ಬಿಜೆಪಿ, ಜೆಡಿಎಸ್‌ ಹೋರಾಟಗಾರರ ಬಂದ್‌ಗೆ ಕೈ ಕಿಡಿ


Team Udayavani, Dec 21, 2017, 1:18 PM IST

chikk-2.jpg

ಚಿಕ್ಕಬಳ್ಳಾಪುರ: ಬಾಗಿಲು ತೆರೆಯದ ವರ್ತಕರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಬಿತ್ತು ಕೊಳಚೆ ನೀರು. ಬಂದ್‌ ವಿಫ‌ಲಗೊಳಿಲು ಕೈ ಕಾರ್ಯಕರ್ತರ ಕಾರ್ಯಾಚರಣೆ, ಪ್ರತಿಭಟನಕಾರರ ನಿಯಂತ್ರಣಕ್ಕೆ ಖಾಕಿ ಪಡೆಯ ಹರಸಾಹಸ. ಗುಂಪು ಘರ್ಷಣೆ ತಪ್ಪಿಸಲು ಲಘು ಲಾರಿ ಪ್ರಹಾರ, ಪೊಲೀಸ್‌ ಬಲ ಪ್ರಯೋಗಿಸಿ 60 ಮಂದಿ ಹೋರಾಟಗಾರರ ಬಂಧನ. ಬಂದ್‌ ಬಿಸಿ ಮಧ್ಯಾಹ್ನಕ್ಕೆ ಜಿಲ್ಲಾ ತಿಳಿ.. ನಗರದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಮತ್ತಿತರ ಪ್ರಗತಿಪರ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಬಂದ್‌ ವೇಳೆ ಕಂಡು ಬಂದ ಪ್ರಮುಖ ದೃಶ್ಯವಾಳಿಗಳು ಇವು.

ಬಂದ್‌ಗೆ ವರ್ತಕರು ತಮ್ಮ ಅಂಗಡಿಗಳನ್ನು ಮುಚ್ಚಿ ಬೆಂಬಲ ಸೂಚಿಸಿದರು. ಖಾಸಗಿ ಶಾಲಾ, ಕಾಲೇಜುಗಳು ಬಂದ್‌ ಹಿನ್ನೆಲೆಯಲ್ಲಿ ಮೊದಲೇ ರಜೆ ಘೋಷಿಸಿದ್ದವು. ಖಾಸಗಿ ಬಸ್‌ ಸಂಚಾರ ಅಲ್ಪಮಟ್ಟಿಗೆ ಇದ್ದರೂ ಪೊಲೀಸ್‌ ಬಂದೋಬಸ್ತ್ನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಖಾಕಿ ಕಾವಲಿನಲ್ಲಿ ಸುಗಮವಾಗಿ ನಡೆಯಿತು.

ಆಟೋ, ಕಾರು ದ್ವಿಚಕ್ರವಾಹನಗಳ ಸಂಚಾರ ಮಾಮೂಲಿಯಾಗಿತ್ತು. ಬಂದ್‌ ಪರಿಣಾಮ ನಗರದ ರಸ್ತೆಗಳಲ್ಲಿ ಜನ ವಿರಳವಾಗಿ ಕಂಡು ಬಂದರು. ಬೆಳಗ್ಗೆ ಬಾಗಿಲು ಮುಚ್ಚಿದ್ದ ಹೋಟೆಲ್‌, ಪೆಟ್ರೋಲ್‌ ಬಂಕ್‌, ಸಿನಿಮಾ ಮಂದಿರಗಳು ಮಧ್ಯಾಹ್ನದ ನಂತರ ಎಂದಿನಂತೆ ಕಾರ್ಯನಿರ್ವಹಿಸಿದವು.
 
ಬಂದ್‌ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನ ಸೇರಿದಂತೆ ನಗರದ ಸರ್ಕಾರಿ ಕಚೇರಿಗಳಲ್ಲಿ ಜನದಟ್ಟಣೆ ಕಾಣಲಿಲ್ಲ. ಅಧಿಕಾರಿ, ಸಿಬ್ಬಂದಿಯ ಹಾಜರಾತಿ ಕಡಿಮೆ ಇತ್ತು. ಕೆಲ ಖಾಸಗಿ ಬಸ್‌ ಗಳು ಒಳಗೆ ಬಾರದ ನಗರದ ಹೊರ ಭಾಗದಲ್ಲಿ ಪ್ರಯಾಣಿಕರನ್ನು ಇಳಿಸಿದ್ದರಿಂದ ಮಹಿಳೆಯರು, ವೃದ್ಧರು, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿಯೆ ನಗರ ಪ್ರವೇಶಿಸಿದರು.

ನಸುಕಿನಲ್ಲಿ ಪಂಜಿನ ಮೆರವಣಿಗೆ: ಬಂದ್‌ ಬೆಂಬಲಿಸಿ ವಿವಿಧ ಪ್ರಗತಿಪರ ಸಂಘಟನೆಗಳು, ರೈತಪರ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಬೆಳಗ್ಗೆ 5 ಗಂಟೆಯ ನಸುಕಿನಲ್ಲಿಯೇ ರಸ್ತೆಗೆ ಇಳಿದು ಪಂಜಿನ ಮೆರವಣಿಗೆ ನಡೆಸುವ ಮೂಲಕ ಜಿಲ್ಲೆಗೆ ಕೊಳಚೆ ನೀರು ಹರಿಸುವುದನ್ನು ಖಂಡಿಸಿದರು.

ಈ ವೇಳೆ ಕರವೇ ಯುವ ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಕೆಲಕಾಲ ಅರಬೆತ್ತಲೆಯಾಗಿ ಪ್ರತಿಭಟಿಸಿದರು. ಬಳಿಕ ನಗರದ ಅಂಬೇಡ್ಕರ್‌ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಜಿಲ್ಲೆಗೆ ಕೊಳಚೆ ನೀರು ಬೇಡವೇ ಬೇಡ ಎಂಬ ಘೋಷಣೆಗಳೊಂದಿಗೆ ಸರ್ಕಾರದ ವಿರುದ್ಧಿಧಿಕ್ಕಾರ ಕೂಗಿದರು.

7 ಗಂಟೆ ಕೈ ಕಾರ್ಯಕರ್ತರ ಎಂಟ್ರಿ: ಅತ್ತ ಅಂಬೇಡ್ಕರ್‌ ವೃತ್ತದಲ್ಲಿ ಕೊಳಚೆ ನೀರು ಯೋಜನೆ ವಿರುದ್ಧ ಪ್ರಗತಿಪರ ಪರಿಸರ ವೇದಿಕೆ ಚಿಂತಕರು, ಶಾಶ್ವತ ನೀರಾವರಿ ಹೋರಾಟ ಸಮಿತಿ ರೈತಪರ ಹಾಗೂ ಕನ್ನಡಪರ ಸಂಘಟನೆಗಳ ನೂರಾರು ಕಾರ್ಯಕರ್ತರು ರಸ್ತೆಯಲ್ಲಿ ಕೂತು ಧರಣಿ ನಡೆಸಿದರೆ ಇತ್ತ ಕೆಲ ಕಾಂಗ್ರೆಸ್‌ ಕಾರ್ಯಕರ್ತರ ಗುಂಪು ದಿಢೀರ್‌ನೆ ಅಂಬೇಡ್ಕರ್‌ ವೃತ್ತಕ್ಕೆ ಬೈಕ್‌ಗಳ ಮೂಲಕ ಆಗಮಿಸಿ ಬಂದ್‌ಗೆ ಅವಕಾಶ ನೀಡಬಾರದೆಂದರು.

ಪ್ರತಿಭಟನೆಯಲ್ಲಿ ತೊಡಗಿದ್ದ ಜೆಡಿಎಸ್‌, ಬಿಜೆಪಿ ಸೇರಿದಂತೆ ನೀರಾವರಿ ಹೋರಾಟಗಾರರ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಕೆಲಕಾಲ ಮಾತಿನಚಕಮಕಿ ನಡೆಯಿತು. 

60ಕ್ಕೂ ಹೆಚ್ಚು ಮಂದಿ ಹೋರಾಟಗಾರರ ಬಂಧನ
ಬೆಳಗ್ಗೆ 11 ಗಂಟೆ ಸಮಯದಲ್ಲಿ ನಗರದ ಹಳೆ ಎಸ್ಪಿಕಚೇರಿ ವೃತ್ತದ ಬಳಿ ಆಗಮಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತೀಕರೆಡ್ಡಿ ಬಂದ್‌ ಆಚರಣೆ ಕೈ ಬಿಡುವಂತೆ ಪ್ರತಿಭಟನಕಾರರ ಮನವೊಲಿಸುವ ಪ್ರಯತ್ನ ನಡೆಸಿದರು. ಆದರೆ, ಅದಕ್ಕೆ ಒಪ್ಪದ ಪ್ರತಿಭಟನಕಾರರು ನಾವು ಶಾಂತಿ ರೀತಿಯಲ್ಲಿ ಹೋರಾಟ ನಡೆಸುತ್ತಿದ್ದೇವೆಂದರು. ಈ ವೇಳೆ ಎಸ್ಪಿ ಹಾಗೂ ಹೋರಾಟಗಾರರ ನಡುವೆ ಮಾತಿನಚಕಮಕಿ ನಡೆಯಿತು. ಬಳಿಕ ಪೊಲೀಸರು ಜೆಡಿಎಸ್‌ ಜಿಲ್ಲಾಧ್ಯಕ್ಷ ಕೆ.ವಿ.ನಾಗರಾಜ್‌, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ನೀರಾವರಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಆರ್‌.ಆಂಜನೇಯರೆಡ್ಡಿ, ಪ್ರಗತಿಪರ ಪರಿಸರ ಚಿಂತಕರ ವೇದಿಕೆ ಸಂಚಾಲಕ ಎ.ಟಿ.ಕೃಷ್ಣನ್‌, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಂ.ಮಂಜುನಾಥ, ರೈತ ಸಂಘದ ಜಿಲ್ಲಾಧ್ಯಕ್ಷ ಸುಷ್ಮಾ ಶ್ರೀನಿವಾಸ್‌ ಸೇರಿದಂತೆ ಸುಮಾರು 60 ಕ್ಕೂ ಹೆಚ್ಚು ಹೋರಾಟಗಾರರನ್ನು ಪೊಲೀಸರು ಬಂಧಿಸಿ ಎಸ್ಪಿ ಕಚೇರಿ ಬಳಿ ಕರೆದೊಯ್ದು ಸಂಜೆ ನಂತರ ಬಿಡುಗಡೆ ಮಾಡಿದರು.

ಗುಂಪು ಚದುರಿಸಲು ಲಾಠಿ ಏಟು 
ಅಂಬೇಡ್ಕರ್‌ ವೃತ್ತದಲ್ಲಿ ಬಂದ್‌ ಬೆಂಬಲಿಸಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ, ಜೆಡಿಎಸ್‌, ನೀರಾವರಿ ಹೋರಾಟಗಾರರ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ತೀವ್ರ ಮಾತಿನಚಕಿಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುವುದನ್ನು ಅರಿತ ಪೊಲೀಸರು ಲಾಠಿ ಪ್ರಹಾರ ನಡೆಸಿ ಎರಡು ಗುಂಪುಗಳನ್ನು ಚದುರಿಸಬೇಕಾಯಿತು. ಈ ವೇಳೆ ರೈತ ಸಂಘದ ಮುಖಂಡ ಬಾಗೇಪಲ್ಲಿ ಬಿ.ನಾರಾಯಣಸ್ವಾಮಿ ಕಾಲಿಗೆ ಪೆಟ್ಟು ಬಿದಿದ್ದರೆ ನಿವೃತ್ತ ಶಿಕ್ಷಕ ವೆಂಕಟೇಶಪ್ಪ ತಲೆಗೆ ಗಂಭೀರ ಪೆಟ್ಟು ಬಿದ್ದಿದೆ. ತಕ್ಷಣ ಇಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ವೆಂಕಟೇಶಪ್ಪ ತಲೆಗೆ ಆರು ಹೊಲಿಗೆ ಬಿದ್ದಿದೆ. 

ಬಂದ್‌ ವಿರೋಧಿಸಿ ರಸ್ತೆಗೆ ಇಳಿದ ಶಾಸಕ: ರಾಜ್ಯ ಸರ್ಕಾರ ಜಿಲ್ಲೆಗೆ ರೂಪಿಸಿರುವ ಹೆಬ್ಟಾಳ, ನಾಗವಾರ ಸಂಸ್ಕರಿತ ಯೋಜನೆ ವಿರುದ್ಧ ಜೆಡಿಎಸ್‌, ಬಿಜೆಪಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳು ಆಚರಿಸಿದ ಬಂದ್‌ ಗೆ ಪ್ರತಿಯಾಗಿ ಕಾಂಗ್ರೆಸ್‌ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಖುದ್ದು ಶಾಸಕ ಡಾ.ಕೆ.ಸುಧಾಕರ್‌ ನಗರದ ಖಾಸಗಿ ಬಸ್‌ ನಿಲ್ದಾಣದ ಬಳಿ ಆಗಮಿಸಿ ಕಾರ್ಯಕರ್ತರಿಗೆ ಸಾಥ್‌ ನೀಡಿದರು. ಈ ವೇಳೆ ನೂರಾರು ಕಾಂಗ್ರೆಸ್‌ ಕಾರ್ಯಕರ್ತರು
ಬಂದ್‌ ಆಚರಿಸುವವರ ವಿರುದ್ಧಧಿಕ್ಕಾರ ಕೂಗಿದರು. ನಮಗೆ ಸಂಸ್ಕರಿತ ನೀರು ಬೇಕೆ ಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದರು. 

ಕೈ ಪಡೆ ಮೇಲೆ ಬಿತ್ತು ಕೊಳಚೆ ನೀರು!: ನಗರದಲ್ಲಿ ಬಂದ್‌ ಆಚರಣೆಗೆ ಅಡ್ಡಿಪಡಿಸಲು ಬಂದ ಕಾಂಗ್ರೆಸ್‌ ಕಾರ್ಯಕರ್ತರ
ಮೇಲೆ ನೀರಾವರಿ ಹೋರಾಟಗಾರರು ಮೊದಲೇ ಬಾಟಲಿಗಳಲ್ಲಿ ಸಂಗ್ರಹಿಸಿ ತುಂಬಿಟ್ಟಿದ್ದ ಕೊಳಚೆ ನೀರನ್ನು ಚೆಲ್ಲಿದ ಘಟನೆ ನಡೆಯಿತು. ನಗರದ ಅಂಬೇಡ್ಕರ್‌ ವೃತ್ತದಲ್ಲಿ ರಸ್ತೆ ತಡೆ ನಡೆಸುತ್ತಿದ್ದ ಹೋರಾಟಗಾರರ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರು ಮುಗಿ ಬೀಳುತ್ತಿದ್ದಂತೆ ಹೋರಾಟಗಾರರು ಕೊಳಚೆ ನೀರು ಚೆಲ್ಲಿದರು. ಈ ವೇಳೆ ಸ್ಥಳದಲ್ಲಿದ್ದ ಎಸ್ಪಿಗೂ ಕೊಳಚೆ ನೀರು ಚೆಲ್ಲಿತು.

ಸ್ಥಳದಲ್ಲಿ ಎಸ್ಪಿ ಜತೆ ಪೊಲೀಸರ ಮೊಕ್ಕಾಂ: ಬಂದ್‌ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತೀಕರೆಡ್ಡಿ ನೇತೃತ್ವದಲ್ಲಿ ಎಲ್ಲೆಡೆ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಉಪ ವಿಭಾಗದ ಸುಮಾರು 500 ಕ್ಕೂ ಹೆಚ್ಚು ಪೊಲೀಸರನ್ನು ಹಾಗೂ ಜಿಲ್ಲಾ ಶಸಸ್ತ್ರ ಮೀಸಲು ಪಡೆಯ 4 ನಾಲ್ಕು ತಂಡಗಳನ್ನು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಬಂದ್‌ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಎಸ್ಪಿ ಕಾರ್ತೀಕರೆಡ್ಡಿ ಪ್ರತಿಭಟನಾ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು.

ಜಾಲತಾಣಗಳ ಮೊರೆ ಹೋದ ಶಾಸಕ ಸುಧಾಕರ್‌
ಹೆೆಬ್ಟಾಳ-ನಾಗವಾರ ವ್ಯಾಲಿ ಯೋಜನೆ ವಿರುದ್ಧ ಹಲವು ಸಂಘಟನೆಗಳು ಬುಧವಾರ ಕರೆ ನೀಡಿದ್ದ ಬಂದ್‌ಗೆ ವಿರುದ್ಧವಾಗಿ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್‌ ಬಂದ್‌ಗೆ ಅಸಹಕಾರ ನೀಡುವಂತೆ ಸಾರ್ವಜನಿಕರನ್ನು ಕೋರುವ ವಿಡಿಯೋ ಚಿತ್ರೀಕರಣ ಮಾಡಿ ಅದನ್ನು ಅವರ ಬೆಂಬಲಿಗರು ಫೇಸ್‌ಬುಕ್‌ ಹಾಗೂ ವಾಟ್ಸ್‌ಆಫ್ಗಳಲ್ಲಿ ಅಪ್‌ಲೋಡ್‌ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಬಂದ್‌ಗೆ ಬೆಂಬಲ ಸೂಚಿಸಿ ಹೋಟೆಲ್‌ ಮಾಲಿಕರು ಹೋಟೆಲ್‌ ಮುಚ್ಚಿದ್ದರಿಂದ ಜಿಲ್ಲಾ ಕೇಂದ್ರಕ್ಕೆ ಹೊರಗಡೆಯಿಂದ ಬಂದಿದ್ದ ನಾಗರಿಕರು ಊಟ, ತಿಂಡಿಗಾಗಿ ಪರದಾಡಬೇಕಾಯಿತು.

ಟಾಪ್ ನ್ಯೂಸ್

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!

Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!

ಸಂಸದ ಡಾ. ಸುಧಾಕರ್‌ ವಿರುದ್ಧ ಏನೂ ಮಾತನಾಡಲ್ಲ: ಪ್ರದೀಪ್‌

MP ಡಾ. ಸುಧಾಕರ್‌ ವಿರುದ್ಧ ಏನೂ ಮಾತನಾಡಲ್ಲ: ಪ್ರದೀಪ್‌

13-bng

Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!

ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ: ಒಬ್ಬ ಮೃತ

Chintamani: ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ; ಒಬ್ಬ ಮೃತ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.