ಆಶ್ಲೇಷ ನಕ್ಷತ್ರ ಅಂದರೆ, ಏನು, ಹೇಗೆ ಅನ್ನೋದು ಗೊತ್ತಾ?


Team Udayavani, Dec 23, 2017, 2:49 PM IST

7.jpg

 ಆಶ್ಲೇಷಾ ನಕ್ಷತ್ರದ ವಿಚಾರದಲ್ಲಿ ದ್ವಿಮುಖ ಘಟಕಗಳು ಇಲ್ಲಿ ಆರೂಢವಾಗಿತ್ತವೆ ಎಂಬುದೊಂದು ವಿಶೇಷ. ಯಾಕೆಂದರೆ ಉತ್ಪಾತ ರೂಪಿಯಾದ ಬುಧನ ಒಡೆತನದ ಈ ನಕ್ಷತ್ರದಲ್ಲಿ, ಸುರುಳಿ ಸುರುಳಿಯಾಗಿ ದೇಹವನ್ನು ಸುತ್ತಿಕೊಂಡ ಸರ್ಪದ ಶರೀರ ಕೂಡ ಬೆಸೆದುಕೊಂಡಿದೆ. ಬಹುದೂರದಲ್ಲಿರುವ ಈ ನಕ್ಷತ್ರವನ್ನು ನಮ್ಮ ಆಷೇìಯ ಭಾರತೀಯ ಜ್ಯೋತಿಷ್ಯ ವಿಜ್ಞಾನ ಪರಂಪರೆ ಜ್ಞಾನದ ಮೂಲಕ ( ದೈವ ಒದಗಿಸಿದ ಪ್ರೇರಣೆಯ ನೆರವಿನಿಂದ) ಹಾಗೂ ಕಣ್ಣಿಗೆ ಗೋಚರಿಸುವ ನೆಲೆಯ ಮೇಲಿಂದ ವಿಷ ಭರಿತವಾದ ಸರ್ಪವು ಕಕ್ಕುವ ವಿಷದಂತೆ ಇದು ಎಲ್ಲವೂ ಸರಿಯಾಗಿರದಿದ್ದರೆ ಅನಿಷ್ಟವನ್ನೇ ತುಂಬಿಕೊಂಡ ವಿಷಮಯ ಎಂದು ಗುರುತಿಸಿದೆ. ಕರ್ಕಾಟಕ ರಾಶಿಯಲ್ಲಿ ಇದು, ರಾಶಿಯಲ್ಲಿರುವ ಒಟ್ಟೂ 30 ಡಿಗ್ರಿ ವ್ಯಾಪ್ತಿಯಲ್ಲಿ 16.40ನಿಂದ 30ನೇ ಡಿಗ್ರಿಯವರೆಗೆ ವ್ಯಾಪಿಸಿರುತ್ತದೆ. ಕರ್ಕಾಟಕ ರಾಶಿಯ ಯಜಮಾನ ಚಂದ್ರನಾಗಿದ್ದರೂ, ಈ ನಕ್ಷತ್ರದ ಯಜಮಾನ ಬುಧನಾಗಿದ್ದಾನೆ. ಚಂದ್ರನ ಮಗನೇ ಬುಧನಾದರೂ ಚಂದ್ರನೊಂದಿಗೆ ಬುಧನು ಹಾರ್ಧಿಕ ಅಂಶಗಳನ್ನು ಪಡೆದಿರುವದಿಲ್ಲ. ಆಶ್ಲೇಷಾ ನಕ್ಷತ್ರದವರಿಗೆ ಮುಖ್ಯವಾಗಿ ಹೊಂದಾಣಿಕೆ ಇರದ ಚಂದ್ರ ಮತ್ತು ಬುಧರೊಂದಿಗೆ ಬಸವಳಿಕೆ ಎದುರಿಸಬೇಕಾಗುತ್ತದೆ. ಹೀಗಾಗಿ ಬುದ್ಧ ಚಂದ್ರನ್ನು ಮೀರಿಸಿ ವಿಷಯುಕ್ತ ಸರ್ಪ ದೈವತ್ವ ( ಸರ್ಪ ದೇವತೆಗಳು) ಈ ನಕ್ಷತ್ರವನ್ನು ಆಳುತ್ತದೆ. ತೀಕ್ಷಣತೆಯಿಂದ ಈ ನಕ್ಷತ್ರ ಚಲನಶೀಲಗೊಳ್ಳುವ ಈ ನಕ್ಷತ್ರ ಎಲ್ಲವೂ ಸರಿಯಾಗಿದ್ದರೆ ಒಳ್ಳೆಯ ಬೌದ್ಧಿಕ ನಿಕ್ಷೇಪ ಒದಗಿಸಿ ವ್ಯಕ್ತಿಯನ್ನು ಮೇಲೆತ್ತಬಲ್ಲದು. ಸರಿ ಇರದಿದ್ದರೆ ಎಲ್ಲವೂ ವಿಷಮಯವಾಗಿ ಪೂರ್ತಿ ಬಸವಳಿಕೆ.

  ರಾಮಾಯಣದ ಸಂದರ್ಭದಲ್ಲಿ ಲಕ್ಷ್ಮಣ ಹಾಗೂ ಶತ್ರುಘ್ನರು ಈ ನಕ್ಷತ್ರದಲ್ಲಿ ಹುಟ್ಟಿದ್ದರು ಎಂಬ ಉಲ್ಲೇಖವಿದೆ. ಮಹಾತ್ಮಾಗಾಂಧೀ, ಜವಾಹರಲಾಲ್‌ ನೆಹರು, ಹೃತ್ವಿಕ್‌ ರೋಶನ್‌ ಮುಂತಾದವರೆಲ್ಲ ಆಶ್ಲೇಷಾ ನಕ್ಷತ್ರದಲ್ಲಿ ಜನಿಸಿದವರು. ಆಶ್ಲೇಷಾ ನಕ್ಷ¤ತ್ರದವರೆಲ್ಲ ತೊಂದರೆಯಾಗುತ್ತದೆ ಎಂದು ಹೇಳಬಾರದು. ಹೌದು, ನೆಲೆತಪ್ಪಿದ ಮನೋಸ್ಥಿತಿಗೆ, ಗೊಂದಲದೊಂದಿಗಿನ ಭಾವುಕತೆ, ಏಕಾಏಕಿ ಅತಂತ್ರತೆ ಹಾಗೂ ಆತಂಕಗಳೊಂದಿಗೆ ಚಡಪಡಿಸುವುದು, ತಮ್ಮನ್ನು ಸುರಕ್ಷಿತವಾಗಿಸಿಕೊಂಡಿರಲು ಇತರರನ್ನು ಮಾತಿನ ಮೂಲಕ, ಭಾವನೆಗಳ ಮೂಲಕ ದಾಳಿ ಗೊಳಪಡಿಸುವುದು, ಸೂಕ್ತವಲ್ಲದ ವಿಚಾರಣೆಗಳೊಂದಿಗೆ ಪ್ರಯೋಗ ನಡೆಸುತ್ತಿರುವುದು, ಇರುವುದನ್ನು ಇನ್ನೂ ಹೆಚ್ಚಿನ ನಿರೀಕ್ಷೆಯ ಜೊತೆ ಮಾಡಲು ತನಗೆ ತಾನೇ ಗೋಳಾಡಿಕೊಳ್ಳುವುದು ಇದರ ಜಾಯಮಾನ. 

  ಆಶ್ಲೇಷ ನಕ್ಷತ್ರದ ಸಕಾರಾತ್ಮಕ ಗುಣಧರ್ಮಗಳು

 ತಾತ್ವಿಕ ವಿಚಾರಗಳ ಬಗೆಗೆ ಈ ನಕ್ಷತ್ರದ ನಿಕ್ಷೇಪಗಳಿಂದಾಗಿ ಆಶ್ಲೇಷ ನಕ್ಷತ್ರದವರು ಉತ್ತೇಜನ ಪಡೆಯುತ್ತಾರೆ. ತಾತ್ವಿಕತೆ ಇರದ ಬದುಕೂ ಒಂದು ಬದುಕೇ ಎಂಬುದು ಇವರ ಅಂತರಂಗದ ಪ್ರಶ್ನೆ, ತಹತಹ ಇದ್ದೇ ಇರುತ್ತದೆ. ಬುದ್ಧಿವಂತರಾಗಿರುತ್ತಾರೆ. ಬೌದ್ಧಿಕ ಶ್ರೀಮಂತಿಕೆ ಎಂದರೆ ದುಷ್ಟ ಬುದ್ಧಿಯಿಂದಾಗಿ ಅಲ್ಲ. ಸಾತ್ವಿಕತೆಯಿಂದ ತುಡಿಯಬೇಕಾದ ಬೌದ್ಧಿಕತೆ ಇಲ್ಲಿ ಸ್ವೀಕಾರಾರ್ಹ. ಜಾಣತನದ ನಡೆ. ಸುಸಂಬದ್ಧತೆಗಾಗಿನ ಜಾಣ ನಡೆ. ಗೋಜಲುಗಳನ್ನು ಬಯಸರು. ಅನ್ಯರಿಗಾಗಿಯೂ ಗೋಜಲುಗಳನ್ನು ಎಬ್ಬಿಸಿ ಅವಾಂತರ ಸೃಷ್ಟಿಸಲಾರರು. ಬಹುಮುಖ ವ್ಯಕ್ತಿತ್ವ ಹೊಂದಿದ್ದು ಜೀವನದಲ್ಲಿ ಅರ್ಥಪೂರ್ಣ ಜೀವನದ ಬಗೆಗಾಗಿ ಕಾತರ ಹೊಂದಿರುತ್ತಾರೆ.  ವ್ಯವಧಾನ ಹೊಂದಿರದವರಾಗಿ ಸಮಯವಧಾನದ ಧಾತು ಗುಟ್ಟಿಯಾಗಿರುತ್ತದೆ. ಒಟ್ಟಿನಲ್ಲಿ ಸಮತೋಲನದೊಂದಿಗೆ ಬದುಕನ್ನು ಮುಂದುವರಿಸಲು, ಸ್ವತಂತ್ರ ಜೀವನ ಹೊಂದಿರಲು ಚಿತ್ತ ಹರಿಸುತ್ತಾರೆ. ಒಂದೇ ಉದ್ಯೋಗವನ್ನು ನಂಬಲಾರರು. ತಮ್ಮ ಚಾತುರ್ಯ, ಜಾಣ್ಮೆ, ಸಮಯಾವಧಾನ, ಸಾತ್ವಿಕತೆ, ನಾಯಕತ್ವದ ಮಹತ್ತರತೆ ಅರಿತು ಮುಂದಡಿಯಿಡುವವರು. ನಾಯಕರಾಗಿ ಗೆಲ್ಲಲು ಅಡಿಯಿಡುತ್ತಾರೆ. ಅನ್ಯರನ್ನು ಬಸವಳಿಯಲು ಬಿಡದೆ ಹೆರವರ ಮನೋರಂಜನೆಗಾಗಿ  ಆತ್ಮೀಯವಾಗಿ ಹೆರವರ ಜೊತೆ ಬೆರೆಯಬಲ್ಲರು. ಹಿಡಿದ ಕೆಲಸ ಕೈ ಬಿಡದೆ ನಿಯೋಜಿತ ಕೆಲಸ ಕಾರ್ಯಗಳನ್ನು ಮಾಡಬಲ್ಲರು. ಯಾವ ವಿಚಾರದಲ್ಲಿ ಆಸಕ್ತಿ ಉಂಟಾಗುತ್ತದೋ ಹೊಸತನ ತಂದು ಒಂದು ಪರಿಪೂರ್ಣತೆ ಒದಗಿಸಿಕೊಡುವಲ್ಲಿ ಹೆಚ್ಚಿನ ಮುತುವರ್ಜಿ ತೋರಿಸುತ್ತಾರೆ. ಧಾರ್ಮಿಕ, ಪಾರಮಾರ್ಥಿಕ ವಿಚಾರಗಳಲ್ಲಿ ಆಸಕ್ತಿ ಹೊಂದಿರುತ್ತಾರೆ. 

   ಆಶ್ಲೇಷಾ ನಕ್ಷತ್ರದ ನಕಾರಾತ್ಮಕ ಗುಣಗಳು..
 ಮಾನಸಿಕ ಏರುಪೇರುಗಳನ್ನು ಹೊಂದಲು ಸಾಧ್ಯತೆಗಳು ಜಾಸ್ತಿ. ಆಕಾಶವೇ ತಲೆಯ ಮೇಲೆ ಬಿದ್ಧವರಂತೆ ಇರುವುದು ಇವರ ಜಾಯಮಾನವಾಗಬಹುದು. ಖನ್ನತೆಯಿಂದ ಬಳಲುವ ಸಾಧ್ಯೆತೆಗಳು ಜಾಸ್ತಿ. ಮೋಸ ಹೋಗುವ ಪ್ರವೃತ್ತಿ ಜಾಸ್ತಿ. ಯಾರನ್ನೂ ಆರೈಕೆ ಮಾಡುವುದಕ್ಕೆ ಮುಂದಾಗದೇ ಇರುವ ಪ್ರವೃತ್ತಿ ಹೊಂದಬಹುದು. ಹೇಳಬೇಕಾದುದನ್ನು ಹಿತವಾಗಿ ಹೇಳದಿರಬಹುದು. ಯೋಜನೆಗಳನ್ನು ಹಾಕಿಕೊಳ್ಳದೇ ಕಾರ್ಯಪ್ರವೃತ್ತರಾಗಬಹುದು. ಹೀಗಾಗಿ ಅಪ್ರಿಯರಾಗುವ ಸಾಧ್ಯತೆ ಅಧಿಕ. ಸಾಮಾಜಿಕವಾದ ಬದ್ಧತೆಯನ್ನು ಮೈಗೂಡಿಸಿಕೊಳ್ಳುವುದು ಇವರಿಗೆ ಕಷ್ಟವಾಗಬಹುದು. ನಿಯಮಗಳ ಉಲ್ಲಂಘನೆಯನ್ನು ಮಾಡುವುದು ಇವರಿಗೆ ಪ್ರಿಯವಾದೀತು. ಉಪಕರಿಸಿದವರಿಗೇ ತಿರುಗಿ ಬೀಳುವ ಮನೋಭಾವ ಬರಬಹುದು. ನೀವು ಮಾಡಿದ್ದು ತಪ್ಪು ಎಂದು ಅಂದು ಅನ್ಯರ ಬಗೆಗೆ ಕಹಿ ಭಾವನೆಯನ್ನು ತೊರೆಯಲಾಗದೆ ಬಳಲಬಹುದು. ಅನ್ಯರು ತನ್ನ ತಾಳಕ್ಕೆ ಕುಣಿಯಬೇಕೆಂಬ ಭಾವ ಹೊಂದಿರಬಹುದು. ಮಾತನಾಡುತ್ತ, ಆಡುತ್ತ ಎದುರಿಗಿದ್ದವರು ಆಕರ್ಷಿತರಾಗದೇ ಬಳಲಿಕೆಗೆ ತುತ್ತಾದರು ಎಂಬುದನ್ನು ಯೋಚಿಸಲಾರರು.  ಯಾರ ಬಗೆಗೂ ಒಳ್ಳೆಯ ಮಾತು, ಪ್ರಶಂಸೆ ಮಾಡುವ ಗುಣ ಇವರಿಗೆ ತಿಳಿಯದು. ದೂರ ಸರಿದು ಇರಲು ಬಯಸುತ್ತಾರೆಯೇ ವಿನಾ ಹೊಂದಾಣಿಕೆ ಕಷ್ಟ. ಉಪಯೋಗವಾಗುವುದನ್ನು ಮಾಡುವುದು ಕಷ್ಟ. ಹಿಂದು ಮುಂದು ಯೋಚಿಸದೇ ಕಾರ್ಯತತ್ಪರ ಗೊಳ್ಳುವುದು ಗುಣವಾಗಬಹುದು. ಸರ್ರನೆ ದೂರವಾಗುಳಿಯಲು ಬಯಸುತ್ತಾರೆ. ಒಂದೊಂದು ಸಲ ಒಂದೊಂದು ರೀತಿಯಾಗಿರುವುದು ಸ್ವಭಾವ, ತಮ್ಮ ಕೆಲಸ ಮಾಡಿಸಿಕೊಳ್ಳಲು ಯಾವ ಸುಳ್ಳಿಗೂ ಸಿದ್ಧ, ಸುಮ್ಮನೆ ಅನ್ಯರನ್ನು ಸಿಕ್ಕಿ ಹಾಕಿಸುವ ಗುಣ, ಒಳಗೊಳಗೇ ಮುಗಮ್ಮಾಗಿ  ಇರುವುದು ಜಾಸ್ತಿ. ಥಟ್ಟನೆ ಕೋವಿಷ್ಟರಾಗುವುದು. ವಿನೀತರಾಗುವುದು ಕಷ್ಟ. ಮೊಂಡುತನ ಜಾಸ್ತಿ. 

ಈ ಗುಣಗಳು ಬಂದೇ ಬರುವವೇ?

  ಈ ನಕ್ಷತ್ರ ಸರ್ಪದ ತಣ್ಮನೆಯ ವಿಷ, ಬೌದ್ಧಿಕ ಶಕ್ತಿ ಎರಡನ್ನೂ ಒಳಗೊಂಡ ಪರಿಯಾದ್ದರಿಂದ ಕೆಂಡದ ಕಾವು ಹೊಂದಿದ ಕುಜಗ್ರಹ, ಅಡೆತಡೆ ತರುವ ಕೇತು ವಿಘ್ನಗಳನ್ನು ನಿರ್ಮಿಸುವ ರೀತಿ, ನಿಧಾನವಾಗಿಸುವ ಶನೈಶ್ಚರ, ಕಾರ್ಯಕ್ಷಮತೆ ನೀಡುವ ಗುಣ ಹೊಂದಿದ್ದರೂ ಕಾಂತಿಗೆ ಭಂಗತರುವ ಸೂರ್ಯರು ಮುಖ್ಯವಾಗಿ ಬುಧ ಗ್ರಹ, ಚಂದ್ರ ಗ್ರಹಗಳನ್ನು ಅಂತೆಯೇ ರಾಹುವನ್ನು ಹೇಗೆ ಸಂವೇದಿಸುತ್ತಾರೆ ಎಂಬುದರ ಮೇಲೆ ಆಶ್ಲೇಷಾ ನಕ್ಷತ್ರದವರು ಅಪಾರವಾದ ಶಕ್ತಿ ಅಥವಾ ದೌರ್ಬಲ್ಯಗಳು ಹೇಗೆ ರೂಪಿತವಾಗುತ್ತವೆ ಎಂಬುದನ್ನು ನಿರ್ಧರಿಸಬೇಕು. 

  ಪ್ರಧಾನವಾಗಿ ನಕ್ಷತ್ರದ ಮೊದಲು ಪಾದವು ಧನಸ್ಸು ರಾಶಿಯನ್ನು ವ್ಯಾಪಿಸುವುದರಿಂದ ಒಳ್ಳೆಯಗನ್ನು ಪಡೆಯಲು ಶಕ್ತಿ ಪಡೆಯುತ್ತಾರೆ. ನಕ್ಷತ್ರದ ಎರಡನೇ ಪಾದವು ಸೂಕ್ತವಾದ ಆವರಣಗಳನ್ನು ಪಡೆದಿರದಿದ್ದರೆ ಶನೈಶ್ಚರನ ದೋಷಗಳಿಂದಾಗಿ ಧನ ನಾಶಕ್ಕೆ ಕಾರಣವಾಗುತ್ತದೆ. ಆಶ್ಲೇಷಾ ನಕ್ಷತ್ರದ 3ನೇ ಪಾದ ಸೂಕ್ತವಾಗಿರದಿದ್ದರೆ, ಆಗಲೂ ಶನೈಶ್ಚರನ ಬಾಧೆ ತಾಯಿಗೇ ತೊಂದರೆ ತರಬಲ್ಲದು. ಶನೈಶ್ಚರನು ಮಾತೃಕಾರಕನಾದ ಚಂದ್ರನನ್ನು ಹಿಂಸಿಸುವ ಸ್ಥಿತಿ ಇದ್ದಲ್ಲಿ ಈ ತೊಂದರೆಯ ಉದ್ಬವಿಸಬಹುದು. ಆಶ್ಲೇಷಾ ನಕ್ಷತ್ರದ ನಾಲ್ಕನೇ ಪಾದ ಸಮತೋಲನ ಕಳಕೊಂಡಿದ್ದರೆ ಅದು ತಂದೆಯ ವಿಚಾರದಲ್ಲಿ ಹಲವು ತೊಂದರೆಗಳನ್ನು ತಂದಿಡಬಹುದು. ಪಿತೃಕಾರಕನಾದ ಸೂರ್ಯನು ಬಾಧೆ ಹೆಚ್ಚು ಮಾಡಲು ಸಾಧ್ಯವಿರುತ್ತದೆ. ಆದರೆ ಸೂಕ್ತವಾಗಿ ತೊಂದರೆಗಳು ಹರಳು ಗಟ್ಟಿದೆಯೇ ಎಂಬುದನ್ನು ದೃಢೀಕರಿಸಿಕೊಳ್ಳಬೇಕು. ವಿನಾಕಾರಣ ತೊಂದರೆ ಇದ್ದಿರಬಹುದು ಎಂಬ ನಿರ್ಧಾರಕ್ಕೆ ಬರದಿರಿ. ಚಂದ್ರನ ಬಗೆಗೆ ಎಂದು ಸರಿಯಾಗಿ ತಿಳಿಯದೆಯೇ ಮುತ್ತು ಧರಿಸಲು ಹೋಗದಿರಿ. ಏನೇ ತೊಂದರೆ ಇದ್ದರೂ ನಿವಾರಿಸಿಕೊಳ್ಳಲು ಅವಕಾಶವಿರುತ್ತದೆ. ಸರಳವಾದ ಉಪಾಯಗಳು, ಮಂತ್ರ ಪಠಣ, ಸೂಕ್ತವಾದ ಯಂತ್ರಗಳಿಂದ ತೊಂದರೆಗಳು ದೂರವಾಗುತ್ತವೆ. 

ಅನಂತ ಶಾಸ್ತ್ರಿ 

ಟಾಪ್ ನ್ಯೂಸ್

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

1-dharma

Dharmasthala;ಇಂದಿನಿಂದ ಲಕ್ಷದೀಪೋತ್ಸವ ಕಾರ್ಯಕ್ರಮಗಳು

Jammu-Vaishnodevi

Jammu: ವೈಷ್ಣೋದೇವಿ ರೋಪ್‌ವೇ ವಿರೋಧಿ ಪ್ರತಿಭಟನೆ ವೇಳೆ ಭಾರೀ ಘರ್ಷಣೆ

court

Manipal: ಲಂಚ ಸ್ವೀಕಾರ ಆರೋಪದಲ್ಲಿ ಬಂಧಿತರಿಗೆ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.