ತುಳುನಾಡೋಚ್ಚಯಕ್ಕೆ ಪಿಲಿಕುಳ ಸಂಸ್ಕೃತಿ ಗ್ರಾಮ ಸಿದ್ಧ
Team Udayavani, Dec 21, 2017, 9:50 AM IST
ಮಹಾನಗರ : ಸಾಂಪ್ರದಾಯಿಕ, ಸಾಂಸ್ಕೃತಿಕ ಆಚರಣೆಗಳನ್ನು ತಿಳಿಸಿಕೊಡುವುದ ರೊಂದಿಗೆ ಜನಮೈತ್ರಿ ಬೆಸುಗೆ, ಈಗಷ್ಟೇ ರಂಗೇರು ತ್ತಿರುವ ಕೋಸ್ಟಲ್‌ವುಡ್ ಸಿನೆಮಾ ಹಬ್ಬಕ್ಕೆ ವೇದಿಕೆ, ತುಳು ನೆಲದ ಶ್ರೀಮಂತಿಕೆ ಸಾರಲು ಭರದ ಸಿದ್ಧತೆ… ಇದು ಡಿ. 23, 24ರಂದು ಪಿಲಿಕುಳದಲ್ಲಿ ನಡೆಯುವ ತುಳುನಾಡೋಚ್ಚಯದ ಹೈಲೈಟ್ಸ್.
ವಿಶ್ವ ತುಳುವೆರೆ ಆಯನೊ ಕೂಟ ಹಾಗೂ ಡಾ| ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕಾರ್ಯಕ್ರಮ ಜರಗಲಿದೆ. ‘ಕರಾವಳಿ ಜಿಲ್ಲೆಗಳ ಪರಿಸ್ಥಿತಿಯಲ್ಲಿ ಭಾವೈಕ್ಯವನ್ನುಂಟು ಮಾಡುವುದು ಮತ್ತು ತುಳು ಭಾಷಾ ಸಂಸ್ಕೃತಿಯನ್ನು ಬಲಪಡಿಸುವುದು ಕಾರ್ಯಕ್ರಮದ ಉದ್ದೇಶ’ ಎಂದು ತುಳುನಾಡೋಚ್ಚಯ ಗುರ್ಕಾರ ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ತಿಳಿಸಿದ್ದಾರೆ.
23ರಂದು ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ, ಅನಂತರ ತುಳುನಾಡಿನ ಸಂಸ್ಕೃತಿ, ಸಂಪ್ರದಾಯವನ್ನು ಬಿಂಬಿಸುವ ಆಹಾರೋತ್ಸವ, ವಸ್ತು ಪ್ರದರ್ಶನ, ಕುಲ ಕಸುಬು, ಪುಸ್ತಕ, ಸಂಸ್ಕೃತಿ, ವ್ಯಾಪಾರ ಮಳಿಗೆ, ಚಿತ್ರ, ಛಾಯಾಚಿತ್ರ, ನಾಡಮದ್ದು, ಯಂತ್ರೋಪಕರಣ, ಪುಷ್ಪೋದ್ಯಾನಗಳ ಪ್ರದರ್ಶನವಿರುತ್ತದೆ.
ತುಳುನಾಡ ಜನಮೈತ್ರಿ ಜನಪದ ಸಿರಿ
ವಾಮಂಜೂರಿನಿಂದ ಪಿಲಿಕುಳದವರೆಗೆ ಬೆಳಗ್ಗೆ 10ಕ್ಕೆ ವಿವಿಧ ಸಮುದಾಯದ ಸಂಸ್ಕೃತಿ, ಉಡುಗೆ-ತೊಡುಗೆ ಪ್ರದರ್ಶನ, ಜನಪದ ಕುಣಿತ, ತುಳುನಾಡಿನ ವಾದ್ಯೋಪಕರಣಗಳ ವಾದನ, ಸ್ತಬ್ಧಚಿತ್ರ, ಗೊಂಬೆಯಾಟ, ಸಿಂಗಾರಿಮೇಳ, ಚೆಂಡೆಮೇಳ, ಪೂಕಾವಡಿ, ಪಂಚವಾದ್ಯಮೇಳ, ನಾನಾ ರಾಜ್ಯಗಳ ಜನಪದ ಪ್ರದರ್ಶನದೊಂದಿಗೆ ತುಳುನಾಡ ಜನಮೈತ್ರಿ ಜನಪದ ಸಿರಿ ಮೆರವಣಿಗೆ ನಡೆಯಲಿದೆ.
ದೇಶ-ವಿದೇಶದ ತುಳುವರನ್ನು ಒಂದೇ ವೇದಿಕೆಗೆ ತರುವ ‘ತುಳುವರ ಮಿನದನ’ವಿದೆ. ‘ದ್ರಾವಿಡೋತ್ಸವ’ದಲ್ಲಿ ತುಳು, ಕನ್ನಡ, ಮಲಯಾಳ, ತಮಿಳು, ತೆಲುಗು ಭಾಷೆಗಳ ಜನಪದ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಬಳಿಕ ಸುಮನಸ ಕೊಡವೂರು ತಂಡದಿಂದ ‘ಕೋಟಿಚೆನ್ನಯೆ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಎಸಳ್‌ದ ತಾಮರೆ..
24ರಂದು ದೈವಾರಾಧನೆಯನ್ನು ಪರಿಚಯಿಸುವ ‘ದೈವಾರಾಧಕೆರೆ ಕೂಟ’ ಕಾರ್ಯಕ್ರಮವಿದೆ. ಅನಂತರ ತುಳುಭಾಷಾ ಪ್ರಾದೇಶಿಕ ವೈವಿಧ್ಯಗಳ ಬಗ್ಗೆ ‘ಎಸಳ್‌ದ ತಾಮರೆ’ ವಿಚಾರಗೋಷ್ಠಿಯಿದೆ. ಕುಂದಾಪುರ, ಶಿವಳ್ಳಿ, ಉಡುಪಿ, ಮೂಡಬಿದಿರೆ, ಬೆಳ್ತಂಗಡಿ, ಮಂಗಳೂರು, ಬಂಟ್ವಾಳ, ಸುಳ್ಯ, ಮಡಿಕೇರಿ, ಮಹಾರಾಷ್ಟ್ರ, ಕಾಸರಗೋಡು ಭಾಗಗಳಲ್ಲಿ ತಾವರೆಯ ಎಸಳಿನಂತೆ ಅರಳಿರುವ ತುಳು ಭಾಷೆಯ ಬಗ್ಗೆ ವಿಚಾರ ವಿಮರ್ಶೆ ನಡೆಯುತ್ತದೆ.
8ನೇ ಪರಿಚ್ಛೇದಕ್ಕೆ ತುಳು: ಅಭಿಪ್ರಾಯ ಅವಲೋಕನ
ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ವಿಚಾರಗೋಷ್ಠಿ ಹಾಗೂ ಅಭಿಪ್ರಾಯ ಅವಲೋಕನ ಜರಗಲಿದೆ. ತುಳು ಸಾಹಿತ್ಯ ಐಸಿರಿ, ಪ್ರಾಚೀನ ತುಳುನಾಡ ಪರಂಪರಾಗತ ತುಳುನಾಡ ಕಳರಿ ಕುರಿತು ಪ್ರಾತ್ಯಕ್ಷಿಕೆ, ಪಾಡªನ ಮೇಳ, ತುಳುಲಿಪಿ ಪ್ರಾತ್ಯಕ್ಷಿಕೆ, ಕಲಿಕಾ ಮಾಹಿತಿ ಮುಂತಾದವು ಕಾರ್ಯಕ್ರಮದ ಹೈಲೈಟ್ಸ್. ಎರಡೂ ದಿನಗಳಲ್ಲಿ ತುಳುನಾಡಿನ ಸಾಂಸ್ಕೃತಿಕ ಸಿರಿವಂತಿಕೆ ಪ್ರದರ್ಶನವೂ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.