ಮಂತ್ರಾಲಯದಲ್ಲಿ ಕಲ್ಪತರು ನಾಡಿನ ತೆಂಗು!
Team Udayavani, Dec 22, 2017, 6:07 PM IST
ಹುಳಿಯಾರು: ಮಂತ್ರಾಲಯದಲ್ಲಿ ಕಲ್ಪತರು ನಾಡಿನ ತೆಂಗು ಬೆಳೆಯುವ ಅಭಿಯಾನಕ್ಕೆ ಪರಮ ಪೂಜ್ಯ ಸುಬುಧೇಂದ್ರ ತೀರ್ಥರ ಸಾನ್ನಿಧ್ಯದಲ್ಲಿ ಶಾಸಕ ಸಿಬಿ ಸುರೇಶ್ ಬಾಬು ತೆಂಗಿನ ಸಸಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಆಂಧ್ರಪ್ರದೇಶದ ತುಂಗಭದ್ರಾ ನದಿ ತಟದಲ್ಲಿರುವ ಮಂತ್ರಾಲಯವು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಾಗಿದ್ದು ರಾಯರ ವೃಂದಾವನ ದರ್ಶಿಸಲು ನಿತ್ಯವೂ ಕರ್ನಾಟಕದಿಂದ ಸಾವಿರಾರು ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ದರ್ಶನದ ನಂತರ ಪ್ರಸಾದ ಸ್ವೀಕರಿಸುತ್ತಾರೆ.
ಇಲ್ಲಿನ ಪ್ರಸಾದ ನಿಲಯದಲ್ಲಿ ಕಲ್ಪತರು ನಾಡಿನ ತೆಂಗು ಬೆಳಸಲು ಗುರುಗಳು ಇಚ್ಛೆ ವ್ಯಕ್ತಪಡಿಸಿದ್ದು ಗುರುರಾಯರ ಪ್ರೇರಣೆ ದೊರೆತ ಹಿನ್ನೆಲೆಯಲ್ಲಿ, ಮಂತ್ರಾಲಯದ ಶ್ರೀಮಠದ ಆವರಣ, ಗೋಶಾಲೆ ಆವರಣ ಹಾಗೂ ಮಠಕ್ಕೆ ಸೇರಿದ ತೋಟದಲ್ಲಿ ಒಂದು ಸಾವಿರ ತೆಂಗಿನ ಸಸಿ ನಡೆಸುತ್ತಿರುವುದಾಗಿ ಅವರು ತಿಳಿಸಿದರು. ಮೊದಲ ಹಂತವಾಗಿ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಭಕ್ತಾದಿಗಳೊಂದಿಗೆ ತಾವು ಮಂತ್ರಾಲಯಕ್ಕೆ ಆಗಮಿಸಿದ್ದು ಶ್ರೀಗಳ ಸಾನ್ನಿಧ್ಯದಲ್ಲಿ 300 ತೆಂಗಿನ ಸಸಿ ನೆಟ್ಟಿರುವುದಾದಾಗಿ ಅವರು ತಿಳಿಸಿದರು.
ಇದರ ಉಸ್ತುವಾರಿ ಹಾಗೂ ಪೋಷಣೆ ನೋಡಿಕೊಳ್ಳಲು ನಮ್ಮ ಭಾಗದ ರೈತರನ್ನು ಅಲ್ಲಿಯೇ ಒಂದು ವರ್ಷಗಳ ಕಾಲ ನೇಮಿಸಿರುವುದಾಗಿ ಹೇಳಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ರಾಮಚಂದ್ರಯ್ಯ ಹಾಗೂ ಕಲ್ಲೇಶ್, ಮಾಜಿ ಜಿಪಂ ಉಪಾಧ್ಯಕ್ಷೆ ಜಾನಮ್ಮ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹೊನ್ನಮ್ಮ ಶೇಷಯ್ಯ, ತಾಪಂ ಸದಸ್ಯರುಗಳಾದ ಜಯಮ್ಮ, ಗಂಗಮ್ಮ, ಕಲ್ಯಾಣಿಭಾಯಿ, ಎಚ್.ಎನ್.ಕುಮಾರ್, ಪುರಸಭಾ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸದಸ್ಯರಾದ ರೇಣುಕಮ್ಮ, ಖಲಂದರ್ ಸಾಬ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಗವಿರಂಗನಾಥ ಗೌಡಿ, ಪ್ರಕಾಶ್, ರವಿ, ರಮೇಶ್, ಹಿರಿಯ ಪತ್ರ ಬರಹಗಾರ ಹೆಚ್.ಎಸ್.ಲಕ್ಷ್ಮೀ ನರಸಿಂಹಯ್ಯ, ಗಾಯತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಲೋಕೇಶ್, ವಿಪ್ರಸಮಾಜದ ಕಾರ್ಯದರ್ಶಿ ವೆಂಕಟರಾಯ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.