ಕಾರು ಸಾಲ ಶೇ.30ರಷ್ಟು ಏರಿಕೆ
Team Udayavani, Dec 20, 2017, 7:35 AM IST
ಮುಂಬೈ: ಭಾರತದಲ್ಲಿ ಕಾರು ಕೊಳ್ಳಲು ಪಡೆಯಲಾಗುತ್ತಿರುವ ಸಾಲದ ಮೊತ್ತ ಪ್ರಸಕ್ತ ವರ್ಷದಲ್ಲಿ ಶೇ.30ರಷ್ಟು ಹೆಚ್ಚಾಗಿದೆ ಎಂದು ಕ್ರಿಫ್ ಹೈಮಾರ್ಕ್ ಎಂಬ ಸಂಸ್ಥೆಯು ತನ್ನ ಸಮೀûಾ ವರದಿಯಲ್ಲಿ ತಿಳಿಸಿದೆ.
ಜನವರಿಯಿಂದ ಸೆಪ್ಟೆಂಬರ್‌ವರೆಗೆ ಭಾರತದಾದ್ಯಂತ ನಡೆಸಲಾಗಿದ್ದ ಸಮೀಕ್ಷೆ ಯಲ್ಲಿ, 3.59 ಲಕ್ಷ ಕೋಟಿ ರೂ.ಗಳಷ್ಟು ಕಾರು ಸಾಲ ನೀಡಲಾಗಿದ್ದು, ಇದರಿಂದ 31 ಲಕ್ಷ ಕಾರುಗಳ ಮಾರಾಟಕ್ಕೆ ಅನುಕೂಲವಾಗಿದೆ. ಅಲ್ಲದೆ, ಸೆಪ್ಟೆrಂಬರ್ ಅಂತ್ಯದ ಹೊತ್ತಿಗೆ 17 ಲಕ್ಷ ಕಾರುಗಳಿಗೆ ಅದಾಗಲೇ ಫೈನಾನ್ಸ್ ಒದಗಿಸಿಯಾಗಿ ತ್ತೆಂದು ವರದಿ ಹೇಳಿದೆ. ಕಳೆದ 3 ವರ್ಷಗಳಲ್ಲಿ ಗ್ರಾಹಕನೊಬ್ಬ ಕೊಳ್ಳುತ್ತಿರುವ ಸರಾಸರಿ ಕಾರು ಸಾಲದ ಪ್ರಮಾಣದಲ್ಲೂ ಏರಿಕೆಯಾಗಿದ್ದು, 2016 -17ರ ಆರ್ಥಿಕ ವರ್ಷದಲ್ಲಿ ಇದು 5.5 ಲಕ್ಷ ರೂ.ಗಳಿಗೆ ಮುಟ್ಟಿದೆ. ಮೂರು ವರ್ಷಗಳ ಹಿಂದೆ ಇದು 4.5 ಲಕ್ಷ ರೂ.ಗಳಷ್ಟಿತ್ತು.
ಮತ್ತೂಂದು ಆಸಕ್ತಿದಾಯಕ ವಿಚಾರ ವೇನೆಂದರೆ, 5 ಲಕ್ಷದಿಂದ 10 ಲಕ್ಷ ರೂ.ಗಳವರೆಗೆ ಕಾರು ತೆಗೆದುಕೊಳ್ಳುತ್ತಿರು ವವರ ಪ್ರಮಾಣ ಹೆಚ್ಚಾಗುತ್ತಿರುವುದು. ಈ ವರ್ಷ ಕಾರು ಸಾಲ ಪಡೆದಿರುವ ಒಟ್ಟು ಗ್ರಾಹಕರಲ್ಲಿ ಶೇ. 40ರಷ್ಟು ಜನ, 5ರಿಂದ 10 ಲಕ್ಷ ರೂ. ಸಾಲ ಪಡೆದವರೇ ಆಗಿದ್ದಾರೆ. ಇದೇ ಈಗ ಸದ್ಯದ ಜನಪ್ರಿಯ ಸಾಲದ ಪ್ರಮಾಣವಾಗಿದೆ. ಈ ಹಿಂದೆ, ಹೆಚ್ಚು ಮಂದಿ 2ರಿಂದ 5 ಲಕ್ಷ ರೂ.ಗಳ ಸಾಲದ ಮೊರೆ ಹೋಗುತ್ತಿದ್ದರು. ಈಗ 5ರಿಂದ 10 ಲಕ್ಷ ರೂ.ಗಳತ್ತ ಹೋಗುತ್ತಿರುವುದು ಜನರ ಬದಲಾದ ಅಗತ್ಯ, ಆಶಯಗಳ ಪ್ರತೀಕವೆಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bengaluru: ದೆಹಲಿಯ ನೇಲ್ ಆರ್ಟಿಸ್ಟ್ ನೇಣಿಗೆ
Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್ ಟೀಕೆ
Bengaluru: ತ್ಯಾಜ್ಯ ವರ್ಗಾವಣೆ ಘಟಕಕ್ಕೆ ಸಿದ್ದರಾಮಯ್ಯ ಚಾಲನೆ
Bengaluru: ಜೀವಾ ಆತ್ಮಹತ್ಯೆ: ಡಿವೈಎಸ್ಪಿಗೆ ಸಿಸಿಬಿ ನೋಟಿಸ್ ಸಾಧ್ಯತೆ
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.