ನ್ಯೂಜಿಲ್ಯಾಂಡಿಗೆ ಬ್ರೇಸ್‌ವೆಲ್ ಆಸರೆ
Team Udayavani, Dec 21, 2017, 8:24 AM IST
ವಾಂಗರಾಯ್: ಆಲ್‌ರೌಂಡ್ ಆಟದ ಪ್ರದರ್ಶನ ನೀಡಿದ ನ್ಯೂಜಿಲ್ಯಾಂಡ್ ತಂಡವು ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ 5 ವಿಕೆಟ್‌ಗಳ ಗೆಲುವು ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ವೆಸ್ಟ್‌ಇಂಡೀಸ್ ತಂಡವು ಡಗ್ ಬ್ರೇಸ್‌ವೆಲ್ ದಾಳಿಗೆ ಕುಸಿಯಿತು. ಆದರೂ ಎವಿನ್ ಲೂವಿಸ್, ರೋಮನ್ ಪೊವೆಲ್ ಅವರ ಅರ್ಧಶತಕದಿಂದಾಗಿ 9 ವಿಕೆಟಿಗೆ 248 ರನ್ನುಗಳ ಸಾಧಾರಣ ಮೊತ್ತ ಪೇರಿಸಿತು. ಇದಕ್ಕೆ ಉತ್ತರವಾಗಿ ಅಗ್ರ ಕ್ರಮಾಂಕದ ಆಟಗಾರರ ಜವಾಬ್ದಾರಿಯ ಆಟದಿಂದಾಗಿ ನ್ಯೂಜಿಲ್ಯಾಂಡ್ ಐದು ವಿಕೆಟ್ ನಷ್ಟದಲ್ಲಿ ಇನ್ನೂ 24 ಎಸೆತ ಬಾಕಿ ಉಳಿದಿರುವಂತೆ 249 ರನ್ ಪೇರಿಸಿ ವಿಜಯಿಯಾಯಿತು.
ಈ ಗೆಲುವಿನಿಂದ ನ್ಯೂಜಿಲ್ಯಾಂಡ್ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಸರಣಿಯ ಇನ್ನೆರಡು ಪಂದ್ಯಗಳು ಡಿ. 23 ಮತ್ತು 26ರಂದು ಕ್ರೈಸ್ಟ್ ಚರ್ಚ್‌ನಲ್ಲಿ ನಡೆಯಲಿದೆ. ಆಬಳಿಕ ಮೂರು ಪಂದ್ಯಗಳ ಟ್ವೆಂಟಿ20 ಸರಣಿ ನಡೆಯಲಿದೆ.
ಲೂವಿಸ್ ಅರ್ಧಶತಕ
ಇನ್ನಿಂಗ್ಸ್ ಆರಂಭಿಸಿದ ಕ್ರಿಸ್ ಗೇಲ್ ಮತ್ತು ಎವಿನ್ ಲೂವಿಸ್ ಮೊದಲ ವಿಕೆಟಿಗೆ 40 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಆಬಳಿಕ ಒಂದು ರನ್ನಿನ ಅಂತರದಲ್ಲಿ ಗೇಲ್‌ವುತ್ತು ಹೋಪ್ ಅವರ ವಿಕೆಟನ್ನು ಕಳೆದು ಕೊಂಡ ವಿಂಡೀಸ್ ಆಘಾತಕ್ಕೆ ಸಿಲುಕಿತು. ಲೂವಿಸ್ ಮತ್ತು ಹೆಟ್‌ಮೇಯರ್ ಆಧ ರಿಸುವ ಪ್ರಯತ್ನ ಮುಂದುವರಿಸಿದರು. ಮೂರನೇ ವಿಕೆಟಿಗೆ ಅವರಿಬ್ಬರು 62 ರನ್ ಪೇರಿಸಿದರು. ಹೆಟ್‌ಮೇಯರ್ ವಿಕೆಟನ್ನು ಆ್ಯಸ್ಟಲ್ ಹಾರಿಸಿದರು.
ಲೂವಿಸ್ ಮತ್ತು ರೋಮನ್ ಪೊವೆಲ್ ಅರ್ಧಶತಕ ಸಿಡಿಸಿದ್ದರಿಂದ ತಂಡ ಸಾಧಾರಣ ಮೊತ್ತ ಪೇರಿಸುವಂತಾಯಿತು. ಅವರಿಬ್ಬರ ವಿಕೆಟ್ ಕಿತ್ತ ಬ್ರೇಸ್‌ವೆಲ್ ಒಟ್ಟಾರೆ 55 ರನ್ನಿಗೆ 4 ವಿಕೆಟ ಕಿತ್ತು ಮಿಂಚಿದರು. ಲೂವಿಸ್ 76 ಮತ್ತು ಪೊವೆಲ್ 59 ರನ್ ಹೊಡೆದರು.
ಗೆಲ್ಲಲು 249 ರನ್ ಗಳಿಸುವ ಸವಾಲು ಪಡೆದ ನ್ಯೂಜಿಲ್ಯಾಂಡ್ ಉತ್ತಮ ಆರಂಭ ಪಡೆಯಿತು. ಇನ್ನಿಂಗ್ಸ್ ಆರಂಭಿಸಿದ ಜಾರ್ಜ್ ವರ್ಕರ್ ಮತ್ತು ಕಾಲಿನ್ ಮುನ್ರೊ ಮೊದಲ ವಿಕೆಟಿಗೆ 108 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡದ ಗೆಲುವಿನ ಸಾಧ್ಯತೆಯನ್ನು ತೆರೆದಿಟ್ಟರು. ಇವರಿಬ್ಬರು 10 ರನ್ ಅಂತರದಲ್ಲಿ ಪೆವಿಲಿಯನ್ ಸೇರಿಕೊಂಡ ಬಳಿಕ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟಯ್ಲರ್ ಮೂರನೇ ವಿಕೆಟಿಗೆ 67 ರನ್ ಪೇರಿಸಿ ತಂಡವನ್ನು ಸುಸ್ಥಿತಿಗೆ ತಲುಪಿಸಿದರು.
ಅಗ್ರ ಕ್ರಮಾಂಕದ ನಾಲ್ವರು ಆಟಗಾರ ರಾದ ವರ್ಕರ್ 57, ಮುನ್ರೊ 49, ವಿಲಿಯಮ್ಸನ್ 38 ಮತ್ತು ರಾಸ್ ಟಯ್ಲರ್ 49 ರನ್ ಗಳಿಸಿದರು. ಇದರಿಂದ ನ್ಯೂಜಿಲ್ಯಾಂಡ್ ಸುಲಭವಾಗಿ ಗೆಲುವು ಸಾಧಿಸುವಂತಾಯಿತು,
ಸಂಕ್ಷಿಪ್ತ ಸ್ಕೋರು
ವೆಸ್ಟ್‌ಇಂಡೀಸ್ 9 ವಿಕೆಟಿಗೆ 248 (ಎವಿನ್ ಲೂವಿಸ್ 76, ಗೇಲ್ 22, ಹೆಟ್‌ಮೇಯರ್ 29, ಪೊವೆಲ್ 59, ಬ್ರೇಸ್‌ವೆಲ್ 55ಕ್ಕೆ 4, ಆ್ಯಸ್ಟಲ್ 33ಕ್ಕೆ 3, ಫೆರ್ಗ್ಯುಸನ 49ಕ್ಕೆ 2); ನ್ಯೂಜಿಲ್ಯಾಂಡ್ 46 ಓವರ್‌ಗಳಲ್ಲಿ 5 ವಿಕೆಟಿಗೆ 249 (ವರ್ಕರ್ 57, ಮುನ್ರೊ 49, ವಿಲಿಯಮ್ಸನ್ 38, ರಾಸ್ ಟಯ್ಲರ್ 49, ಹೋಲ್ಡರ್ 52ಕ್ಕೆ 2, ನರ್ಸ್ 55ಕ್ಕೆ 2). ಪಂದ್ಯಶ್ರೇಷ್ಠ: ಡಗ್ ಬ್ರೇಸ್‌ವೆಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.