ಜ್ಯೂಸ್ ಕುಡಿಯುವ ಅಮ್ಮ ವಿಡಿಯೋ ಆಯ್ತು ವೈರಲ್
Team Udayavani, Dec 21, 2017, 7:05 AM IST
ಚೆನ್ನೈ: ಪ್ರತಿಷ್ಠಿತ ಆರ್.ಕೆ.ನಗರ ಕ್ಷೇತ್ರದ ಉಪಚುನಾವಣೆ ಡಿ.21ರಂದು ನಡೆಯಲಿರುವಂತೆಯೇ ದಿ.ಜಯಲಲಿತಾ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿರುವ ಸಂದರ್ಭದ ಹೊಸ ವಿಡಿಯೋ ವೈರಲ್ ಆಗಿದೆ. ಎಐಎಡಿಎಂಕೆಯ ಉಚ್ಚಾಟಿತ ನಾಯಕ ಟಿ.ಟಿ.ವಿ.ದಿನಕರನ್ ಬಣ ಅದನ್ನು ಬಿಡುಗಡೆ ಮಾಡಿದೆ. ಚುನಾವಣಾ ಆಯೋಗದ ಅಧಿಕಾರಿಗಳು ಅದನ್ನು ಪ್ರಸಾರ ಮಾಡಬಾರದು ಎಂದು ಹೇಳುವಷ್ಟರಲ್ಲಿ ಅದು ಚಾನೆಲ್ಗಳಲ್ಲಿ, ಜಾಲತಾಣಗಳಲ್ಲಿ ವೈರಲ್ ಆಗಿತ್ತು. 20 ಸೆಕೆಂಡ್ಗಳ ವಿಡಿಯೋ ಕ್ಲಿಪಿಂಗ್ನಲ್ಲಿ ಇರುವ ಮಹಿಳೆ ಜೆ. ಜಯಲಲಿತಾ ಎನ್ನಲಾಗುತ್ತಿದ್ದು, ಅವರು ಹಾಸಿಗೆ ಮೇಲೆ ಕುಳಿತಿದ್ದಾರೆ. ಅದರಲ್ಲಿ ಅವರು ಹೆಲ್ತ್ ಡ್ರಿಂಕ್ ಸೇವನೆ ಮಾಡುತ್ತಿದ್ದಾರೆ.
ಈ ಬೆಳವಣಿಗೆ ಬಗ್ಗೆ ಆರ್.ಕೆ.ನಗರ ಕ್ಷೇತ್ರದ ಚುನಾವಣಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಎಐಎಡಿಎಂಕೆ ಚುನಾವಣೆ ಮೇಲೆ ಪ್ರಭಾವ ಬೀರುವ ಯತ್ನ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ
Tirupati ತಿರುಪತಿ ಲಡ್ದು ಪ್ರಸಾದದಲ್ಲಿ ಬೀಫ್ ಫ್ಯಾಟ್!:ಲ್ಯಾಬ್ ವರದಿಯಲ್ಲಿ ದೃಢ
Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್ ಡೆಲಿವರಿ ಯುವಕ ಆತ್ಮಹತ್ಯೆ
Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ
Chennai: ರಸ್ತೆ ಬದಿ ಪತ್ತೆಯಾದ ಸೂಟ್ಕೇಸ್ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.