ಶಿಸ್ತಿನ ಪಕ್ತ ಸಿಪಿಎಂನಲ್ಲಿ ತಾರಕಕ್ಲೇರಿದ ಬಣ ರಾಜಕೀಯ
Team Udayavani, Dec 24, 2017, 2:56 PM IST
ಚಿಕ್ಕಬಳ್ಳಾಪುರ: ಸಿಪಿಎಂ ಪಕ್ಷದೊಳಗೆ ಹಲವು ವರ್ಷಗಳಿಂದ ಆಂತರಿಕವಾಗಿ ಕುದಿಯುತ್ತಿದ್ದ ಭಿನ್ನಮತ, ಗುಂಪುಗಾರಿಕೆ ಸ್ಫೋಟಗೊಂಡಿದ್ದು, ಕಳೆದ ಎರಡು ದಿನಗಳಿಂದ ಜಿಲ್ಲೆಯ ಗುಡಿಬಂಡೆ ತಾಲೂಕಿನ ಎಲ್ಲೋಡಿನಲ್ಲಿ ನಡೆದ ಸಿಪಿಎಂ ಜಿಲ್ಲಾ ಸಮ್ಮೇಳನದಲ್ಲಿ ಶನಿವಾರ ನೂತನ ಜಿಲ್ಲಾ ಸಮಿತಿ ಆಯ್ಕೆ ಪ್ರಕ್ರಿಯೆಯಲ್ಲಿ ಒಮ್ಮತ ಮೂಡದೇ ಚುನಾವಣೆ ಮೂಲಕ ನೂತನ ಸಮಿತಿಯನ್ನು ರಚಿಸಲಾಗಿದೆ.
ಸಹಜವಾಗಿ 3 ವರ್ಷಗಳಗೊಮ್ಮೆ ನಡೆಯುವ ಸಿಪಿಎಂ ಸಮ್ಮೇಳನಗಳಲ್ಲಿ ಪಕ್ಷದ ಸಂಘಟನೆ, ಹೋರಾಟ, ಭವಿಷ್ಯದ ಸವಾಲುಗಳ ಜೊತೆಗೆ ದೇಶದ ಆರ್ಥಿಕ, ಸಾಮಾಜಿಕ, ರಾಜಕೀಯ ಸನ್ನಿವೇಶಗಳ ಬಗ್ಗೆ ಇತರೆ ಪಕ್ಷಗಳಗಿಂತ ಭಿನ್ನವಾಗಿ ಗಂಭೀರ ಚರ್ಚೆ ನಡೆಸಿ ಹಲವು ತೀರ್ಮಾನ ಕೈಗೊಳ್ಳುವ ಸಂಪ್ರದಾಯ ಇದೆ. ಜೊತೆಗೆ ಸಮ್ಮೇಳನದ ಕಡೆ ದಿನ ನೂತನ ಸಮಿತಿ ಆಯ್ಕೆ ಕೂಡ ಪಕ್ಷದ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಸಲಾಗುತ್ತದೆ. ಆದರೆ, ಚಿಕ್ಕಬಳ್ಳಾಪುರ ಸಿಪಿಎಂ ಪಕ್ಷದ ನಾಯಕರ ಮಧ್ಯೆ ಅದರಲ್ಲೂ ಸಿಪಿಎಂ ಜಿಲ್ಲಾ ಸಮಿತಿಯಲ್ಲಿ ಉಲ್ಬಣಿಸಿದ್ದ ಬಣ ರಾಜಕೀಯ ತಾರಕ್ಕೇರಿ ಶನಿವಾರ ಪಕ್ಷದ ನೂತನ ಜಿಲ್ಲಾ ಸಮಿತಿ ಆಯ್ಕೆಗೆ ಒಮ್ಮತ ಮೂಡದೇ ಇದೇ ಮೊದಲ ಬಾರಿಗೆ ಚುನಾವಣೆ ನಡೆಸಿರುವುದು ಕುತೂಹಲ ಕೆರಳಿಸಿದೆ.
ಇಡೀ ರಾಜ್ಯದಲ್ಲಿಯೇ ಸಿಪಿಎಂನ ಕೆಂಪುಬಾವುಟ ಅಂದರೆ ಜನತೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಕಡೆಗೆ ತಿರುಗಿ ನೋಡುವ ಕಾಲವಿತ್ತು. ಅಷ್ಟರ ಮಟ್ಟಿಗೆ ಸಿಪಿಎಂ ಪಕ್ಷ ಜಿಲ್ಲೆಯ ಶೋಷಿತರ, ಜನ ಸಾಮಾನ್ಯರ, ರೈತಾಪಿ ಕೂಲಿ ಕಾರ್ಮಿಕರ ಪರವಾಗಿ ಧ್ವನಿ ಎತ್ತಿ ಹೋರಾಟ ನಡೆಸುತ್ತಿತ್ತು. ಭೂ ಹೀನರಿಗೆ ನೂರಾರು ಎಕರೆ ಭೂಮಿ ಹಂಚಿಕೆ ಮಾಡಿಸಿದ ಇತಿಹಾಸ ಪಕ್ಷಕ್ಕಿದೆ.
ಸಿಪಿಎಂ ಹೋರಾಟ ಅಂದ್ರೆ ಒಂದು ಕಾಲಕ್ಕೆ ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ನಡುಕ ಶುರುವಾಗುತ್ತಿತ್ತು. ಸಿಪಿಎಂ ಆ ಮಟ್ಟದಲ್ಲಿ ಹೋರಾಟ, ಧರಣಿ, ಪ್ರತಿಭಟನೆಗಳನ್ನು ಜಿಲ್ಲೆಯಲ್ಲಿ ಪ್ರಬಲವಾಗಿ ಸಂಘಟಿಸಿ ಜನ ಸಾಮಾನ್ಯರಲ್ಲಿ ನಂಬಿಕೆ, ವಿಶ್ವಾಸ ಉಳಿಸಿಕೊಂಡಿತ್ತು. ಆದರೆ, ಇತ್ತೀಚೆಗೆ ಶಿಸ್ತಿನ ಪಕ್ಷದಲ್ಲಿ ಕಾಣಿಸಿಕೊಂಡಿರುವ ಆಶಿಸ್ತು ಪಕ್ಷದ ಹೋರಾಟಗಳನ್ನು ಅಪರೂಪಗೊಳಿಸಿದ್ದು, ಇದೀಗ ಜಿಲ್ಲಾ ಸಮ್ಮೇಳನದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ, ಹಾಗೂ ಸಿಪಿಎಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪಬಣಗಳ ನಡುವೆ ನೂತನ ಜಿಲ್ಲಾ ಸಮಿತಿಗೆ ರಚನೆಗೆ ಪೈಪೋಟಿ ನಡೆದು ಕೊನೆಗೆ ಒಮ್ಮತ ಮೂಡದೇ ಚುನಾವಣೆ ನಡೆಸಿ ನೂತನ ಸಮಿತಿಯನ್ನು ರಚಿಸಲಾಗಿದ್ದು, ಆದರಲ್ಲಿ ಜಿ.ವಿ.ಶ್ರೀರಾಮರೆಡ್ಡಿ ಬಣ ಮೇಲುಗೈ ಸಾಧಿಸಿದೆ.
ಆ ಮೂಲಕ ಸಿಪಿಎಂನಲ್ಲಿ ಬಣ ರಾಜಕೀಯ ಮತ್ತೆ ಸ್ಫೋಟಗೊಂಡಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಬಾಗೇಪಲ್ಲಿಯಲ್ಲಿ ಕೆಂಬಾವುಟ ನೆರಳು: ಜಿಲ್ಲೆಯ ಬಾಗೇಪಲ್ಲಿ ಇಂದಿಗೂ ಕೆಂಬಾವುಟದ ನೆರಳು ಉಳಿದುಕೊಂಡಿದೆ. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿರುವ ಜಿ.ವಿ.ಶ್ರೀರಾಮರೆಡ್ಡಿ ಸೇರಿದಂತೆ ಹಲವು ಮಂದಿ ನಾಯಕರು ಸಿಪಿಎಂನ ಕೆಂಬಾವುಟದಡಿ ವಿಧಾನಸಭೆಗೆ ಆರಿಸಿ ಹೋಗಿರುವುದು ಈಗ ಇತಿಹಾಸ. ಹಣ ಬಲದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಸಿಪಿಎಂ ಪ್ರತಿ ಚುನಾವಣೆಯಲೂ ಪ್ರಬಲ ಪೈಪೋಟಿ ನೀಡಿ ಕಳೆದ ವಿಧಾನಸಭಾ ಚುನಾಣೆಯಲ್ಲಿ ಜಿ.ವಿ.ಶ್ರೀರಾಮರೆಡ್ಡಿ ಕೂದಳೆಯ ಅಂತದಲ್ಲಿ ಪರಾಭಾವಗೊಂಡಿದ್ದರು. ಆದರೆ, ಇತ್ತೀಚೆಗೆ ಪಕ್ಷದಲ್ಲಿ ಕಾಣಿಸಿಕೊಂಡಿರುವ ಗೊಂದಲ, ನಾಯಕತ್ವದ ವಿರುದ್ಧ ಕೇಳಿ ಬರುತ್ತಿರುವ ಅಪಸ್ವರ, ಅಸಮಾಧಾನ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಮೇಲೆ ಗಂಭೀರ ಪರಿಣಾಮ ಬೀರಲಿದೆಯೆಂದು ಪಕ್ಷ ಸಾಮಾನ್ಯ ಕಾರ್ಯಕರ್ತರಲ್ಲಿ ಕೇಳಿ ಬರುತ್ತಿದೆ.
ಒಟ್ಟಿನಲ್ಲಿ ಸಿಪಿಎಂ ಪಕ್ಷದಲ್ಲಿ ಇತ್ತೀಚೆಗೆ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಬಾಗೇಪಲ್ಲಿ ಮಾಜಿ ಶಾಸಕ ಜಿ.ವಿ.
ಶ್ರೀರಾಮರೆಡ್ಡಿ ಹಾಗೂ ಸಿಪಿಎಂ ಜಿಲ್ಲಾ ಪ್ರದಾನ ಕಾರ್ಯದರ್ಶಿಯಾಗಿ ಎಂ.ಪಿ. ಮುನಿ ವೆಂಕಟಪ್ಪ ನಡುವೆ ವೈಮನಸ್ಸು ಉಂಟಾಗಿ ಹಲವು ವರ್ಷಗಳಿಂದ ಬಣ ರಾಜಕೀಯ ಶುರುವಾಗಿದ್ದು, ಅದು ಇದೀಗ ವಿಕೋಪಕ್ಕೆ ತಿರುಗಿ 3 ವರ್ಷಗಳಗೊಮ್ಮೆ ನಡೆಯುವ ಪಕ್ಷದ ಸಮ್ಮೇಳನದಲ್ಲಿ ನೂತನ ಜಿಲ್ಲಾ ಸಮಿತಿ ಆಯ್ಕೆ ವಿಚಾರದಲ್ಲಿ ಒಮ್ಮತ ಮೂಡದೇ ಚುನಾವಣೆ ನಡೆದಿರುವುದು ಪಕ್ಷದ ಆಂತರಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಜಯರಾಮರೆಡ್ಡಿ ಸಿಪಿಎಂ ನೂತನ ಜಿಲ್ಲಾ ಕಾರ್ಯದರ್ಶಿ
ಶನಿವಾರ ಕೊನೆಗೊಂಡ ಸಿಪಿಎಂ ಪಕ್ಷದ ಜಿಲ್ಲಾ ಸಮ್ಮೇಳನದಲ್ಲಿ ಪಕ್ಷದ ರಾಜ್ಯ ನಾಯಕರ ಸಮ್ಮುಖದಲ್ಲಿ ನೂತನ ಜಿಲ್ಲಾ ಸಮಿತಿ ಚುನಾವಣೆ ಮೂಲಕ ಆರಿಸಿದ ನಂತರ ಒಟ್ಟು 21 ಸದಸ್ಯರು ಸೇರಿ ಗುಡಿಬಂಡೆ ತಾಲೂಕಿನ ಜಯರಾಮರೆಡ್ಡಿ ಪಕ್ಷ ನೂತನ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ್ದಾರೆ.
ಮತ್ತೆ ಜಿಲ್ಲಾ ಕಾರ್ಯದರ್ಶಿಯಾಗಿ ಪುನರಾಯ್ಕೆ ಆಗಬೇಕೆಂದು ಪ್ರಯತ್ನಿಸಿದ್ದ ಎಂ.ಪಿ.ಮುನಿವೆಂಕಟಪ್ಪ ಹಾಗೂ ಅವರ ಬಣಕ್ಕೆ ಸೋಲು ಕಂಡಿದೆ. ವಿಶೇಷ ಅಂದರೆ ಹಲವು ವರ್ಷಗಳಿಂದ ಪಕ್ಷದಲ್ಲಿ ದುಡಿದುಕೊಂಡ ಬಂದಿರುವ ಚಿಂತಾಮಣಿ ಸಿ.ಗೋಪಿನಾಥ್, ಗೌರಿಬಿದನೂರಿನ ಸಿದ್ದಗಂಗಪ್ಪ, ಜಿಲ್ಲಾ ಕಾರ್ಯದರ್ಶಿಯಾಗಿದ್ದ ಎಂ.ಪಿ.ಮುನಿವೆಂಕಟಪ್ಪಗೆ ಜಿಲ್ಲಾ ಸಮಿತಿಯಲ್ಲಿ ಅವಕಾಶ ಕೈ ತಪ್ಪಿರುವುದು ಪಕ್ಷದ ಒಳ ಜಗಳಕ್ಕೆ ಹಿಡಿದ ಕನ್ನಡಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.