“ಪರಿಕ್ಕರ್ ನನಗೆ ಪತ್ರ ಬರೆಯಬೇಕಿತ್ತು’
Team Udayavani, Dec 24, 2017, 8:00 AM IST
ಹಾವೇರಿ: “ಈ ಹಿಂದೆ ನೀರಿನ ವಿಚಾರ ಬಂದಾಗ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಮಧ್ಯಸ್ಥಿಕೆ ವಹಿಸಿದ್ದಾರೆ. ಮಹದಾಯಿ ವಿಚಾರದಲ್ಲಿ ಪ್ರಧಾನಿಯವರು ಮಧ್ಯಸ್ಥಿಕೆ ವಹಿಸಿ ಎಂದು ಕೈ ಮುಗಿದು ಕೇಳಿದರೂ ಪ್ರಧಾನಿ ಮೋದಿ ಒಪ್ಪಲಿಲ್ಲ. ನನ್ನ 40 ವರ್ಷಗಳ ರಾಜಕೀಯ ಅನುಭವದಲ್ಲಿ ಈ ರೀತಿಯ ಪ್ರಧಾನಿಯನ್ನು ನೋಡಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆಯಲ್ಲಿ ಶಿಷ್ಟಾಚಾರ ಪ್ರಕಾರ ಗೋವಾ ರಾಜ್ಯದ ಮುಖ್ಯಮಂತ್ರಿಯವರು ಮಹದಾಯಿ ವಿವಾದದ ಬಗ್ಗೆ ಏನಿದ್ದರೂ ನನಗೆ ಪತ್ರ ಬರೆಯಬೇಕು. ಅದನ್ನು ಬಿಟ್ಟು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಚುನಾವಣೆ ಆಗುವವರೆಗೆ ಮಾತುಕತೆ ಇಲ್ಲ ಎಂದು ಹೇಳುವ ಮೂಲಕ ಈ ರಾಜ್ಯದ ಮುಖ್ಯಮಂತ್ರಿಯಾದ ನನ್ನನ್ನು ಅವಮಾನಿಸಿದ್ದಾರೆ. ಆದರೂ ಇದನ್ನು ನಾನು ಪ್ರತಿಷ್ಠೆಯಾಗಿ ತೆಗೆದುಕೊಳ್ಳದೆ ಮಾತುಕತೆಗೆ ಸಿದಟಛಿನಿದ್ದೇನೆ. ದಿನಾಂಕ ನಿಗದಿ ಮಾಡಿ ಎಂದು ಪತ್ರ ಬರೆದಿದ್ದೇನೆ’ ಎಂದರು.
ಸುಳ್ಳು ಹೇಳಿ ಸಿಕ್ಕಿ ಬಿದ್ದಿದ್ದಾರೆ: ಯಡಿಯೂರಪ್ಪನವರು ಒಂದು ತಿಂಗಳಲ್ಲಿ ವಿವಾದ ಇತ್ಯರ್ಥ ಪಡಿಸಿ ನೀರು ಹರಿಸುತ್ತೇನೆ ಎಂದು ಹೇಳಿದ್ದರು. ಮಹದಾಯಿ ವಿಚಾರದಲ್ಲಿ ಬಿಜೆಪಿಯವರು ಸುಳ್ಳು ಹೇಳಿ ಈಗ ರೈತರ ಬಳಿ ಸಿಕ್ಕಿ ಹಾಕಿಕೊಂಡಿದ್ದಾರೆ. ರೈತರಿಗೆ ಕೋಪ ಬಂದಿದ್ದು ಬಿಜೆಪಿ ಕಚೇರಿ ಎದುರು ಪ್ರತಿಭಟಿಸುತ್ತಿದ್ದಾರೆ. ರೈತರ ಪ್ರತಿಭಟನೆ ಹಿಂದೆ ನಮ್ಮ ಕುಮ್ಮಕ್ಕು ಇಲ್ಲ. ಅಷ್ಟಕ್ಕೂ ನಮ್ಮ ಮಾತನ್ನು ರೈತರು ಕೇಳುತ್ತಾರೆಯೇ ಎಂದು ಪ್ರಶ್ನಿಸಿದರು.
ಗೋವಾ ಕಾಂಗ್ರೆಸ್‌ಗೂ, ನಮಗೂ ಸಂಬಂಧವಿಲ್ಲ:
ಮಹದಾಯಿ ಯೋಜನೆಗೆ ಗೋವಾ ಕಾಂಗ್ರೆಸ್ ವಿರೋಧಿಸುತ್ತಿದ್ದು ಅವರನ್ನು ಒಪ್ಪಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ
ಸಿದ್ದರಾಮಯ್ಯ, ಗೋವಾ ಕಾಂಗ್ರೆಸ್‌ಗೂ ನಮಗೂ ಸಂಬಂಧವಿಲ್ಲ. ಬಿಜೆಪಿ ಯವರು ಗೋವಾ ಮುಖ್ಯಮಂತ್ರಿಯನ್ನು ಒಪ್ಪಿಸುವುದಾಗಿ ಹೇಳಿದ್ದರಿಂದ ಅವರು ಒಪ್ಪಿಸಲಿ. ಆಗದಿದ್ದರೆ ತಮಗೆ ಸಂಬಂಧ ಇಲ್ಲ ಎಂದು ಸುಮ್ಮನಿರಬೇಕಿತ್ತು ಎಂದು ಸಿದ್ದರಾಮಯ್ಯ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Salman Khan; ಬಾಲಿವುಡ್ ನಟನಿಗೆ ಬೆದರಿಕೆ ಹಾಕಿದ್ದ ಗೀತ ರಚನೆಕಾರ ರಾಯಚೂರಿನಲ್ಲಿ ಬಂಧನ
Corrupts Hunt: ಏಕಕಾಲಕ್ಕೆ 37 ಕಡೆ ಲೋಕಾಯುಕ್ತ ದಾಳಿ; 22 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ!
Vote: ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಉಪಚುನಾವಣೆ: ಇಂದು ಮತದಾನ
Controversy: ಅಂಬೇಡ್ಕರ್ ಇಸ್ಲಾಂ ಸ್ವೀಕಾರ ವಿಚಾರ: ಖಾದ್ರಿ ಹೇಳಿಕೆಗೆ ಬಿಜೆಪಿ ಆಕ್ರೋಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.