ತಾಲೂಕು ಮಟ್ಟದಲ್ಲಿ ಅತ್ಯುತ್ತಮ ಸ್ವಚ್ಛತಾ ಪ್ರಶಸ್ತಿ 


Team Udayavani, Dec 23, 2017, 2:50 PM IST

23-Dec-12.jpg

ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಶಾಲೆಗಳಲ್ಲಿ ಮಕ್ಕಳೇ ಸ್ವಚ್ಛತಾ ಗೀತೆ ಹಾಡಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ಅಭಿಯಾನ ಪ್ರತಿ ಶನಿವಾರ ವಿವಿಧ ಶಾಲೆಗಳಲ್ಲಿ ನಡೆಯುತ್ತಿದೆ. ಮಕ್ಕಳೇ ರಚಿಸಿದ ಸ್ವಚ್ಛತಾ ಗೀತೆಗಳು ಈ ಸಂದರ್ಭದಲ್ಲಿ ಅನುರಣನಗೊಳ್ಳುತ್ತವೆ. ಈ ಮೂಲಕ ವಿದ್ಯಾರ್ಥಿಗಳು ಸ್ವಚ್ಛತೆಯ ಮಹತ್ವದ ಕುರಿತು ಅರಿವು ಮೂಡಿಸುವುದಷ್ಟೇ ಅಲ್ಲ, ಸ್ವಚ್ಛತೆಯ ಕ್ರಾಂತಿಗೆ ತೊಡಗಿ ಕೊಳ್ಳುವಂತೆ ಪ್ರೇರೇಪಿಸುತ್ತಾರೆ.

ಗೀತೆಗಳು
ಸ್ವಚ್ಛತೆ, ಸ್ವಚ್ಛತೆ ಎಲ್ಲಿದೆ ಸ್ವಚ್ಛತೆ, ಅಲ್ಲಿದೆ ಅಲ್ಲಿದೆ ಆರೋಗ್ಯ, ಮನದ ಸ್ವಚ್ಛತೆ, ಮನೆಮನೆ ಸ್ವಚ್ಛತೆ, ಬನ್ನಿ ಸ್ವಚ್ಛತೆ ಮಾಡೋಣ|| ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ನಾಡನು ಸೇರಿ ಕಟ್ಟೋಣ, ಛಲವನು ಹಿಡಿಯುತ, ಚೀಲವ ಹಿಡಿಯುತ ನಾಡಿನ ಕಸವನ್ನು ತೆಗೆಯೋಣ- ಇಂಥ ನೂರಾರು ಸ್ವಚ್ಛತಾ ಗೀತೆಗಳ ಹಾದಿಯನ್ನು ಹಿಡಿದು ವಿದ್ಯಾರ್ಥಿಗಳು ಸಾಗುತ್ತಿದ್ದಾರೆ. ತಾಲೂಕಿನ ಪ್ರಾಥಮಿಕ , ಪ್ರೌಢಶಾಲೆಯ ವಿದ್ಯಾರ್ಥಿಗಳು ಹಲವು ಪದ್ಯಗಳನ್ನು ರಚಿಸಿದ್ದಾರೆ. ಜತೆಗೆ ಸ್ವರಚಿತ ಕವನ ಗಳನ್ನು ಸ್ವಚ್ಛತಾ ಪ್ರಾರ್ಥನೆಯಾಗಿ ಹಾಡುತ್ತಾರೆ.

ಏನಿದು ಕಾರ್ಯಕ್ರಮ?
ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್‌. ರವಿ ಅವರು ಜಿಲ್ಲೆಯಲ್ಲಿ ಸ್ವತ್ಛತೆಯ ಅನುಷ್ಠಾನಕ್ಕಾಗಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳಲ್ಲಿ ಇದೂ ಒಂದು. ಮಕ್ಕಳಿಂದಲೇ ಸ್ವತ್ಛತಾ ಜಾಗೃತಿಗಾಗಿ ಕವನ ರಚಿಸಿ, ಹಾಡಿಸುವ ಸೃಜನಾತ್ಮಕ ಚಟುವಟಿಕೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಿಯಾಶೀಲರಾಗಿದ್ದು, ತಾಲೂಕಿನಲ್ಲಿ ಅಕ್ಟೋಬರ್‌ ನಿಂದಲೇ 403 ಶಾಲೆಗಳಲ್ಲಿ ಸ್ವಚ್ಛತಾ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿದೆ. ಶಿಕ್ಷಣ ಇಲಾಖೆ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಹಯೋಗದೊಂದಿಗೆ ವೇಳಾಪಟ್ಟಿ ತಯಾರಿಸಿ ಶಾಲೆಗಳಿಗೆ ನೀಡಲಾಗಿದ್ದು, ಅದರಂತೆ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ.

ಸ್ವಚ್ಛತಾ ದಿನ
ಪ್ರತೀ ಶನಿವಾರದ ಒಂದು ಅವಧಿಯಲ್ಲಿ ಶಾಲೆಗಳಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ವೇಳಾಪಟ್ಟಿಗೆ ಅನುಸಾರವಾಗಿ ಈಗಾಗಲೇ ತರಗತಿವಾರು ಸ್ವಚ್ಛತಾ ಸ್ಪರ್ಧೆ, ಶಾಲಾ ಸ್ವಚ್ಛತಾ ನೀತಿ ರಚನೆ, ಸ್ವತ್ಛತಾ ಚಿತ್ರಕಲಾ ಸ್ಪರ್ಧೆ, ಹೆತ್ತವರಿಗೆ ಕಾರ್ಯಾಗಾರ, ಮನೆಯಿಂದ ಪ್ಲಾಸ್ಟಿಕ್‌ ಸಂಗ್ರಹಿಸಿ ಪಂಚಾಯತ್‌ಗೆ ನೀಡುವ ಕಾರ್ಯಕ್ರಮ, ಸ್ವಚ್ಛತೆಗೆ ಸಂಬಂಧಪಟ್ಟ ನಾಟಕ ಪ್ರದರ್ಶನ, ಕೊಲಾಜ್‌ ತಯಾರಿಕೆ ಇತ್ಯಾದಿ ಚಾಲ್ತಿಯಲ್ಲಿದೆ. ಮುಂದಿನ ದಿನಗಳಲ್ಲಿ ಪರಿಸರ ಹಾಡು, ಕಸದಿಂದ ರಸ ಕಾರ್ಯಾಗಾರ, ಸ್ವಚ್ಛತಾ ಜಾಥಾ, ಮಳೆ ನೀರು ಕೊಯ್ಲು, ಸ್ವಚ್ಛತೆಯ ಬಗ್ಗೆ ಕವನ ರಚನೆ, ಪ್ರಬಂಧ ಸ್ಪರ್ಧೆ, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಗ್ರಾಮದ ಸ್ವತ್ಛತೆ ಸಮೀಕ್ಷೆ ಹಾಗೂ ಗ್ರಾ.ಪಂ.ಗಳಲ್ಲಿ ಕಾರ್ಯಕ್ರಮ, ಸೌಲಭ್ಯಗಳ ಬಗ್ಗೆ ತಿಳಿಯಲು ಪಂಚಾಯತ್‌ಗೆ ಭೇಟಿ ಇತ್ಯಾದಿ ನಡೆಯಲಿದೆ.

ಪ್ರಶಸ್ತಿ
ಈ ಚಟುವಟಿಕೆಗಳನ್ನು ಉತ್ತಮವಾಗಿ ನಿರ್ವಹಿಸಿದ ಶಾಲೆಗಳಿಗೆ ತಾಲೂಕು ಮಟ್ಟದಲ್ಲಿ ಅತ್ಯುತ್ತಮ ಸ್ವಚ್ಛತಾ ಪ್ರಶಸ್ತಿ, ತಾ| ಮಟ್ಟದ ಸ್ವತ್ಛ ಹಾಗೂ ಹಸಿರು ವಿದ್ಯಾಲಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಶಾಲಾ ಹಂತದಲ್ಲೇ ಸ್ವಚ್ಛತೆಯ ಬಗ್ಗೆ ಎಳೆಯರಲ್ಲಿ ಜಾಗೃತಿ ಮೂಡಿಸುವ ಈ ಕ್ರಮ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರೇರಣದಾಯಕ
ಸ್ವಚ್ಛತೆಯ ಜಾಗೃತಿ ಮೂಡಿಸುವ ಕಾರ್ಯ ಕ್ರಮದ ಬಗ್ಗೆ ಶಾಲೆಗಳಿಂದ ಉತ್ತಮ ಸ್ಪಂದನೆ ದೊರಕಿದೆ. ಕೆಲವೆಡೆ ಸ್ವಚ್ಛತಾ ಪ್ರಾರ್ಥನೆಯನ್ನು ನಿತ್ಯ ಹಾಡುವುದಲ್ಲದೆ ರೆಕಾರ್ಡಿಂಗ್‌ ಕೂಡ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳ ಸೃಜನಾತ್ಮಕ ಚಟುವಟಿಕೆಗೆ ಪೋತ್ಸಾಹ ನೀಡುವುದ
ರೊಂದಿಗೆ ಸ್ವತ್ಛತೆಯ ಅರಿವು ಮೂಡಿಸಲು ಇದು ಪ್ರೇರಕ.
ರಾಜೇಶ್‌
(ಸಮನ್ವಯಾಧಿಕಾರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಬಂಟ್ವಾಳ)

ಬಂಟ್ವಾಳ ತಾಲೂಕಿನ 403 ಶಾಲೆಗಳಲ್ಲಿ ಸ್ವಚ್ಛತೆ ಕುರಿತ ಚಟುವಟಿಕೆಯನ್ನು ಪ್ರತೀ ಶನಿವಾರ ನಡೆಸಲಾಗುತ್ತಿದೆ. ಪ್ರತಿದಿನ ಬೆಳಗ್ಗೆ ಎಸೆಂಬ್ಲಿಯಲ್ಲೂ ನಾಲ್ಕೈದು ನಿಮಿಷ ಸ್ವಚ್ಛತಾ ಪ್ರಾರ್ಥನೆ ಹಾಡಲಾಗುತ್ತಿದೆ. ವಿದ್ಯಾರ್ಥಿಗಳು ಸ್ವತ್ಛತೆಯ ಬಗ್ಗೆ ಕವನ ರಚಿಸಿದ್ದು ಅವುಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಪಡಿಸುವ ಇರಾದೆ ಇದೆ.
–  ಶಿವಪ್ರಕಾಶ್‌ ,
   (ಕ್ಷೇತ್ರ ಶಿಕ್ಷಣಾಧಿಕಾರಿ)

ರತ್ನದೇವ್‌ ಪುಂಜಾಲಕಟ್ಟೆ 

ಟಾಪ್ ನ್ಯೂಸ್

Darshan (2)

High Court; ನಟ ದರ್ಶನ್ ಗೆ ಕೊಂಚ ರಿಲೀಫ್:ವೈದ್ಯಕೀಯ ಜಾಮೀನು ಮಂಜೂರು

CT RAVI 2

By-election; ಬಿಜೆಪಿ 3 ವಿಷಯಗಳನ್ನು ಮುಂದಿಟ್ಟು ಚುನಾವಣೆ ಎದುರಿಸುತ್ತಿದೆ: ಸಿ.ಟಿ.ರವಿ

salman-khan

Salman Khan; ಬಾಲಿವುಡ್ ದಿಗ್ಗಜನಿಗೆ ಮತ್ತೆ ಬೆದರಿಕೆ: 2 ಕೋಟಿ ರೂ. ಬೇಡಿಕೆ

1-HDK

Channapatna; ವೈನಾಡ್‌ನಿಂದ ಪ್ರಿಯಾಂಕಾ ಉಮೇದುವಾರಿಕೆ ಪ್ರಶ್ನಿಸಿದ ಕುಮಾರಸ್ವಾಮಿ

Khnadre-Toxic

Toxic: ಚಿತ್ರೀಕರಣಕ್ಕೆ ಅನುಮತಿ ಕೊಟ್ಟ ಅಧಿಕಾರಿ ವಿರುದ್ಧವೂ ಕ್ರಮ: ಅರಣ್ಯ ಸಚಿವ ಖಂಡ್ರೆ

Sports

Sports; ‘ಟಾಪ್‌’ ಕ್ರೀಡಾಪಟುಗಳ ಸಂಖ್ಯೆಗೆ ಕೇಂದ್ರದಿಂದ ಕತ್ತರಿ?

Nikhil-CPY

Chennapattana By Election: ಬೊಂಬೆನಗರಿಗೆ ಇದು ಮೂರನೇ ಬಾರಿ ಉಪ ಚುನಾವಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bantwal: ಅಡ್ಡೂರು ಸೇತುವೆ ದುರಸ್ತಿಗೆ ಆರು ಕೋಟಿ ರೂ. ಪ್ರಸ್ತಾವನೆ

Bantwal: ಅಡ್ಡೂರು ಸೇತುವೆ ದುರಸ್ತಿಗೆ ಆರು ಕೋಟಿ ರೂ. ಪ್ರಸ್ತಾವನೆ

Uppinangady: ಮಹಿಳೆ ಸಾವು; ಡೆಂಗ್ಯೂ ಶಂಕೆ

Uppinangady: ಮಹಿಳೆ ಸಾವು; ಡೆಂಗ್ಯೂ ಶಂಕೆ

Bantwal: ಅಪಘಾತದ ಗಾಯಾಳು 20 ದಿನಗಳ ಬಳಿಕ ಸಾವು

Bantwal: ಅಪಘಾತದ ಗಾಯಾಳು 20 ದಿನಗಳ ಬಳಿಕ ಸಾವು

Uppinangady: ಎಟಿಎಂನಿಂದ ಕಳವಿಗೆ ಯತ್ನ

Uppinangady: ಎಟಿಎಂನಿಂದ ಕಳವಿಗೆ ಯತ್ನ

Road Mishaps: ಮುಕ್ರಂಪಾಡಿ; ಬೈಕ್‌ಗಳ ಮಧ್ಯೆ ಅಪಘಾತ; ಓರ್ವ ಗಂಭೀರ

Road Mishaps: ಮುಕ್ರಂಪಾಡಿ; ಬೈಕ್‌ಗಳ ಮಧ್ಯೆ ಅಪಘಾತ; ಓರ್ವ ಗಂಭೀರ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Darshan (2)

High Court; ನಟ ದರ್ಶನ್ ಗೆ ಕೊಂಚ ರಿಲೀಫ್:ವೈದ್ಯಕೀಯ ಜಾಮೀನು ಮಂಜೂರು

Bengaluru: ನಿಧಿಗಾಗಿ ಮಗನ ಬಲಿಗೆ ಯತ್ನಿಸಿದ ತಂದೆ!

Bengaluru: ನಿಧಿಗಾಗಿ ಮಗನ ಬಲಿಗೆ ಯತ್ನಿಸಿದ ತಂದೆ!

CT RAVI 2

By-election; ಬಿಜೆಪಿ 3 ವಿಷಯಗಳನ್ನು ಮುಂದಿಟ್ಟು ಚುನಾವಣೆ ಎದುರಿಸುತ್ತಿದೆ: ಸಿ.ಟಿ.ರವಿ

salman-khan

Salman Khan; ಬಾಲಿವುಡ್ ದಿಗ್ಗಜನಿಗೆ ಮತ್ತೆ ಬೆದರಿಕೆ: 2 ಕೋಟಿ ರೂ. ಬೇಡಿಕೆ

1-HDK

Channapatna; ವೈನಾಡ್‌ನಿಂದ ಪ್ರಿಯಾಂಕಾ ಉಮೇದುವಾರಿಕೆ ಪ್ರಶ್ನಿಸಿದ ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.