ಆಹಾರ್‌ ಹೊಟೇಲ್‌ ಉದ್ಯಮದ ಪ್ರತಿಷ್ಠೆಯ ಸಂಸ್ಥೆ 


Team Udayavani, Dec 22, 2017, 12:37 PM IST

21-Mum02a.jpg

ಮುಂಬಯಿ: ಇಂಡಿಯನ್‌ ಹೊಟೇಲ್‌ ಆ್ಯಂಡ್‌ ರೆಸ್ಟೋರೆಂಟ್‌ ಅಸೋಸಿಯೇಶನ್‌ (ಆಹಾರ್‌) ಸಂಸ್ಥೆಯ 38 ನೇ ವಾರ್ಷಿಕ ಮಹಾಸಭೆಯ ಸಂದರ್ಭದ ಬೆಳಗ್ಗೆ ಆಯೋಜಿಸಲಾಗಿದ್ದ ಆಹಾರೋ ದ್ಯಮ ವಸ್ತುಪ್ರದರ್ಶನಕ್ಕೆ ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರು ಚಾಲನೆ ನೀಡಿದರು. 

ಗುರುವಾರ ಬೆಳಗ್ಗೆ ಕುರ್ಲಾ ಪೂರ್ವದ ಬಂಟರ ಸಂಘದ ಶ್ರೀಮತಿ ರಾಧಾಬಾಯಿ  ಟಿ.ಭಂಡಾರಿ ಸಭಾಗೃಹದಲ್ಲಿ ಆಹಾರ್‌ ಅಧ್ಯಕ್ಷ ಆದರ್ಶ್‌ ಬಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರದರ್ಶನ ಮಳಿಗೆಗಳಿಗೆ  ಪದ್ಮನಾಭ ಎಸ್‌. ಪಯ್ಯಡೆ ಅವರು ಸಾಂಪ್ರದಾ ಯಿಕವಾಗಿ ತೆಂಗಿನಕಾಯಿ ಒಡೆದು, ಶ್ರೀ ವಿN°àಶ್ವರನಿಗೆ ಆರತಿಗೈದು, ರಿಬ್ಬನ್‌ ಬಿಡಿಸಿ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಸುಮಾರು ನಾಲ್ಕು ದಶಕಗಳಿಂದ ಅವಿರತವಾಗಿ ಸೇವಾ ನಿರತವಾಗಿಕೊಂಡಿರುವ ಆಹಾರ್‌  ಆಹಾರೋದ್ಯಮದ ಶಕ್ತಿ ಯಾಗಿ ಮುನ್ನಡೆಯುತ್ತಿರುವುದು ಅಭಿಮಾನದ ವಿಚಾರ. ಆಹಾರ್‌ ಹೊಟೇಲ್‌ ಉದ್ಯಮದ ಪ್ರತಿಷ್ಠೆಯ ಮತ್ತು ಪ್ರತಿಷ್ಠಿತ  ಸಂಸ್ಥೆಯಾಗಿದೆ. ಜಾಗತೀಕರಣದ ಈ ಕಾಲದಲ್ಲಿ ಆಹಾರ್‌ ಬದಲಾವಣೆಗಳಿಗೆ ಸ್ಪಂದಿಸಿ ಮುನ್ನಡೆಸುವ ಅಗತ್ಯವಿದೆ.  

ಆ ಮೂಲಕ ಸೇವೆಯು ಇನ್ನಷ್ಟು ಫಲಕಾರಿ ಆಗಬಲ್ಲದು. ಉದಯೋ ನ್ಮುಖ ಯುವ ಜನತೆಯಲ್ಲಿ ನಮ್ಮ ಉದ್ಯಮದ ಅರಿವು ಮೂಡಿಸಬೇಕು. ಹೊಟೇಲ್‌ ಉದ್ಯಮದ ನವ ವೈಜ್ಞಾನಿಕ ಮಾರ್ಪಾಡುಗಳನ್ನು ಪ್ರೋತ್ಸಾಹಿಸಬೇಕು. ನಮ್ಮ ಉದ್ಯಮವು ಹಲವಾರು ಸಮಸ್ಯೆ ಗಳನ್ನು ಎದುರಿಸುತ್ತಿದೆ ನಿಜ. ಇದಕ್ಕೆ ಅಧ್ಯಕ್ಷ  ಆದರ್ಶ್‌ ಶೆಟ್ಟಿ ಸಾರಥ್ಯದ ಸಮಿತಿ ಅವಿರತವಾಗಿ ಶ್ರಮಿಸಿ ಪರಿಹಾರಗಳನ್ನು ಕಂಡು ಹಿಡಿಯುತ್ತಿರುವುದು ಪ್ರಶಂಸನೀಯ. ಮುಂದೆಯೂ ಹೊಟೇಲಿಗರ ಪರ ಈ ಸಂಸ್ಥೆ ಬೆನ್ನೆಲುಬಾಗಿ ನಿಲ್ಲಲಿ. ಆಹಾರ್‌ ಉದ್ಯಮಕ್ಕೆ ಬಂಟರ ಸಂಘದ ಸಹಯೋಗ ಸದಾವಿದೆ ಎಂದು ನುಡಿದರು.

ಹೊಟೇಲ್‌ ಉದ್ಯಮಕ್ಕೆ ಸಂಬಂಧಿತ ದೇಶ ವಿದೇಶಗಳ ವಿಭಿನ್ನ ಆರೋಗ್ಯ ದಾಯಕ ಆಹಾರೋದ್ಯಮ, ಪಾನೀಯ ಇನ್ನಿತರ ಪರಿಕರಗಳ ವಸ್ತು ಪ್ರದರ್ಶನದ ಮಳಿಗೆಯು ಎಲ್ಲರ ಆಕರ್ಷಿಸಿತು. ಮಧ್ಯಾಹ್ನ ನಡೆದ ಆಹಾರೋದ್ಯಮ ಪೂರಕ ವಿಚಾರಿತ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಿಐಪಿಎಲ್‌ ಸಂಸ್ಥೆಯ ನಿರ್ದೇಶಕ ರಂಜಿತ್‌ ಶೆಟ್ಟಿ ಅವರು  ಬಯೊ ಎನಾರ್ಜಿ ಆ್ಯಂಡ್‌ ವೇಸ್ಟ್‌ ಮ್ಯಾನೇಜ್‌ಮೆಂಟ್‌ ವಿಚಾರವಾಗಿ ಮಾಹಿತಿ ನೀಡಿದರು.

ಉದ್ಯಮಗಳ ಅಧ್ಯಯನದಿಂದ ಧನಾತ್ಮಕ ಚಿಂತನೆ ಸಾಧ್ಯ. ಆದುದರಿಂದ ಸಾಮಾಜಿಕ ಚಿಂತನೆಯ ಸಂಘಟನೆಗಳು ಮಾನವ ಸಂಪನ್ಮೂಲವನ್ನು ವೃದ್ಧಿಸಿ ಜ್ಞಾನೋದಯದ ಅರಿವು ಪಡೆಯಬೇಕು.  ವೇಸ್ಟೇಜ್‌ ಬರೇ ಹೊಟೇಲ್‌ ಉದ್ಯಮದ ಸಮಸ್ಯೆಯಲ್ಲ. ಇದು ಎಲ್ಲರ ಸಮಸ್ಯೆ.  ಇದಕ್ಕೆ ಸರಕಾರ  ಮತ್ತು  ಖಾಸಗಿ ಸಂಸ್ಥೆಗಳ ಬಹಳಷ್ಟು ಯೋಜನೆಗಳಿಗೆ ಇದನ್ನು ಅಳವಡಿಸಿದಾಗ ತ್ಯಾಜ್ಯ ನಿರ್ವಹಣೆಯಾಗಿ ಸ್ವಸ್ಥ ಸಮಾಜ ನಿರ್ವಹಣೆಯೂ ಸಾಧ್ಯವಾಗುವುದು ಎಂದು  ರಂಜಿತ್‌ ಶೆಟ್ಟಿ ತಿಳಿಸಿದರು.

ಆಹಾರ್‌ನ ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಆರ್‌. ಶೆಟ್ಟಿ, ಗೌರವ ಕೋಶಾಧಿಕಾರಿ ಶಶಿಧರ ಜಿ. ಶೆಟ್ಟಿ, ಜತೆ ಕಾರ್ಯದರ್ಶಿ ವಿಶ್ವಪಾಲ್‌ ಎಸ್‌. ಶೆಟ್ಟಿ, ಜತೆ ಕೋಶಾಧಿಕಾರಿ ಜೆ. ಡಿ. ಶೆಟ್ಟಿ, ವಿವಿಧ ವಲಯಗಳ ಉಪಾಧ್ಯಕ್ಷರುಗಳಾದ ವಲಯ ಒಂದರ ಮಹೇಂದ್ರ ಎಸ್‌. ಕರ್ಕೇರ, ವಲಯ ಎರಡರ ಕೆ. ವಿ. ಶೆಟ್ಟಿ, ವಲಯ ಮೂರರ ವಿಜಯ ಕೆ. ಶೆಟ್ಟಿ, ವಲಯ ನಾಲ್ಕರ ಸುನಿಲ್‌ ಎಸ್‌. ಶೆಟ್ಟಿ, ವಲಯ ಐದರ ರವೀಂದ್ರನಾಥ್‌ ಎಲ್‌. ನೀರೆ, ವಲಯ ಆರರ ಅಮರ್‌ ಎಸ್‌. ಶೆಟ್ಟಿ, ವಲಯ ಏಳರ ರಾಜನ್‌ ಆರ್‌. ಶೆಟ್ಟಿ, ವಲಯ ಎಂಟರ ಜಗದೀಶ್‌ ಎಸ್‌. ಶೆಟ್ಟಿ, ವಲಯ ಒಂಬತ್ತರ ಕರುಣಾಕರ ಎಸ್‌. ಶೆಟ್ಟಿ, ವಲಯ ಹತ್ತರ ಪ್ರಭಾಕರ ಬಿ. ಶೆಟ್ಟಿ ಹಾಗೂ ಸಲಹಾ ಸಮಿತಿ, ಉಪ ಸಮಿತಿಗಳು, ಸದಸ್ಯರು, ಆಡಳಿತ ಸಮಿತಿ, ಮಾಜಿ ಅಧ್ಯಕ್ಷರುಗಳ ನೇತೃತ್ವದಲ್ಲಿ ಕಾರ್ಯಕ್ರಮವು ಜರಗಿತು.  ಆಹಾರ್‌ನ ಅಧ್ಯಕ್ಷ ಆದರ್ಶ್‌ ಶೆಟ್ಟಿ ಸ್ವಾಗತಿಸಿದರು. 

ಕಾರ್ಯನಿರ್ವಾಹಕ ಕಾರ್ಯ ದರ್ಶಿ ವಸಂತ್‌ ಕೆ. ಕಾರ್ಕಳ್‌ ಪ್ರಸ್ತಾವನೆಗೈದ‌ು ವಂದಿಸಿದರು. ಸದಸ್ಯ ಬಾಂಧವರು, ಹೊಟೇಲ್‌ ಉದ್ಯಮಿಗಳು, ವಿವಿಧ ಹೊಟೇಲ್‌ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಚಿತ್ರ- ವರದಿ:ರೋನ್ಸ್‌  ಬಂಟ್ವಾಳ್‌

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

byndoor

Kundapura: ಪ್ರತ್ಯೇಕ ಅಪಘಾತ ಪ್ರಕರಣ; ಗಾಯ

1-p-r

US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.