ಕುಕ್ಕೆ: ಸರ್ಪಸಂಸ್ಕಾರಕ್ಕೆ ಅಧಿಕ ಹಣ ವಸೂಲಿ?
Team Udayavani, Dec 22, 2017, 11:29 AM IST
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಸರ್ಪಸಂಸ್ಕಾರ ಸೇವೆ ನಡೆಸಲು ಕತೃì ಓರ್ವರು ಭಕ್ತರಿಂದ ಅಧಿಕ ಹಣ ವಸೂಲಿ ಮಾಡಿದ್ದಾರೆ ಮತ್ತು ಇದಕ್ಕೆ ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯರೊಬ್ಬರು ಸಹಕರಿಸಿದ್ದಾರೆ ಎಂಬ ಸಂದೇಶ ಸಾಮಾಜಿಕ ತಾಣಗಳಲ್ಲಿ ಹರಡಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾದ ಘಟನೆ ಗುರುವಾರ ನಡೆದಿದೆ.
ಡಿ.20 ಮತ್ತು 21ರಂದು ಹಾಸನ ಮೂಲದ ಭಕ್ತರ ಗುಂಪು ಮೂರು ಸೇವೆ ನೆರವೇರಿಸಿ ತೆರಳಿದ್ದರು. ಆನ್‌ಲೈನ್‌ನಲ್ಲಿ ಅವಕಾಶ ಸಿಗದ ಕಾರಣ ಇಲ್ಲಿ ಕತೃìವಾಗಿರುವ ಹಾಸನ ಮೂಲದ ವ್ಯಕ್ತಿಯ ಮೂಲಕ ಸೇವೆಗೆ ಬುಕ್ಕಿಂಗ್ ಮಾಡಿಸಿದ್ದರು. ಕಚೇರಿಯ ಪುಸ್ತಕದಲ್ಲಿ ಪೂಜೆ ನಡೆಸುವ ಭಕ್ತರ ಹೆಸರಿನ ಮುಂದೆ ವ್ಯವಸ್ಥಾಪನ ಸಮಿತಿ ಸದಸ್ಯರೊಬ್ಬರ ಹೆಸರನ್ನು ಶಿಫಾರಸು ಆಗಿ ನಮೂದಿಸಲಾಗಿತ್ತು.
ಸೇವೆಯ ಎರಡನೇ ದಿನ, ಡಿ.21ರಂದು ಮಧ್ಯಾಹ್ನ ಪೂಜೆ ಪೂರ್ಣಗೊಳಿ ಸಿದ ವೇಳೆ ತಂಡದವರು ನಿಗದಿತ ಮೊತ್ತಕ್ಕಿಂತ ಹೆಚ್ಚು ವಸೂಲು ಮಾಡಲಾಗಿದೆ ಎಂದು ಆರೋಪಿಸಿದ ವಿಚಾರ ಹರಡಿತ್ತು. ಬಳಿಕ ಅದು ವ್ಯಾಪಕ ಪ್ರಚಾರ ಪಡೆದು ಹರಡಲಾರಂಭಿಸಿತು. ಇದರಲ್ಲಿ ತಳಕು ಹಾಕಿಕೊಂಡ ಹೆಸರು ವ್ಯವಸ್ಥಾಪನ ಸಮಿತಿಯ ಸದಸ್ಯ ಕೃಷ್ಣಮೂರ್ತಿ ಭಟ್ ಅವ ರ ದು. ಈ ಘಟನೆ ಇಷ್ಟು ಗಂಭೀರತೆ ಪಡೆಯಲು ಕಾರಣ ಸೇವೆ ಸಲ್ಲಿಸಿದ ತಂಡದಲ್ಲಿದ್ದ ಬಡ ಕುಟುಂಬವೊಂದು ಆಭರಣ ಅಡವಿಟ್ಟು ಹಣ ಹೊಂದಿಸಿದ್ದು ಎನ್ನಲಾಗಿದೆ.
ಸುಳ್ಳು ಆರೋಪ: ಪ್ರಕರಣ ಸಂಬಂಧ ಪೂಜೆ ಪೂರೈಸಿ ತೆರಳಿದ ಭಕ್ತರ ದೂರವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಲು ಯತ್ನಿಸಿದಾಗ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ವ್ಯವಸ್ಥಾಪನ ಸಮಿತಿ ಸದಸ್ಯ ಕೃಷ್ಣಮೂರ್ತಿ ಅವರನ್ನು ಸಂಪರ್ಕಿಸಿದಾಗ ಇದು ಸುಳ್ಳು ಸುದ್ದಿ, ಯಾವುದೇ ದಾಖಲೆ ಇಲ್ಲದೆ ಮಾನಹಾನಿಕರ ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗುವುದು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.