ಆಸ್ಪತ್ರೆ ಬೆಡ್ಡಲ್ಲಿ ಜ್ಯೂಸ್ ಕುಡಿವ ಜಯಲಲಿತಾ ವಿಡಿಯೋ ರಿಲೀಸ್
Team Udayavani, Dec 20, 2017, 12:15 PM IST
ಚೆನ್ನೈ : ಆರ್ ಕೆ ನಗರ ಉಪ ಚುನಾವಣೆಗೆ ಒಂದು ದಿನ ಇರುವಂತೆಯೇ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ನಿಧನಹೊಂದುವುದಕ್ಕೆ ಕೆಲವೇ ದಿನ ಮೊದಲು ಚೆನ್ನೈ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಿನ, ಈ ವರೆಗೂ ಯಾರೂ ನೋಡಿರದ, ವಿಡಿಯೋ ಚಿತ್ರಿಕೆಯೊಂದನ್ನು ಇಂದು ಬುಧವಾರ ಬಿಡುಗಡೆ ಮಾಡಲಾಗಿದೆ.
ಆರ್ ಕೆ ನಗರ ವಿಧಾನ ಸಭಾ ಕ್ಷೇತ್ರವನ್ನು ಜಯಲಲಿತಾ ಅವರು ತಮ್ಮ ನಿಧನದ ವರೆಗೂ ಹೊಂದಿದ್ದರು. ವಿಡಿಯೋದಲ್ಲಿ ಜಯಲಲಿತಾ ಅವರು ಆಸ್ಪತ್ರೆಯ ಬೆಡ್ ಮೇಲೆ ಕುಳಿತು ಒಂದು ಗ್ಲಾಸ್ ಜ್ಯೂಸ್ ಹೀರುತ್ತಾ ಟಿವಿ ನೋಡುತ್ತಿರುವುದು ಕಂಡ ಬರುತ್ತದೆ.
ಈ ವಿಡಿಯೋವನ್ನು ಟಿಟಿವಿ ದಿನಕರನ್ ಅವರ ಬೆಂಬಲಿಗ ಪಿ ವೆಟ್ರಿವೇಲ್ ಅವರು ಬಿಡುಗಡೆಮಾಡಿದ್ದಾರೆ.
“ಜಯಲಲಿತಾ ಅವರು ಆಸ್ಪತ್ರೆಯಲ್ಲಿದ್ದಾಗ ಯಾರೂ ಆಕೆಯನ್ನು ಭೇಟಿಯಾಗಿಲ್ಲ ಎನ್ನುವ ಮಾತು ಸುಳ್ಳು. ಇದಕ್ಕೆ ಈ ವಿಡಿಯೋ ಚಿತ್ರಿಕೆಯೇ ಸಾಕ್ಷಿ. ನಾವು ಈ ವಿಡಿಯೋ ಬಿಡುಗಡೆ ಮಾಡಲು ಹಲವು ದಿನಗಳ ಕಾಲ ಕಾದೆವು; ಈಗ ನಮಗೆ ಅನ್ಯ ಮಾರ್ಗವೇ ಇಲ್ಲದೆ ಈಗ ಇದನ್ನು ಬಿಡುಗಡೆ ಮಾಡುತ್ತಿದ್ದೆಯೇ; ತನಿಖಾ ಆಯೋಗ ಈ ತನಕವೂ ನಮ್ಮನ್ನು ಕರೆಸಿಕೊಂಡಿಲ್ಲ; ಕರೆಸಿಕೊಂಡಲ್ಲಿ ನಾವು ಈ ವಿಡಿಯೋವನ್ನು ಅವರಿಗೆ ಸಾಕ್ಷ್ಯವಾಗಿ ಒದಗಿಸಲಿದ್ದೇವೆ’ ಎಂದು ವೆಟ್ರಿವೇಲ್ ಹೇಳಿದರು.
72 ದಿನ ಅಪೋಲೋ ಆಸ್ಪತ್ರೆಯಲ್ಲಿದ್ದ ಜಯಲಲಿತಾ ಅವರು 2016ರ ಡಿ.5ರಂದು ನಿಧನ ಹೊಂದಿದ್ದರು. ಆಕೆಯ ಸಾವಿನ ಕಾರಣವನ್ನು ನಿಗೂಢ ಗೊಳಿಸುವ ಹಲವಾರು ಬಗೆಯ ವದಂತಿಗಳು ಕಳೆದ ಒಂದು ವರ್ಷದಿಂದಲೂ ಚಾಲ್ತಿಯಲ್ಲಿವೆ. ಅನೇಕರ ಪ್ರಕಾರ ಜಯಲಲಿತಾ ಸಾವು ಸಹಜವಾದದ್ದು; ನಿಜಕ್ಕಾದರೆ ಆಕೆಯನ್ನು ಕೊಲ್ಲಲಾಗಿತ್ತು’ ಎಂದು ವೇಟ್ರಿವೇಲ್ ಆರೋಪಿಸಿದರು.
ಮೂಲಗಳ ಪ್ರಕಾರ ಆರ್ ಕೆ ನಗರ ಉಪ ಚುನಾವಣೆಗೆ ಒಂದ ದಿನ ಇರುವಾಗ ದಿನಕರನ್ ಬಣ ಈ ವಿಡಿಯೋ ಚಿತ್ರಿಕೆಯನ್ನು ಬಿಡುಗಡೆ ಮಾಡಿರುವುದು ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದಲೇ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.