ಗೇರು: ಕಸಿಕಡ್ಡಿ ತೆಗೆದರೆ ಫಸಲು ನಷ್ಟವಿಲ್ಲ  


Team Udayavani, Dec 24, 2017, 4:03 PM IST

24-Dec-19.jpg

ನಗರ: ಮೊಟ್ಟೆತ್ತಡ್ಕ ಗೇರು ಸಂಶೋಧನ ನಿರ್ದೇಶನಾಲಯದಲ್ಲಿ ವಿಜ್ಞಾನಿಗಳು, ಕೃಷಿಕರೊಂದಿಗೆ ಸಂವಾದ ಕಾರ್ಯಕ್ರಮ ಶನಿವಾರ ನಡೆಯಿತು. ಬಿ.ಕೆ.ಎಸ್‌. ಭಟ್‌ ಪಾಣಾಜೆ ಮಾತನಾಡಿ, ಹಿಂದೆ ಒಂದು ಮರದಲ್ಲಿ 40- 50 ಕೆಜಿ ಗೇರು ಇಳುವರಿ ನೀಡುವ
ಮರಗಳಿದ್ದವು. ಇದಕ್ಕೆ ಯಾವುದೇ ರೀತಿಯ ಗೊಬ್ಬರ ಅಗತ್ಯ ಇರಲಿಲ್ಲ. ನೈಸರ್ಗಿಕವಾಗಿ ಬೆಳೆಯುತ್ತಿತ್ತು. ಇದನ್ನು ಯಾರೂ ನೆಟ್ಟದ್ದು ಅಲ್ಲ. ಆದರೆ ಇಂದು ಇಂತಹ ಮರಗಳು ಸಿಗುತ್ತಿಲ್ಲ. ಹೊಸ ಗಿಡ ನೆಡುವುದಕ್ಕಿಂತ ಇಂತಹ ಮರಗಳನ್ನು ಬೆಳೆಸುವುದು ಉತ್ತಮ. ಈ ಕಡೆ ಯಾಕೆ ಗಮನ ಕೊಡಬಾರದು ಎಂದರು.

ಇದಕ್ಕೆ ಉತ್ತರಿಸಿದ ಕೃಷಿಕ ಶೀನಪ್ಪ, ಒಂದೇ ಮರ ಇಷ್ಟು ಇಳುವರಿ ನೀಡುವ ನಿದರ್ಶನ ಇದೆ. ಆದರೆ ಗುಂಪಿನಲ್ಲಿ ದೊಡ್ಡ ಮಟ್ಟಿನ ಇಳುವರಿ ತೆಗೆಯುವುದು ಕಷ್ಟ. ಒಂದು ಮರದಿಂದ ಇನ್ನೊಂದು ಮರ ಸಾಕಷ್ಟು ದೂರ ಇದ್ದರೆ ಮಾತ್ರ, ಹೆಚ್ಚು ಇಳುವರಿ ನೀಡಲು ಸಾಧ್ಯ ಎಂದರು.

ತುಂಬಾ ಸಮಯ ಬೇಕು
ಡಿಸಿಆರ್‌ ನಿರ್ದೇಶಕ ಎಂ. ಜಿ. ನಾಯಕ್‌, ಗೇರನ್ನು ಕೃಷಿಯಾಗಿ ಬೆಳೆಸುವಾಗ ಅಷ್ಟು ಜಾಗ ವೇಸ್ಟ್‌ ಮಾಡುವಂತಿಲ್ಲ. ಇದು ಸಾಧ್ಯವೂ ಇಲ್ಲ. ಮಾತ್ರವಲ್ಲ ಒಂದು ಗಿಡ 40 ವರ್ಷಗಳಷ್ಟು ಕಾಲ ಬದುಕಬೇಕಾದರೆ ತುಂಬಾ ಸಮಯವೂ ಬೇಕು. ಸದ್ಯದ ಸ್ಥಿತಿಯಲ್ಲಿ 20 ವರ್ಷಗಳಷ್ಟು ಹಳೆಯ ಮರಗಳು ಸಿಗಬಹುದು. ಆದರೆ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬಹುದು ಎಂದು ಹೇಳಿದರು.

ಕಡ್ಡಿ ತೆಗೆಯುವುದು ಸಮಸ್ಯೆಯೇ?
ಕೃಷಿಕ ಕಡಮಜಲು ಸುಭಾಷ್‌ ರೈ ಮಾತನಾಡಿ, ಗೇರು ಗಿಡಗಳಿಂದ ಕಡ್ಡಿ ತೆಗೆಯುವುದು ಸಮಸ್ಯೆಯೇ? ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ವಿಜ್ಞಾನಿಗಳು ಮಾಹಿತಿ ನೀಡಬೇಕು ಎಂದು ಕೇಳಿಕೊಂಡರು. ಉತ್ತರಿಸಿದ ಎಂ. ಜಿ. ನಾಯಕ್‌, ಒಂದು ಕಡ್ಡಿಗೆ 2 ರೂ. ಸಿಗಬಹುದು. ಒಂದು ಗಿಡದಿಂದ 10 ಕಡ್ಡಿ ತೆಗೆದರೆ 20 ರೂ. ಆದಾಯ ಬರುತ್ತದೆ. ಅದೇ ಗಿಡದಲ್ಲಿ ಅಷ್ಟು ಕಡ್ಡಿಗಳಿದ್ದರೆ, 10 ಕೆ.ಜಿ.ಯಷ್ಟು ಗೇರು ಇಳುವರಿ ಸಿಗಬಲ್ಲುದು. ಕಡ್ಡಿ ತೆಗೆಯಬಾರದು ಎಂದೇನಿಲ್ಲ. ಆದರೆ ಆದಾಯದ ಬಗ್ಗೆಯೂ ಸ್ವಲ್ಪ ನೋಡಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಯರಾಮ ಕೆದಿಲಾಯ, ಗಿಡದಿಂದ ಕಡ್ಡಿ ತೆಗೆದರೆ ಉತ್ತಮ. ನಷ್ಟ ಎನ್ನುವುದಕ್ಕೆ ಆಧಾರ ರಹಿತ. ಹಾಗೆಂದು ತೆಗೆಯುವ ಕಡ್ಡಿಗಳು ಉತ್ತಮ ಆಗಿರದೇ ಇದ್ದರೆ, ಮುಂದೆ ಬೆಳೆಯುವ ಗಿಡದಿಂದ ಹೆಚ್ಚಿನ ಇಳುವರಿ ಕಷ್ಟ. ಈಗಲೇ ದೇಶೀಯವಾಗಿ ಗೇರು ಕೃಷಿಯಾಗಿ ಬೆಳೆದಿಲ್ಲ. ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ನೀಡಲು ತುಂಬಾ ಕಷ್ಟವಾಗುತ್ತದೆ. ಆದ್ದರಿಂದ ಉತ್ತಮ ಕಡ್ಡಿಗಳನ್ನು ತೆಗೆದು, ನೀಡಬೇಕು. ಕಡ್ಡಿ ತೆಗೆದ ತತ್‌ಕ್ಷಣ ನಷ್ಟ ಹೆಚ್ಚು ಎಂದು ಭಾವಿಸಬೇಕಾಗಿಲ್ಲ. ಕಡ್ಡಿ ತೆಗೆದಷ್ಟು ಗಿಡ ಸೊಂಪಾಗಿ ಬೆಳೆಯುತ್ತದೆ. ಹೆಚ್ಚು ಇಳುವರಿ ಸಿಗುತ್ತದೆ. ಕಳೆದ 25 ವರ್ಷಗಳಿಂದ ಗೇರನ್ನು ಕೃಷಿಯಾಗಿ, ಉದ್ಯಮವಾಗಿ ನೋಡುತ್ತಾ ಬಂದಿದ್ದೇನೆ ಎಂದು ತಿಳಿಸಿದರು.

ಡಿಸಿಆರ್‌ನ ಅಬ್ರಹಾಂ ವರ್ಗೀಸ್‌ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಜಿಲ್ಲಾ ನಿರ್ದೇಶಕ ಸೀತಾ ರಾಮ ಶೆಟ್ಟಿ ಉಪಸ್ಥಿತರಿದ್ದರು. ಇದೇ ಸಂದರ್ಭ ಡಾ| ಮೋಹನ್‌ ತಳಕಳಕೊಪ್ಪ ನಿರ್ದೇಶನದಲ್ಲಿ ರಚಿಸಿದ ಗೇರು ಕೃಷಿಯ ಮಾಹಿತಿ ಹೊತ್ತ ಆ್ಯಂಡ್ರಾಯ್ಡ ಆ್ಯಪನ್ನು ಬಿಡುಗಡೆಗೊಳಿಸಲಾಯಿತು. 2018ರ ಕ್ಯಾಲೆಂಡರ್‌ ಹಾಗೂ ಜಾರ್ಖಂಡ್‌ನ‌ ವಿಜ್ಞಾನಿ ಮಿನಿ ಪುದುವಾಳ್‌ ರಚಿಸಿದ ಬೆಂಗಾಳಿ ಕೃತಿ ಫರ್ಟಿಲೈಸರ್‌ ಅಪ್ಲಿಕೇಶನ್‌ ಅನ್ನು ಅನಾವರಣಗೊಳಿಸಲಾಯಿತು.

ಸಹಕಾರ ಅಗತ್ಯ
ಕೆಸಿಡಿಸಿ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್‌ ನಾಟೇಕರ್‌ ಮಾತನಾಡಿ, ಕರ್ನಾಟಕ ಸ್ಟೇಟ್‌ ಕ್ಯಾಶ್ಯೂ ಡೆವಲಪ್‌ಮೆಂಟ್‌ ಕಾರ್ಪೊರೇಶನ್‌ ಅಡಿಯಲ್ಲಿ 26 ಸಾವಿರ ಹೆಕ್ಟೇರ್‌ನಷ್ಟು ಗೇರು ಕೃಷಿ ಇದೆ. ಆದರೆ ಇದನ್ನು ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಕೂಲಿ ಮೊದಲಾದ ಸಮಸ್ಯೆಗಳಿಂದ ನಿರ್ವಹಣೆ ಸಮಸ್ಯೆ ಎದುರಾಗಿದೆ. ಯಂತ್ರಗಳ ಮೂಲಕ ಕೆಲಸ ಮಾಡಿದರೆ, ಸಮಸ್ಯೆ ನೀಗಿಸಬಹುದು. ಇದಕ್ಕೆ ಗೇರು ಸಂಶೋಧನ ನಿರ್ದೇಶನಾಲಯದ ಸಹಕಾರ ಬೇಕಾಗಿದೆ ಎಂದರು.

ಟಾಪ್ ನ್ಯೂಸ್

Health-insure

Editorial: ಅಪಘಾತ ಚಿಕಿತ್ಸೆ ಯೋಜನೆ ಜನರಿಗೆ ಜೀವದಾನ

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Alankaru: ಮನೆಯಲ್ಲಿ ಬೆಂಕಿ ದುರಂತ: ಎಲ್ಲ ವಸ್ತುಗಳು ಸುಟ್ಟು ಕರಕಲು

Alankaru: ಮನೆಯಲ್ಲಿ ಬೆಂಕಿ ದುರಂತ: ಎಲ್ಲ ವಸ್ತುಗಳು ಸುಟ್ಟು ಕರಕಲು

2(1

Sullia: ಜಾಕ್‌ವೆಲ್‌ ಹೂಳು ತೆಗೆದ ಬಳಿಕ ನಾಗಪಟ್ಟಣ ಡ್ಯಾಂಗೆ ಗೇಟ್‌

1(1

Dharmasthala: ದೇವರ ದರ್ಶನ ಇನ್ನಷ್ಟು ಸುಲಲಿತ

1-vitla

ಸುಲೈಮಾನ್ ಮನೆಗೆ ಸ್ಪೀಕರ್ ಯು.ಟಿ.ಖಾದರ್ ಭೇಟಿ; ಎಸ್ಪಿ, ಡಿವೈಎಸ್ಪಿ, ಮನೆಯವರ ಜೊತೆ ಸಮಾಲೋಚನೆ

1-vitla

Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Health-insure

Editorial: ಅಪಘಾತ ಚಿಕಿತ್ಸೆ ಯೋಜನೆ ಜನರಿಗೆ ಜೀವದಾನ

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.