“ನನ್ನ ಫೇಸ್‌ಬುಕ್’ ಕಿರುಹೊತ್ತಿಗೆಗೆ ರೇವಣ್ಣ ಚಿಂತನೆ
Team Udayavani, Dec 23, 2017, 11:24 AM IST
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿಯನ್ನು ಹೊರತುಪಡಿಸಿದರೆ ಅತಿ ಹೆಚ್ಚು ಜನಪ್ರಿಯರಾಗಿರುವ ಸಾರಿಗೆ ಸಚಿವ ಎಚ್. ರೇವಣ್ಣ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, “ನನ್ನ ಫೇಸ್‌ಬುಕ್’ ಎಂಬ ಕಿರುಹೊತ್ತಿಗೆ ಹೊರತರಲು ಉದ್ದೇಶಿಸಿದ್ದಾರೆ.
ಸಚಿವರು ನಿತ್ಯ ತಾವು ಹಾಜರಾಗುವ ಕಾರ್ಯಕ್ರಮಗಳ ಮಾಹಿತಿ, ಛಾಯಾಚಿತ್ರ ಮತ್ತು ಅನಿಸಿಕೆಗಳು, ಸಾರಿಗೆ ಇಲಾಖೆಯಲ್ಲಿ ತಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳ ವಿವರ, ಸಿಬ್ಬಂದಿಗೆ ಹೇಳಿದ ಕಿವಿಮಾತುಗಳನ್ನು ಫೇಸ್‌ಬುಕ್‌ನಲ್ಲಿ ಅಪ್ ಲೋಡ್ ಮಾಡುತ್ತಿದ್ದಾರೆ. ಈಗ ಅದೆಲ್ಲವೂ “ನನ್ನ ಫೇಸ್‌ಬುಕ್’ ರೂಪದಲ್ಲಿ ಹೊರಬರಲಿದೆ. ಸಾರಿಗೆ ಇಲಾಖೆಗೆ ಸಂಬಂಧಿಸಿದ ಅಹವಾಲುಗಳು ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಆಗುತ್ತಿದ್ದಂತೆ ಸಚಿವರು ಅದಕ್ಕೆ ಸ್ಪಂದಿಸುತ್ತಾರೆ. ಈಚೆಗೆ ಮೈಸೂರಿನಲ್ಲಿ ವಿದ್ಯಾರ್ಥಿಯೊಬ್ಬ ಬಸ್ ಏರುವಾಗ ಚಕ್ರಕ್ಕೆ ಸಿಲುಕಿ ಕಾಲು ಮುರಿದಿತ್ತು. ಈ ಘಟನೆಯನ್ನು ಫೇಸ್‌ಬುಕ್‌ನಲ್ಲಿ ಉಲ್ಲೇಖೀಸಿ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ. ಜತೆಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ತಿಳಿಸಿದ್ದಾರೆ.
“ಬಸ್ ನಿರ್ವಾಹಕರಿಗೆ ಸೂಪರ್‌ಸ್ಟಾರ್ ರಜನಿಕಾಂತ್ ಸ್ಫೂರ್ತಿಯಾಗಬೇಕು. ನಾನು ಕೂಡ ವಿದ್ಯಾರ್ಥಿ ದೆಸೆಯಲ್ಲಿ ಬಸ್‌ನಲ್ಲೇ ಓಡಾಡುತ್ತಿದ್ದೆ. ಉತ್ತಮ ನಿರ್ವಾಹಕರನ್ನು ನೋಡಿದ್ದೇನೆ. ಅದರಲ್ಲಿಯೂ 10ಎ ಸಂಖ್ಯೆಯ ಬಸ್‌ನಲ್ಲಿ ಹನುಮಂತನಗರದ ಪ್ರಯಾಣ ಮರೆಯುವಂತಿಲ್ಲ. ಯಾಕೆಂದರೆ, ರಜನಿ ಆ ಬಸ್ ಕಂಡಕ್ಟರ್ ಆಗಿದ್ದರು. ಅವರ ಕರ್ತವ್ಯ ಎಲ್ಲರಿಗೂ ಸ್ಫೂರ್ತಿ’ ಎಂದು ಸಚಿವರು ಫೇಸ್‌ಬುಕ್‌ನಲ್ಲಿ ಕಿವಿಮಾತು ಹೇಳಿದ್ದಾರೆ. ಅಂದಹಾಗೆ, ರೇವಣ್ಣ ಅವರ ಸಾಮಾಜಿಕ ಜಾಲತಾಣಗಳ ಜವಾಬ್ದಾರಿಯನ್ನು ಸಚಿವರ ವಿಶೇಷ ಅಧಿಕಾರಿ ಎಸ್. ಶಂಕರಪ್ಪ ನಿರ್ವಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ದಾನದಲ್ಲಿ ಬೆಂಗಳೂರು ದೇಶದಲ್ಲೇ ನಂ.3
Bengaluru: ಬಿಷಪ್ ಕಾಟನ್ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್: ಆತಂಕ
Bengaluru: ಮನೆಯ ಬಾಲ್ಕನಿಯಲ್ಲಿ ಗಿಡಗಳ ಮಧ್ಯೆ ಗಾಂಜಾ ಬೆಳೆದಿದ್ದ ದಂಪತಿ ಬಂಧನ
Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!
Bengaluru: ಶಾಸಕ ಮುನಿರತ್ನ ಕೇಸ್: ವಿಕಾಸಸೌಧದಲ್ಲಿ ಸ್ಥಳ ಮಹಜರು
MUST WATCH
ಹೊಸ ಸೇರ್ಪಡೆ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
Bengaluru: ದಾನದಲ್ಲಿ ಬೆಂಗಳೂರು ದೇಶದಲ್ಲೇ ನಂ.3
Wandse, ಚಿತ್ತೂರು, ಇಡೂರು: ಹೊಂಡಗಳಿಗೆ ಮುಕ್ತಿ ಕೊಡಿ
Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.