ಉದ್ಯಾನದಲ್ಲೇ ಚರಗ ಚಲ್ಲಿದ ಜನರು
Team Udayavani, Dec 19, 2017, 9:38 AM IST
ಕಲಬುರಗಿ: ನಗರದಲ್ಲಿನ ಎಲ್ಲ ವಾರ್ಡ್‌ಗಳು ಹಾಗೂ ಹೊಲ ಇಲ್ಲದವರು ಹೈಕೋರ್ಟ್ ಪಕ್ಕದ ಅಕ್ಕಮಹಾದೇವಿ ಬಡಾವಣೆ, ಬುದ್ದವಿಹಾರ ಉದ್ಯಾನವನ, ಕೆಸರಟಗಿ, ಶರಣಬಸವೇಶ್ವರ ಕೆರೆ ಉದ್ಯಾನಗಳಿಗೆ ಹೋಗಿ ಭೋಜನ ಸವಿದು ಎಳ್ಳ ಅಮಾವಾಸ್ಯೆ ಆಚರಿಸಿದರು.
ಎಳ್ಳ ಅಮಾವಾಸ್ಯೆ ಪ್ರಮುಖ ಖಾದ್ಯ ನವಧಾನ್ಯಗಳು, ವಿವಿಧ ಹಸಿರು ಪಲ್ಲೆಗಳು ಸೇರಿಸಿ ಮಾಡಿದ ಭಜಿ ಪಲ್ಲೆ, ಸಜ್ಜೆ, ಜೋಳದ ರೊಟ್ಟಿ, ಶೇಂಗಾ, ಅಗಸಿ ಹಿಂಡಿ, ಎಣ್ಣೆ ಬದನೆಕಾಯಿ, ಜೋಳದ, ಸಜ್ಜಿ ಕಡುಬು, ಶೇಂಗಾ ಹೋಳಿಗೆ, ಹೋಳಿಗೆ ಸೇರಿದಂತೆ ವಿವಿಧ ಖಾದ್ಯ ಪದಾರ್ಥ ಸವಿದ ಹಿರಿಯರು ಹರಟೆ ಹೊಡೆದರೆ, ಮಕ್ಕಳಂತೂ ಜೋಕಾಲಿ, ಜಾರುಬಂಡೆ ಆಡಿ ಖುಷಿಪಟ್ಟರು.
ಇದೇ ವೇಳೆ ಗ್ರಾಮೀಣ ಭಾಗದ ಜನರು ಮಾತ್ರ ತಮ್ಮ ಹೊಲಗಳಿಗೆ ಹೋಗಿ ಜೋಳದ, ತೊಗರಿ ಸೇರಿದಂತೆ ವಿವಿಧ ಬೆಳೆ ಹಸಿರು ಹಾಸಿನಲ್ಲಿ ಓಡಾಡಿ ಚೆರಗ ಚೆಲ್ಲಿ ಸಂಭ್ರಮಿಸಿದರು. ತಾವು ತಯಾರು ಮಾಡಿದ ಖಾದ್ಯವನ್ನು ಬಂಧು, ಬಳಗದವರೊಂದಿಗೆ ಉಂಡು ಮನೆಗಳಿಗೆ ಮರಳಿದರು.
ಚರಗ ಭೂತಾಯಿ ನೈವೇದ್ಯ ರೈತ ವರ್ಷಪೂರ್ತಿ ದುಡಿದು ಉತ್ಪನ್ನ ಮಾಡುವ ಕಾಳುಗಳು, ಹಸಿರು ಪಲ್ಲೆಗಳು ಸೇರಿದಂತೆ ವಿವಿಧ ತರಕಾರಿಯಿಂದ ಮಾಡುವ ಭಜಿ ಪಲ್ಲೆ ಮತ್ತು ಇತರೆ ಖಾದ್ಯವನ್ನು ಭಕ್ತಿಯಿಂದ ಭೂಮಿ ತಾಯಿಗೆ ಅರ್ಪಿಸುವಾಗ ಇಡೀ ಹೊಲದ ನಾಲ್ಕು ಮೂಲೆಗಳಿಗೆ ಚೆಲ್ಲಿ ಭೂಮಿ ತಾಯಿಗೆ ನಮಿಸುತ್ತಾನೆ. ಆತನ ಇಡೀ ಕುಟುಂಬ ಚಾಂಗ ಬೋಲೋ.. ಚಕ್ಕಡಿ ಹೊಡಿರೋ ಎನ್ನುತ್ತಾರೆ.
ಇದನ್ನೇ ಚರಗ ಹೊಡೆಯುವುದು ಎನ್ನಲಾಗುತ್ತದೆ. ಸುವರ್ಣಾ ಶರಣಪ್ಪ ದೇಸಾಯಿ, ನಗರದ ಗೃಹಿಣಿ ಹಳ್ಳಿ ಸೊಗಡಿಲ ಹೌದು.. ಏನು ಮಾಡೋದು. ನಮಗೆ ಹಳ್ಳಿ ಸೊಗಡಿನ ಸಂಭ್ರವಿಲ್ಲ. ಆಟೋಗಳಲ್ಲಿ ಉದ್ಯಾನಗಳಿಗೆ ಬಂದು ಇಳಿತೇವೆ.. ಹುಲ್ಲು ಹಾಸಿನಲ್ಲಿ ಉಣ್ಣುವುದೇ ಎಳ್ಳ ಮಾವಾಸ್ಯೆಯಾಗಿದೆ. ದನಗಳ ಗೆಜ್ಜೆ ಸದ್ದಿಲ್ಲ. ಯಕ್ಕಾ.. ಬಾರೇ. ಜಲ್ದಿ ಹೋಗೋನು ಎನ್ನುವ ದೊಡ್ಡ ಧ್ವನಿಗಳಿಲ್ಲ. ಗೇನಿದ್ದರೂ ಇಂಟರನೆಟ್.. ವ್ಯಾಟ್ಸ್ ಆ್ಯಫ್, ಫೇಸ್‌ಬುಕ್ ಎಳ್ಳಾಮಾಸ್ಯೆ. ಸಾಮಾಜಿಕ ಜಾಲ ತಾಣಗಳಲ್ಲಿ ಫೋಟೋ ಹಾಕಿಕೊಂಡು ಲೈಕು, ಕಾಮೆಂಟು.. ಅದಕ್ಕೊಂದಿಷ್ಟು ಪರ ವಿರೋಧ ಮಾತುಗಳಿಗೆ ಸೀಮಿತವಾಗಿದೆ. ಹಳ್ಳಿ ರೈತರ ಖುಷಿ ನಮಗೆ ಸಿಗುತ್ತಿಲ್ಲ.. ಹೊಲಗಳಿದ್ದವರು ಹೋಗ್ತಾರೆ. ನಾವೆಲ್ಲಿ ಹೋಗಬೇಕು?
ಮಹೇಶ ತಳಕೇರಿ, ಕಲಬುರಗಿ ನಿವಾಸಿ
ಸೂರ್ಯಕಾಂತ ಎಂ. ಜಮಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.