ಆದರ್ಶ ಕುಣಿಕೆಯಿಂದ ಅಶೋಕ್ ಬಚಾವ್
Team Udayavani, Dec 23, 2017, 8:35 AM IST
ಮುಂಬಯಿ: 2ಜಿ ಹಗರಣದ ಸುಳಿಯಿಂದ ಸದ್ಯಕ್ಕೆ ಬಚಾವಾದ ಕಾಂಗ್ರೆಸ್ ಮತ್ತೂಂದು ಹಗರಣದ ಛಾಯೆಯಿಂದಲೂ ಹೊರಬರುವ ಲಕ್ಷಣಗಳಿವೆ. 2011ರ ಆದರ್ಶ್ ಹೌಸಿಂಗ್ ಸೊಸೈಟಿ ಹಗರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಅಶೋಕ್ ಚವ್ಹಾಣ್ ವಿರುದ್ಧ ಸಿಬಿಐ ವಿಚಾರಣೆ ನಡೆಸುವಂತೆ ಮಹಾರಾಷ್ಟ್ರ ರಾಜ್ಯಪಾಲ ಸಿ.ಎಚ್. ವಿದ್ಯಾಸಾಗರ್ ರಾವ್ 2016ರಲ್ಲಿ ನೀಡಿದ್ದ ಆದೇಶವನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.
ರಾಜ್ಯಪಾಲರ ಆದೇಶದ ವಿರುದ್ಧ ನ್ಯಾಯಾ ಲಯಕ್ಕೆ ಅಶೋಕ ಚವ್ಹಾಣ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾ| ರಂಜಿತ್ ಮೋರೆ ಹಾಗೂ ನ್ಯಾ| ಸಾಧನಾ ಜಾಧವ್ ಅವರುಳ್ಳ ಪೀಠ, “ರಾಜ್ಯಪಾಲರ ಅನುಮತಿ ಸಿಕ್ಕ ನಂತರ ಸಿಬಿಐ, ಅಶೋಕ್ ಚವ್ಹಾಣ್ ವಿರುದ್ಧ ಯಾವುದೇ ಹೊಸ ಸಾಕ್ಷ್ಯಾಧಾರಗಳನ್ನು ನೀಡಿಲ್ಲ. ಹಾಗಾಗಿ, ರಾಜ್ಯಪಾಲರ ಅನುಮತಿ ರದ್ದು ಗೊಳಿಸುವುದು ಔಚಿತ್ಯಪೂರ್ಣವಾಗಿದೆ’ ಎಂದು ಅಭಿಪ್ರಾಯಪಟ್ಟಿತು. ಇದೇ ಪ್ರಕರಣವನ್ನು ಸಿಬಿಐಗಿಂತ ಮೊದಲು ತನಿಖೆ ಮಾಡಿದ್ದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯುಳ್ಳ ಏಕಸದಸ್ಯ ಪೀಠ ಹಾಗೂ ನ್ಯಾಯಾಂಗ ತನಿಖಾ ವರದಿಗಳಲ್ಲೂ ಚವ್ಹಾಣ್ ವಿರುದ್ಧ ಪ್ರಬಲ ಸಾಕ್ಷಿಗಳನ್ನು ಒದಗಿಸಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಆರೋಪಗಳೇನು?
ಕಂದಾಯ ಸಚಿವರಾಗಿದ್ದಾಗ ಅಕ್ರಮವಾಗಿ ನಿಯಮ ಬದಲಿಸಿ ಶೇ. 40ರಷ್ಟು ಫ್ಲಾಟ್‌ಗಳನ್ನು ಸಾರ್ವಜನಿಕರಿಗೆ ನೀಡುವಂತೆ ತಿದ್ದುಪಡಿ. ಮುಖ್ಯಮಂತ್ರಿಯಾದ ನಂತರ, ಫ್ಲೋರ್ ಸ್ಪೇಸ್ ಇಂಡೆಕ್ಸ್ ನಿಯಮ ಉಲ್ಲಂ ಸಿ ಮತ್ತೂಂದು ಅಂತಸ್ತಿಗೆ ಅವಕಾಶ. ಅದಕ್ಕಾಗಿ ಕಿಕ್‌ಬ್ಯಾಕ್ ರೂಪವಾಗಿ ಎರಡು ಫ್ಲಾಟ್ ಪಡೆದು ಸಂಬಂಧಿಗಳಿಗೆ ಹಸ್ತಾಂತರ.
2ಜಿಯಂತೆ ಆದರ್ಶ್ ಕೂಡಾ ಹಗರಣಗಳಿಲ್ಲದ ಹಗರಣ. ಕಾಂಗ್ರೆಸ್‌ಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಇಂಥದ್ದೊಂದು ಸುಳ್ಳಿ ನ ಕಂತೆಯನ್ನು ಬಿಜೆಪಿ ಹೆಣೆದಿತ್ತಷ್ಟೆ.
ಸಂಜಯ್ ನಿರುಪಮ್, ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Parliament Winter Session: ಇಂದಿನಿಂದ ಸಂಸತ್ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Bengaluru: ಮನೆಯ ಮುಂದೆ ಕುಳಿತು ಮೊಬೈಲ್ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!
Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.