ವಿರೋಧಿಗಳ ಹೃದಯದಲ್ಲೂ ಚಿಮ್ಮುತ್ತಿದೆ ಕೊಹ್ಲಿ ಗಾನ!


Team Udayavani, Dec 23, 2017, 2:04 PM IST

2556.jpg

ಹೇಳಿ ಕೇಳಿ ಅದು ಪಾಕಿಸ್ತಾನ. ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವುದರಿಂದ ಪಾಪಿಸ್ತಾನ ಎಂದೇ ಖ್ಯಾತಿ ಪಡೆದ ರಾಷ್ಟ್ರ. ಭಾರತದಲ್ಲಿ ಪಾಕಿಸ್ತಾನವನ್ನು ಎಷ್ಟು ವಿರೋಧಿ ಸ್ಥಾನದಲ್ಲಿ ನೋಡಲಾಗುತ್ತದೋ ಅದಕ್ಕಿಂತ ಒಂದು ಕೈ ಹೆಚ್ಚಿನ ಪ್ರಮಾಣದಲ್ಲಿಯೇ ಪಾಕ್‌ ನೆಲದಲ್ಲಿ ಭಾರತವನ್ನು ವಿರೋಧಿ ಸ್ಥಾನದಲ್ಲಿ ನೋಡಲಾಗುತ್ತಿದೆ ಅನ್ನುವುದು ನೋ ಡೌಟ್‌. ಉಭಯ ರಾಷ್ಟ್ರಗಳ ದ್ವೇಷದ ಮೂಲವನ್ನು ಕೆದಕುತ್ತಾ ಹೋದರೆ ನಾನಾ ವಿಷಯಗಳು ಸಿಗುತ್ತವೆ. ದೊಡ್ಡ ಮಟ್ಟದ ದ್ವೇಷದ ಕಿಡಿ ಹತ್ತಿಕೊಂಡಿದ್ದು, ಎರಡೂ ರಾಷ್ಟ್ರಗಳ ವಿಭಜನೆಯ ಸಂದರ್ಭದಲ್ಲಿ. ಅಲ್ಲಿಂದ ಇಲ್ಲಿಯವರೆಗೂ ಎರಡೂ ರಾಷ್ಟ್ರಗಳ ಸಂಬಂಧ ಎಣ್ಣೆ ಸೀಗೆಕಾಯಿ. ದುರದೃಷ್ಟವಶಾತ್‌ ಕ್ರೀಡಾ ಸಂಬಂಧವೂ ಇದರಿಂದ ಹೊರತಾಗಿಲ್ಲ. ಕ್ರಿಕೆಟ್‌ ಪಂದ್ಯವನ್ನಂತೂ ಪಕ್ಕಾ ಯುದ್ಧದ ರೀತಿಯಲ್ಲಿಯೇ ನೋಡಲಾಗುತ್ತಿದೆ. ಆದರೆ ಇಂತಹ ಕಡು ವಿರೋಧಿ ರಾಷ್ಟ್ರದ ಜನರಲ್ಲೂ ಒಬ್ಬ ಭಾರತೀಯ ಕ್ರೀಡಾಪಟು ಹೃದಯದಲ್ಲಿಯೇ ಸ್ಥಾನ ಪಡೆದಿದ್ದಾನೆ. ಅದು ಅಂತಿಂಥ ಅಭಿಮಾನಲ್ಲ. ಸ್ವತಃ ಪಾಕ್‌ ಕ್ರೀಡಾಪಟುಗಳನ್ನೇ ಹಿಂದಿಕ್ಕಿದ್ದಾನೆ. ಈತನೇ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ. ಈ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ.

ಭಾರತದ ಧ್ವಜ ಹಾರಿಸಿ ಜೈಲು ಪಾಲು
ಕೊಹ್ಲಿಗೆ ಪಾಕಿಸ್ತಾನದಲ್ಲಿ ಯಾವ ಮಟ್ಟದಲ್ಲಿ ಅಭಿಮಾನಿಗಳಿದ್ದಾರೆ ಅನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಅದು 2016 ಜನವರಿಯಲ್ಲಿ ನಡೆದ ಘಟನೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯದಲ್ಲಿ ಕೊಹ್ಲಿ 90 ರನ್‌ ಬಾರಿಸಿ ಭಾರತದ ಗೆಲುವಿನ ರೂವಾರಿಯಾಗಿದ್ದರು. ಪಂದ್ಯ ವೀಕ್ಷಿಸುತ್ತಿದ್ದ ಕೊಹ್ಲಿಯ ದೊಡ್ಡ ಅಭಿಮಾನಿಯಾಗಿದ್ದ ಪಾಕ್‌ನ ಉಮರ್‌ ದ್ರಾಜ್‌ ಕುಣಿದು ಕುಪ್ಪಳಿಸಿ ಭಾರತದ ಧ್ವಜವನ್ನು ತನ್ನ ಮನೆ ಮೇಲೆ ಹಾರಿಸಿ ಬಿಟ್ಟ. ನಂತರ ಆತ ಜೈಲಿಗೆ ಹೋಗ್ಬೇಕಾಯ್ತು. ಕೋರ್ಟ್‌ 10 ವರ್ಷ ಜೈಲು ಶಿಕ್ಷೆ ಪ್ರಕಟಿಸಿತ್ತು. ಅಂತಿಮವಾಗಿ ಆತ ಕೊಹ್ಲಿ ಮೇಲಿನ ಅಭಿಮಾನದಿಂದ ಭಾರತದ ಧ್ವಜ ಹಾರಿಸಿದ ಅಮಾಯಕ ಎಂಬುದು ಸಾಬೀತಾದ ಮೇಲೆ ಷರತ್ತಿನ ಮೇಲೆ ಬಿಡುಗಡೆಯ ಭಾಗ್ಯ ಸಿಕು¤.

ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಾಟ
ಪ್ರತಿವರ್ಷ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಾಟ ನಡೆಸಿದ ಬೇರೆ ಬೇರೆ ಕ್ಷೇತ್ರದ ಸಾಧಕರ ಪಟ್ಟಿಯನ್ನು ಗೂಗಲ್‌ ಬಿಡುಗಡೆ ಮಾಡುತ್ತದೆ. ಅದೇ ರೀತಿ ಪ್ರಸಕ್ತ ವರ್ಷದಲ್ಲಿ ಪಾಕಿಸ್ತಾನದಲ್ಲಿ ಅತೀ ಹೆಚ್ಚು ಹುಡುಕಾಟ ನಡೆಸಿದ ಕ್ರೀಡಾಪಟುಗಳ ಪಟ್ಟಿ ಬಿಡುಗಡೆ ಆಗಿದೆ. ಅಚ್ಚರಿ ಅಂದರೆ ನಂ.1ನೇ ಸ್ಥಾನದಲ್ಲಿ ಕೊಹ್ಲಿ ಇದ್ದಾರೆ. ಸ್ವತಃ ಪಾಕಿಸ್ತಾನದ ಕ್ರಿಕೆಟಿಗರನ್ನು ಅವರದೇ ನೆಲದಲ್ಲಿ ಹಿಮ್ಮೆಟ್ಟಿಸಿದ ಖ್ಯಾತಿ ಕೊಹ್ಲಿ ಅವರದು.

ಮಿಸ್‌ ಯೂ ಕೊಹ್ಲಿ ಕೂಗು
2009ರಲ್ಲಿ ಶ್ರೀಲಂಕಾ ತಂಡದ ಮೇಲೆ ಲಾಹೋರ್‌ನಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದರು. ಆ ನಂತರ ಪಾಕ್‌ ಪ್ರವಾಸ ಹೋಗಲು ಇತರೆ ರಾಷ್ಟ್ರಗಳು ಹಿಂದೇಟು ಹಾಕುತ್ತವೆ. ಹೀಗಾಗಿ ಸುಮಾರು 8 ವರ್ಷಗಳಿಂದ ಅಲ್ಲಿ ಅಂತಾರಾಷ್ಟ್ರೀಯ ಪಂದ್ಯವೇ ನಡೆದಿರಲಿಲ್ಲ. ಈ ಬಾರಿ ಪಾಕ್‌ ಕ್ರಿಕೆಟ್‌ ಮಂಡಳಿ ಪ್ರಯತ್ನಪಟ್ಟು ಟಿ20 ವಿಶ್ವ ಇಲೆವೆನ್‌ ಟೂರ್ನಿಯನ್ನು ಆಯೋಜಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ವಿಶ್ವ ಇಲೆವೆನ್‌ ತಂಡದಲ್ಲಿ ಭಾರತದ ಯಾವ ಆಟಗಾರರು ಆಡಿರಲಿಲ್ಲ. ಪಂದ್ಯ ನೋಡಲು ಬಂದ ಪಾಕ್‌ ಅಭಿಮಾನಿಗಳು “ಮಿಸ್‌ ಯೂ ಕೊಹ್ಲಿ’ ಎಂದು ಬ್ಯಾನರ್‌ ಹಿಡಿದು ನಿಂತಿದ್ದರು. ಕೊಹ್ಲಿ ಆಡಬೇಕಿತ್ತು ಅಂಥ ಕೂಗನ್ನು ಸಾಮಾಜಿಕ ಜಾಲತಾಣದಲ್ಲಿ ಎಬ್ಬಿಸಿದ್ದರು.

ಹನಿಮೂನ್‌ ಫೋಟೋ ವೈರಲ್‌ ಇತ್ತೀಚೆಗೆ ಇಟಲಿಯಲ್ಲಿ ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಅವರನ್ನು ಕೊಹ್ಲಿ ವಿವಾಹವಾಗಿದ್ದಾರೆ. ಹಾಗೇ ಹನಿಮೂನ್‌ ಗೆ ಹೋದ ಫೋಟೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಆದರೆ ಪಾಕ್‌ ಅಭಿಮಾನಿಗಳು ಫೋಟೋಶಾಪ್‌ ಮೂಲಕ ಪಾಕ್‌ನ ಪ್ರಸಿದಟಛಿ ಸ್ಥಳಗಳಲ್ಲಿ ಕೊಹ್ಲಿ ಹನಿಮೂನ್‌ ಫೋಟೋ ಹಾಕಿ ಪಾಕ್‌ಗೂ ಕೊಹ್ಲಿ ಭೇಟಿ ನೀಡಿದ್ದ ಅಂಥ ವೈರಲ್‌ ಮಾಡಿದ್ದಾರೆ. ಇಂಥ ಅಭಿಮಾನ ಪಾಕ್‌ ಕ್ರಿಕೆಟಿಗರಿಗೂ ಸಿಗುತ್ತಿಲ್ಲ.

ಆಟಗಾರರೇ ಅಭಿಮಾನಿಗಳು ಕೊಹ್ಲಿಗೆ ಪಾಕ್‌ ತಂಡದಲ್ಲಿಯೇ ಅಭಿಮಾನಿಗಳ ವರ್ಗವಿದೆ. ಅದರಲ್ಲಿಯೂ 2017 ಲಂಡನ್‌ನಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿ ಹೀರೋ ಮೊಹಮ್ಮದ್‌ ಅಮೀರ್‌ ತಾನು ಕೊಹ್ಲಿಯ ದೊಡ್ಡ ಅಭಿಮಾನಿ, ಅವರಿಗೆ ಬೌಲಿಂಗ್‌ ಮಾಡುವುದನ್ನೇ ಸದಾ ಎದುರುನೋಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಸಫ್ರಾìಜ್‌ ಸೇರಿದಂತೆ ಅನೇಕರು ಕೊಹ್ಲಿ ಗುಣಗಾನ ಮಾಡುತ್ತನೇ ಇರುತ್ತಾರೆ

ಕೊಹ್ಲಿ ಮೇಲೆ ಈ ಮಟ್ಟದಅಭಿಮಾನ ? 

ಕ್ರೀಡೆ, ಕಲೆಗೆ ಎಲ್ಲೆ ಇಲ್ಲ ಅನ್ನುವುದು ನಿಜ. ಆದರೆ ಕೊಹ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಅಭಿಮಾನಿಗಳನ್ನು ಪಾಕ್‌ನಲ್ಲಿ ಹೊಂದಿರಲು ಕಾರಣ ಏನು ಅನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಇದಕ್ಕೆಲ್ಲ ಕಾರಣ ಒಂದು ಕೊಹ್ಲಿಯ ಅದ್ಭುತ ಆಟ. ಮತ್ತೂಂದು ಪಾಕ್‌ ಆಟಗಾರರ ಜತೆ ಕೊಹ್ಲಿ ಉತ್ತಮ ಸಂಬಂಧ ಹೊಂದಿರುವುದು. ಕಳೆದ ವರ್ಷ ಪಾಕ್‌ನ ಸ್ಫೋಟಕ ಆಟಗಾರ ಶಾಹಿದ್‌ ಅಫ್ರಿದಿ ನಿವೃತ್ತಿಯಾಗಿದ್ದರು. ಈ ಸಂದರ್ಭದಲ್ಲಿ ಕೊಹ್ಲಿ ಭಾರತದ ಆಟಗಾರರ ಹಸ್ತಾಕ್ಷರ ಉಳ್ಳ ತನ್ನ ಜೆರ್ಸಿಯನ್ನು ಅಫ್ರಿದಿಗೆ ಕಳುಹಿಸಿದ್ದರು. ಆ ಶರ್ಟ್‌ ಅನ್ನು ಅಫ್ರಿ ದಿ ಟ್ವೀಟರ್‌ಗೆ ಹಾಕಿದ್ದರು. ಇದು ಕೂಡ ಅಲ್ಲಿಯ ಕ್ರೀಡಾಭಿಮಾನಿಗಳ ಮನಸ್ಸು ಗೆದ್ದಿತ್ತು. ಒಮ್ಮೆ ಅಭಿಮಾನಿಯೊಬ್ಬರ ಪ್ರಶ್ನೆಗೆ ಟ್ವೀಟರ್‌ನಲ್ಲಿ ಉತ್ತರಿಸಿದ ಕೊಹ್ಲಿ, ತಾನು ಎದುರಿಸಿದ ಕಠಿಣ ಬೌಲರ್‌ ಮೊಹಮ್ಮದ್‌ ಅಮೀರ್‌ ಅಂದಿದ್ದರು. ಹೀಗಾಗಿ ಆಗಾಗ ಪಾಕ್‌ ಆಟಗಾರರನ್ನು ಕೊಹ್ಲಿ ಹೊಗಳುವುದು ಅಲ್ಲಿಯ ಅಭಿಮಾನಿಗಳಿಗೆ ಕೊಹ್ಲಿ ಮೇಲೆ ಅಭಿಮಾನ ಚಿಮ್ಮಿಸುತ್ತಿದೆ.

ಮಂಜು ಮಳಗುಳಿ

ಟಾಪ್ ನ್ಯೂಸ್

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

10-madikeri

Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.