ಭಾರತ ಸ್ಪಿನ್‌ಗೆ ಬಸವಳಿದ ಲಂಕಾ
Team Udayavani, Dec 21, 2017, 9:00 AM IST
ಕಟಕ್: ಯಜುವೇಂದ್ರ ಚಾಹಲ್ ಅವರ ಮಾರಕ ದಾಳಿಯ ನೆರವಿನಿಂದ ಭಾರತ ತಂಡವು ಶ್ರೀಲಂಕಾ ತಂಡದೆದುರು ಬುಧವಾರ ನಡೆದ ಟ್ವೆಂಟಿ20 ಸರಣಿಯ ಮೊದಲ ಪಂದ್ಯದಲ್ಲಿ 93 ರನ್ನುಗಳಿಂದ ಗೆಲುವು ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ ತಂಡವು ಕೆಎಲ್ ರಾಹುಲ್ ಅವರ ಉತ್ತಮ ಆಟದಿಂದಾಗಿ 3 ವಿಕೆಟಿಗೆ 180 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಚಾಹಲ್ ಅವರ ಮಾರಕ ದಾಳಿಗೆ ಕುಸಿದ ಶ್ರೀಲಂಕಾ ತಂಡವು 16 ಓವರ್‌ಗಳಲ್ಲಿ ಕೇವಲ 87 ರನ್ನಿಗೆ ಆಲೌಟಾಗಿ ಸಂಪೂರ್ಣ ನೆಲಕಚ್ಚಿತು. ಅಗ್ರ ಕ್ರಮಾಂಕದ ಮೂವರ ಸಹಿತ ದುಷ್ಮಂತ ಚಮೀರ ಮಾತ್ರ ಎರಡಂಕೆಯ ಮೊತ್ತ ಗಳಿಸಿದರು. 23 ರನ್ ಗಳಿಸಿದ ಉಪುಲ್ ತರಂಗ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಮಾರಕ ದಾಳಿ ಸಂಘಟಿಸಿದ ಚಾಹಲ್ ತನ್ನ 4 ಓವರ್‌ಗಳ ದಾಳಿಯಲ್ಲಿ 23 ರನ್ನಿಗೆ 4 ವಿಕೆಟ್ ಕಿತ್ತು ಮಿಂಚಿದರು. ಹಾರ್ದಿಕ್ ಪಾಂಡ್ಯ 3 ಮತ್ತು ಕುಲದೀಪ್ ಯಾದವ್ 2 ವಿಕೆಟ್ ಕಿತ್ತರು.
ಈ ಮೊದಲು ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ ತಂಡವು ಭರ್ಜರಿಯಾಗಿ ಆಟ ಆರಂಭಿಸಿತು. ಏಕದಿನ ಸರಣಿಯ ಹೀರೊ ರೋಹಿತ್ ಮತ್ತು ಧವನ್ ಬದಲಿಗೆ ತಂಡಕ್ಕೆ ಆಯ್ಕೆಯಾದ ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಿ ಮೊದಲ ವಿಕೆಟಿಗೆ 38 ರನ್ ಪೇರಿಸಿದರು. ರೋಹಿತ್ 17 ರನ್ ಗಳಿಸಿ ಔಟಾದರೆ ರಾಹುಲ್ ಆಕರ್ಷಕ ಹೊಡೆತಗಳಿಂದ ರನ್‌ವೇಗ ಹೆಚ್ಚಿಸಲು ಪ್ರಯತ್ನಿಸಿದರು.
ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಶ್ರೀಲಂಕಾ ದಾಳಿಯನ್ನು ದಿಟ್ಟವಾಗಿ ಎದುರಿಸಿ ಎರಡನೇ ವಿಕೆಟಿಗೆ 63 ರನ್ ಪೇರಿಸಿದರು. ಎಸೆತಕ್ಕೊಂದರಂತೆ ರನ್ ಗಳಿಸಿದ ಅಯ್ಯರ್ 24 ರನ್ ಗಳಿಸಿ ಪ್ರದೀಪ್‌ಗೆ ವಿಕೆಟ್ ಒಪ್ಪಿಸಿದರು. ಸ್ವಲ್ಪ ಹೊತ್ತಿನಲ್ಲಿ 61 ರನ್ ಗಳಿಸಿದ ರಾಹುಲ್ ಔಟಾದರು. 48 ಎಸೆತ ಎದುರಿಸಿದ ಅವರು 7 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದರು. ರಾಹುಲ್ ಔಟಾದ ಬಳಿಕ ರನ್‌ವೇಗಕ್ಕೆ ಕಡಿವಾಣ ಬಿತ್ತು. ಆದರೆ ಅಂತಿಮ ಹಂತದಲ್ಲಿ ಧೋನಿ ಮತ್ತು ಮನೀಷ್ ಪಾಂಡೆ ಬಿರುಸಿನ ಆಟವಾಡಿದ್ದರಿಂದ ಭಾರತದ ಮೊತ್ತ 180ರವರೆಗೆ ತಲುಪಿತು. ಧೋನಿ 39 ಮತ್ತು ಪಾಂಡೆ 32 ರನ್ ಗಳಿಸಿ ಅಜೇಯರಾಗಿ ಉಳಿದರು.
ಶ್ರೀಲಂಕಾ ತಂಡದಲ್ಲಿ ನಾಲ್ಕು ಬದಲಾವಣೆ: ಮೊದಲ ಟ್ವೆಂಟಿ20 ಪಂದ್ಯಕ್ಕಾಗಿ ಶ್ರೀಲಂಕಾ ನಾಲ್ಕು ಬದಲಾವಣೆ ಮಾಡಿ ಕೊಂಡಿದೆ. ವಿಶ್ವ ಫೆರ್ನಾಂಡೊ, ದುಷ್ಮಂತ ಚಮೀರ, ಆಲ್‌ರೌಂಡರ್ ದಾಸುನ್ ಶಣಕ ಮತ್ತು ಕುಸಲ್ ಪೆರೆರ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಈ ಮೂಲಕ ವಿಶ್ವ ಫೆರ್ನಾಂಡೊ ಟ್ವೆಂಟಿ20ಗೆ ಪಾದಾರ್ಪಣೆಗೈದರು. ಏಕದಿನ ಕ್ರಿಕೆಟ್ ಕೂಟದಲ್ಲಿ ಆಡಿದ ದನುಷ್ಕ ಗುಣತಿಲಕ, ಸದೀರ ಸಮರವಿಕ್ರಮ, ಸಚಿತ ಪತಿರಣ ಮತ್ತು ಸುರಂಗ ಲಕ್ಮಲ್ ಅವರನ್ನು ಕೈಬಿಡಲಾಗಿದೆ.
ಭಾರತೀಯ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಶಿಖರ್ ಧವನ್ ಮತ್ತು ಭುವನೇಶ್ವರ್ ಕುಮಾರ್ ಬದಲಿಗೆ ಕೆಎಲ್ ರಾಹುಲ್ ಮತ್ತು ಜಯದೇವ್ ಉನಾದ್ಕತ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಭಾರತ: ರೋಹಿತ್ ಶರ್ಮ (ನಾಯಕ), ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ಮನೀಷ್ ಪಾಂಡೆ, ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ಜಯದೇವ್ ಉನಾದ್ಕತ್, ಜಸ್‌ಪ್ರೀತ್ ಬುಮ್ರಾ, ಯುಜುವೇಂದ್ರ ಚಾಹಲ್
ಶ್ರೀಲಂಕಾ: ಉಪುಲ್ ತರಂಗ, ನಿರೋಷನ್ ಡಿಕ್ವೆಲ್ಲ, ಕುಸಲ್ ಪೆರೆರ, ಏಂಜೆಲೊ ಮ್ಯಾಥ್ಯೂಸ್, ಅಸೇಲ ಗುಣರತ್ನೆ, ತಿಸರ ಪೆರೆರ (ನಾಯಕ), ದಾಸುನ್ ಶಣಕ, ಅಖೀಲ ಧನಂಜಯ, ವಿಶ್ವ ಫೆರ್ನಾಂಡೊ, ದುಷ್ಮಂತ ಚಮೀರ, ನುವನ್ ಪ್ರದೀಪ್.
ಸ್ಕೋರ್‌ಪಟ್ಟಿ
ಭಾರತ
ರೋಹಿತ್ ಶರ್ಮ ಸಿ ಚಮೀರ ಬಿ ಮ್ಯಾಥ್ಯೂಸ್ 17
ಕೆಎಲ್ ರಾಹುಲ್ ಬಿ ತಿಸರ ಪೆರೆರ 61
ಶ್ರೇಯಸ್ ಅಯ್ಯರ್ ಸಿ ಡಿಕ್ವೆಲ್ವ ಬಿ ಪ್ರದೀಪ್ 24
ಎಂಎಸ್ ಧೋನಿ ಔಟಾಗದೆ 39
ಮನೀಷ್ ಪಾಂಡೆ ಔಟಾಗದೆ 32
ಇತರ: 7
ಒಟ್ಟು (20 ಓವರ್‌ಗಳಲ್ಲಿ 3 ವಿಕೆಟಿಗೆ) 180
ವಿಕೆಟ್ ಪತನ: 1-38, 3-101, 3-112
ಬೌಲಿಂಗ್:
ವಿಶ್ವ ಫೆರ್ನಾಂಡೊ 2-0-16-0
ಅಖೀಲ ಧನಂಜಯ 4-0-30-0
ದುಷ್ಮಂತ ಚಮೀರ 3-0-38-0
ಏಂಜೆಲೊ ಮ್ಯಾಥ್ಯೂಸ್ 2-0-18-1
ತಿಸರ ಪೆರೆರ 4-0-37-1
ನುವನ್ ಪ್ರದೀಪ್ 4-0-38-1
ಶ್ರೀಲಂಕಾ
ನಿರೋಷನ ಡಿಕ್ವೆಲ್ಲ ಸಿ ರಾಹುಲ್ ಬಿ ಉನಾದ್ಕತ್ 13
ಉಪುಲ್ ತರಂಗ ಸಿ ಧೋನಿ ಬಿ ಚಾಹಲ್ 23
ಕುಸಲ್ ಪೆರೆರ ಸಿ ಧೋನಿ ಬಿ ಕುಲದೀಪ್ 19
ಏಂಜೆಲೊ ಮ್ಯಾಥ್ಯೂಸ್ ಸಿ ಮತ್ತು ಬಿ ಚಾಹಲ್ 1
ಅಸೇಲ ಗುಣರತ್ನೆ ಸ್ಟಂಪ್ಡ್ ಧೋನಿ ಬಿ ಚಾಹಲ್ 4
ದಾಸುನ್ ಶಣಕ ಸಿ ಪಾಂಡ್ಯ ಬಿ ಕುಲದೀಪ್ 1
ತಿಸರ ಪೆರೆರ ಸ್ಟಂಪ್ಡ್ ಧೋನಿ ಬಿ ಚಾಹಲ್ 3
ಅಖೀಲ ಧನಂಜಯ ಸಿ ಮತ್ತು ಬಿ ಪಾಂಡ್ಯ 7
ದುಷ್ಮಂತ ಚಮೀರ ಸಿ ರಾಹುಲ್ ಬಿ ಪಾಂಡ್ಯ 12
ವಿಶ್ವ ಫೆರ್ನಾಂಡೊ ಸಿ ಉನಾದ್ಕತ್ ಬಿ ಪಾಂಡ್ಯ 2
ನುವನ್ ಪ್ರದೀಪ್ ಔಟಾಗದೆ 0
ಇತರ: 2
ಒಟ್ಟು (16 ಓವರ್‌ಗಳಲ್ಲಿ ಆಲೌಟ್) 87
ವಿಕೆಟ್ ಪತನ: 1-15, 2-39, 3-46, 4-55, 5-58, 6-62, 7-70, 8-76, 9-85
ಬೌಲಿಂಗ್:
ಹಾರ್ದಿಕ್ ಪಾಂಡ್ಯ 4-0-29-3
ಜಯದೇವ್ ಉನಾದ್ಕತ್ 2-0-7-1
ಯಜುವೇಂದ್ರ ಚಾಹಲ್ 4-0-23-4
ಜಸ್‌ಪ್ರೀತ್ ಬುಮ್ರಾ 2-0-10-0
ಕುಲದೀಪ್ ಯಾದವ್ 4-0-18-2
ಪಂದ್ಯಶ್ರೇಷ್ಠ: ಯಜುವೇಂದ್ರ ಚಾಹಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jaiswal: ಚಾಂಪಿಯನ್ಸ್ ಟ್ರೋಫಿಗೆ ಯಶಸ್ವಿ ಜೈಸ್ವಾಲ್; ಇಂಗ್ಲೆಂಡ್ ಸರಣಿಯಲ್ಲೇ ಪದಾರ್ಪಣೆ?
Yuzi Chahal: ಡಿವೋರ್ಸ್ ಸುದ್ದಿಯ ನಡುವೆ ಬೇರೆ ಯುವತಿ ಜತೆ ಕಾಣಿಸಿಕೊಂಡ ಚಾಹಲ್; ಯಾರೀಕೆ?
Team India: ಕೆಎಲ್, ಪಾಂಡ್ಯ, ಗಿಲ್ ಅಲ್ಲ.., ಚಾಂಪಿಯನ್ಸ್ ಟ್ರೋಫಿಗೆ ಈತನೇ ಉಪ ನಾಯಕ
ICC; ಟು-ಟೈರ್ ಟೆಸ್ಟ್ ನಿಯಮಕ್ಕೆ ಸಿದ್ಧತೆ? ಏನಿದು ಸಿಸ್ಟಮ್?
Malaysia Super 1000 Badminton: ಯಶಸ್ವಿ ಆರಂಭಕ್ಕೆ ಮೊದಲ ಮೆಟ್ಟಿಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಮಾದಕ ವಸ್ತು ಸೇವನೆ ಆರೋಪ: ಯುವಕ ವಶಕ್ಕೆ
Writer’s audition: ಬರಹಗಾರರಾಗುವ ನಿಮ್ಮ ಕನಸನ್ನು ನನಸಾಗಿಸಲು ಇಲ್ಲಿದೆ ಉತ್ತಮ ವೇದಿಕೆ
Malpe: ಹೊಡೆದಾಟ ಪ್ರಕರಣ: ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ
Ayodhya: ಕನ್ನಡಕದಲ್ಲಿ ರಹಸ್ಯ ಕ್ಯಾಮರಾ ಬಳಸಿ ರಾಮಮಂದಿರದ ಒಳದೃಶ್ಯಗಳ ಸೆರೆಹಿಡಿದ ಯುವಕ!
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.