ಕೊಹ್ಲಿ “ಅಂಡರ್ -19 ವಿಶ್ವಕಪ್’ ಮೆಲುಕು
Team Udayavani, Dec 24, 2017, 6:45 AM IST
ಹೊಸದಿಲ್ಲಿ: ಅಂಡರ್-19 ವಿಶ್ವಕಪ್ ಪಂದ್ಯಾವಳಿ ತನ್ನ ವೃತ್ತಿ ಬದುಕಿನ ಪ್ರಮುಖ ಮೈಲುಗಲ್ಲು ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
“2008ರ ಅಂಡರ್-19 ವಿಶ್ವಕಪ್ ಪಂದ್ಯಾವಳಿ ನನಗೆ ವೃತ್ತಿ ಬದುಕನ್ನು ಕಟ್ಟಿಕೊಳ್ಳಲು ಮತ್ತು ಕ್ರಿಕೆಟ್ ರಂಗದಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಟ್ಟಿತು. ಹಾಗಾಗಿಯೇ ಆ ಪಂದ್ಯ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ’ ಎಂದು ಕೊಹ್ಲಿ ಮೆಲುಕು ಹಾಕಿದರು.
ಅಂಡರ್-19ವಿಶ್ವಕಪ್ ಸಂದರ್ಭದ ಕೆಲವು ಕ್ಷಣಗಳನ್ನು ಸ್ಮರಿಸಿಕೊಂಡ ಕೊಹ್ಲಿ, ಆಗಿನ ಆಸ್ಟ್ರೇಲಿಯ ತಂಡದ ನಾಯಕ ಸ್ಟೀವ್ ಸ್ಮಿತ್ ಮತ್ತು ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರನ್ನೂ ಹೆಸರಿಸಿದರು. “ಅಂಡರ್-19 ವಿಶ್ವಕಪ್ ಅವಧಿಯ ಆಟಗಾರರಲ್ಲಿ ನಾವು ಮೂರು ಮಂದಿಯಷ್ಟೇ ಈಗ ರಾಷ್ಟ್ರೀಯ ತಂಡದ ನಾಯಕರಾಗಿರಬಹುದು, ಅದಕ್ಕೂ ಹೆಚ್ಚಾಗಿ ಅಂದಿನ ಕೂಟದ ಬಹುತೇಕ ಆಟಗಾರರು ರಾಷ್ಟ್ರೀಯ ತಂಡಗಳಲ್ಲಿ ಆಡುತ್ತಿದ್ದಾರೆ ಎನ್ನುವುದು ಸಂತಸದ ಸಂಗತಿ’ ಎಂದರು.
2008ರಲ್ಲಿ ಮಲೇಶ್ಯದಲ್ಲಿ ನಡೆದ ಅಂಡರ್-19ನೇ ವಿಶ್ವಕಪ್ ಫೈನಲ್‌ನಲ್ಲಿ ಕೊಹ್ಲಿ ನಾಯಕತ್ವದ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಡಿ-ಎಲ್ ನಿಯಮದಂತೆ 12 ರನ್ನುಗಳಿಂದ ಮಣಿಸಿ ಚಾಂಪಿಯನ್ ಆಗಿ ಮೂಡಿಬಂದಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.