ವಾಸೋದ್ಯಮಕ್ಕೆ ಹೊಸ ಕಳೆ

Team Udayavani, Dec 21, 2017, 5:11 PM IST

21-26.jpg

ಹೊನ್ನಾವರ: ಡಾ| ರವೀಂದ್ರನಾಥ ಠಾಗೋರ ಕಡಲತೀರಗಳ ಅಭಿವೃದ್ಧಿ ಹಾಗೂ ಸಂರಕ್ಷಣಾ ಸಮಿತಿ ಎಂಬ ನೋಂದಾಯಿತ ಸಂಸ್ಥೆ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸ ನೆಗೆತ ಕೊಟ್ಟಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆಯವರ ಗೌರವಾಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ನಕುಲ್‌ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಐದು ತಾಲೂಕುಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆ ಶಿಸ್ತುಬದ್ಧವಾಗಿ, ವೇಗದ ಬೆಳವಣಿಗೆ ಕಂಡಿದೆ. 30-07-2016ರಂದು ನೋಂದಣಿಗೊಂಡ ಈ ಸಮಿತಿ ಒಂದು ವರ್ಷ ಐದು ತಿಂಗಳಲ್ಲಿ ಕರಾವಳಿಯ ಎಲ್ಲ ಪ್ರಮುಖ ತೀರದಲ್ಲಿ ಪ್ರವಾಸಿ ಆಕರ್ಷಣೆ ಹೆಚ್ಚಿಸಿದೆ, 40  ಲಕ್ಷ ರೂ. ಲಾಭಗಳಿಸಿದೆ, ನೂರಾರು ಉದ್ಯೋಗಸೃಷ್ಟಿಸಿದೆ.

ಕಾರವಾರ, ಮಾಜಾಳಿ, ಕಾಳಿ ನದಿ, ಹನಿಬೀಚ್‌, ಗೋಕರ್ಣ, ಕುಡ್ಲೆ, ಓಂ ಬೀಚ್‌, ಕುಮಟಾ ಹೆಡ್‌ ಬಂದರ್‌, ಅಪ್ಸರಕೊಂಡ-ಕಾಸರಕೋಡ, ಮುಡೇìಶ್ವರ, ಸಾಥೋಡಿ ಪಾಲ್ಸ್‌, ಜೋಗ ಪಾಲ್ಸ್‌, ಬುರುಡೆ ಪಾಲ್ಸ್‌ಗಳಲ್ಲಿ ತರಬೇತಿ ಪಡೆದ 26 ಜೀವರಕ್ಷಕ ಸಿಬ್ಬಂದಿ ನೇಮಿಸಿದ್ದು, ಮೂವರು ಮೇಲ್ವಿಚಾರಕರಿದ್ದಾರೆ. ಇವರು ಈಗಾಗಲೇ ವಿವಿಧ ಕಡೆ 14 ಜೀವಗಳನ್ನು ಉಳಿಸಿದ್ದಾರೆ. ಕಡಲತೀರಗಳಲ್ಲಿ ಕಾವಲು ಗೋಪುರ ನಿರ್ಮಿಸಲಾಗಿದೆ. ಕಾರವಾರಕ್ಕೆ 65 ಲಕ್ಷ ರೂ. ಬೆಲೆಯ ಬೀಚ್‌ ಸ್ವತ್ಛತಾ ಯಂತ್ರವನ್ನು 
ಖರೀದಿಸಲಾಗಿದ್ದು, ಇನ್ನೂ ಮೂರು ಬರಲಿದೆ. ಕಾಳಿ ತೀರದಲ್ಲಿ ರಿವರ್‌ ಗಾರ್ಡನ್‌ ನಿರ್ಮಿಸಿದ್ದು, ಇತ್ತೀಚೆಗೆ ದ್ರಾಕ್ಷಾರಸ ಉತ್ಸವ ಯಶಸ್ವಿಯಾಯಿತು. ಅಲ್ಲಿ ಆಹಾರ ಮಳಿಗೆ ಬರಲಿದೆ. ಸುರಕ್ಷತಾ ಜಲಸಾಹಸ ಕ್ರೀಡೆಗಳ ಆಯೋಜನೆಯೊಂದಿಗೆ ಸಮಿತಿಯ
ಕಾರ್ಯಚಟುವಟಿಕೆಗೆ ಆದಾಯವನ್ನು ಗಳಿಸುವ ಮಾರ್ಗ ಕಂಡುಕೊಂಡಿದೆ. ಮುಡೇìಶ್ವರ, ಓಂ, ಕುಡ್ಲೆ, ಗೋಕರ್ಣ, ಕಾಸರಕೋಡ,
ಅಪ್ಸರಕೊಂಡ ಮತ್ತು ಕಾರವಾರ ಠಾಗೋರ ಬೀಚ್‌ಗಳಲ್ಲಿ ಜಲಸಾಹಸ ಕ್ರೀಡೆಗಳನ್ನು ನಡೆಸಲು ಟೆಂಡರ್‌ ಆಹ್ವಾನಿಸಿ, ಸಮುದ್ರದಲ್ಲಿ
ಸ್ಪೀಡ್‌ ಬೋಟ್‌, ಕಯಾಕಿಂಗ್‌, ಜೆಟ್‌ ಸ್ಕೈ, ಬೋಟ್‌ ಪ್ಯಾರ್‌, ಸೈಲಿಂಗ್‌ ನಂತಹ ಜಲಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಪ್ರವಾಸಿಗರಿಗೆ ಹೊರೆಯಾಗದಂತೆ ದರ ನಿಗದಿಪಡಿಸಲಾಗಿದೆ. 

ಮುಡೇìಶ್ವರದಲ್ಲಿ ಸ್ಕೂಬಾ ಡೈವಿಂಗ್‌ಗೆ ಪರವಾನಗಿ ನೀಡಲಾಗಿದೆ. ಕಾರವಾರದಲ್ಲಿ ಪ್ಯಾರಾ ಮೋಟರಿಂಗ್‌, ಟ್ರೆಕ್ಕಿಂಗ್‌, ಡಾಲಿಧಿನ್‌ ವೀಕ್ಷಣೆಗಳಿಗೆ ಪರವಾನಗಿ ನೀಡಲಾಗಿದೆ. ರಾಕ್‌ ಗಾರ್ಡನ್‌ ಸಜ್ಜಾಗಿದೆ. ವಾರ್‌  ಶಿಪ್‌ ಮ್ಯೂಸಿಯಂ ವ್ಯವಸ್ಥಿತಗೊಳಿಸಲಾಗಿದೆ.

ಸಮಿತಿ ಒಂದು ವರ್ಷದಲ್ಲಿ ಮಾಡಿದ ಕೆಲಸದಿಂದ ತೃಪ್ತಿಪಟ್ಟಿಲ್ಲ. ಅರಣ್ಯ ಇಲಾಖೆ ಪ್ರವಾಸೋದ್ಯಮ ಬೆಳೆಸುತ್ತಿದೆ. ಜೊತೆಯಲ್ಲಿ
ಸಮಿತಿ ಕೈಜೋಡಿಸಲಿದ್ದು, ಧಾರ್ಮಿಕ ಸ್ಥಳ, ಜಲಪಾತಗಳಲ್ಲಿ ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸಲು ನಿರ್ಧರಿಸಿದೆ. ಸಮಿತಿ ಒಂದೇ ವರ್ಷದಲ್ಲಿ ಜಿಲ್ಲೆಯ 20 ಕಡಲ ತೀರದಲ್ಲಿ ಪ್ರವಾಸಿ ಚಟುವಟಿಕೆಯನ್ನು ಅಭಿವೃದ್ಧಿಗೊಳಿಸಿದೆ. ರಜಾದಿನಗಳಲ್ಲಿ ಕಡಲ ತೀರ ಜನಸಂದಣಿಯಿಂದ ತುಂಬಿರುತ್ತದೆ. ಅರೆಸರ್ಕಾರಿ ಸಮಿತಿ ಇಲ್ಲಿ ಪರಿಣಾಮಕಾರಿಯಾಗಿ ಕೆಲಸಮಾಡಿದ್ದಕ್ಕೆ ಅಭಿನಂದನೆ ಸಲ್ಲಬೇಕು.

ಕವಿ ರವೀಂದ್ರರಿಗೆ ಸೂಕ್ತ ಗೌರವ
ಗುರುದೇವ ರವೀಂದ್ರನಾಥ ಠಾಗೋರರ ಅಣ್ಣ ಸತ್ಯೇಂದ್ರನಾಥ ಠಾಗೋರರು ಕಾರವಾರದಲ್ಲಿ ಜಿಲ್ಲಾ ನ್ಯಾಯಾಧೀಶರಾಗಿದ್ದಾಗ ರವೀಂದ್ರನಾಥರು ಕಾರವಾರಕ್ಕೆ ಬಂದಿದ್ದರು. ಆಗ ಅವರಿಗೆ 22 ವರ್ಷ. ಕವಿ ರವೀಂದ್ರರು “ನನ್ನ ನೆನಪು’ ಕೃತಿಯಲ್ಲಿ ಕಾರವಾರದ ಕುರಿತು ಹೊಗಳಿದ್ದಾರೆ. ಕಾರವಾರ ಕೆನರಾ ಜಿಲ್ಲೆಯ ಕೇಂದ್ರ. ಅದು ಸಂಸ್ಕೃತ ಸಾಹಿತ್ಯದ ಹಿಮಾಲಯ ಪರ್ವತದಂತಹ ಪ್ರದೇಶ. ಒಂದು ಬೆಳದಿಂಗಳ ಸಂಜೆ ನಾವು ದೋಣಿಯಲ್ಲಿ ಹೊರಟೆವು ತಿರುಗಿ ಬರಬೇಕಾದರೆ ರಾತ್ರಿಯೇ ಗುಡ್ಡಗಳ ಮೇಲೆ ಕಾಡಿನಲ್ಲಿ ನಿದ್ರಿಸುವಂತೆ ಅನಿಸುತ್ತಿತ್ತು. ನಾವು ದೋಣಿಯನ್ನು ಕಡಲ ತೀರದಲ್ಲಿ ನಿಲ್ಲಿಸಿ ನಡೆಯಲು ಆರಂಭಿಸಿದೆವು. ಮರಳಲ್ಲಿ
ನಡೆಯುವಾಗ ಗುಡ್ಡಗಳು ನೀಲಿ ಆಕಾಶದಡಿ ಸುಖವಾಗಿ ಮಲಗಿ ನಿದ್ರಿಸಿವೆ ಅನಿಸಿತು. ನಮ್ಮ ನಿದ್ರೆ ಅದಕ್ಕಿಂತ ಗಾಢವಾದ ಕಾರವಾರದ ಸೌಂದರ್ಯದಲ್ಲಿ ಕಳೆದುಹೋಗಿತ್ತು. ನಾನು ಕಾರವಾರದಲ್ಲಿ “ಪ್ರಕೃತಿರ್‌ ಪ್ರತಿಯೋಧಾ’ ಎಂಬ ಕವಿತೆಯನ್ನು ಬರೆದೆ. ಅದರ ನಾಯಕ ಸನ್ಯಾಸಿ. ಆತ ಪ್ರಕೃತಿಯ ಮೇಲೆ ವಿಜಯ ಸಾಧಿಸಲು ತನ್ನ ಎಲ್ಲ ಬಂಧನಗಳಿಂದ ಮುಕ್ತಗೊಂಡು ಹೊರಡುತ್ತಾನೆ. ಆಗ ಪುಟ್ಟ ಹುಡುಗಿ (ಕಾರವಾರ)ಯೊಬ್ಬಳು ಅವನು ಲೌಕಿಕ ಬದುಕಿಗೆ ಮರಳುವಂತೆ ಮಾಡುತ್ತಾಳೆ. ಆ ಪ್ರೀತಿ (ಪ್ರಕೃತಿ)ಯಲ್ಲೇ ಆತ ಮುಕ್ತಗೊಳ್ಳುತ್ತಾನೆ. ಸ್ವತಂತ್ರವಾಗುತ್ತಾನೆ ಎಂದು ಆತ ಅರಿಯುತ್ತಾನೆ. ಪ್ರಕೃತಿಯ ಸೌಂದರ್ಯ ಎನ್ನುವುದು ಕೇವಲ ಕಾಲ್ಪನಿಕ ಅಲ್ಲ. ಅದು ಸತ್ಯ. ನಮ್ಮನ್ನು ನಾವು ಮರೆಯಬಹುದಾದಂತಹ ಅನುಭವವನ್ನು ಪ್ರಕೃತಿ ನೀಡುತ್ತದೆ ಎಂದು ನನಗೆ ಕಾರವಾರ ಬೀಚನಲ್ಲಿ ಕುಳಿತಾಗ ಅನಿಸಿತು. ನನ್ನ ಈ ಪ್ರಕೃತಿಯ ಮುಯ್ಯಿಯನ್ನು ಮುಂದಿನ ಎಲ್ಲ ಸಾಹಿತ್ಯ ಕೃತಿಗಳಿಗೆ ಮುನ್ನಡಿಯಾಗಿ ನೀವು ಕಾಣಬಹುದು
ಎಂದು ಬರೆದಿದ್ದಾರೆ. ರವೀಂದ್ರರ ಹೆಸರಿನಲ್ಲಿ ಸಮಿತಿ ನಡೆಸುತ್ತಿರುವ ಪ್ರವಾಸೋದ್ಯಮ ಅಭಿವೃದ್ಧಿ ಅವರಿಗೆ ಸಂದ ಶ್ರೇಷ್ಠ ಗೌರವ.

ಜಿಯು ಹೊನ್ನಾವರ

ಟಾಪ್ ನ್ಯೂಸ್

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shirasi-1

Sirasi: ಭಾರತಕ್ಕೆ ಆಮದಾಗುವ ಅಕ್ರಮ ಅಡಿಕೆಗಳಿಗೆ ತಡೆಯೊಡ್ಡಿ; ಬೆಳೆಗಾರರ ಪ್ರತಿನಿಧಿಗಳ ನಿಯೋಗ

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಶಿಕ್ಷಣ ಸಚಿವರ ಮನವಿ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.