ಅಪ್ಪಾಜಿಬೀಡು ಫೌಂಡೇಷನ್:24ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ
Team Udayavani, Dec 22, 2017, 12:20 PM IST
ಮುಂಬಯಿ: ವರ್ಲಿ ಪರಿಸರದಲ್ಲಿ ಕಲಿಯುಗ ವರದ ಶ್ರೀ ಅಯ್ಯಪ್ಪ ಸ್ವಾಮಿಯನ್ನು ಆರಾಧಿಸಿಕೊಂಡು ಬಂದಿರುವ ಪಡುಬಿದ್ರೆ ಬೇಂಗ್ರೆಯ ರಮೇಶ್ ಗುರುಸ್ವಾಮಿ ಅವರ ಮಾರ್ಗದರ್ಶನದಲ್ಲಿ 23ವರ್ಷಗಳ ಹಿಂದೆ ಅಯ್ಯಪ್ಪ ಭಕ್ತರನ್ನು ಮತ್ತು ಹಿತೈಷಿ ಬಂಧುಗಳನ್ನು ಒಗ್ಗೂಡಿಸಿಕೊಂಡು ಸ್ಥಾಪಿಸಿರುವ ಅಪ್ಪಾಜಿಬೀಡು ಶ್ರೀ ಅಯ್ಯಪ್ಪ ಭಕ್ತವೃಂದವು ಪ್ರಸ್ತುತ ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿಬೀಡು ಎಂಬ ಸರಕಾರಿ ನೋಂದಾ ಯಿತ ಸಂಸ್ಥೆಯಾಗಿ ರೂಪುಗೊಂಡು ಡಿ. 24 ರಂದು ದಿನಪೂರ್ತಿ ಶ್ರದ್ಧಾಭಕ್ತಿ ಸಂಗಮದೊಂದಿಗೆ ಮಹಾಪೂಜೆ ನೆರವೇರಲಿದೆ.
ವರ್ಲಿಯ ಮಧುಸೂದನ ಮಿಲ್ ಆವರಣದಲ್ಲಿ ರುವ ಶ್ರೀ ಸಿದ್ಧೇಶ್ವರ ಸ್ವಾಮಿ ಮಂದಿರದಲ್ಲಿ ಶಿಬಿರ ವನ್ನು ಪ್ರಾರಂಭಿಸಿ, 48 ದಿನಗಳ ಕಾಲ ಪ್ರತಿನಿತ್ಯ ಅನ್ನಸಂತರ್ಪಣೆ, ಮಹಾಪೂಜೆಗಳೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿಯ ವ್ರತಾಚರಣೆ ನಡೆಸುತ್ತಿರುವ ರಮೇಶ್ ಗುರುಸ್ವಾಮಿ ಅವರ ನೇತೃತ್ವದಲ್ಲಿ ಡಿ. 24 ರಂದು ಮುಂಜಾನೆ ಶರಣು ಘೋಷದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ.
ಆನಂತರ ಗಣಹೋಮ, ಅಪ್ಪಾಜಿಬೀಡು ಫೌಂಡೇಷನ್ನ ಸದಸ್ಯರಿಂದ ಭಜನೆ, ಮಧ್ಯಾಹ್ನ ಸಹಸ್ರ ಸಂಖ್ಯೆಯಲ್ಲಿ ಭಕ್ತರ ಸಮ್ಮುಖದಲ್ಲಿ ಭವ್ಯವಾಗಿ ಶೃಂಗರಿಸಲ್ಪಟ್ಟ ಮಂಟಪದಲ್ಲಿರಿಸಿದ ಅಪ್ಪಾಜಿಬೀಡಿನ ಒಡೆಯ ಸಿದ್ಧೇಶ್ವರನಿಗೆ ಮತ್ತು ಶಬರಿಗಿರಿವಾಸ ಅಯ್ಯಪ್ಪ ಸ್ವಾಮಿಗೆ ಮಹಾಪೂಜೆ ನಡೆಯಲಿದೆ. ಪೂಜೆಯ ಬಳಿಕ ಆರು ಸಾವಿರ ಭಕ್ತರಿಗೆ ಅನ್ನದಾನದ ವ್ಯವಸ್ಥೆಯನ್ನು ಮಾಡಲಾಗಿದ್ದು, ಮಧ್ಯಾಹ್ನ 1 ರಿಂದ ಅಪರಾಹ್ನ 4ರವರೆಗೆ ಅನ್ನದಾನ ನಡೆಯಲಿದೆ. ಸಂಜೆ 6 ರಿಂದ 1,118 ದೀಪಗಳಿಂದ ದೀಪೋತ್ಸವ ನಡೆಯಲಿದೆ.
ಇದೇ ಸಂದರ್ಭದಲ್ಲಿ ಮಹಿಳಾ ವಿಭಾಗದ ವತಿಯಿಂದ ಭಜನ ಕಾರ್ಯಕ್ರಮ ಜರಗಲಿದೆ.
ರಾತ್ರಿ 8 ರಿಂದ ಫೋರ್ಟ್ ಅಯ್ಯಪ್ಪ ಸೇವಾ ಸಮಿತಿಯ ಚಂದ್ರಶೇಖರ ಗುರುಸ್ವಾಮಿ ಮತ್ತು ರೇ ರೋಡ್ ಅಯ್ಯಪ್ಪ ಸ್ವಾಮಿ ಭಕ್ತವೃಂದದ ಜಗನ್ನಾಥ ಗುರುಸ್ವಾಮಿ ಇವರಿಗೆ ಪಾದಪೂಜೆಯ ಮುಖಾಂತರ ಗುರುವಂದನ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8 ರಿಂದ ಪ್ರಸಿದ್ಧ ಕಲ್ಲಡ್ಕ ವಿಠಲ್ ನಾಯಕ್ ಮತ್ತು ಬಳಗದಿಂದ ಸಂಗೀತದ ರಸಧಾರೆಯೊಂದಿಗೆ ವಿಶಿಷ್ಟ ಶೈಲಿಯ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ. ರಾತ್ರಿ ಹರಿವರಾಸನಂ ಮೂಲಕ ಮಂಗಳ ನಡೆಯಲಿದೆ. ಭಕ್ತಾದಿಗಳು ಈ ಪುಣ್ಯಕಾರ್ಯದಲ್ಲಿ ಪಾಲ್ಗೊಂಡು ಅನ್ನಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾಗುವಂತೆ ಫೌಂಡೇಷನ್ನ ಆಡಳಿತ ಟ್ರಸ್ಟಿ ಶಾಂಭವಿ ಆರ್. ಶೆಟ್ಟಿ ಮತ್ತು ಅಧ್ಯಕ್ಷ ಕೇದಗೆ ಸುರೇಶ್ ಶೆಟ್ಟಿ ಹಾಗೂ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿಶ್ವಸ್ಥರು, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು, ಸರ್ವ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.