ ಮಂಗಳವಾರ ಅಯಪ್ಪ ಸ್ವಾಮಿಯ ಮಹಾಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಪೂಜೆ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಖಡಕಗಲ್ಲಿ ಕಾರ್ನರ್ ಸಹಿತ ಇತರೆಡೆ ಬ್ಯಾನರ್ ಹಾಗೂ ಕಟೌಟ್ ಹಚ್ಚುವ ಕೆಲಸ ನಡೆದಿತ್ತು. ಯುವಕರು ಗುಂಪುಗೂಡಿ ಪೂಜಾ ಸಿದ್ಧತೆ ನಡೆಸುತ್ತಿರುವಾಗಲೇ ಬೇರೆ ಗಲ್ಲಿಗಳು ಕಲ್ಲು ಬಿದ್ದಿವೆ. ಇದರಿಂದ ಭಯಭೀತಗೊಂಡ ಯುವಕರ ಗುಂಪು ಅತ್ತಿತ್ತ ಓಡಾಟ ಶುರು ಮಾಡಿತು. ಅನಂತರ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಯುವಕರು ಭಾರೀ ಪ್ರಮಾಣದಲ್ಲಿ ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಖಂಜರಗಲ್ಲಿ ಸುತ್ತಮುತ್ತಲಿನ ಅವರಣದಲ್ಲಿ ಕಲ್ಲಿನ ರಾಶಿಗಳೇ ಬಿದ್ದಿವೆ. ಬಿಗಿ ಬಂದೋ ಬಸ್ತ್ ಕೈಗೊಳ್ಳಲಾಗಿದ್ದು, ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.