ಹೆತ್ತಬ್ಬೆ ಕಣ್ಣೀರಿಗೆ ಬಗ್ಗದವರು ಕಾನೂನಿಗೆ ಬೆದರಿದರು
Team Udayavani, Dec 24, 2017, 3:47 PM IST
ಉಪ್ಪಿನಂಗಡಿ: ಇಬ್ಬರು ಪುತ್ರಿಯರು, ಆರು ಪುತ್ರರಿದ್ದರೂ ತಮ್ಮ 85ರ ಹರೆಯದಲ್ಲಿ ಬೀದಿಪಾಲಾದ ಲಕ್ಷ್ಮೀ ಹೆಗ್ಡೆ ಅವರ ವಿಚಾರದಲ್ಲಿ ಪೊಲೀಸ್ ಅಧಿಕಾರಿಗಳು ಕಾನೂನುಕ್ರಮಕ್ಕೆ ಮುಂದಾಗುತ್ತಿದ್ದಂತೆಯೇ ವೃದ್ಧೆಯ ಎರಡನೇ ಮಗ ಹಾಗೂ ಸೊಸೆ ಲಕ್ಷ್ಮೀ ಅವರನ್ನು ತಮ್ಮ ಮನೆಗೆ ಕರೆದೊಯ್ದಿದ್ದಾರೆ.
ಮೂಲತಃ ಉಪ್ಪಿನಂಗಡಿಯ ಮುಳಿಯ ನಿವಾಸಿ, ಪ್ರಸಕ್ತ ಇಳಂತಿಲದ ಕುಂಟಾಲಕಟ್ಟೆ ಎಂಬಲ್ಲಿ ವಾಸ್ತವ್ಯವಿರುವ ಲಕ್ಷ್ಮೀ ಹೆಗ್ಡೆ (85) ತಮ್ಮ ಇಳಿ ವಯಸ್ಸಿನಲ್ಲಿ ಮಕ್ಕಳಿಂದಲೇ ತಿರಸ್ಕಾರಕ್ಕೆ ಒಳಗಾಗಿ ಉಪ್ಪಿನಂಗಡಿಯ ಪರಿಚಯಸ್ಥರ ಮನೆಯಲ್ಲಿ ಆಶ್ರಯ ಕಂಡಿದ್ದರು. ಉಪ್ಪಿನಂಗಡಿ ಪಿಎಸ್ಐ ನಂದ ಕುಮಾರ್, ವೃದ್ಧೆಯ ಮಕ್ಕಳನ್ನು ಸಂಪ ರ್ಕಿಸಿ ವಿನಂತಿಸಿದರೂ ಪ್ರಯೋಜನ ಆಗಲಿಲ್ಲ. ಒಬ್ಬ ಮಗ ತಾಯಿಯನ್ನು ಕರೆದೊಯ್ಯಲು ಮುಂದಾದರೂ ಹಿಂದಿನ ಕಹಿ ಘಟನೆಯಿಂದಾಗಿ ಲಕ್ಷ್ಮೀ ಹೆಗ್ಡೆ ಅವರೇ ನಿರಾಕರಿಸಿದರು. ಯಾರಿಗೂ ಬೇಡವಾಗಿ ದ್ದಲ್ಲಿ ನನ್ನನ್ನು ಅನಾಥಶ್ರಮಕ್ಕೆ ಸೇರಿಸಿ ಎಂದು ಅಂಗಲಾಚಿದ್ದರು.
ನೆರವಿಗೆ ಬಂತು ಕಾಯಿದೆ
ಹೆತ್ತಾಕೆಯನ್ನೇ ಕಡೆಗಣಿಸಿದ ಮಕ್ಕಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಸಾರ್ವಜನಿಕ ವಲಯದಿಂದ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಲಕ್ಷ್ಮೀ ಹೆಗ್ಡೆ ಅವರಿಂದ ದೂರು ಸ್ವೀಕರಿಸಿ, ಹಿರಿಯ ನಾಗರಿಕರ ರಕ್ಷಣಾ ಕಾಯಿದೆ ಅನುಸಾರ ಪ್ರಕರಣ ದಾಖಲಿಸುವ ಬಗ್ಗೆ ಪೊಲೀಸರು ಚಿಂತಿಸುತ್ತಿರುವ ಕುರಿತು ಮಾಹಿತಿ ಪಡೆದ ವೃದ್ಧೆಯ ಎರಡನೇ ಪುತ್ರ ತನ್ನ ತಾಯಿಯನ್ನು ಸಲಹುವುದಾಗಿ ತಿಳಿಸಿ ತಮ್ಮ ಮನೆಗೆ ಕರೆದೊಯ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.