ಶಿಕ್ಷಣದಲ್ಲಿ ಮರೆಯಾಗಿರುವ ಜೀವನ ಕೌಶಲ ಪಾಠ 


Team Udayavani, Dec 24, 2017, 12:45 AM IST

manipal.jpg

ಶಿಕ್ಷಣ ಬದುಕುವ ರೀತಿಯನ್ನು ಕಲಿಸಬೇಕು. ಕೇವಲ ಜ್ಞಾನಾರ್ಜನೆಗಷ್ಟೇ ಸೀಮಿತವಾಗಿರದೆ ಮುಂದಿನ ಬದುಕಿನ ಆವಶ್ಯಕತೆಗಳ ಬಗ್ಗೆ, ಅವನ್ನು ಹೊಂದಿಸಿ ಕೊಳ್ಳುವ ಬಗ್ಗೆ, ತನ್ನ ಕುಟುಂಬ – ಸಮಾಜವನ್ನು ಸರಿಯಾಗಿ ಬೆಳೆ ಸುವ, ಸೊÌದ್ಯೋಗವನ್ನು ಮಾಡಿಕೊಂಡು ಬದುಕಲು ನೆರವಾಗುವ ಜ್ಞಾನವನ್ನು ಕೊಡುವ ಕಾರ್ಯ ನಡೆದರೆ ಶಿಕ್ಷಣಕ್ಕೂ- ಜೀವನಕ್ಕೂ ಇರುವ ಸಂಬಂಧ ಪರಸ್ಪರ ಪೂರಕವಾಗುತ್ತದಲ್ಲದೆ ವಿದ್ಯಾರ್ಥಿಗಳ ಬದುಕಿಗೆ ನೆರವೂ ಆಗುತ್ತದೆ.

ಪ್ರಕೃತಿಯ ಸಹಜ ಸುಂದರವಾದ ಹಸಿರು ಸಿರಿಯ ನಡುವೆ ಪ್ರಶಾಂತವಾದ ವಾತಾವರಣದಲ್ಲಿ ಹೆಚ್ಚಾಗಿ ನದಿ ತಟದಲ್ಲಿ ಕುಟೀರ ದಂತಹ ತರಗತಿಯ ಕೋಣೆಗಳು, ಬೆಳಗ್ಗೆದ್ದು ಸ್ನಾನ- ಧ್ಯಾನ- ಯೋಗ ಮೊದಲಾದ ದೈನಂದಿನ ಕೆಲಸಗಳನ್ನು ಮಾಡಿಕೊಳ್ಳುವುದರ ಜೊತೆಗೆ ಪಶುಸಂಗೋಪನೆಯ ಮಹತ್ವವನ್ನು, ಜ್ಞಾನವನ್ನು ನೀಡುವುದಕ್ಕಾಗಿಯೇ ನಿರ್ಮಿಸಿದ ಗೋಶಾಲೆಗಳು, ವಿದ್ಯಾರ್ಥಿಗಳು ಗೋ ಶಾಲೆಯ ಕೆಲಸಗಳನ್ನು ಮಾಡುತ್ತಾ ಶಾಸ್ತ್ರಾಭ್ಯಾಸ, ಬೌದ್ಧಿಕ ಕಸರತ್ತಿನ ತರಗತಿಗಳು, ಪೌರಾಣಿಕ, ಐತಿಹಾಸಿಕ ಕಥಾ ಪ್ರವಚನಗಳನ್ನು ಕಲಿತು ಜ್ಞಾನಾರ್ಜನೆ ಮಾಡಬೇಕಿತ್ತು. ಇದು ಹಿಂದಿನ ಕಾಲದಲ್ಲಿ ಪ್ರಚಲಿತದಲ್ಲಿದ್ದ ಗುರುಕುಲ ಮಾದರಿಯ ಪಾಠಶಾಲೆಗಳ ಚಿಕ್ಕ ಚಿತ್ರಣ. ಆ ಮಾದರಿಯಲ್ಲಿ ಶಿಕ್ಷಣ ಕ್ರಮವೆನ್ನುವುದು ಕೇವಲ ಬೌದ್ಧಿಕ ಜ್ಞಾನಾರ್ಜನೆಯ ಕೇಂದ್ರವಾಗಿರದೆ, ಸಂಸ್ಕಾರ, ಮೌಲ್ಯಾಧಾರಿತ ಕೌಶಲವನ್ನೊದಗಿಸುವ ಜೀವನ ಕೌಶಲವನ್ನು ಕಲಿಸಿ ಆರೋಗ್ಯಕರ ಜೀವನಕ್ಕೆ ಸನ್ನದ್ಧಗೊಳಿಸುವ ಕೇಂದ್ರವೂ ಆಗಿ ಕಾರ್ಯನಿರ್ವ ಹಿಸುತ್ತಿದ್ದವು. ಅಂತಹ ಶಿಕ್ಷಣ ಕ್ರಮದಲ್ಲಿ ವಿದ್ಯಾರ್ಥಿಯ ಮಾನಸಿಕ, ದೈಹಿಕ, ಸಾಮಾಜಿಕ, ಆರ್ಥಿಕ, ಪ್ರಾಪಂಚಿಕ, ಬೌದ್ಧಿಕ ಸಾಮರ್ಥ್ಯವನ್ನು ವಿಕಾಸಗೊಳಿಸುವ ಕಾಯಕವು ನಡೆಯುತ್ತಿತ್ತು .

ಕಾಲಕ್ರಮೇಣ ಈ ಪದ್ಧತಿಯು ಅವನತಿಗೊಂಡು ವಿದ್ಯಾಲಯ ಮಾದರಿಯು ಅಸ್ತಿತ್ವಕ್ಕೆ ಬಂತು. ಶಿಕ್ಷಣ ಕ್ಷೇತ್ರವು ಹಲವು ಬದಲಾವಣೆ ಗಳನ್ನೊಳಗೊಂಡು ಹೊಸ ಸ್ವರೂಪದೊಂದಿಗೆ ಬೆಳೆಯಿತು. ಪುಸ್ತಕದ ಜ್ಞಾನಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾರಂಭಿಸಿತು. ಇದಕ್ಕೆ ಮುಖ್ಯ ಕಾರಣವೆಂದರೆ ಬೆಳೆಯುತ್ತಿದ್ದ ವೈಜ್ಞಾನಿಕ ಕ್ಷೇತ್ರ ಹಾಗೂ ಆಗ ತಾನೇ ಆರಂಭವಾಗುತ್ತಿದ್ದ ವೈಜ್ಞಾನಿಕ ಕ್ರಾಂತಿಗಳಿರಬಹುದು. ಹಾಗಿದ್ದರೂ ಕೂಡ ಜೀವನ ಕೌಶಲಗಳ ತರಬೇತಿಗಳಿಗೆ, ಮೌಲ್ಯಗಳ ಕಲಿಕೆಗೆ ಸ್ವಲ್ಪ ಮಟ್ಟಿನ ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು. ಶಿಕ್ಷಣದ ಕೆಲವು ಹಂತಗಳಲ್ಲಿ ಮಕ್ಕಳಿಗೆ ಹೊಲಿಗೆ, ತೋಟಗಾರಿಕೆ, ಚಿತ್ರಕಲೆ, ಸಂಗೀತ, ನೃತ್ಯ ಇನ್ನಿತರ ಕಲೆಗಳ ಕಲಿಕೆಗೆ ಅವಕಾಶವಿತ್ತೇ ವಿನಹ ಅದು ಕರಗತವಾಗುವಷ್ಟು ಪರಿಣತಿಯನ್ನು ಸಾಧಿಸುವ ಅವಕಾಶವಿರಲಿಲ್ಲ. ಕೇವಲ ಸಹಪಠ್ಯ ವಿಷಯವನ್ನಾಗಿ ಇವುಗಳನ್ನು ಕಲಿಸಲಾಗುತ್ತಿತ್ತು.

ಆದರೆ ಇಂದಿನ ಆಧುನಿಕ ಶಿಕ್ಷಣ ಕ್ರಮದಲ್ಲಿ ಜೀವನ ಕಲಿಕೆಗೆ ಸ್ಥಾನವೇ ಇಲ್ಲವಾಗಿದೆ. ಶಿಕ್ಷಣವು ಕೇವಲ ವ್ಯಾವಹಾರಿಕವಾಗಿ ನಡೆ ಯುವ ಪ್ರಕ್ರಿಯೆಯಾಗಿ ಬದಲಾಗಿದೆ. ಉದ್ಯೋಗವನ್ನು ಹೊಂದಲು ಬೇಕಾಗುವ ಅಂಶಗಳನ್ನಷ್ಟೇ ಕಲಿಸುವ, ವಿದ್ಯಾವಂತ ರೋಬೋಟು ಗಳನ್ನು ತಯಾರಿಸುವಂತಹ ಕಾರ್ಖಾನೆಗಳಾಗಿ ಮಾರ್ಪಟ್ಟಿವೆ ವಿದ್ಯಾಲಯಗಳು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಹತೆ ಅತ್ಯಂತ ಮುಖ್ಯವಾಗಿದ್ದರೂ ಶಿಕ್ಷಣದ ಮೂಲ ಪರಿಕಲ್ಪನೆಯನ್ನು ಮರೆತು ನಡೆಸುತ್ತಿರುವಂತಹ ಬೋಧನಾ ಪ್ರಕ್ರಿಯೆ ಜಾರಿಯಲ್ಲಿದೆ. ಗುಣಾತ್ಮಕ ಶಿಕ್ಷಣವನ್ನೊದಗಿಸುವುದು ಶಾಲೆಗಳ ಅಥವಾ ಶೈಕ್ಷಣಿಕ ಕೇಂದ್ರಗಳ ಮುಖ್ಯ ಉದ್ದೇಶ ನಿಜ. ಆದರೆ ಗುಣಾತ್ಮಕ ಶಿಕ್ಷಣವೆಂದರೆ ಕೇವಲ ಶಾಲಾ ಹೊರಾಂಗಣ ಮತ್ತು ಒಳಾಂಗಣ ಸೌಲಭ್ಯವಷ್ಟೇ ಆಗಿರದೆ, ಜೀವನ ಮೌಲ್ಯವನ್ನು ಬಳಸಿ ಮಗುವನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ಸಮಾಜಕ್ಕೆ ಪರಿಚಯಿಸುವ ಪರಿಕಲ್ಪನೆಯಾಗಿದೆ. 
Learning gives creativity,
Creativity leads to thinking,
Thinking provides knowledge, 
Knowledge makes you great
ಎಂಬ ಅಬ್ದುಲ್‌ ಕಲಾಂರ ಮಾತಿನಂತೆ ಕಲಿಕೆಯಿಂದ ಸೃಜನ ಶೀಲತೆ, ಸೃಜನಶೀಲತೆಯಿಂದ ಚಿಂತನೆ ಮತ್ತು ಚಿಂತನೆಯಿಂದ ದೊರೆಯುವುದು ಜ್ಞಾನ. ಅಂತಹ ಜ್ಞಾನವು ವ್ಯಕ್ತಿಯನ್ನು ಅತ್ಯುನ್ನತ ಹಂತಕ್ಕೇರುವಂತೆ ಮಾಡುತ್ತದೆ. ಕೇವಲ ಪುಸ್ತಕದ ಜ್ಞಾನವನ್ನು ತಲೆಗೆ ತುರುಕುವುದರಿಂದ ಜ್ಞಾನಾರ್ಜನೆ ಸಾಧ್ಯವಾಗದು. ಎಷ್ಟೆಷ್ಟೋ ಪದವಿಗಳನ್ನು ಪಡೆದ ವ್ಯಕ್ತಿ ಜೀವನದಲ್ಲಿ ಸೋಲನ್ನನುಭವಿಸಿರುವ ಉದಾಹರಣೆಗಳಿವೆ. 

ಅಂತೆಯೇ ಅಲ್ಪ ಸ್ವಲ್ಪ ವಿದ್ಯೆಯಿದ್ದರೂ ತನ್ನ ಜೀವನ ಕೌಶಲಗಳಿಂದ ಹೆಚ್ಚಿನ ಯಶಸ್ಸನ್ನು ಪಡೆದಿರುವ ಉದಾ ಹರಣೆಗಳೂ ಇವೆ. ಕೇವಲ ವಿದ್ಯೆಯಷ್ಟೇ ನಮ್ಮನ್ನು ಯಶಸ್ಸಿನೆಡೆಗೆ ಕರೆದೊಯ್ಯುವುದೆಂಬುದು ಅರ್ಧ ಸತ್ಯ. ಜೀವನ ಕೌಶಲಗಳು, ಜೀವನ ಮೌಲ್ಯಗಳು ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ಅಂಗವಾದರೆ ಮಾತ್ರ ಆತ ಆರೋಗ್ಯಕರ ವ್ಯಕ್ತಿತ್ವವನ್ನೊಳಗೊಂಡು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಕಾರಣನಾಗುತ್ತಾನೆ ಮತ್ತು ತನ್ನ ಜೀವನ ದಲ್ಲೂ ಯಶಸ್ಸನ್ನೂ ಪಡೆಯುತ್ತಾನೆ.

ಅಂತಹ ಕೆಲಸವು ಎಲ್ಲಿಯೋ ಯಾವುದೋ ಕೋರ್ಸ್‌ ಮಾಡಿ ಕಲಿಯುವಂಥ‌¨ªಾಗಿರದೆ, ಶಾಲಾ ಹಂತಗಳÇÉೇ ಮಗುವಿನ ಆಸಕ್ತಿ ಗನುಗುಣವಾಗಿ ಕನಿಷ್ಟ ಮಟ್ಟದ ಜೀವನ ಕೌಶಲಗಳನ್ನು ಹಾಗೂ ಕೆಲವು ಮೌಲ್ಯಗಳನ್ನು ತಿಳಿಸಿಕೊಡಬೇಕಾದ ಅಗತ್ಯವಿದೆ. ಇತ್ತೀಚಿನ ಶಿಕ್ಷಣ ಕ್ರಮದಲ್ಲಿ ವಿಷಯಗಳ ಕಲಿಕೆಗಷ್ಟೇ ಅವಧಿಗಳಿರುತ್ತವೆ. ಹೆಚ್ಚೆಂದರೆ ದೈಹಿಕ ಶಿಕ್ಷಣ ಮತ್ತು ಆಟೋಟಗಳಿಗೆ. ಆದರೆ ಒಂದು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಆ ಮಗುವನ್ನು ಜೀವನದ ಎÇÉಾ ಸಂದರ್ಭಗಳಿಗೂ ಸಿದ್ಧಗೊಳಿಸುವುದು ಆವಶ್ಯಕ ವಾಗಿದೆ. ಅಭ್ಯಾಸ ಕ್ರಮದಲ್ಲಿ ಕೆಲವು ಕುಶಲ ಕಲೆಗಳ ಕಲಿಕೆ ಅನಿವಾ ರ್ಯವಾಗಿದೆ. ಕರಕುಶಲ ಕಲೆ, ಹೊಲಿಗೆ, ಚಿತ್ರಕಲೆ, ತೋಟಗಾರಿಕೆ, ಇನ್ನಿತರ ಹಲವಾರು ಬಗೆಯ ತರಬೇತಿಯನ್ನು ನೀಡುವುದರ ಮೂಲಕ ಶಿಕ್ಷಣದ ನೈಜ ಉದ್ದೇಶವನ್ನು ಸ್ವಲ್ಪಮಟ್ಟಿಗಾದರೂ ನೆರವೇರಿ ಸಬಹುದು. 

ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುವ, ಶಾಂತಿ, ಸಹನೆ, ಸಂಯಮ ಇನ್ನಿತರ ಮೌಲ್ಯಗಳನ್ನು ಬೆಳೆಸುವ ಕಲಿಕೆಗಳು, ಅವರ ಸುಪ್ತ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳ ಆಯೋಜನೆ ಇನ್ನಿತರ ಕಲಿಕಾ ವಿಧಾನಗಳನ್ನು ಅನುಸರಿಸುವುದರಿಂದ ಮೌಲ್ಯಾಧಾರಿತ ಮತ್ತು ಜೀವನ ಶಿಕ್ಷಣದ ಪರಿಕಲ್ಪನೆಯನ್ನು ಸಾಕಾರಗೊಳಿಸಬಹುದು. ಇಂತಹ ಕಲಿಕೆ ಅಸಾಧ್ಯವಾಗಿರುವುದಕ್ಕೆ ನಮ್ಮ ಪಠ್ಯಕ್ರಮವೂ ಕಾರಣವಿರಬಹುದು ಅಥವಾ ಸಮಯದ ಅಭಾವವೂ ಕೂಡ ಇರಬಹುದು. ಆದರೆ ಆರೋಗ್ಯಕರವಾದ ಸಮಾಜದ ನಿರ್ಮಾಣಕ್ಕೆ ಇದು ಅತ್ಯಂತ ಅವಶ್ಯಕವಾದುದು. 

Education is not filling the mind with a lot of facts. Perfecting the instrument and getting complete mastery of my own mind ಎಂಬ ಸ್ವಾಮಿ ವಿವೇಕಾನಂದರ ಮಾತು ಸಾರ್ವಕಾಲಿಕ ಸತ್ಯ. ಶಿಕ್ಷಣ ಬದುಕುವ ರೀತಿಯನ್ನು ಕಲಿಸಬೇಕು. ಕೇವಲ ಜ್ಞಾನಾರ್ಜನೆಗಷ್ಟೇ ಸೀಮಿತವಾಗಿ ರದೆ ಮುಂದಿನ ಬದುಕಿನ ಆವಶ್ಯಕತೆಗಳ ಬಗ್ಗೆ, ಅವನ್ನು ಹೊಂದಿಸಿ ಕೊಳ್ಳುವ ಬಗ್ಗೆ, ತನ್ನ ಕುಟುಂಬ – ಸಮಾಜವನ್ನು ಸರಿಯಾಗಿ ಬೆಳೆ ಸುವ, ಸೊÌದ್ಯೋಗವನ್ನು ಮಾಡಿಕೊಂಡು ಬದುಕಲು ನೆರವಾಗುವ ಜ್ಞಾನವನ್ನು ಕೊಡುವ ಕಾರ್ಯ ನಡೆದರೆ ಶಿಕ್ಷಣಕ್ಕೂ- ಜೀವನಕ್ಕೂ ಇರುವ ಸಂಬಂಧ ಪರಸ್ಪರ ಪೂರಕವಾಗುತ್ತದಲ್ಲದೆ ವಿದ್ಯಾರ್ಥಿಗಳ ಬದುಕಿಗೆ ನೆರವೂ ಆಗುತ್ತದೆ.

– ಪ್ರಭಾ ಭಟ್‌

ಟಾಪ್ ನ್ಯೂಸ್

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

EC-Comm-sangreshi1

ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Explainer; ಭಾರತದ ಪರಮಾಣು ಯುಗದ ರೂವಾರಿಗಳು: ಡಾ. ಆರ್ ಚಿದಂಬರಂ & ಡಾ. ರಾಜಾ ರಾಮಣ್ಣ

Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

Trump-Maga

Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.