“ಸರ್ಕಾರದ ಸೌಲಭ್ಯ ಬಳಸಿಕೊಂಡು ಆರ್ಥಿಕ ಮಟ್ಟ ಹೆಚ್ಚಿಸಿಕೊಳ್ಳಿ’
Team Udayavani, Dec 22, 2017, 12:51 PM IST
ನೆಲಮಂಗಲ: ಸರ್ಕಾರದಿಂದ ದೊರೆಯುವ ಎಲ್ಲಾ ರೀತಿ ಸೌಲಭ್ಯ ಪಡೆದುಕೊಂಡು ಆರ್ಥಿಕ ಜೀವನ ಮಟ್ಟ ಸುಧಾರಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಅಂಜನಮೂರ್ತಿ ರೈತರಿಗೆ ಸಲಹೆ ನೀಡಿದರು. ತಾಲೂಕಿನ ಸೋಂಪುರ ಹೋಬಳಿಯ ಶಿವಗಂಗೆ ಗ್ರಾಮದಲ್ಲಿ ಆಲದಹಳ್ಳಿ ಗ್ರಾಮದ ರೈತ ಸಿದ್ದಯ್ಯನಿಗೆ ರಾಗಿ ಕಟಾವು ಯಂತ್ರ ವಿತರಿಸಿ ಅವರು ಮಾತನಾಡದರು.
ಕೃಷಿ ಯಂತ್ರಧಾರೆ ಕೇಂದ್ರ ಹೋಬಳಿಗಳಲ್ಲಿಯೂ ಆರಂಭ: ಆಧುನಿಕ ತಂತ್ರಜ್ಞಾದ ಪರಿಣಾಮದಿಂದ ಸರ್ಕಾರ ರೈತರಿಗೆ ರಿಯಾಯಿತಿ ದರದಲ್ಲಿ ಕೃಷಿ ಉಪಕರಣಗಳನ್ನು ನೀಡುತ್ತಿದೆ. ರೈತರ ಹಿತಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ತಂದಿದ್ದು ಸೌಲಭ್ಯಗಳನ್ನು ಉತ್ತಮವಾಗಿ ಬಳಸಿಕೊಂಡು ಹೆಚ್ಚು ಹೆಚ್ಚು ಇಳುವರಿ ಪಡೆಯಬೇಕು. ಇದರಿಂದ ರೈತರಿಗೆ ಕೂಲಿಕಾರರ ಸಮಸ್ಯೆ ನೀಗುವುದಲ್ಲದೇ ಕಡಿಮೆ ಶ್ರಮ, ಸಮಯ ಉಳಿತಾಯ ಹಾಗೂ ಕಡಿಮೆ ಖರ್ಚಿನೊಂದಿಗೆ ಕೆಲಸ ಬೇಗ ಆಗುತ್ತವೆ.
ಸರ್ಕಾರವು ರೈತರು ನೀಡುವ ಯಂತ್ರೋಪಕರಣಗಳಿಗೆ ಶೇ. 40ಗಿಂತ ಹೆಚ್ಚಿನ ಸಬ್ಸಿಡಿ ನೀಡುತ್ತಿರುವುದು ವರದಾನವಾಗಿದೆ. ಅತಿ ಸಣ್ಣ ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನ ಬಳಸಿಕೊಳ್ಳುವಂತಾಗಲಿ ಎಂಬ ಸದುದ್ದೇಶದಿಂದ ಸರ್ಕಾರದ ಸಹಭಾಗಿತ್ವದೊಂದಿಗೆ ಕೃಷಿ
ಯಂತ್ರಧಾರೆ ಕೇಂದ್ರಗಳನ್ನು ಪ್ರತಿ ಹೋಬಳಿಗಳಲ್ಲಿ ಆರಂಭ ಮಾಡಲಾಗಿದೆ. ಈ ಸೌಲಭ್ಯಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಆಧುನಿಕ ಕೃಷಿ ಉಪಕರಣ ಪಯೋಗಿಸಿಕೊಳ್ಳಿ: ತಾಪಂ ಅಧ್ಯಕ್ಷೆ ಮಮತಾ ಮಾತನಾಡಿ, ದೇಶ ಅಭಿವೃದ್ಧಿಯಾಗಿ ಎಲ್ಲಾ ರೀತಿ ಮುಂದುವರಿಯಬೇಕು ಎಂದರೆ ರೈತರು ಸಧೃಢವಾಗಿ ಬೆಳೆಯಬೇಕು. ಪವರ್ ಟಿಲ್ಲರ್ 1.47 ಲಕ್ಷ ರೂ. ಬೆಲೆಯುಳ್ಳದಾಗಿದ್ದು, ಸಬ್ಸಿಡಿ ರೂಪದಲ್ಲಿ ಆಲದಹಳ್ಳಿ ರೈತ ಸಿದ್ದಯ್ಯನಿಗೆ 24,875 ರೂ.ಗಳಿಗೆ ನೀಡಲಾಗಿದೆ. ಮಣ್ಣಿನ ಫಲವತ್ತತೆಯಿಂದ ಬೆಳೆ ಗುಣಮಟ್ಟ ನಿರ್ಧಾರವಾಗುತ್ತಿದ್ದು, ರೈತರು ಕೃಷಿಯಲ್ಲಿ ಆಧುನಿಕ ತಂತ್ರಜಾnನ ಬಳಸಿಕೊಂಡು ಕೃಷಿ ಮಾಡಿದರೆ ಉತ್ತಮ ಫಲವತ್ತತೆ ಪಡೆಯಬಹುದು. ಇದರಿಂದ ಈ ಮೂಲಕ ಆರ್ಥಿಕವಾಗಿ ಲಾಭ ಗಳಿಸಬಹುದು. ಈ ನಿಟ್ಟಿನಲ್ಲಿ ಮಣ್ಣನ್ನು ಸಂರಕ್ಷಿಸುವ ಅಗತ್ಯವಿದೆ .
ಆದ್ದರಿಂದ ರೈತರು ಆಧುನಿಕ ಉಪಕರಣ ಉಪಯೋಗಿಸಿಕೊಂಡು ಕೃಷಿ ಚಟುವಟಿಕೆ ಮಾಡುವ ಬಗ್ಗೆ ತಿಳಿವಳಿಕೆ ಮೂಡಿಸುವುದು ಅಗತ್ಯವಿದೆ ಎಂದರು. ರೈತರು ಬಿತ್ತನೆಗೆ ಮುನ್ನ ಭೂಮಿ ಹದ ಮಾಡಬೇಕು. ಮಣ್ಣಿನ ಪರೀಕ್ಷೆ ನಡೆಸಿ ಸೂಕ್ತ ಬೆಳೆ ಬೆಳೆಯುವ ಬಗ್ಗೆ ಮಾಹಿತಿ ಪಡೆದು ಆಯಾ ಮಣ್ಣಿಗೆ ಸೂಕ್ತವಾದ ಬೆಳೆ ಬೆಳೆಯಲು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಜಿಆಎಪಂ ಸದಸ್ಯ ಚೆಲುವರಾಜು, ತಾಪಂ ಸದಸ್ಯೆ ಸಿದ್ದಗಂಗಮ್ಮ, ಜಂಟಿ ಕೃಷಿ ನಿರ್ದೇಶಕ ಜೆ.ಸ್ವಾಮಿ, ಕೃಷಿ ನಿರ್ದೇಶಕಿ ಸುಶೀಲಮ್ಮ, ಸಹಾಯಕ ಕೃಷಿ ಅಧಿಕಾರಿಗಳಾದ ಜಿ.ಗಂಗಾಧರಯ್ಯ, ವೆಂಕಟೇಶ್, ಶಿವಗಂಗೆ ಗ್ರಾಪಂ ಅಧ್ಯಕ್ಷ ಹೊನ್ನಗಂಗಶೆಟ್ಟಿ, ಉಪಾಧ್ಯಕ್ಷೆ ಗಂಗಾಬಿಕೆ, ಸದಸ್ಯ ಮರಿಯಪ್ಪ, ಕವಿತಾ, ಧನಲಕ್ಷ್ಮೀ, ಅಗಳಕುಪ್ಪೆ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ, ಸೋಂಪುರ ವಿಎಸ್‌ಎಸ್‌ಎನ್ ಅಧ್ಯಕ್ಷ ಎಲ್. ಸದಸ್ಯ ಜಗದೀಶ್, ಸಿದ್ದರಾಜು, ಭೂ ನ್ಯಾಯ ಮಂಡಳಿ ಸದಸ್ಯ ಎನ್.ಆರ್. ಸಿದ್ದರಾಜು ಮತಿತ್ತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.