ಕಂಬಳದಲ್ಲಿ ಕೋಣ ಓಡಿಸುವವರನ್ನು ಗುರುತಿಸುವುದು ಹೆಮ್ಮೆ: ವಿಲ್ಫ್ರೆಡ್
Team Udayavani, Dec 24, 2017, 10:56 AM IST
ಪಡುಪಣಂಬೂರು: ಕಂಬಳದ ಕೋಣಗಳ ಹಿಂದೆ ಓಡುವುದು ನೋಡಿದಷ್ಟು ಸುಲಭವಲ್ಲ, ನನ್ನ ಚೊಚ್ಚಲ ಓಟದಲ್ಲಿ ಮೈ ಕೈಗೆ ಗಾಯ ಮಾಡಿಕೊಂಡು ಎರಡು ತಿಂಗಳು ಮನೆಯಲ್ಲಿಯೇ ಇದ್ದ ನನಗೆ ಈಗ ಕೋಣಗಳನ್ನು ಓಡಿಸುವವನಾಗಿ ಗುರುತಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದವರು ಕಂಬಳದ ಕೋಣಗಳ ಓಟಗಾರ ವಿಲ್ಫ್ರೆಡ್ ಕೊಲ್ಲೂರು. ಅವರು ಪಡುಪಣಂಬೂರುವಿನಲ್ಲಿ ನಡೆಯುತ್ತಿರುವ ಮೂಲ್ಕಿ ಸೀಮೆ ಅರಸು ಕಂಬಳದ ಬಾಕಿಮಾರು ಗದ್ದೆಯಲ್ಲಿ ‘ಉದಯವಾಣಿಯ ಸುದಿನ’ದೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು.
ಮೂಲ್ಕಿ ಬಳಿಯ ಬಳ್ಕುಂಜೆ ಕೊಲ್ಲೂರು ನಿವಾಸಿಯಾಗಿರುವ ವಿಲ್ಫ್ರೆಡ್ ಅವರು ವೃತ್ತಿಯಲ್ಲಿ ರಿಕ್ಷಾ ಚಾಲಕರು, ಮೂಲ್ಕಿ ಬಸ್ ನಿಲ್ದಾಣದಲ್ಲಿ ಚಿರಪರಿಚಿತರು. ಹವ್ಯಾಸಿ ನಾಟಕ ಕಲಾವಿದರು, ಗೃಹರಕ್ಷಕ ದಳದಲ್ಲಿಯೂ ಸೇವೆ ಸಲ್ಲಿಸಿರುವ ಇವರು, ಕಳೆದ 10 ವರ್ಷದಿಂದ ಕಂಬಳದ ಕೋಣ ಓಡಿಸುವ ಓಟಗಾರರಾಗಿದ್ದಾರೆ.
ತಮ್ಮ ಮೊದಲ ಓಟದಲ್ಲಿ ಕೋಣಗಳು ಇವರನ್ನು ಬೀಳಿಸಿದ್ದರಿಂದ ಸುಮಾರು ಎರಡು ತಿಂಗಳು ಮನೆಯಲ್ಲಿಯೇ ಉಳಿಯ ಬೇಕಾಯಿತು ಆದರೂ ಛಲ ಬಿಡದೇ ಕೋಣದ ನೊಗವನ್ನು ಹಿಡಿದು ಈಗ ಕರ್ನಿರೆ ಅಣ್ಣು ಶೆಟ್ಟಿ, ಕವತ್ತಾರು ಎಲಿಯಾಸ್ ಪಿಂಟೋ, ಪಟ್ಟೆ ಅಂಗಡಿಗುತ್ತು ಲೋಕನಾಥ ಶೆಟ್ಟಿ, ಧನಂಜಯ ಮಟ್ಟು, ಮಾನಂಪಾಡಿ ಗೋವಿಂದ ಕೋಟ್ಯಾನ್ ಇತರ ಮನೆತನ ಕೋಣಗಳನ್ನು ಓಡಿಸುತ್ತಿದ್ದಾರೆ. ವಿಶೇಷವೆಂದರೆ ಮೂಲ್ಕಿ ಸೀಮೆಯ ಸಾಂಪ್ರದಾಯಿಕ ಕಂಬಳವಾಗಿರುವ ಶಿಮಂತೂರು ಬಾವ ಹಾಗೂ ಬಪ್ಪನಾಡು ಬಡಗುಹಿತ್ಲು ದಿ. ಲಿಂಗಪ್ಪ ಪೂಜಾರಿ ಮನೆತನದ ಕೋಣಗಳನ್ನು ಅಧಿಕೃತವಾಗಿ ಇವರೇ ಓಡಿಸುತ್ತಿದ್ದಾರೆ. ತಮ್ಮ ಹತ್ತು ವರ್ಷದ ಅನುಭವದಲ್ಲಿ ಮಧ್ಯೆ ಎರಡು ವರ್ಷ ವಿದೇಶಕ್ಕೆ ಉದ್ಯೋಗಕ್ಕೆ ತೆರಳಿದ್ದಾಗಲೂ ಸಹ ಕಂಬಳದ ಸಮಯದಲ್ಲಿಯೇ ರಜೆಯನ್ನು ಕಳೆದು ಕೋಣಗಳನ್ನು ಓಡಿಸಿದ್ದರು.
ಪರಂಪರೆ ಉಳಿಯಬೇಕು
ಕಂಬಳಕ್ಕೆ ಸಣ್ಣವನಿರುವಾಗ ಹೆತ್ತವರೊಂದಿಗೆ ತೆರಳುತ್ತಿದ್ದಾಗಲೇ ನಾನೂ ಸಹ ಅವರಂತೆ ಓಡಬೇಕು ಎಂಬ ಆಸೆ ನನ್ನನ್ನೀಗ ಕಂಬಳದ ಓಟಗಾರನನ್ನಾಗಿ ಮಾಡಿದೆ. ಆರಂಭದಲ್ಲಿ ಕೋಣಗಳನ್ನು ಹಿಡಿಯಲು ಹೋಗುತ್ತಿದ್ದೆ. ಆಗ 100 ರೂಪಾಯಿ ಸಿಗುತ್ತಿತ್ತು. ಕಂಬಳದ ಕೋಣ ಹಿಡಿಯುವ ಯಜಮಾನರು ಖುಷಿಯಿಂದ ನೀಡುತ್ತಾರೆ. ನನಗೆ ಹಣ ಮುಖ್ಯವಲ್ಲ ನಮ್ಮ ಪರಂಪರೆ ಜಾತಿ, ಮತ ಭೇದವಿಲ್ಲದೆ ನಿರಂತರವಾಗಿ ನಡೆಯಬೇಕು ಎಂಬ ಆಶಯ ನನ್ನದು.
–ವಿಲ್ಫ್ರೆಡ್
ಕೋಣಗಳ ಓಟಗಾರ, ಕೊಲ್ಲೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್
Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ
Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.