ಗುಜರಾತ್ನಲ್ಲಿ ರುಪಾಣಿ, ಪಟೇಲ್ ಮುಂದುವರಿಕೆ?
Team Udayavani, Dec 21, 2017, 6:40 AM IST
ಅಹಮದಾಬಾದ್/ಶಿಮ್ಲಾ: ಪ್ರಯಾಸ ಪಟ್ಟು ಗೆದ್ದಿರುವ ಗುಜರಾತ್ನಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿ ವಿಜಯ ರುಪಾಣಿ ಮತ್ತು ಉಪ ಮುಖ್ಯಮಂತ್ರಿ ಸ್ಥಾನದಲ್ಲಿ ನಿತಿನ್ ಪಟೇಲ್ ಮುಂದುವರಿಯುವ ಸಾಧ್ಯತೆಯೇ ಅಧಿಕ. 2019ರ ಲೋಕಸಭೆ ಫಲಿತಾಂಶದ ವರೆಗೆ ಈ ವ್ಯವಸ್ಥೆ ಮುಂದುವರಿಯಲಿದೆ. ಈ ನಡುವೆ ಗುಜರಾತ್ ಸಿಎಂ ಸ್ಥಾನಕ್ಕೆ ಕೇಂದ್ರ ಜವಳಿ ಸಚಿವೆ ಸ್ಮತಿ ಇರಾನಿ ಹೆಸರೂ ಕೇಳಿ ಬಂದಿತ್ತು. ಈ ಬಗ್ಗೆ ಬುಧವಾರ ಮಾತನಾಡಿದ ಇರಾನಿ ತಾವು ಹುದ್ದೆಯ ರೇಸ್ನಲ್ಲಿಲ್ಲ ಎಂದು ಹೇಳಿದ್ದಾರೆ.
ಈ ನಡುವೆ ಹಿಮಾಚಲ ಪ್ರದೇಶದಲ್ಲಿ ಸೋಲನುಭವಿಸಿರುವ ಪ್ರೇಮ್ ಕುಮಾರ್ ಧುಮಾಲ್ ತಾವೇ ಹುದ್ದೆಗೆ ಏರಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅವರ ಪರ ಬೆಂಬಲಿಗರಾಗಿ ರುವ ಮೂವರು ಶಾಸಕರು ತಮ್ಮ ಕ್ಷೇತ್ರದಿಂದ ಸ್ಪರ್ಧಿಸಿ ಮತ್ತೆ ಗೆಲ್ಲಬಹುದು ಎಂದು ಆಫರ್ ಕೂಡ ಕೊಟ್ಟಿದ್ದಾರೆ. ಧುಮಲ್ ಪರವಾಗಿರುವ ಶಾಸಕರು ಸಮೀರ್ಪುರ್ನಲ್ಲಿರುವ ಅವರ ಖಾಸಗಿ ನಿವಾಸದಲ್ಲಿ ಭೇಟಿಯಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಹಿಂದಿನ ಸಾಲಿಗಿಂತ ತನ್ನ ಸ್ಥಾನಗಳನ್ನು ಉತ್ತಮ ಪಡಿಸಿದೆ. ಪೈಪೋಟಿಯ ಪ್ರಚಾರ ಇದ್ದಾಗಿಯೂ ಕೂಡ ಸೋಲಲು ಕಾರಣವೇನು ಎಂದು ಕಂಡುಕೊಳ್ಳಲು ರಾಹುಲ್ ಗಾಂಧಿ ನೇತೃತ್ವದ ಪಕ್ಷ ಮುಂದಾಗಿದೆ. ಈ ಬಗ್ಗೆ ಬುಧವಾರದಿಂದ ನವದೆಹಲಿಯಲ್ಲಿ ಮೂರು ದಿನಗಳ ಚಿಂತನಾ ಸಭೆ ಆರಂಭವಾಗಿದೆ. ಶುಕ್ರವಾರ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ.
ಗುಜರಾತ್, ಹಿಮಾಚಲ ಪ್ರದೇಶ ಸೋಲಿನ ಕಾರಣಗಳ ಜತೆಗೆ 2019ರ ಲೋಕಸಭೆ ಚುನಾವಣೆಗೆ ಕೂಡ ಸಿದ್ಧತೆ ಮತ್ತು ರಣತಂತ್ರ ರೂಪಿಸುವ ಬಗ್ಗೆ ಚರ್ಚಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.