ಕಡಿವಾಣ ಹಾಕೀತೇ ಕರ್ನಾಟಕ?


Team Udayavani, Dec 20, 2017, 11:26 AM IST

20-16.jpg

ಕೋಲ್ಕತಾ: ಕರ್ನಾಟಕದೆದುರಿನ ರಣಜಿ ಟ್ರೋಫಿ ಸೆಮಿಫೈನಲ್‌ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ವಿದರ್ಭ ಬ್ಯಾಟಿಂಗ್‌ ಹೋರಾಟವೊಂದನ್ನು ಜಾರಿಯಲ್ಲಿರಿಸಿದೆ. 6 ವಿಕೆಟ್‌ಗಳನ್ನು ಕೈಲಿರಿಸಿಕೊಂಡು 79 ರನ್ನುಗಳ ಮುನ್ನಡೆ ಸಾಧಿಸಿದೆ. ಇದರಿಂದ ಫೈನಲ್‌ ಪ್ರವೇಶದ ಪೈಪೋಟಿ ತೀವ್ರಗೊಳ್ಳುವ ಸಾಧ್ಯತೆಯೊಂದು ಗೋಚರಿಸಿದೆ.

ಬ್ಯಾಟ್ಸ್‌ಮನ್‌ಗಳಿಗೆ ಅಷ್ಟೇನೂ ಸಹಕರಿಸದ “ಈಡನ್‌ ಗಾರ್ಡನ್ಸ್‌’ ಅಂಗಳದಲ್ಲಿ ಕರ್ನಾಟಕ ಕೊನೆಯ ಇನ್ನಿಂಗ್ಸ್‌ ಬ್ಯಾಟಿಂಗ್‌ ಮಾಡಬೇಕಿರು ವುದರಿಂದ ಇದೊಂದು ಸವಾಲಾಗಿ  ಪರಿಣಮಿಸ ಲೂಬಹುದು. ವಿದರ್ಭದ ಮುನ್ನಡೆ 200-250 ಗಡಿ ದಾಟಿದರೂ ವಿನಯ್‌ ಪಡೆಯ ಹಾದಿ ಕಠಿನಗೊಳ್ಳಬಹುದು. ಪಂದ್ಯವಿನ್ನೂ 2 ದಿನ ಗಳನ್ನು ಕಾಣಲಿಕ್ಕಿದೆ.

8 ವಿಕೆಟ್‌ ನಷ್ಟಕ್ಕೆ 294 ರನ್‌ ಮಾಡಿದ್ದ ಕರ್ನಾಟಕ, ಮಂಗಳವಾರ ಬ್ಯಾಟಿಂಗ್‌ ಮುಂದುವರಿಸಿ 301 ರನ್ನಿಗೆ ಆಲೌಟ್‌ ಆಯಿತು. ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ವಿದರ್ಭ 4 ವಿಕೆಟಿಗೆ 195 ರನ್‌ ಮಾಡಿದೆ. 

ಅಮೋಘ ಬ್ಯಾಟಿಂಗ್‌ ನಡೆಸಿ 148 ರನ್‌ ಗಳಿಸಿ ಆಡುತ್ತಿದ್ದ ಕರುಣ್‌ ನಾಯರ್‌ 153ರ ತನಕ ಸಾಗಿ ಕೊನೆಯವರಾಗಿ ಪೆವಿಲಿಯನ್‌ ಸೇರಿಕೊಂಡರು. 287 ಎಸೆತ ಎದುರಿಸಿದ ನಾಯರ್‌ 20 ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸಿ ಸ್ಮರಣೀಯ ಇನ್ನಿಂಗ್ಸ್‌ ಕಟ್ಟಿದರು. ನಾಯರ್‌ ಒಂದು ತುದಿಯಲ್ಲಿ ಕ್ರೀಸ್‌ ಆಕ್ರಮಿಸಿಕೊಂಡಿದ್ದರಿಂದ ಕರ್ನಾಟಕಕ್ಕೆ ಮಹತ್ವದ ಇನ್ನಿಂಗ್ಸ್‌ ಮುನ್ನಡೆ ಗಳಿಸಲು ಸಾಧ್ಯವಾಗಿತ್ತು. 20 ರನ್‌ ಮಾಡಿದ್ದ ವಿನಯ್‌ ಕುಮಾರ್‌ ಇದಕ್ಕೆ ಒಂದೇ ರನ್‌ ಸೇರಿಸಿ ಮೊದಲಿಗರಾಗಿ ನಿರ್ಗಮಿಸಿದರು. ಖಾತೆ ತೆರೆಯದ ಶ್ರೀನಾಥ್‌ ಅರವಿಂದ್‌ ಅಜೇಯರಾಗಿ ಉಳಿದರು.

ಕರ್ನಾಟಕದ ಕೊನೆಯ ಎರಡೂ ವಿಕೆಟ್‌ ಉಮೇಶ್‌ ಯಾದವ್‌ ಪಾಲಾಯಿತು. ಯಾದವ್‌ ಸಾಧನೆ 73ಕ್ಕೆ 4 ವಿಕೆಟ್‌. ರಜನೀಶ್‌ ಗುರ್ಬಾನಿ 94 ರನ್ನಿಗೆ 5 ವಿಕೆಟ್‌ ಕಿತ್ತು ಹೆಚ್ಚಿನ ಯಶಸ್ಸು ಕಂಡರು.

ಕಾಡಿದ “ಮಾಜಿ’ ಕ್ರಿಕೆಟಿಗ
ವಿದರ್ಭದ ದ್ವಿತೀಯ ಇನ್ನಿಂಗ್ಸ್‌ ಆಘಾತ ಕಾರಿಯಾಗಿತ್ತು. ವಿನಯ್‌ 2ನೇ ಎಸೆತದಲ್ಲೇ ನಾಯಕ ಫೈಜ್‌ ಫ‌ಜಲ್‌ (0) ಅವರನ್ನು ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದರು.  ಸ್ಕೋರ್‌ 36ಕ್ಕೆ ತಲುಪಿದಾಗ ಮತ್ತೂಬ್ಬ ಆರಂಭಕಾರ ರಾಮಸ್ವಾಮಿ ಸಂಜಯ್‌ (17) ನಿರ್ಗಮಿಸಿದರು. 17 ರನ್‌ ಮಾಡಿದ್ದ ಅವರು ಬಿನ್ನಿ ಎಸೆತವನ್ನು ಕೀಪರ್‌ ಗೌತಮ್‌ ಗೆ ಕ್ಯಾಚಿತ್ತರು. ತಂಡದ ಮತ್ತೂಬ್ಬ ಪ್ರಮುಖ ಬ್ಯಾಟ್ಸ್‌ಮನ್‌ ವಾಸಿಮ್‌ ಜಾಫ‌ರ್‌ ಬೇರೂರುವ ಲಕ್ಷಣ ತೋರಿದರು. ಆದರೆ 33 ರನ್‌ ಮಾಡಿ ಅರವಿಂದ್‌ ಎಸೆತಕ್ಕೆ ಲೆಗ್‌ ಬಿಫೋರ್‌ ಆದರು. ಆಗ ವಿದರ್ಭ 62 ರನ್‌ ಮಾಡಿತ್ತು.

ಈ ಹಂತದಲ್ಲಿ ತಂಡದ ನೆರವಿಗೆ ನಿಂತವರು ಕರ್ನಾಟಕದ ಮಾಜಿ ಆಟಗಾರ ಗಣೇಶ್‌ ಸತೀಶ್‌. ಅವರಿಗೆ ಅಪೂರ್ವ್‌ ವಾಂಖೇಡೆ ಉತ್ತಮ ಬೆಂಬಲವಿತ್ತರು. 4ನೇ ವಿಕೆಟಿಗೆ 88 ರನ್‌ ಒಟ್ಟುಗೂಡಿತು. ಇದರಿಂದ ಇನ್ನಿಂಗ್ಸ್‌ ಹಿನ್ನಡೆಯ ಲೆಕ್ಕ ಚುಕ್ತಾ ಆಯಿತು. ಜಿ. ಸತೀಶ್‌ 71 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. 128 ಎಸೆತಗಳ ಈ ರಕ್ಷಣಾತ್ಮಕ ಆಟದಲ್ಲಿ 10 ಬೌಂಡರಿ ಸೇರಿದೆ.

ವಾಂಖೇಡೆ ಬ್ಯಾಟಿಂಗ್‌ ತುಸು ಬಿರುಸಿನಿಂದ ಕೂಡಿತ್ತು. ಅವರ 49 ರನ್‌ 48 ಎಸೆತಗಳಿಂದ ಬಂತು. ಹೊಡೆದದ್ದು 9 ಬೌಂಡರಿ. ಇವರ ವಿಕೆಟ್‌ ಅರವಿಂದ್‌ ಪಾಲಾಯಿತು. ವಾಂಖೇಡೆ ನಿರ್ಗಮನದ ಬಳಿಕ ಕೀಪರ್‌ ಅಕ್ಷಯ್‌ ವಾಡ್ಕರ್‌, ಜಿ. ಸತೀಶ್‌ ಜತೆಗೂಡಿ ಅಂತಿಮ ಆವಧಿಯ 10 ಓವರ್‌ಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಂದ 5ನೇ ವಿಕೆಟಿಗೆ 45 ರನ್‌ ಒಟ್ಟುಗೂಡಿದೆ. ವಾಡ್ಕರ್‌ 19 ರನ್‌ ಮಾಡಿ ಅಜೇಯರಾಗಿ ಉಳಿದಿದ್ದಾರೆ.

ಬುಧವಾರ ಮೊದಲ ಅವಧಿಯ ಆಟ ಕರ್ನಾಟಕದ ಪಾಲಿಗೆ ನಿರ್ಣಾಯಕ. ವಿದರ್ಭದ ವಿಕೆಟ್‌ಗಳನ್ನು ಬೇಗನೆ ಉರುಳಿಸಿ ಮುನ್ನಡೆಗೆ ತಡೆಯೊಡ್ಡಬೇಕಾದ ಅಗತ್ಯವಿದೆ.

ಗೆದ್ದು ಫೈನಲ್‌ಗೇರಿದ ದೆಹಲಿ
ಪುಣೆ:
ನವದೀಪ್‌ ಸೈನಿ ಮತ್ತು ಕುಲವಂತ್‌ ಖೆಜೊಲಿಯಾ ಅವರ ಭರ್ಜರಿ ದಾಳಿಯ ನೆರವಿಂದ ದಿಲ್ಲಿ ಮೂರೇ ದಿನದಲ್ಲಿ ಜಯಭೇರಿ ಮೊಳಗಿಸಿ ರಣಜಿ ಫೈನಲ್‌ಗೆ ಲಗ್ಗೆ ಇರಿಸಿದೆ. ಸೆಮಿಫೈನಲ್‌ ಪಂದ್ಯದಲ್ಲಿ ಅದು ಬಂಗಾಲ ವಿರುದ್ಧ ಇನ್ನಿಂಗ್ಸ್‌ ಹಾಗೂ 26 ರನ್‌ ಜಯ ಸಾಧಿಸಿತು.

ಬಂಗಾಲದ 286 ರನ್ನಿಗೆ ಉತ್ತರವಾಗಿ 3ಕ್ಕೆ 271 ರನ್‌ ಮಾಡಿದ್ದ ದಿಲ್ಲಿ, 398ಕ್ಕೆ ಆಲೌಟಾಯಿತು. 112 ರನ್‌ ಹಿನ್ನಡೆಗೆ ಸಿಲುಕಿದ ಬಂಗಾಲ, ದ್ವಿತೀಯ ಸರದಿಯಲ್ಲಿ ನಾಟ ಕೀಯ ಕುಸಿತಕ್ಕೊಳಗಾಗಿ ಬರೀ 86 ರನ್ನಿಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡಿತು. ನವದೀಪ್‌ ಸೈನಿ ಮತ್ತು ಕುಲವಂತ್‌ ಖೆಜೊಲಿಯಾ ತಲಾ 4 ವಿಕೆಟ್‌ ಹಾರಿಸಿದರು. 

ಸಂಕ್ಷಿಪ್ತ ಸ್ಕೋರ್‌: ಬಂಗಾಲ- 286 ಮತ್ತು 86 (ಸುದೀಪ್‌ ಚಟರ್ಜಿ 21, ಸೈನಿ 35ಕ್ಕೆ 4, ಕುಲವಂತ್‌ 40ಕ್ಕೆ 4). ದಿಲ್ಲಿ-398.

ಸ್ಕೋರ್‌ ಪಟ್ಟಿ
ವಿದರ್ಭ ಪ್ರಥಮ ಇನ್ನಿಂಗ್ಸ್‌    185 
ಕರ್ನಾಟಕ ಪ್ರಥಮ ಇನ್ನಿಂಗ್ಸ್‌        
(2ನೇ ದಿನ 8 ವಿಕೆಟಿಗೆ 294)

ಕರುಣ್‌ ನಾಯರ್‌    ಸಿ ವಾಡ್ಕರ್‌ ಬಿ ಯಾದವ್‌    153
ವಿನಯ್‌ ಕುಮಾರ್‌    ಎಲ್‌ಬಿಡಬ್ಲ್ಯು ಯಾದವ್‌    21
ಶ್ರೀನಾಥ್‌ ಅರವಿಂದ್‌    ಔಟಾಗದೆ    0

ಇತರ        11
ಒಟ್ಟು  (ಆಲೌಟ್‌)        301
ವಿಕೆಟ್‌ ಪತನ: 9-296.

ಬೌಲಿಂಗ್‌
ಉಮೇಶ್‌ ಯಾದವ್‌    29.5-4-73-4
ರಜನೀಶ್‌ ಗುರ್ಬಾನಿ        34-7-94-5
ಸಿದ್ದೇಶ್‌ ನೆರಾಲ್‌        19-1-78-0
ಫೈಜ್‌ ಫ‌ಜಲ್‌        2-0-6-0
ಆದಿತ್ಯ ಸರ್ವಟೆ        11-2-35-1
ಅಕ್ಷಯ್‌ ವಖಾರೆ        5-1-7-0

ವಿದರ್ಭ ದ್ವಿತೀಯ ಇನ್ನಿಂಗ್ಸ್‌
ಫೈಜ್‌ ಫ‌ಜಲ್‌    ಎಲ್‌ಬಿಡಬ್ಲ್ಯು ವಿನಯ್‌    0
ಆರ್‌. ಸಂಜಯ್‌    ಸಿ ಗೌತಮ್‌ ಬಿ ಬಿನ್ನಿ    17
ವಾಸಿಮ್‌ ಜಾಫ‌ರ್‌    ಎಲ್‌ಬಿಡಬ್ಲ್ಯು ಅರವಿಂದ್‌    33
ಗಣೇಶ್‌ ಸತೀಶ್‌    ಬ್ಯಾಟಿಂಗ್‌    71
ಅಪೂರ್ವ್‌ ವಾಂಖೇಡೆ    ಸಿ ವಿನಯ್‌ ಬಿ ಅರವಿಂದ್‌    49
ಅಕ್ಷಯ್‌ ವಾಡ್ಕರ್‌    ಬ್ಯಾಟಿಂಗ್‌    19

ಇತರ        6
ಒಟ್ಟು  (4 ವಿಕೆಟಿಗೆ)        195
ವಿಕೆಟ್‌ ಪತನ: 1-0, 2-36, 3-62, 4-150.

ಬೌಲಿಂಗ್‌:
ವಿನಯ್‌ ಕುಮಾರ್‌    11-1-49-1
ಅಭಿಮನ್ಯು ಮಿಥುನ್‌        12-1-35-0
ಶ್ರೀನಾಥ್‌ ಅರವಿಂದ್‌        13-3-41-2
ಸ್ಟುವರ್ಟ್‌ ಬಿನ್ನಿ        7-0-46-1
ಕೃಷ್ಣಪ್ಪ ಗೌತಮ್‌        2-0-7-0
ಶ್ರೇಯಸ್‌ ಗೋಪಾಲ್‌        2-0-11-0

ಟಾಪ್ ನ್ಯೂಸ್

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

Andaman: ಮೀನುಗಾರಿಕಾ ದೋಣಿಯಲ್ಲಿದ್ದ 5 ಟನ್ ಮಾದಕ ವಸ್ತು ವಶಕ್ಕೆ ಪಡೆದ ಕೋಸ್ಟ್ ಗಾರ್ಡ್

Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Ajit Pawar supports Devendra Fadnavis; CM tussle continues in Maharashtra

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

BGT 2024: team India won the test in Perth

BGT 2024: ಪರ್ತ್‌ ನಲ್ಲಿ ಪಲ್ಟಿ ಹೊಡೆದ ಆಸೀಸ್:‌ ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ

IPL Mega Auction: Here’s what all 10 teams look like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ

IPL Mega Auction: Here’s what RCB’s team looks like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್‌ ಸಿಬಿ ತಂಡ ಹೀಗಿದೆ ನೋಡಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

Andaman: ಮೀನುಗಾರಿಕಾ ದೋಣಿಯಲ್ಲಿದ್ದ 5 ಟನ್ ಮಾದಕ ವಸ್ತು ವಶಕ್ಕೆ ಪಡೆದ ಕೋಸ್ಟ್ ಗಾರ್ಡ್

Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ

Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!

Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.