ಶೀತಲ ಘಟಕ ಪ್ರಸ್ತಾವನೆ ಕಡತವೂ ನಾಪತ್ತೆ!
Team Udayavani, Dec 21, 2017, 4:47 PM IST
ಗದಗ: ಕಳೆದ ನಾಲ್ಕು ದಿನಗಳಿಂದ ಉದಯವಾಣಿಯಲ್ಲಿ ಪ್ರಕಟಗೊಳ್ಳುತ್ತಿರುವ ಹೂವಿನಂಥ ಸುದ್ದಿ ಸರಣಿ ವರದಿಯಿಂದ
ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಶೀತಲ ಘಟಕ ಪ್ರಸ್ತಾವನೆ ಕಡತಕ್ಕಾಗಿ ಎರಡು ದಿನಗಳಿಂದ ಹುಡುಕಾಟ ನಡೆದಿದೆಯಾದರೂ ಕಡತ
ಇನ್ನೂ ಸಿಕ್ಕಿಲ್ಲ. ಲಕ್ಕುಂಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಎಸ್‌ಜಿಎಸ್‌ವೈ ಯೋಜನೆಯಡಿ 15 ಲಕ್ಷ ರೂ. ವೆಚ್ಚದಡಿ ಈಗಾಗಲೇ ಹೂ ಮಾರಾಟ ಮಳಿಗೆ ಮತ್ತು ಮಾರುಕಟ್ಟೆ ನಿರ್ಮಿಸಲಾಗಿದೆ. ಮಾರುಕಟ್ಟೆ ಸ್ಥಳ ಶೌಚ ತಾಣವಾಗಿ ಮಾರ್ಪಟ್ಟಿರುವ ಬಗ್ಗೆ ಜನಪ್ರತಿನಿಧಿಗಳು ಕಣ್ತೆರೆಯಬೇಕಿದೆ.
ಹೂ ಮಾರುಕಟ್ಟೆಯಿಂದ ಇಲ್ಲ ಪ್ರಯೋಜನ: ಲಕ್ಷಾಂತರ ರೂ. ಹಣ ಖರ್ಚು ಮಾಡಿ ಹೂ ಮಾರಾಟಗಾರರ ಮಳಿಗೆ ಹಾಗೂ ಮಾರುಕಟ್ಟೆ ನಿರ್ಮಿಸುವಾಗ ಜಿಲ್ಲಾ ಪಂಚಾಯತ್ ಆಗಲಿ, ಗ್ರಾಮ ಪಂಚಾಯತ್ ಆಗಲಿ ಅಥವಾ ಸಂಬಂಧಿಸಿದ ಇಲಾಖೆಯಾಗಲಿ ಹೂ
ಬೆಳೆಗಾರರನ್ನು ಒಂದು ಮಾತೂ ಕೇಳಿಲ್ಲ. ಹಣ ಖರ್ಚಾಗಲಿ ಎಂಬ ಉದ್ದೇಶದಿಂದ ನಿರ್ಮಿಸಿದ ಮಾರುಕಟ್ಟೆ ಸದ್ಯ ನಿಷ್ಪ್ರಯೋಜಕವೇ ಸರಿ. ಕಟ್ಟಿಸಿದ ತಕ್ಷಣ ಅದನ್ನು ನಿರ್ವಹಿಸುವ ಹೊಣೆಯನ್ನು ಅಧಿಕಾರಿ ವರ್ಗಕ್ಕೋ, ಸ್ಥಳೀಯ ಆಡಳಿತಕ್ಕೋ ಅಥವಾ ಸ್ಥಳೀಯರಿಗೋ
ನೀಡಿದ್ದರೆ ಬಹುಶಃ ಕಟ್ಟಡ ಹಾಳಾಗುತ್ತಿರಲಿಲ್ಲ. ಈಗದು ಅಕ್ಷರಶಃ ಶೌಚತಾಣವಾಗಿದೆ. ಅಕ್ರಮ ದಾಸ್ತಾನು ಕೇಂದ್ರವಾಗಿದೆ ಎಂಬುದು
ಸ್ಥಳೀಯರ ಆರೋಪ.
ಇದರಿಂದ ಯಾವುದೇ ಪ್ರಯೋಜನವಿಲ್ಲ. ನಿತ್ಯ ಬಳಸಿದ್ದರೆ ಜನರಲ್ಲೂ ಜಾಗೃತಿ ಬರುತ್ತಿತ್ತು. ಕಟ್ಟಡ ಹಾಳಾಗುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ. ಅದನ್ನು ಹೂ ಬೆಳೆಗಾರರ ಸಂಘದ ಸುಪರ್ಧಿಗೆ ಕೊಟ್ಟರೆ ಉತ್ತಮವಾಗಿ ನಿಭಾಯಿಸಬಹುದು. ಮಳಿಗೆಗಳನ್ನು ಬಾಡಿಗೆ ಕೊಡುವುದರಿಂದ ಆದಾಯವೂ ಬರುತ್ತದೆ. ಬಾಡಿಗೆ ಕಟ್ಟುವವರೂ ಸಹ ಸುತ್ತಮುತ್ತಲಿನ ಪ್ರದೇಶವನ್ನು ಸ್ವತ್ಛವಾಗಿಟ್ಟುಕೊಳ್ಳಲು
ಸಾಧ್ಯ ಎಂಬುದು ಸ್ಥಳೀಯರ ಅಭಿಪ್ರಾಯ.
ಗ್ರಾಮೀಣಾಭಿವೃದ್ಧಿ ಸಚಿವರು ಗಮನಿಸಲಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ. ಪಾಟೀಲ ಅವರ ತವರು ಜಿಲ್ಲೆ ಗದಗ. ಹಾಗಾಗಿ ಜಿಲ್ಲಾ ಉಸ್ತುವಾರಿಯೂ ಅವರದೇ. ರಾಜ್ಯವನ್ನೇ ಬಯಲು ಬಹಿರ್ದೆಸೆ ಮುಕ್ತ ಮಾಡುತ್ತೇನೆ ಎಂದು ಹೊರಟ
ಸಚಿವರಿಗೆ ತವರು ಜಿಲ್ಲೆಯನ್ನೇ ಅದೂ ಜಿಲ್ಲಾ ಕೇಂದ್ರಕ್ಕೆ ಅಣತಿ ದೂರದಲ್ಲಿರುವ ಲಕ್ಕುಂಡಿ ಗ್ರಾಮವನ್ನು ಬಯಲು ಬಹಿರ್ದೆಸೆ
ಮುಕ್ತಗೊಳಿಸಲು ಸಾಧ್ಯವಾಗಿಲ್ಲ. ಸಚಿವರು ಈ ನಿಟ್ಟಿನತ್ತ ಗಮನ ಹರಿಸಲಿ ಎಂಬುದು ಪ್ರಜ್ಞಾವಂತರ ಒತ್ತಾಯ.
ಭ್ರಷ್ಟಾಚಾರದ ಶಂಕೆ
ಸರ್ಕಾರದೊಂದಿಗೆ ವ್ಯವಹರಿಸಿದ ಕಾಗದ ಪತ್ರಗಳೇ ಕಣ್ಮರೆಯಾಗುವಷ್ಟು ಜಿಲ್ಲೆಯ ಅಧಿಕಾರಿಗಳು ಬೇಜವಾಬ್ದಾರಿಯಾಗಿದ್ದಾರೆ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದರೆ ಕಡತಗಳ ಕಣ್ಮರೆ ಹಿಂದೆ ಭ್ರಷ್ಟಾಚಾರ ನಡೆದಿರುವ ಅನುಮಾನ ವ್ಯಕ್ತವಾಗುತ್ತಿದೆ. ಲಕ್ಕುಂಡಿಯಲ್ಲಿ ಪುಷ್ಪ ಶೀತಲ ಘಟಕದ ನೂತನ ಪ್ರಸ್ತಾವನೆಯೊಂದನ್ನು ಕೂಡಲೇ ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸುವ
ಕೆಲಸವಾಗಬೇಕು. ಜೊತೆಗೆ ಕಡತಗಳ ಕಣ್ಮರೆಗೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮವೂ ಬಸವರಾಜ ಸೂಳಿಭಾವಿ, ಪ್ರಗತಿಪರ ಚಿಂತಕ, ಗದಗ.
ಹೂ ಬೆಳೆಗಾರರು ಒಗ್ಗಟ್ಟಾಗಬೇಕಿದೆ
ನಮಗೆ ಹೂ ಮಾರಾಟ ಮಳಿಗೆ ಹಾಗೂ ಮಾರುಕಟ್ಟೆಗಿಂತ ಶೀತಲ ಘಟಕ ನಿರ್ಮಾಣವಾದರೆ ಹೆಚ್ಚು ಅನುಕೂಲ. ಹೂ ಬೆಳೆಗಾರರಲ್ಲಿರುವ ಭಿನ್ನಾಭಿಪ್ರಾಯಗಳಿಂದ ಲಕ್ಷಾಂತರ ರೂ. ಮೌಲ್ಯದ ಸರ್ಕಾರದ ಆಸ್ತಿ ಹಾಳಾಗುತ್ತಿದೆ. ಈ ನಿಟ್ಟಿನಲ್ಲಿ ಹೂ ಬೆಳೆಗಾರರೂ ಒಗ್ಗಟ್ಟಾಗಬೇಕಿದೆ. ಜಿಲ್ಲಾಡಳಿತವೂ ನೈಜ ಕಾಳಜಿ ತೋರಬೇಕಿದೆ. ಸುರೇಶ ಕವಲೂರು, ಹೂ ಬೆಳೆಗಾರ, ಲಕ್ಕುಂಡಿ.
ಬಸವರಾಜ ಕರುಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.