ಕಾಲೇಜಿಗೆ ಧನ್ಯವಾದ


Team Udayavani, Dec 22, 2017, 12:33 PM IST

22-28.jpg

ಕಾಲೇಜು ಜೀವನ ಎಂಬಂಥಾದ್ದು ಯೌವನದ ಆರಂಭದ ಕಾಲ. ಅದರಲ್ಲೂ  ತರಲೆ, ಕೀಟಲೆಗಳನ್ನು ಮಾಡಿಕೊಂಡು  ಸಂತೋಷ ಪಡುವುದಕ್ಕೆ ಹೇಳಿಮಾಡಿಸಿದ ಸಮಯವದು. ಟೈಮ್‌ ಸಿಕ್ಕಾಗಲೆಲ್ಲ ಗೆಳೆಯರೊಂದಿಗೆ ಹರಟೆ, ತಮಾಷೆ,  ಫ್ರೆಂಡ್ಸ್‌ ಜೊತೆ ಜಾಲಿರೈಡ್‌, ಕ್ಲಾಸ್‌ ಬಂಕ್‌ ಮಾಡಿ ಬರ್ತ್‌ಡೇ ಪಾರ್ಟಿಗಳಿಗೆ ಹೋಗುವುದು, ಪೇಟೆ ಸುತ್ತುವುದು, ಕಾಮೆಂಟ್‌ ಮಾಡುತ್ತ ಕಾರಿಡಾರ್‌ ತಿರುಗುವುದು. ಆದರೆ, ಕಾಲೇಜ್‌ ಕ್ಯಾಂಪಸ್ಸಿನಲ್ಲಿ ಎಲ್ಲಿ  ಕೂಡ ಒಂದು ನೊಣವೂ ಓಡಾಡದ ಪರಿಸ್ಥಿತಿಯನ್ನು ನೋಡಿದರೆ ಇವೆಲ್ಲ ಹೇಗೆ ಸಾಧ್ಯ. ಕಾಲೇಜ್‌ ಆರಂಭವಾದಲ್ಲಿಂದ ಹಿಡಿದು ಮುಗಿಯುವವರೆಗೂ ಬ್ರೇಕ್‌ ಟೈಮ್‌ ಬಿಟ್ಟರೆ ಉಳಿದ ಸಮಯದಲ್ಲಿ ಒಂದು ನರಪಿಳ್ಳೆಯೂ  ಆಚೀಚೆ  ಹೋಗದ ಸನ್ನಿವೇಶದಲ್ಲಿ ಇವೆಲ್ಲ ನಡೆಯುವುದಾದರೂ ಯಾವಾಗ? ಯಾರಾದ್ರು ಲೆಕ್ಚರರ್ಸ್‌ ಬಾರದಿರುವ ಕ್ಲಾಸನ್ನಾದ್ರು ಎಂಜಾಯ್‌ ಮಾಡೋಣ ಅಂದರೆ ಆ ಲೆಕ್ಚರರ್‌ ಕಾಲೇಜಿಗೆ ಬಂದಿಲ್ಲ ಎಂದು ತಿಳಿಯುವುದೇ ನಾವು  ಕ್ಲಾಸಿನಲ್ಲಿ ಕೂತು ಕೂತು ಅವರಿಗಾಗಿ ಕಾದು ಕಾಲಹರಣ ಮಾಡಿದ ನಂತರ. ಇನ್ನೇನು ಆ ಲೆಕ್ಚರರ್‌ ಇವತ್ತು ಬಂದಿಲ್ಲ ಎಂದು ಎದ್ದು ಹೋಗುವಾಗ್ಲೆà ಇನ್ನೊಬ್ಬ ಲೆಕ್ಚರರ್‌ ಎಂಟ್ರಿಕೊಟ್ಟು ನಾನೀಗ ಕ್ಲಾಸ್‌ ಮಾಡುತ್ತೇನೆಂದು ಸ್ಟೂಡೆಂಟ್ಸ್‌ ಗಳಿಂದ ಶಾಪ ಹಾಕಿಸಿಕೊಂಡು ತಮ್ಮ ಪಾಠ ಆರಂಭಿಸುತ್ತಾರೆ. ಹಾಗಾದರೆ, ಎಂಜಾಯ್‌ಮೆಂಟ್‌ ಮಾಡುವುದಾದರೂ ಹೇಗೆ?

ಈ  ತೆರನಾದ ವಾತಾವರಣವನ್ನು ನಾವು ಹಲವಾರು ಕಾಲೇಜುಗಳಲ್ಲಿ ನೋಡಬಹುದು. ಆದರೆ, ನಮ್ಮ ಕಾಲೇಜು ನಿಮ್ಮ ಯಾವುದೇ  ತರಲೆ, ಕೀಟಲೆಯಂತಹ  ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಅವಕಾಶ ಮಾಡಿಯೇ ಕೊಟ್ಟಿಲ್ಲ. ಆಟದೊಂದಿಗೆ ಪಾಠ ಎನ್ನುತ್ತ ನಮ್ಮೆಲ್ಲರನ್ನು ಬೆಳೆಸುತ್ತಲೇ ಬಂದಿದೆ. ಹಾಗೆಂದು, ನಾವುಗಳಾರೂ ಇದನ್ನು ಇದುವರೆಗೂ ಮಿಸ್‌ಯೂಸ್‌ ಕೂಡ ಮಾಡಿಕೊಂಡಿಲ್ಲ. ಕಾಲೇಜ್‌ ಒಂದು ಎಂಜಾಯ್‌ ಮಾಡಲು ಅವಕಾಶ ಮಾಡಿಕೊಟ್ಟರೆ ನಾವದನ್ನು ದುರ್ಬಳಕೆ ಮಾಡಿಕೊಂಡರೆ ಒಳಿತೆನಿಸುವುದೆ? ಹಾಗಾದರೆ ಇವೆಲ್ಲವೂ ಹೇಗೆ ಸಾಧ್ಯ?

ಬಹುಶಃ ಆ ದಿನ ಕಾಲೇಜು ಆರಂಭದ ಮೊದಲ ದಿನ. ಪಿಯುಸಿಯಲ್ಲಿ ಒಟ್ಟಿಗಿದ್ದ ಕೆಲವು ಗೆಳೆಯರನ್ನು ಕೂಡಿಕೊಂಡು ಕಾಲೇಜು ಪ್ರವೇಶಿಸಿದೆ. ಕಾಲೇಜಿನ ಎಂಟ್ರ್ಯಾನ್ಸ್‌ನಲ್ಲಿ ಕಾಲಿಡಲಾರದಷ್ಟು ಒತ್ತೂತ್ತಾಗಿ ಮುತ್ತಿಕೊಂಡು  ಸೀನಿಯರ್ಸ್‌ಗಳು ತುಂಬಿಕೊಂಡಿದ್ದರು. ಹೊಸಬರಾದ ನಮಗೆ ಅಲ್ಲಿ ಯಾರಿಗೋ  ಏನೋ ಆಯಿತೆಂದು ಗಾಬರಿಯಾಗಿ ನಾವು ಕೂಡ ವೀಕ್ಷಕರಾಗಿ ಸೇರಿದೆವು. ಆದರೆ, ಅಲ್ಲಿ ಯಾರಿಗೂ ಏನು ಆದಂತೆ ಕಾಣಲಿಲ್ಲ. ಯಾರಲ್ಲೋ ವಿಚಾರಿಸಿದಾಗ ಎಲ್ಲ ನೋಟೀಸ್‌ ಬೋರ್ಡಿನಲ್ಲಿ ಏನನ್ನೋ ನೋಡುತ್ತಿದ್ದಾರೆ ಎಂದು ತಿಳಿಯಿತು. ಬಹುಶಃ ಕಾಲೇಜು ಸ್ಟಾರ್ಟ್‌ ಅಲ್ವಾ? ಹಾಗಾಗಿ, ಏನೋ ಮಾಹಿತಿ ಹಾಕಿರಬೇಕೆಂದು ಸುಮ್ಮನೆ ನಮ್ಮ ಕ್ಲಾಸ್‌ ಹುಡುಕುತ್ತ ಮುನ್ನಡೆದೆವು. ಮರುದಿನವೂ ಕಾಲೇಜಿಗೆ ಬರುವಾಗ ಹಿಂದಿನ ದಿನದಂತೆಯೇ ಸೀನಿಯರ್ಸ್‌ ಅಲ್ಲಿ ಗುಂಪುಗಟ್ಟಿ ಏನನ್ನೋ ಹುಡುಕುವಂತೆ ತೋರಿತು. ಆದರೆ, ಇವತ್ತು ಅವರೊಂದಿಗೆ ಕೆಲವು ಜೂನಿಯರ್ಸ್‌ ಕೂಡ ಸೇರಿದ್ದರು. ನಿನ್ನೆಯ ಹಾಗೆಯೇ ಏನೋ ಮಾಹಿತಿ ಇರಬೇಕೆಂದು ನನ್ನ ಪಾಡಿಗೆ ನಾನು ಮುನ್ನಡೆದೆ. ಕೆಲವರು ಕಾಲೇಜಿಗೆ ಎಂಟ್ರಿ ಕೊಟ್ಟು ಮಂಜುನಾಥ ಸ್ವಾಮಿಯ ಫೋಟೋಗೆ ನಮಿಸಿ ಮತ್ತೆ ನೋಟೀಸ್‌ ಬೋರ್ಡ್‌ ಕಡೆ ನುಗ್ಗುತ್ತಿದ್ದರು. ಇನ್ನು ಹಲವರು ಆ ನೂಕುನುಗ್ಗಾಟದಲ್ಲಿ  ನೋಟೀಸ್‌ ಬೋರ್ಡ್‌ ನೋಡುವ ನೆಪದಲ್ಲಿ ಪ್ರೇಯಸಿಯನ್ನೋ, ಚಂದದ ಹುಡುಗಿಯರನ್ನೋ ಹುಡುಕುತ್ತಿದ್ದ ನಾಟಕೀಯ ವರ್ತನೆ ನೋಡುಗರಿಗೆ ಮಜಾ ನೀಡುತ್ತಿತ್ತು.  ಒಂದು ವಾರ ಕಳೆದ ಬಳಿಕವೂ ಹೀಗೆಯೇ ಇದು ಮುಂದುವರೆಯುತ್ತಿರುವಾಗ ನನಗೂ ತುಂಬಾನೇ ಕುತೂಹಲ ಕೆರಳಿತು. ಏನೇ ಆಗಲಿ, ಎಂದು ಆ ದಿನ  ಸ್ವಲ್ಪ ಬೇಗನೇ ಬಂದು ಜಾಗಮಾಡಿಕೊಂಡು ಗುಂಪಿನೊಳಗೆ ತೂರುತ್ತ ನೋಟೀಸ್‌ ಬೋರ್ಡ್‌ ಬಳಿ ಬಂದೆ. ಬಂದು ನೋಡುತ್ತೇನೆ, ಆ ದಿನ ಕಾಲೇಜಿಗೆ ಯಾವೆಲ್ಲ ಪ್ರಾಧ್ಯಾಪಕರು ಬರುವುದಿಲ್ಲವೋ ಅವರದೆಲ್ಲ ಹೆಸರು ವಿದ್‌ ಡಿಪಾರ್ಟ್‌ಮೆಂಟಿನೊಂದಿಗೆ ಅಲ್ಲಿ ಹಾಕಲಾಗಿತ್ತು. ನನಗಂತೂ ತುಂಬಾ ಖುಷಿಯಾಯ್ತು. ಕುಣಿದಾಡೋಣ ಎನ್ನಿಸಿ ಎಲ್ಲ ಇ¨ªಾರೆ ಎಂದು ಸುಮ್ಮನಾದೆ. ಏಕೆಂದರೆ, ಆ ದಿನ ನಮಗೆ ಕ್ಲಾಸ್‌ ತಗೋಬೇಕಾದ ಇಬ್ಬರು ಪ್ರಾಧ್ಯಾಪಕರು ಕಾಲೇಜಿಗೆ ಬಂದಿರಲಿಲ್ಲ. ಅಬ್ಟಾ! ಎರಡು ಕ್ಲಾಸ್‌ ಇಲ್ವಲ್ಲಾ ಎಂದು ಆನಂದತುಂದಿಲನಾಗಿ ಕ್ಲಾಸ್‌ನತ್ತ ಹೆಜ್ಜೆ ಹಾಕಿದೆ. ಗೆಳೆಯರೆಲ್ಲರಿಗೂ ಹೇಳಿ ಸಂಭ್ರಮಿಸಿದೆ. ಫ್ರೆಂಡ್ಸ್‌ ಎಲ್ಲಾ ಸೇರಿ ಆ ಸಮಯದಲ್ಲಿ ಎಲ್ಲಿಗೆಲ್ಲ ಹೋಗಬಹುದೆಂದು ನಿರ್ಧರಿಸುತ್ತಿದ್ದರು. ಕಡ್ಡಾಯವಾಗಿ ನಲವತ್ತು ಗಂಟೆ ಲೈಬ್ರರಿ ಗಂಟೆ  ಮಾಡಬೇಕಾದ ಕಾರಣ ಹೆಚ್ಚಿನವರು ಲೈಬ್ರರಿಗೆ ಹೋಗೋಣ ಎಂದರು. ಕೆಲವರು ಪಾರ್ಕಿಗೆ, ಕ್ಯಾಂಟೀನಿಗೆ, ಗ್ರೌಂಡಿಗೆ ಹೋಗೋಣ ಎಂದರು. ಒಟ್ಟಿನಲ್ಲಿ ಬೆಲ್ಲಾದ ಮೇಲೆ ಎಲ್ಲರೂ ತಮಗೆ ಬೇಕಾದಲ್ಲಿಗೆ ಮತ್ತೂಂದು ಕ್ಲಾಸಿಗೆ ಬೆಲ್‌ಆಗುವುದರೊಳಗೆ  ಅವಸರವಸರದಲ್ಲಿ ತೆರಳಿದರು.ಕ್ಲಾಸ್‌ನಲ್ಲಿ ಕೂತು ಕೂತು ಬೋರಾಗಿದ್ದ ನಮಗೆ ನಂತರದ ಕ್ಲಾಸ್‌ಗಳು ಇಲ್ಲದ್ದು ಫ‌ುಲ್‌ ಖುಷಿ ತಂದಿತ್ತು.  

ಈ ತೆರನಾಗಿ ನಮಗೆ ಪ್ರಾಧ್ಯಾಪಕರುಗಳು ಬಾರದಿರುವ ಸುದ್ದಿಯನ್ನು ಹಾಕಿ ನಾವು ಎಂಜಾಯ್‌ ಮಾಡಲು ಅವಕಾಶ ಮಾಡಿಕೊಟ್ಟ ನಮ್ಮ ಪ್ರೀತಿಯ ಕಾಲೇಜಿನ ಮೇಲೆ ಧನ್ಯತಾ ಭಾವನೆಯು ಉಕ್ಕಿ ಬಂತು. ಈಗಂತೂ ಒಂದು ದಿನವೂ ಬಿಡದೆ ಕಾಲೇಜಿಗೆ ಬರುವ ಪ್ರತೀ ದಿನವೂ ನೋಟೀಸ್‌ ಬೋರ್ಡ್‌ ನೋಡಿ ಯಾವ ಲೆಕ್ಚರರ್‌ ಬಂದಿಲ್ಲ, ಯಾವ ಕ್ಲಾಸ್‌ ಫ್ರೀ ಇದೆ ಎಂದು ಖಚಿತ ಮಾಡಿಕೊಂಡೇ ಮನ್ನಡೆಯುವುದು. ಎಂದೂ ನೋಟಿಸ್‌ ಬೋರ್ಡ್‌ ಕಡೆ ತಲೆಹಾಕದ ವಿದ್ಯಾರ್ಥಿಗಳು ಇದನ್ನರಿತ ಮೇಲೆ ದಿನಾಲೂ ನೋಟಿಸ್‌ ಬೋರ್ಡ್‌ ನೋಡುತ್ತಾರೆ ಎನ್ನುವುದೇ ಒಂದು ವಿಶೇಷ.

ರಾಹುಲ್‌ ಎಸ್‌. ಎಂ.  ಎಸ್‌ಡಿಎಂ ಕಾಲೇಜು, ಉಜಿರೆ 

ಟಾಪ್ ನ್ಯೂಸ್

7-udupi

Request: ಕರಕುಶಲ ಕರ್ಮಿಗಳಿಗೆ ಸಕಾಲದಲ್ಲಿ ಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸೂಚಿಸಿ

Zammer-yathnal

Meeting: ಸಚಿವ ಜಮೀರ್‌ ಭೇಟಿಯಾದ ಶಾಸಕ ಯತ್ನಾಳ್‌! ಹಿಂದಿನ ಉದ್ದೇಶವೇನು ಗೊತ್ತಾ?

ವಂಚನೆಗೀಡಾಗಿ ಪಾಕ್‌ ಸೇರಿದ್ದ ಭಾರತದ ಮಹಿಳೆ 22 ವರ್ಷ ಬಳಿಕ ಸ್ವದೇಶಕ್ಕೆ

ವಂಚನೆಗೀಡಾಗಿ ಪಾಕ್‌ ಸೇರಿದ್ದ ಭಾರತದ ಮಹಿಳೆ 22 ವರ್ಷ ಬಳಿಕ ಸ್ವದೇಶಕ್ಕೆ

PM Modi: ಕಾಂಗ್ರೆಸ್‌ ರೈತರಿಗೆ ತಾನೂ ಒಳಿತು ಮಾಡದು ಬೇರೆ ಅವರಿಗೂ ಬಿಡದು

PM Modi: ಕಾಂಗ್ರೆಸ್‌ ರೈತರಿಗೆ ತಾನೂ ಒಳಿತು ಮಾಡದು ಬೇರೆ ಅವರಿಗೂ ಬಿಡದು

Coimbatore ಸರಣಿ ಸ್ಫೋಟದ ರೂವಾರಿ ಎಸ್‌.ಎ.ಬಾಷಾ ಸಾವು

Coimbatore ಸರಣಿ ಸ್ಫೋಟದ ರೂವಾರಿ ಎಸ್‌.ಎ.ಬಾಷಾ ಸಾವು

ಅಲ್ಲು ಅರ್ಜುನ್‌ಗೆ ಹೊಸ ಸಂಕಷ್ಟ: ಬೇಲ್‌ ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ?ಅಲ್ಲು ಅರ್ಜುನ್‌ಗೆ ಹೊಸ ಸಂಕಷ್ಟ: ಬೇಲ್‌ ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ?

Supreme Court: ಅಲ್ಲು ಅರ್ಜುನ್‌ಗೆ ಹೊಸ ಸಂಕಷ್ಟ: ಬೇಲ್‌ ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ?

Bgv-KCV

Belagavi: ಕಾಂಗ್ರೆಸ್‌ ಅಧಿವೇಶನದಿಂದ ಪಕ್ಷದ ಹೋರಾಟಕ್ಕೆ ಹೊಸ ತಿರುವು: ಕೆ.ಸಿ ವೇಣುಗೋಪಾಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

10-uv-fusion

Grandmother’s Story: ಅಜ್ಜಿ ಹೇಳುತ್ತಿದ್ದ ಕತೆಯಲ್ಲಿದ್ದ ಸಂತೋಷ

9-uv-fusion

UV Fusion: ಆದದ್ದೆಲ್ಲ ಒಳ್ಳೆಯದಕ್ಕೆ ಆಗಿದೆ

2

Mangaluru: ಮಹಿಳೆ ನಾಪತ್ತೆ; ಪ್ರಕರಣ ದಾಖಲು

8-uv-fusion

UV Fusion: ಗೊಂಬೆ ನಿನಗೂ ಬಂತೇ ಅಳಿಯುವ ಕಾಲ

de

Puttur: ವಿದೇಶದಿಂದ ರಜೆಯಲ್ಲಿ ಬಂದಿದ್ದ ಯುವಕ ಹೃದಯಾಘಾತದಿಂದ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.