ಪ್ರಪಂಚದ ಎಂಟನೆಯ ಅದ್ಭುತ ಬುರ್ಜ್‌ ಖಲೀಫಾ


Team Udayavani, Dec 24, 2017, 6:00 AM IST

rooftop-burj.jpg

ದುಬೈ ವಿಮಾನ ನಿಲ್ದಾಣವು ಜಗತ್ತಿನ ಅತ್ಯಂತ ಚಟುವಟಿಕೆಯ ವಿಮಾನ ನಿಲ್ದಾಣಗಳಲ್ಲಿ ಒಂದು. ಪ್ರತಿವರ್ಷ ಸುಮಾರು 20 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಮೂರು ದಶಲಕ್ಷ ಟನ್‌ನಷ್ಟು ಸರಕು ಈ ವಿಮಾನ ನಿಲ್ದಾಣದ ಉಪಯೋಗ ಪಡೆಯಲು ಸಾಧ್ಯವಾಗಿದೆ. ನಿರ್ಮಾಣ ಹಂತದಲ್ಲಿರುವ ಅಲ್‌ ಮಕೂ¤ಮ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಜಗತ್ತಿನ ಅತಿ ದೊಡ್ಡ ವಿಮಾನ ನಿಲ್ದಾಣವಾಗಲಿದ್ದು,  ವಾರ್ಷಿಕ 12 ದಶಲಕ್ಷ ಟನ್‌ ಸರಕು ಹಾಗೂ 160 ದಶಲಕ್ಷ ಪ್ರಯಾಣಿಕರನ್ನು ನಿಭಾಯಿಸುವ ಸೌಕರ್ಯ ಹೊಂದಲಿದೆ.

ಇತ್ತೀಚೆಗೆ ಪ್ರವಾಸ ನಿಮಿತ್ತ ಬೆಂಗಳೂರಿನಿಂದ ಹೊರಟು ದುಬೈ ವಿಮಾನ ನಿಲ್ದಾಣದಲ್ಲಿ ಇಳಿದು ಬಳಿ ಇರುವ ಮೆಟ್ರೊ ನಿಲ್ದಾಣದಲ್ಲಿ ರೈಲು ಹಿಡಿದು ನಾವು ಉಳಿದುಕೊಳ್ಳಲಿದ್ದ  ಸಿಟಿ ಸ್ಟೇ ಹೊಟೇಲ್‌ ಅಪಾರ್ಟ್‌ಮೆಂಟ್‌  ತಲುಪಿದ್ದೆವು.   
ದುಬೈ ನಗರವು ಪರ್ಷಿಯನ್‌ ಕೊಲ್ಲಿಯ ದಕ್ಷಿಣ ಭಾಗದಲ್ಲಿದ್ದು,  ಸಂಯುಕ್ತ ಅರಬ್‌ ರಾಷ್ಟ್ರದ  “ದುಬೈ ಸಂಸ್ಥಾನ’ದ ರಾಜಧಾನಿಯಾಗಿದೆ. ಸಂಯುಕ್ತ ಅರಬ್‌ ರಾಷ್ಟ್ರದ ಏಳು ಸಂಸ್ಥಾನಗಳ ಪೈಕಿ ಅಬುಧಾಬಿ ಮತ್ತು ದುಬೈ ಮಾತ್ರ ರಾಷ್ಟ್ರೀಯ ಪ್ರಾಮುಖ್ಯವಿರುವ ವಿಷಯಗಳಲ್ಲಿ ವೀಟೊ ಚಲಾಯಿಸುವ ಹಕ್ಕನ್ನು ಹೊಂದಿದ ಪ್ರಮುಖ ಸಂಸ್ಥಾನಗಳಾಗಿವೆ. ದುಬೈ- ಶಾರ್ಜಾ- ಅಜ್ಮಾನ್‌ ಮೆಟ್ರೊಪಾಲಿಟನ್‌ ಕ್ಷೇತ್ರದ ಶಿಖರಪ್ರಾಯವಾದ ದುಬೈ ಸಂಯುಕ್ತ ಅರಬ್‌ ರಾಷ್ಟ್ರದ ಅತ್ಯಂತ ಜನನಿಬಿಡ ನಗರವಾಗಿದೆ. 1960ರಲ್ಲಿ  ಪೆಟ್ರೋಲಿಯಮ್‌ ನಿಕ್ಷೇಪ ಪತ್ತೆಯಾದ ನಂತರ, ಪೆಟ್ರೋಲಿಯಮ್‌ ಉತ್ಪನ್ನಗಳಿಂದ ಮತ್ತು ಸಾಂಪ್ರದಾಯಿಕ ಮೂಲಗಳಿಂದ ಆದಾಯವನ್ನು ಹೊಂದಿದ್ದ ದುಬೈ, ಕ್ರಮೇಣ ಪೆಟ್ರೋಲಿಯಮ್‌ ಉತ್ಪನ್ನಗಳ ಆದಾಯ ಇಳಿಮುಖವಾದುದರಿಂದ,  ವ್ಯಾಪಾರ ವಹಿವಾಟು ಹಾಗೂ ಪ್ರವಾಸೋದ್ಯಮದಿಂದ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಬೇಕಾಗಿದೆ. ಈಚೆಗೆ ಮಧ್ಯಪ್ರಾಚ್ಯದ ಅತ್ಯಂತ ಮುಖ್ಯ ವ್ಯಾಪಾರೀ ಕೇಂದ್ರವಾಗಿ ದುಬೈ ಹೊರಹೊಮ್ಮಿದ್ದು,  2020ರ ವಲ್ಡ…ì ಎಕೊÕ$³ ಸಹ ಆಯೋಜನೆಗೊಳ್ಳಲಿದೆ.

ಕಟ್ಟಡಗಳ ವೈಭವ
ಕಣ್ಣು ಕೋರೈಸುವ ಮಾಲ್‌ಗ‌ಳು ಹಾಗೂ ಗಗನಚುಂಬಿ ಕಟ್ಟಡಗಳು ದುಬೈ ನಗರದ ಪ್ರಮುಖ ಆಕರ್ಷಣೆಗಳು.    ಒಂದೊಂದು ಕಟ್ಟಡವೂ ವಿಭಿನ್ನ ಎತ್ತರ ಮತ್ತು ಆಕಾರಗಳಿಂದ ಕಂಗೊಳಿಸುತ್ತದೆ. ಅರಬ್‌ ಮತ್ತು ಅಂತಾರಾಷ್ಟ್ರೀಯ,  ಮುಖ್ಯವಾಗಿ ಅಮೆರಿಕದ ನಿರ್ಮಾಣ ಸಂಸ್ಥೆಗಳು ದುಬೈನಲ್ಲಿ ನವನವೀನ ವಿನ್ಯಾಸದ ಕಟ್ಟಡಗಳ ನಿರ್ಮಾಣದಲ್ಲಿ ತೊಡಗಿಕೊಂಡಿವೆ. 1980ರ ದಶಕದಿಂದ ಪ್ರಾರಂಭವಾದ ನಿರ್ಮಾಣ ಚಟುವಟಿಕೆ 1990ರ ದಶಕದಲ್ಲಿ ಬಿರುಸುಗೊಂಡು, 2000ರ ದಶಕದಲ್ಲಿ ಆಧುನಿಕ ಇಸ್ಲಾಮ್‌ ಮತ್ತು ಜಾಗತಿಕ ಕಟ್ಟಡ ನಿರ್ಮಾಣ ಕ್ಷೇತ್ರವು ಉನ್ನತ ಮಟ್ಟವನ್ನು ಮುಟ್ಟಿರುವುದನ್ನು ಇಲ್ಲಿ ಕಾಣಬಹುದು. 2010ರಲ್ಲಿ ಬುರ್ಜ್‌ ಖಲೀಫಾದ ನಿರ್ಮಾಣವಾಗುವುದರೊಂದಿಗೆ ಈ ಪೈಪೋಟಿ ಇನ್ನೊಂದು ಮಜಲನ್ನು ಮುಟ್ಟಿಬಿಟ್ಟಿದೆ. ಇದೀಗ ದುಬೈ ನಗರದ ಕಟ್ಟಡಗಳ ಎತ್ತರವನ್ನು ಅಡಿ ಅಥವಾ ಮೀಟರುಗಳಲ್ಲಿ ಅಳೆಯದೆ ಕಿಲೋಮೀಟರುಗಳಲ್ಲಿ ಅಳೆಯುವ ಹಂತಕ್ಕೆ ತಲುಪಿದೆ ಎಂದರೆ ತಪ್ಪಾಗಲಾರದು! ಕಾಲು ಕಿ.ಮೀ.ಗಿಂತ ಎತ್ತರವಿರುವ,  ಅರ್ಧ ಕಿ.ಮೀ. ಎತ್ತರವಿರುವ ಅನೇಕ ಕಟ್ಟಡಗಳನ್ನು ಇಲ್ಲಿ ನಾವು ನೋಡಬಹುದು. ಈ ಎಲ್ಲ ಕಟ್ಟಡಗಳಿಗೆ ಕಳಶಪ್ರಾಯವಾಗಿರುವುದು ಬುರ್ಜ್‌ ಖಲೀಫಾ ಎಂಬ ಕಟ್ಟಡ. 

ಮಯನಿರ್ಮಿತ ಮಾಯಾಪುರ !
829.8 ಮೀ. ಅಥವಾ 2,722 ಅಡಿ ಎತ್ತರವಿರುವ, 33 ಲಕ್ಷ ಚದರಡಿ ತಳಪಾಯ ಹೊಂದಿರುವ, 168 ಮಹಡಿಗಳುಳ್ಳ ಬುರ್ಜ್‌ ಖಲೀಫಾ ಈವರೆಗಿನ ಪ್ರಪಂಚದ ಅತಿ ಎತ್ತರದ ಮಾನವನಿರ್ಮಿತ ಕಟ್ಟಡ ಎಂಬ ಖ್ಯಾತಿಯನ್ನು ಹೊಂದಿದೆ. ಇದನ್ನು ಪ್ರಪಂಚದ ಎಂಟನೆಯ ಅದ್ಭುತ ಎಂದು ಕರೆಯಬಹುದೇನೋ! ಹೈಮೆನೋಕಾಲಿಸ್‌ ಎಂಬ ಮರುಭೂಮಿಯ ಹೂವಿನ ಆಕಾರವು ಈ ಕಟ್ಟಡದ ತಳವಿನ್ಯಾಸಕ್ಕೆ ಪ್ರೇರಣೆಯಾಗಿದೆ. 2004ರ ಸೆಪ್ಟಂಬರ್‌ 20ರಂದು ಪ್ರಾರಂಭವಾದ ಕಟ್ಟಡದ ನಿರ್ಮಾಣ ಕಾರ್ಯವು ಪೂರ್ಣಗೊಂಡದ್ದು  2010ರ ಜನವರಿ 4ರಂದು. ವಿವಿಧ ದೇಶಗಳ ಮೂವತ್ತು ನಿರ್ಮಾಣ ಸಂಸ್ಥೆಗಳ ಸುಮಾರು ನೂರು ರಾಷ್ಟ್ರೀಯತೆಯುಳ್ಳ ಸಹಸ್ರಾರು ಕೆಲಸಗಾರರು ಎಸ್‌ಒಎಮ್‌ ಆರ್ಕಿಟೆಕ್ಚರ್‌ ಡಿಸೈನ್‌ ಸಂಸ್ಥೆಯು ವಿನ್ಯಾಸಗೊಳಿಸಿದ ಈ ಕಟ್ಟಡವನ್ನು ನಿರ್ಮಿಸುವಲ್ಲಿ ಶ್ರಮಿಸಿದ್ದಾರೆ. ದಕ್ಷಿಣ ಏಷ್ಯಾದ ಕೆಲಸಗಾರರ ಮಾನವಹಕ್ಕು ಉಲ್ಲಂಘನೆಯ ಆರೋಪವನ್ನು ದುಬೈ ಈ ಸಂದರ್ಭದಲ್ಲಿ ಎದುರಿಸಬೇಕಾಯಿತು! ಈ ಕಟ್ಟಡದ ನಿರ್ಮಾಣ ವೆಚ್ಚ ಸುಮಾರು ಎರಡು ಬಿಲಿಯನ್‌ ಡಾಲರುಗಳು.
 
ಅದೊಂದು ಪ್ರತಿಸ್ವರ್ಗ !
ಬುರ್ಜ್‌ ಖಲೀಫಾ ಕಟ್ಟಡದಲ್ಲಿ ಪ್ರತಿಷ್ಠಿತ ಹೊಟೇಲ್‌ಗ‌ಳು,  ಪ್ರಖ್ಯಾತ ಅಪಾರ್ಟ್‌ಮೆಂಟ್‌ಗಳು, ವ್ಯಾಪಾರಿ ಕೇಂದ್ರಗಳು ಇತ್ಯಾದಿ ಇವೆ. ಈ ಕಟ್ಟಡದಲ್ಲಿ ಒಂದು ಐಷಾರಾಮಿ ಮನೆಯನ್ನು ಹೊಂದುವುದು ದೇಶ-ವಿದೇಶಗಳ ಕೋಟ್ಯಾಧಿಪತಿಗಳ ಕನಸು ಎಂದರೆ ತಪ್ಪಲ್ಲ. ಈ ಕಟ್ಟಡವನ್ನು ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಿರುವುದರಿಂದ ಪ್ರವಾಸೋದ್ಯಮಕ್ಕೂ ಒಳಿತಾಗಿದೆ. ಹಾಗೆಯೇ ದೇಶ-ವಿದೇಶಗಳ ಪ್ರವಾಸಿಗರಿಗೆ ಈ ಅದ್ಭುತ ಕಟ್ಟಡವನ್ನು ನೋಡುವ ಸ್ಮರಣೀಯ ಅನುಭವ ಲಭ್ಯವಾಗುತ್ತದೆ. ಬುರ್ಜ್‌ ಖಲೀಫಾದ 125ನೇ ಮಹಡಿಯವರೆಗೆ ಹೋಗಲು ಪ್ರವಾಸಿಗರಿಗೆ ಅವಕಾಶವಿದೆ. ಆಲ್ಲಿರುವ  ಅಠಿ At the Top, Burj Khalifa- -ಪ್ರಪಂಚದ ಅತಿ ಎತ್ತರದ ವೀಕ್ಷಣಾ ಸ್ಥಳ ಎಂಬ ಖ್ಯಾತಿಯನ್ನು ಹೊಂದಿದ್ದು ವಾರ್ಷಿಕ ಎರಡು ಮಿಲಿಯನ್‌ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವೇಶ ಶುಲ್ಕ ಒಬ್ಬರಿಗೆ 125 ದಿರØಮ್‌ಗಳು, ಒಂದು ದಿರØಮ್‌ನ ಬೆಲೆ ಸುಮಾರು 19 ರೂ. ಅಂದರೆ ಪ್ರವೇಶ ಶುಲ್ಕ ತಲಾ ರೂ. 2,375. ಟಿಕೆಟ್‌ ಕೊಳ್ಳುವಾಗ ನಾವು ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಅಲ್ಲಿರಬೇಕಾಗುತ್ತದೆ. ಕಟ್ಟುನಿಟ್ಟಿನ ಸುರಕ್ಷತಾ ತಪಾಸಣೆಯ ನಂತರ ಸರತಿಸಾಲಿನಲ್ಲಿ ನಿಂತರೆ ನಾವು ಲಿಫ್ಟ್ವರೆಗೆ ಹೋಗಲು ಸುಮಾರು ಅರ್ಧ ಮುಕ್ಕಾಲು ಗಂಟೆ ಬೇಕಾಗುತ್ತದೆ. ಲಿಫ್ಟ್ 124ನೇ ಮಹಡಿಯವರೆಗೆ ನಮ್ಮನ್ನು ಕರೆದೊಯ್ಯುತ್ತದೆ. ಎಷ್ಟು ಸಮಯ ಲಿಫ್ಟ್ ಒಳಗೆ ಇರಬೇಕಾಗುತ್ತದೋ ಎಂಬ ಲೆಕ್ಕಾಚಾರವನ್ನು ನಾವೆಲ್ಲ ಹಾಕುತ್ತಿದ್ದರೆ ಕೇವಲ 58 ಸೆಕೆಂಡುಗಳಲ್ಲಿ 124ನೇ ಮಹಡಿ ತಲುಪಿಯಾಗಿತ್ತು! ಅಲ್ಲಿಂದ ಮುಂದಿನ ಒಂದು ಮಹಡಿಗೆ ಮೆಟ್ಟಿಲು ಹತ್ತಿ ಹೋಗಲು ಅವಕಾಶವಿದೆ.  

ವಿಹಂಗಮ ನೋಟ
ಕಟ್ಟಡದ ಹೊರ ಆವರಣದ ಒಂದು ಸುತ್ತು ಬರಬಹುದಾದ ವೀಕ್ಷಣಾ ಬಾಲ್ಕನಿ 124 ಮತ್ತು 125ನೇ ಮಹಡಿಯಲ್ಲಿವೆ. ಗಾಜಿನ ಗೋಡೆಯ ಮೂಲಕ ನಾವು ಸುತ್ತಲಿನ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ನೆಲದಿಂದ ಕತ್ತು ನೋಯಿಸಿಕೊಂಡು ನೋಡಿದ್ದ ಎತ್ತರೆತ್ತರದ ಕಟ್ಟಡಗಳು ಕೂಡಾ ಇಲ್ಲಿಂದ ಕುಬjವಾಗಿ ಕಾಣುತ್ತವೆ! ನಾವು ಹೋಗಿದ್ದು ರಾತ್ರಿಯ ಸಮಯವಾದ್ದರಿಂದ ಸುತ್ತೆಲ್ಲ ದೂರದೂರಕ್ಕೆ ಬೆಳಕು ಚೆಲ್ಲಿದಂತಹ ದೃಶ್ಯ ನಮ್ಮ ಮೈಮರೆಸಿತ್ತು. ಎÇÉೋ ಪಾತಾಳದಲ್ಲಿ ಚಲಿಸುತ್ತಿದ್ದ ವಾಹನಗಳು ಇರುವೆ ಸಾಲಿನಂತೆ ಕಂಡಿತ್ತು. 

ಕಳೆದ ಜನವರಿಯಲ್ಲಿ ನಮ್ಮ ಗಣರಾಜ್ಯೋತ್ಸವದ ಹಿಂದಿನ ರಾತ್ರಿ ಬುರ್ಜ್‌ ಖಲೀಫಾ ಕಟ್ಟಡದ ಮೇಲೆ ನಮ್ಮ ದೇಶದ ಬಾವುಟದ ವಿನ್ಯಾಸ ಬಿಡಿಸಿ, ದೇಶಭಕ್ತಿಯ ಗೀತೆಗಳನ್ನು ನುಡಿಸಿದ್ದು ನಾವೆಲ್ಲ ಹೆಮ್ಮೆಪಡುವಂತೆ ಮಾಡಿತ್ತು.        

– ಕೆ. ಪಿ. ಸತ್ಯನಾರಾಯಣ

ಟಾಪ್ ನ್ಯೂಸ್

Parliament winter session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Parliament Winter Session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

9

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

4

Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು

3

Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.